Home ಕರಾವಳಿ Archive by category ಮಂಗಳೂರು (Page 46)

ಪಚ್ಚನಾಡಿ ದೇವಿನಗರದಲ್ಲಿ ಬಹಳ ಅದ್ದೂರಿಯಿಂದ ನಡೆದ SRR ವಾಲಿಬಾಲ್ 2K23 ಪಂದ್ಯಾಕೂಟ

ಮಂಗಳೂರು ನಗರದ ಪಚ್ಚನಾಡಿ ದೇವಿನಗರದಲ್ಲಿ ದಿನಾಂಕ 30/07/2023 ರ ಆದಿತ್ಯವಾರ ಶ್ರೀ ರಾಜರಾಜೇಶ್ವರಿ ಈವೆಂಟ್ಸ್ ಹಾಗೂ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್(ರಿ) ಪಚ್ಚನಾಡಿ ಇವರ ನೇತೃತ್ವದಲ್ಲಿ SRR Tropy 2K23 ಸ್ಥಳೀಯ ಮಟ್ಟದ ವಾಲಿಬಾಲ್ ಪಂದ್ಯಾಕೂಟವು ಬಹಳ ವಿಜೃಂಭಣೆಯಿಂದ ಪಚ್ಚನಾಡಿ ದೇವಿನಗರದ ಕೇಂದ್ರ ಮೈದಾನದಲ್ಲಿ ನೆರವೇರಿತು. . ಈ ಕಾರ್ಯಕ್ರಮದಲ್ಲಿ

ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಆ.26ರಂದು ಉದ್ಯೋಗ ಮೇಳ

ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರು, ಬಿಇಡಬ್ಲ್ಯುಎಸ್ ಯುವವಾಹಿನಿ ಕೇಂದ್ರ ಸಮಿತಿ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳವು ಆಗಸ್ಟ್ ೨೬ರಂದು ನಡೆಯಲಿದೆ.ಮಂಗಳೂರಿನ ಮಣ್ಣಗುಡ್ಡೆಯಲ್ಲಿರುವ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಸಭಾಂಗಣದಲ್ಲಿ ಆಗಸ್ಟ್ 26ರಂದು ನಡೆಯಲಿದೆ. ದೇಶದ ವಿವಿಧ ಕಡೆಗಳಿಂದ ಪ್ರತಿಷ್ಠಿತ ಕಂಪೆನಿಗಳು ಈ ಮೇಳದಲ್ಲಿ ಭಾಗವಹಿಸಲಿದೆ. ಉದ್ಯೋಗ ಮೇಳವನ್ನು ಬಿಎಸ್‌ಡಬ್ಲ್ಯುಎಸ್ ಮಂಗಳೂರಿನ ಅಧ್ಯಕ್ಷರಾದ ಅಶೋಕ್ ಕುಮಾರ್ ಉದ್ಘಾಟಿಸಲಿದ್ದಾರೆ. ಯುವವಾಹಿನಿ

ಕರ್ನಾಟಕದಲ್ಲಿ “ಮದ್ರಾಸ್ ಐ” ರೋಗದ ಆತಂಕ

ಕರ್ನಾಟಕದಲ್ಲಿ ಪಿಂಕ್ ಐ, ಕಾಂಜಂಕ್ಟಿವಿಟಿಸ್ ಅಥವಾ ಮದ್ರಾಸ್ ಐ ರೋಗ ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುತ್ತಿದ್ದು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಮದ್ರಾಸ್ ಐ ರೋಗ ಹೆಚ್ಚಾಗಿ ಇರುವುದರಿಂದ ಪೋಷಕರಲ್ಲಿ ಆತಂಕ ಹೆಚ್ಚಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಇನ್ನು ಈ ರೋಗ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾದ ಹಿನ್ನೆಲೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾರ್ಗಸೂಚಿ

ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಪ್ರಕರಣ : ದ.ಕ. ಜಿಲ್ಲಾ ಬಿಜೆಪಿಯಿಂದ ಘಟನೆ ಖಂಡಿಸಿ ಪ್ರತಿಭಟನೆ

ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ ನಡೆಸಿದ ಘಟನೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳೂರು ಪುರಭವನದ ಎದುರು ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿಯಾಗಿ, ರಾಷ್ಟ್ರ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ಅದರ ಭಾಗವಾಗಿ ಉಡುಪಿಯ ಕಾಲೇಜಿನಲ್ಲಿ ಘಟನೆ ನಡೆದಿದೆ. ಇದು ಕೇರಳ

ಮಂಗಳೂರು ವಿವಿ ಮಾಜಿ ಉಪಕುಲಪತಿ ಪ್ರೊ.ಕೆ. ಭೈರಪ್ಪ ನಿಧನ

ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಪ್ರೊ..ಕೆ.ಭೈರಪ್ಪ ಅವರು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ 69 ವರ್ಷ ವಯಸ್ಸಾಗಿತ್ತು. 2014 ಜೂನ್ ನಿಂದ 2019 ಜೂನ್ ವರೆಗೆ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಕುಲಪತಿಗಳಾಗಿ ಕಾರ್ಯನಿರ್ವಹಿಸಿ ಬಳಿಕ ನಿವೃತ್ತಿ ಹೊಂದಿದ್ದರು ಆ ಬಳಿಕ ಆದಿ ಚುಂಚನಗಿರಿಯಲ್ಲಿ ಸಹ ಕುಲಪತಿಗಳಾಗಿ ಕಾರ್ಯನಿರ್ವ ಹಿಸುತಿದ್ದರು. ಅವರು ಮೆಟೀರಿಯಲ್ಸ್ ಸೈನ್ಸ್, ನ್ಯಾನೊಟೆಕ್ನಾಲಜಿ, ಸಾಲಿಡ್ ಸ್ಟೇಟ್ ಸೈನ್ಸ್, ಕ್ರಿಸ್ಟಲ್

ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಣಿಪುರದ ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಮಣಿಪುರದ ಮಹಿಳೆಯರ ಮೇಲಿನ ದೌರ್ಜನ್ಯ, ಬಿಜೆಪಿ ಸರ್ಕಾರದ ದುರಾಡಳಿತದ ವಿರುದ್ದ ಹಾಗೂ ಜನರಿಗೆ ರಕ್ಷಣೆ ನೀಡಲು ಆಗ್ರಹಿಸಿ ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ನಗರದ ಮಹಾನಗರ ಪಾಲಿಕೆಯ ಎದುರಿನ ಲಾಲ್‍ಬಾಗ್ ಮಹಾತ್ಮಾ ಗಾಂಧಿ ಪ್ರತಿಮೆಯ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ, ಮಣಿಪುರದಲ್ಲಿ ಗಲಭೆ ಆರಂಭವಾಗಿ 3 ತಿಂಗಳಾದರೂ ಬಿಜೆಪಿಯ

ಪರಿಸರ ಉಳಿವಿಗಾಗಿ ಬಂಡವಾಳ ಶಾಹಿ ಪದ್ಧತಿ ನಾಶವಾಗುವುದು ತುರ್ತಿನ ಅವಶ್ಯಕತೆ : ಡಾ.ರಾಜೇಂದ್ರ ಉಡುಪ

ಜಾಗತಿಕ ಮಟ್ಟದಲ್ಲಿ ಪರಿಸರ ಸಮಸ್ಯೆ ತೀರಾ ಉಲ್ಬಣಗೊಂಡಿದೆ.ಪರಿಸರ ನಾಶಕ್ಕೆ ಬಂಡವಾಳಶಾಹಿ ವ್ಯವಸ್ಥೆ ದೊಡ್ಡ ಕೊಡುಗೆ ನೀಡಿದೆ.ಜಗತ್ತಿಗೆ ದೊಡ್ಡಣ್ಣನೆಂದು ಕರೆಸಿಕೊಳ್ಳುವ ಅಮೆರಿಕ ಯುದ್ದ ಇಲ್ಲದೆ ಒಂದು ಕ್ಷಣವೂ ಬದುಕುವುದಿಲ್ಲ. ಅಮೆರಿಕದ ಮಿಲಿಟರಿ ವರ್ಷಕ್ಕೆ 2.5 ಬಿಲಿಯನ್ ಟನ್ ತೈಲ ಉಪಯೋಗಿಸುತ್ತಿದೆ.ಒಂದು ಯುದ್ದ ನೌಕೆ ಗಂಟೆಗೆ ಒಂದೂವರೆ ಲಕ್ಷ ಲೀಟರ್ ತೈಲ ಉಪಯೋಗಿಸಿದರೆ, ಯುದ್ದ ವಿಮಾನ ಗಂಟೆಗೆ ಅರ್ಧ ಲಕ್ಷ ಲೀಟರ್ ತೈಲ ಉಪಯೋಗಿಸುತ್ತದೆ. ಇವೆಲ್ಲಾವೂ ಅಸಂಖ್ಯಾತ

ಮೇಘರಾಜ್ ರವರ ಚಿಕಿತ್ಸೆಗೆ ಬಿಜೆಪಿ ಯುವಮೋರ್ಚ ಮಂಗಳೂರು ಉತ್ತರ ಮಂಡಲದಿಂದ ಸಹಾಯಹಸ್ತ

ಬಜರಂಗದಳ ಸುರತ್ಕಲ್ ಪ್ರಖಂಡದ ಕಾರ್ಯಕರ್ತ ಕಳವಾರು ನಿವಾಸಿ ಮೇಘರಾಜ್ ಅವರು ಅಪಘಾತದಿಂದ ತ್ರೀವ ಗಾಯಗೊಂಡು ಎ.ಜೆ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದಾರೆ. ಮೇಘರಾಜ್ ರವರ ಚಿಕಿತ್ಸೆಗೆ ಬಿಜೆಪಿ ಯುವಮೋರ್ಚ ಮಂಗಳೂರು ಉತ್ತರ ಮಂಡಲದಿಂದ ಕಾರ್ಯರ್ತರು ಹಾಗೂ ದಾನಿಗಳಿಂದ ಸಂಗ್ರಹಿಸಿದ 1,60,000 ರೂಪಾಯಿಗಳ ಚೆಕ್ ಅನ್ನು ಮಾನ್ಯ ಶಾಸಕರಾದ ಡಾ ಭರತ್ ಶೆಟ್ಟಿಯವರು, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ, ಮಂಡಲ ಅಧ್ಯಕ್ಷರಾದ ತಿಲಕ್ ರಾಜ್

  ಸಿಎಂ ಸಿದ್ದರಾಮಯ್ಯ ದ.ಕ. ಮತ್ತು ಉಡುಪಿ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಸ್ಟ್ 1ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.   ಆಗಸ್ಟ್ 1ರಂದು ಬೆಳಿಗ್ಗೆ 11ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ಉಡುಪಿಗೆ ತೆರಳುವರು. 12.30ಕ್ಕೆ ಉಡುಪಿ ಜಿಪಂ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ. ಸಂಜೆ 4.15ಕ್ಕೆ ದ.ಕ. ಜಿಲ್ಲೆಯ ಪ್ರಗತಿ ಪರಿಶೀಲನೆಯನ್ನು ದ.ಕ.ಜಿಪಂ ಸಭಾಂಗಣದಲ್ಲಿ ನಡೆಸಲಿದ್ದಾರೆ. ರಾತ್ರಿ 9.50ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ

ಬಿ.ಕೆ. ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ನೀಡಬೇಕು : ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿ ಜಿಲ್ಲಾ ಸಮಿತಿ ಆಗ್ರಹ

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಬಿ.ಕೆ ಹರಿಪ್ರಸಾದ್ ಅವರಿಗೆ ಶೀಘ್ರದಲ್ಲೇ ಸೂಕ್ತ ಸಚಿವ ಸ್ಥಾನ ನೀಡಬೇಕೆಂದು ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿ ದ.ಕ. ಜಿಲ್ಲಾ ಸಮಿತಿ ಆಗ್ರಹಿಸಿದೆ.ಈ ಬಗ್ಗೆ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಷ್ಟ್ರೀಯ ಬಿಲ್ಲವ ಈಡಿಗ ಮಹಾಮಂಡಳಿಯ ರಾಜ್ಯ ಉಪಾಧ್ಯಕ್ಷ ಜಿತೇಂದ್ರ ಜೆ. ಸುವರ್ಣ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವಲ್ಲಿ ಬಿ.ಕೆ ಹರಿಪ್ರಸಾದ್‍ರವರ ಪಾತ್ರವೂ