ಸಮಾಜ ಮಂದಿರ ಸಭಾ (ರಿ) ವತಿಯಿಂದ ಜರಗಲಿರುವ 78ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವದಲ್ಲಿ ಈ ಬಾರಿ ಉದ್ಯಮಿ, ಧಾರ್ಮಿಕ ನೇತಾರ ನವಮಿ ಸಮೂಹ ಸಂಸ್ಥೆಗಳ ನಂದ ಕುಮಾರ್ ಆರ್. ಕುಡ್ವ ಅವರಿಗೆ ಸಮಾಜ ಮಂದಿರ ಪುರಸ್ಕಾರ 2025 ನೀಡಿ ಗೌರವಿಸಲಾಗುವುದು ಎಂದು ಸಮಾಜ ಮಂದಿರ ಸಭಾದ ಅಧ್ಯಕ್ಷ , ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ತಿಳಿಸಿದ್ಧಾರೆ. ಸೆ 22ರಿಂದ
ಪದವಿ ಪೂರೈಸುವುದು ಅಥವಾ ಕಂಠಪಾಠ ಮಾಡಿ ರ‍್ಯಾಂಕ್, ಪದಕ ಪಡೆಯುವುದು ಶಿಕ್ಷಣ ಅಲ್ಲ. ಬದುಕಿನಲ್ಲಿ ಎದುರಾಗುವ ಸವಾಲು ಹಾಗೂ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳುವುದೇ ನಿಜವಾದ ಶಿಕ್ಷಣ ಎಂದು ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ. ಅಬ್ದುಲ್ ನಜೀರ್ ಹೇಳಿದರು.ಮಂಗಳೂರು ವಿವಿ ಘಟಕ ಕಾಲೇಜು ಬನ್ನಡ್ಕ ಇಲ್ಲಿ ಶನಿವಾರ ಪ್ರೇರಣಾ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಭವಿಷ್ಯದ ನೌಕಕರಾಗಬಾರದು.
ಇಲ್ಲಿನ ಸಾವ೯ಜನಿಕ ಶ್ರೀ ಗಣೇಶೋತ್ಸವ ಟ್ರಸ್ಟ್ ವತಿಯಿಂದ ಆ.27ರಿಂದ 31ರವರೆಗೆ ಸಮಾಜ ಮಂದಿರದಲ್ಲಿ ನಡೆಯಲಿರುವ 62ನೇ ವರ್ಷದ ಗಣೇಶೋತ್ಸವಕ್ಕೆ ಪೂರಕವಾಗಿ ಮಂಗಳವಾರ ಹೊರೆಕಾಣಿಕೆ ಮೆರವಣಿಗೆ ನಡೆಯಿತು.ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಎಂಸಿಎಸ್ ಸೊಸೈಟಿ ಎದುರು ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.ಟ್ರಸ್ಟ್ ನ ಅಧ್ಯಕ್ಷ ನಾರಾಯಣ ಪಿ.ಎಂ., ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್, ಸುರೇಶ್ ಪ್ರಭು, ಟ್ರಸ್ಟ್ ನ ಪ್ರಧಾನ ಕಾಯ೯ದಶಿ೯ ಸುದಶ೯ನ್
ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್‌ಗೆ 42 ಪದಕ . ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ(ರಿ.) ವತಿಯಿಂದ ನಡೆದ ಕರ್ನಾಟಕ ರಾಜ್ಯ ಅಂತರ್ ಜಿಲ್ಲಾ ಕಿರಿಯರ ಹಾಗೂ 23 ವಯೋಮಿತಿಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಸ್ಪೋಟ್ಸ್ ಕ್ಲಬ್‌ನ ಕ್ರೀಡಾಪಟುಗಳಿಗೆ 19 ಚಿನ್ನ, 15 ಬೆಳ್ಳಿ, 8 ಕಂಚು ಒಟ್ಟು 42 ಪದಕಗಳು, 3 ನೂತನ ಕೂಟ ದಾಖಲೆ ಹಾಗೂ 1 ವಿಭಾಗ ಕ್ರೀಡಾಕೂಟದ ವೈಯಕ್ತಿಕ ಪ್ರಶಸ್ತಿಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.
ಮೂಡುಬಿದಿರೆ : ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಗ್ರಂಥಪಾಲಕರ ಸಂಘ ಮತ್ತು ಆಳ್ವಾಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಅಂಗವಾಗಿ `ಗ್ರಂಥಾಲಯ ಸೇವೆಗಳ ನಾವಿನ್ಯತೆ ಹಾಗೂ ಪರಿಣಾಮಕಾರಿ ಬಳಕೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ’ವಿಷಯದ ಕುರಿತು ರಾಜ್ಯಮಟ್ಟದ ಒಂದು ದಿನದ ಕಾರ್ಯಾಗಾರ ಶನಿವಾರ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಮಂಗಳೂರು ವಿವಿ ಕಾಲೇಜಿನ ಡಾ.ಮಾಧವ ಎಂ.ಕೆ ಮಾತನಾಡಿ, ಕಲಿಕೆಯ ದೇಗುಲವಾದ
ಮೂಡುಬಿದಿರೆ: ದೊಡ್ಮನೆ ಫ್ರೆಂಡ್ಸ್ ಬೆದ್ರ ಇವರ ಹೊಸ ಲೋಗೋ ಬಿಡುಗಡೆ ಕಾರ್ಯಕ್ರಮ ಮೂಡಬಿದಿರೆಯ ಶ್ರೀ ಗೌರಿ ದೇವಸ್ಥಾನದಲ್ಲಿ ನಡೆಯಿತು. ತಂಡದ ಹೊಸ ಲೋಗೋವನ್ನು ಮೂಡುಬಿದಿರೆ ಸಾರ್ವಜನಿಕ ಗಣೇಶೋತ್ಸವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷರಾದ ಸುದರ್ಶನ ಮೂಡುಬಿದರೆ ಇವರು ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವರು, 9 ವರ್ಷಗಳಿಂದ ದೊಡ್ಮನೆ ಫ್ರೆಂಡ್ಸ್ ತಂಡವು ಸ್ವಚ್ಛತಾ ಕಾರ್ಯಕ್ರಮ, ಚಂದ್ರಶೇಖರ
ಮೂಡುಬಿದಿರೆ : ಅನಾರೋಗ್ಯದಿಂದ ಸಾವನ್ನಪ್ಪಿದ ಅನಾಥ ವ್ಯಕ್ತಿಯೋವ೯ರ ಶವವನ್ನು ಇರುವೈಲ್ ಫ್ರೆಂಡ್ಸ್ ಕ್ಲಬ್ ನವರು ಮಂಗಳವಾರ ಅಂತ್ಯ ಸಂಸ್ಕಾರ ಮಾಡುವ ಮೂಲಕ ಸಾಮಾಜಿಕ ಕಳಕಳಿ ಹಾಗೂ ಮಾನವೀಯ ಸೇವೆಗೆ ಮಾದರಿಯಾಗಿದ್ದಾರೆ. ಇರುವೈಲು ಹೊಸಮಾರಪದವು ನಿವಾಸಿ ಸಂಜೀವ ಅವರು ಮೃತಪಟ್ಟ ವ್ಯಕ್ತಿ. ಇವರಿಗೆ ಹೆಂಡ್ತಿ ಮಕ್ಕಳು, ಸಂಸಾರ ಯಾರೂ ಇಲ್ಲ. ತಾಯಿ ಮಗ ಮಾತ್ರ ಇದ್ದವರು.ತಾಯಿ ಕಳೆದ ವಷ೯ ವಯೋಸಹಜವಾಗಿ ತೀರಿಕೊಂಡಿದ್ದರು.ತಾಯಿಯನ್ನು ಕಳೆದುಕೊಂಡ ನಂತರ ಸಂಜೀವಅವರು
ಮೂಡುಬಿದಿರೆ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಗುವಿನ ನೆರವು ಕೋರಿ ಬ್ಯಾಂಕ್ ಖಾತೆಯ ಮಾಹಿತಿ ಪತ್ರವನ್ನು ಚರ್ಚ್ ನ ವಾಟ್ಸಾಪ್ ಗ್ರೂಪ್ ನಲ್ಲಿ ಹಾಕಿದ್ದು ಆಗ್ರೂಪ್ ನ ಅಡ್ಮಿನ್ ಅಕೌಂಟ್ ನಂಬರ್ ಅನ್ನು ಬದಲಾಯಿಸಿ ಹಣ ವಸೂಲಿ ಮಾಡಿದ್ದು, ಆತನ್ನು ಮೂಡುಬಿದಿರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿಯನ್ನು ವಿನೋದ್ ವಾಲ್ಟರ್ ಪಿಂಟೋ ಎಂದು ಗುರುತಿಸಲಾಗಿದೆ.ಪ್ರಕರಣದ ವಿವರ:ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆ.18 ರಂದು ತಾಕೋಡೆಯ ಹೋಲಿ
ಮೂಡುಬಿದಿರೆ : ಆಳ್ವಾಸ್ ಪದವಿ ಕಾಲೇಜಿನ ಆ್ಯಂಟಿ ರ‍್ಯಾಗಿಂಗ್ ಸೆಲ್, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯೂತ್ ರೆಡ್‌ಕ್ರಾಸ್ ಘಟಕಗಳ ಜಂಟಿ ಆಶ್ರಯದಲ್ಲಿ ಮೂಡುಬಿದಿರೆ ಪೋಲೀಸ್ ಇಲಾಖೆಯ ಸಹಯೋಗದೊಂದಿಗೆ ಜಾಗೃತಿ ಕಾರ್ಯಕ್ರಮವು ಕುವೆಂಪು ಸಭಾಂಗಣದಲ್ಲಿ ನಡೆಯಿತು. ಮೂಡುಬಿದಿರೆ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರ‍್ಯಾಗಿಂಗ್ ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಗೌರವಕ್ಕೆ ದಕ್ಕೆ ತರುವ ಗಂಭೀರ ಸಾಮಾಜಿಕ ಸಮಸ್ಯೆ. ಆ ಹಿನ್ನಲೆಯಲ್ಲಿ
ಮೂಡುಬಿದಿರೆ: ಹಿರಿಯ ಆಯರ್ವೇದ , ಅಲೋಪತಿ ವೈದ್ಯ ಡಾ. ಎಂ. ರಾಮ ಭಟ್ ( 92) ಅಲ್ಪಕಾಲದ ಅಸ್ವಾಸ್ಥ್ಯದ ಬಳಿಕ ಅರಮನೆ ರಸ್ತೆಯ ತಮ್ಮ ಮಹಾಲಸಾ ನಿವಾಸದಲ್ಲಿ ಅ17 ರಂದು ನಿಧನ ಹೊಂದಿದರು. ಅವರು ಸಹೋದರ, ಸಹೋದರಿಯರು, ಪುತ್ರ ಹೋಮಿಯೋ ಪತಿ ವೈದ್ಯ ಡಾ. ಗಂಗಾಧರ ಭಟ್ , ಇಬ್ಬರು ಪುತ್ರಿಯರು, ಸೊಸೆ ಡಾ. ವಿನಯಾ ಜಿ. ಭಟ್ ಸಹಿತ ಬಂಧುವರ್ಗವನ್ನು ಅಗಲಿದ್ದಾರೆ.1956ರಲ್ಲಿ ಎಲ್.ಎ. ಎಂ. ಎಸ್ ಪದವೀಧರ ವೈದ್ಯರಾಗಿ ಬೆರಳೆಣಿಕೆಯ ವೈದ್ಯರಿದ್ದ ಕಾಲದಲ್ಲಿ 1958 ರಿಂದ […]