Home ಕರಾವಳಿ Archive by category ಮಂಗಳೂರು (Page 92)

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಮತ್ತೋರ್ವ ಆರೋಪಿ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಮತ್ತೋರ್ವ  ಅರೋಪಿಯನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.  ಬಂಧಿತ ಆರೋಪಿಯನ್ನು ಮಡಿಕೇರಿ ಮೂಲದ ತುಫೈಲ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ದಾಸರಹಳ್ಳಿಯಲ್ಲಿ ಆತನನ್ನು ಎನ್‌ಐಎ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.2022 ರ ಜುಲೈ 26 ರಂದು ರಾತ್ರಿ

ಮಂಗಳೂರು ವಿವಿಯಲ್ಲಿ ‘ಕನಕ ಪುರಸ್ಕಾರ’ ಕಾರ್ಯಕ್ರಮ

ಮುಡಿಪು : ಕಲಾವಿದನಾಗಲಿ ಗಾಯಕನಾಗಲಿ ಸಂಗೀತದ ಎಲ್ಲಾ ಪ್ರಕಾರಗಳನ್ನು ಒಂದೇ ರೀತಿ ಇಷ್ಟಪಡಬೇಕು. ಸಂಗೀತ ಕ್ಷೇತ್ರದಲ್ಲಿ ಸ್ವರಗಳ ಜ್ಞಾನ ಅರಿತುಕೊಂಡು ಬೆಳೆದರೆ ಯಶಸ್ಸು ಸಾಧ್ಯ. ಸಂಗೀತ ಮತ್ತು ಸಾಹಿತ್ಯ ಎನ್ನುವಂತದ್ದು ಸಾಗರ. ಅದರಲ್ಲಿಯೂ ಕನಕದಾಸರು ಹಾಗೂ ಪುರಂದರದಾಸರ ರಚನೆಗಳು ಅಪೂರ್ವ. ಗಾಯಕರು ಸಾಹಿತ್ಯಕ್ಕೆ ಗಮನಕೊಟ್ಟು ಹಾಡಿದರೆ ಅದರ ಚಂದವೇ ಬೇರೆ ಎಂದು ಬೆಂಗಳೂರಿನ ಖ್ಯಾತ ಗಾಯಕರು, ಗಾನ ಗಂಧರ್ವ ಶಶಿಧರ್ ಕೋಟೆ ಅವರು ಹೇಳಿದರು. ಮಂಗಳೂರು

ಕಿನ್ನಿಗೋಳಿ : ಚಿನ್ನದ ಒಡವೆಗಳನ್ನು ತೊಳೆಯುವ ನೆಪದಲ್ಲಿ ಹಗಲು ದರೋಡೆ

ಕಿನ್ನಿಗೋಳಿ: ಕಿನ್ನಿಗೋಳಿ ಸುತ್ತಮುತ್ತ ಚಿನ್ನದ ಒಡವೆಗಳನ್ನು ತೊಳೆಯುವ ನೆಪದಲ್ಲಿ ಹಗಲು ದರೋಡೆಗಿಳಿಯುವ ತಂಡ ಕಾರ್ಯಾಚರಿಸುತ್ತಿದೆ. ಮನೆ ಮನೆಗೆ ಭೇಟಿ ನೀಡುತ್ತಿರುವ ಯುವಕನೋರ್ವ ಚಿನ್ನದ ಒಡವೆಗಳನ್ನು ತೊಳೆಯುವ ನೆಪದಲ್ಲಿ ಒಡವೆಗಳನ್ನು ಪಡೆದು, ತನ್ನ ಬಳಿ ಇರುವ ಪುಡಿಯೊಂದರಲ್ಲಿ ತನ್ನ ಪಾತ್ರೆಯಲ್ಲಿರುವ ನೀರಿನಲ್ಲಿ ತೊಳೆಯುತ್ತಾನೆ ಚಿನ್ನದ ಒಡವೆಗಳಿಗೆ ಹೊಳಪು ಬರುತ್ತದೆ ಅದರೆ ಒಡವೆಯ ಸುಮಾರು 25% ಕರಗಿ ಅವರಲ್ಲಿರುವ ನೀರಿನಲ್ಲಿರುತ್ತದೆ. ಅದನ್ನು ಆ ಯುವಕ

ಹೆಡ್ ಕಾನ್ಸ್ ಟೇಬಲ್ ಶ್ರೀಲತಾ ವಿರುದ್ಧ ಪೂರ್ವ ದ್ವೇಷದ ದೂರು : ಆರೋಪ

ಮಹಿಳಾ ಠಾಣೆಯ ಹೆಡ್‌ ಕಾನ್‌ಸ್ಟೇಬಲ್‌ ಶ್ರೀಲತಾ ಅವರ ವಿರುದ್ಧ ಫಾಸಿಮ್‌ ನೌಶಿಫ್‌ ಎಂಬವರು ಪೊಲೀಸ್‌ ಕಮಿಷನರ್‌ ಅವರಿಗೆ ಪೂರ್ವದ್ವೇಷದಲ್ಲಿ ಸುಳ್ಳು ದೂರು ನೀಡಿದ್ದಾರೆ. 2020 ನೇ ಸಾಲಿನಲ್ಲಿ ಮಹಿಳಾ ಠಾಣೆಯಲ್ಲಿ ನಪಿಸತ್ ಅಸ್ಮಾರ ನೀಡಿದ ದೂರಿನ ಆಧಾರದಲ್ಲಿ ವರದಕ್ಷಿಣ ಕಿರುಕುಳ ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಮುನ್ನ ಫಾಸಿಮ್‌ ನೌಶಿಫ್‌ ಮೇಲೆ (2020ರಲ್ಲಿಯೇ ) ಎಂಡಿಎಂ ಮಾದಕ ದ್ರವ್ಯ ಅಕ್ರಮ ಸಾಗಾಟ ಪ್ರಕರಣ ದಾಖಲಾಗಿ, ಬಂಧಿತನಾಗಿದ್ದ. ಈ

ಮಂಗಳೂರು ಜ್ಯುವೆಲ್ಲರಿ ಸಿಬ್ಬಂದಿ ಕೊಲೆ ಪ್ರಕರಣ ಆರೋಪಿ ಬಂಧನ

ಮಂಗಳೂರು ಜ್ಯುವೆಲ್ಲರಿ ಸಿಬ್ಬಂದಿಯ ಕೊಲೆ ಪ್ರಕರಣದ ಆರೋಪಿಯನ್ನು ಕಾಸರಗೋಡಿನಲ್ಲಿ ಬಂಧಿಸಲಾಗಿದೆ. ಕೋಝಿಕ್ಕೋಡ್ ಕೊಯಿಲಾಂಡಿ ನಿವಾಸಿ ಶಿಫಾಝ್(33) ಬಂಧಿತ ಆರೋಪಿ. ಈತನನ್ನು ಕಾಸರಗೋಡಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪರಿಸರದಲ್ಲಿ ಬಂಧಿಸಲಾಗಿದೆ. ಮಂಗಳೂರಿನ ಹಂಪನಕಟ್ಟೆಯಲ್ಲಿರುವ ಚಿನ್ನಾಭರಣದ ಅಂಗಡಿಯ ಸಿಬ್ಬಂದಿ, ಸ್ಥಳೀಯ ಅತ್ತಾವರ ನಿವಾಸಿಯಾಗಿದ್ದ ರಾಘವೇಂದ್ರ ಆಚಾರ್ಯ(50) ಎಂಬುವವರನ್ನು ಫೆಬ್ರವರಿ 3ರಂದು ಅಂಗಡಿಯಲ್ಲೇ ಚೂರಿಯಿಂದು ಕೊಲೆ ಮಾಡಲಾಗಿತ್ತು.

Special MSME Vendors’ Meet for SC / ST and Women Entrepreneurs

Mangalore Refinery and Petrochemicals Limited (MRPL) held Special MSME Vendors’ Meet for SC / ST and Women Entrepreneurs at Hotel AJ Grand, Mangalore on 2nd March 2023.  MRPL officials presented overview of MRPL’s procurement procedure, MSME initiatives and benefits of the Government eMarketplace (GeM) portal.   Shri Devaraj K, Dy Director, MSME encouraged the SC

ಅಡುಗೆ ಅನಿಲ ಬೆಲೆಯೇರಿಕೆ ವಿರೋಧಿಸಿ ಸಿಪಿಐಎಂ ಪ್ರತಿಭಟನೆ

ಅಡುಗೆ ಅನಿಲ ಬೆಲೆಗಳನ್ನು ಅತ್ಯಂತ ಕ್ರೂರವಾಗಿ ಏರಿಕೆ ಮಾಡಿದ ಕೇಂದ್ರ ಸರಕಾರದ ಕೆಟ್ಟ ನಿರ್ಧಾರದ ವಿರುದ್ಧ ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮಿತಿ ನೇತೃತ್ವದಲ್ಲಿ ಇಂದು (2-3-2023) ನಗರದ ಕ್ಲಾಕ್ ಟವರ್ ಬಳಿ ಅಡುಗೆ ಖಾಲಿ ಅಡುಗೆ ಅನಿಲ ಸಿಲಿಂಡರ್ ಪ್ರದರ್ಶಿಸಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.  ಪ್ರತಿಭಟನೆಯ್ನು ಉದ್ದೇಶಿಸಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್ ಮಾತನಾಡುತ್ತಾ ಬಿಜೆಪಿ ಸರಕಾರ ಗ್ಯಾಸ್ ದರ ಏರಿಕೆ

ಮಾ.5ರಂದು ಪ್ರೆಸ್ ಕ್ಲಬ್ ದಿನಾಚರಣೆ : ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ, ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ

ಮಂಗಳೂರು: ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪತ್ರಿಕಾ ಭವನ ಟ್ರಸ್ಟ್ ಸಹಯೋಗದಲ್ಲಿ ಪ್ರೆಸ್ ಕ್ಲಬ್ ದಿನಾಚರಣೆ, ಮಂಗಳೂರು ಪ್ರೆಸ್ ಕ್ಲಬ್ ವರ್ಷದ ಪ್ರಶಸ್ತಿ- 2022 ಪ್ರದಾನ ಮತ್ತು ಹಿರಿಯ ಪತ್ರಕರ್ತರಿಗೆ ಪ್ರೆಸ್ ಕ್ಲಬ್ ಗೌರವ ಪುರಸ್ಕಾರ ಸಮಾರಂಭ ಮಾ.5ರಂದು ಬೆಳಗ್ಗೆ 10 ಗಂಟೆಗೆ ಬೋಳೂರು ಕುಡ್ಲ ಕುದ್ರು- ಪ್ಯಾರಡೈಸ್ ಐಲ್ಯಾಂಡ್‍ನಲ್ಲಿ ನಡೆಯಲಿದೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಕೆ. ಸದಾಶಿವ

ಕೆಆರ್‌ಎಂಎಸ್‌ಎಸ್‌ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ಡಾ. ಮಾಧವ ಎಂ.ಕೆ

ಮಂಗಳೂರು: ಕರ್ನಾಟಕ ರಾಜ್ಯ ಮಹಾವಿದ್ಯಾನಿಲಯ ಶಿಕ್ಷಕ ಸಂಘ (KRMSS) ರಾಜ್ಯ ಘಟಕದ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ, ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ ಹಾಗೂ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಡಾ. ಮಾಧವ ಎಂ.ಕೆ ಆಯ್ಕೆಯಾಗಿದ್ದಾರೆ. ಮೈಸೂರಿನ ಸುತ್ತೂರು ಮಠದಲ್ಲಿ ಇತ್ತೀಚೆಗೆ ನಡೆದ ಕೆಆರ್‌ಎಂಎಸ್‌ಎಸ್‌ ರಾಜ್ಯ ಕಾರ್ಯಕಾರಿಣಿಯಲ್ಲಿ ಈ ಆಯ್ಕೆ

ಮಾರ್ಚ್ 17 ರಂದು ಉಳ್ಳಾಲ ತಾಲೂಕು ಸಾಹಿತ್ಯ ಸಮ್ಮೇಳನ : ಶ್ಯಾಮಲಾ ಮಾಧವ ಸೋಮೇಶ್ವರ ಅಧ್ಯಕ್ಷರಾಗಿ ಆಯ್ಕೆ

ಮುಡಿಪು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲೂಕು ಘಟಕವು ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಮಾರ್ಚ್ 17 ರಂದು ಉಳ್ಳಾಲ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ನಡೆಸಲಾಗುವುದು ಎಂದು ಉಳ್ಳಾಲ ಘಟಕದ ಅಧ್ಯಕ್ಷರಾಗಿರುವ ಡಾ. ಧನಂಜಯ ಕುಂಬ್ಳೆ ತಿಳಿಸಿದ್ದಾರೆ. ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ. ಪಿ. ಶ್ರೀನಾಥ್ ಮತ್ತು ತಜ್ಞರ ಸಮಿತಿಯು ಉಳ್ಳಾಲ ತಾಲೂಕಿನ