Home ಕರಾವಳಿ Archive by category ಮೂಡಬಿದರೆ (Page 51)

ಮೂಡುಬಿದಿರೆಯಲ್ಲಿ ರಾಣಿ ಅಬ್ಬಕ್ಕ ಬಿದಿರು ಉದ್ಯಾನವನ ಲೋಕಾರ್ಪಣೆ

ಮೂಡುಬಿದಿರೆ: ಆನೆಗಳ ಆಹಾರವಾಗುವ ಬಿದಿರಿನ ತಳಿಗಳನ್ನು ಕಾಡಿನಂಚಿನಲ್ಲಿ ನೆಟ್ಟರೆ ಆನೆಗಳು ನಾಡಿಗೆ ಬರುವ ಪ್ರಮೇಯ ತಪ್ಪುತ್ತದೆ. ಅಂತಹ ಬಿದಿರಿನ ತಳಿಗಳನ್ನು ಬೆಳೆಸುವ ಅವಶ್ಯಕತೆಯಿದೆ ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು. ಒಂಟಿಕಟ್ಟೆಯ ಕಡಲ ಕೆರೆ ನಿಸರ್ಗಧಾಮದ ಸಾಲುಮರ ತಿಮ್ಮಕ್ಕ ಸಸ್ಯೋದ್ಯಾನವನ ಆವರಣದಲ್ಲಿ ರಾಣಿ ಅಬ್ಬಕ್ಕ ಬಿದಿರು ಉದ್ಯಾನವನವನ್ನು

ಇಂಧನ ಬೆಲೆ ಏರಿಕೆ ವಿರುದ್ಧ ಅಭಯಚಂದ್ರ ಜೈನ್‌ರಿಂದ ಒಂಟಿಯಾಗಿ ಪ್ರತಿಭಟನೆ

ಪೆಟ್ರೋಲ್ ಮತ್ತು ಡೀಸೆಲ್, ಅಡುಗೆ ಅನಿಲ ಬೆಲೆಯೇರಿಕೆ ಖಂಡಿಸಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕೆ.ಅಭಯಚಂದ್ರ ಜೈನ್ ಅವರು ಮೂಡುಬಿದಿರೆಯಲ್ಲಿ ಒಂಟಿಯಾಗಿ ಪ್ರತಿಭಟನೆ ನಡೆಸಿ ಗಮನಸೆಳೆದರು. ಇಂಧನ ತೈಲ, ಅಡುಗೆ ಅನಿಲ ಬೆಲೆಯೇರಿಕೆ ವಿರುದ್ಧ ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ಮೂಡುಬಿದಿರೆಯಲ್ಲಿ ಸೈಕಲ್ ಜಾಥಾ ಮೂಲಕ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಮೂಡುಬಿದಿರೆ ಪೊಲೀಸರು ಇದಕ್ಕೆ ಅನುಮತಿ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಯಚಂದ್ರ ಜೈನ್

ಮೂಡುಬಿದರೆಯಲ್ಲಿ ಎರಡು ತಿಂಗಳ ಬಳಿಕ ಬಸ್ ಸಂಚಾರ

ಎರಡು ತಿಂಗಳ ಲಾಕ್ ಡೌನ್ ಮುಗಿದು ಮೂಡುಬಿದಿರೆಯಲ್ಲಿ ಸೋಮವಾರದಂದು ಶೇ ೫೦ರಷ್ಟು ಖಾಸಗಿ ಬಸ್ಸುಗಳು ರಸ್ತೆಗಿಳಿದು ಓಡಾಟ ಆರಂಭಿಸಿದವು.ಖಾಸಗಿ ಬಸ್ಸುಗಳು ರಸ್ತೆಗಿಳಿದುದರಿಂದ ಜನರು ತಾವು ಹೋಗಬೇಕಾದ ಸ್ಥಳಗಳಿಗೆ ಬೆಳಗಿನಿಂದಲೇ ಬಸ್ಸುಗಳನ್ನು ಆಶ್ರಯಿಸಿದರು. ಲಾಕ್ ಡೌನ್ ಸಂದರ್ಭದಲ್ಲಿ ಖಾಸಗಿ ಬಸ್ಸು ತಂಗುದಾಣದ ಆವರಣದಲ್ಲಿ ಇತರ ವಾಹನಗಳು ಬಂದು ನಿಲ್ಲುತ್ತಿದ್ದವು. ಅದರಂತೆ ಸೋಮವಾರವು ಕೂಡಾ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳನ್ನು ಬಸ್ಸು ನಿಲ್ದಾಣದ

ನಿಡ್ಡೋಡಿಯಲ್ಲಿ ಸೀಫುಡ್ ಪಾರ್ಕ್ ನಿರ್ಮಾಣ ಕೈಬಿಡುವಂತೆ ಐವನ್ ಡಿಸೋಜಾ ಒತ್ತಾಯ

ಮೂಡುಬಿದಿರೆ: ಕೃಷಿ ಪ್ರಧಾನವಾದ ನಿಡ್ಡೋಡಿ ಪ್ರದೇಶದಲ್ಲಿ ಸೀಫುಡ್ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರವು ರೈತರ ಹಿತದೃಷ್ಟಿಯನ್ನು ಮರೆತಿದೆ. ಪಾರ್ಕ್ ನಿರ್ಮಾಣದಿಂದಾಗಿ ಕೃಷಿ ಭೂಮಿ ಸಂಪೂರ್ಣ ಹಾನಿಯಾಗಲಿದೆ. ಪರಿಸರ ಕೆಡಿಸಿ ಅಭಿವೃದ್ಧಿ ನಡೆಸುವ ಬದಲು, ಪರಿಸರಕ್ಕೆ ಪೂರಕ ಅಭಿವೃದ್ಧಿ ನಡೆಸಬೇಕು. ನಿಡ್ಡೋಡಿಯಲ್ಲಿ ಸೀಫುಡ್ ಕಾರ್ಖಾನೆಯನ್ನು ಕೈಬಿಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಿದ್ದು, ಉಸ್ತುವಾರಿ ಸಚಿವರಿಗೆ ಈ ಬಗ್ಗೆ ಒತ್ತಾಯಿಸುತ್ತೇನೆ ಎಂದು

ಪಡುಕೊಣಾಜೆಯಲ್ಲಿ ಚಿರತೆಯಿಂದ ರಕ್ಷಿಸಿಕೊಂಡ ಶ್ವಾನ

ಮೂಡುಬಿದಿರೆ ತಾಲೂಕಿನಲ್ಲಿ ಪಡುಕೊಣಾಜೆಯಲ್ಲಿ ಚಿರತೆಯೊಂದು ಮನೆಯಂಗಳಕ್ಕೆ ಆಗಮಿಸಿ ನಾಯಿಯೊಂದನ್ನು ಹಿಡಿದುಕೊಂಡು ಹೋದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಪಡುಕೊಣಾಜೆಯ ಸತೀಶ್ ಎಂಬವರ ಮನೆಯ ಬಳಿ ರಾತ್ರಿ ಅಡ್ಡಾಡುತ್ತಿದ್ದ ಚಿರತೆ ಮನೆಯಂಗಳದಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಿದೆ. ಸ್ಥಳಕ್ಕೆ ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಶಿರ್ತಾಡಿ ಗ್ರಾ. ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಜತೆ ಮಾತುಕತೆ

ನಿಡ್ಡೋಡಿಯ ಪ್ರಸ್ತಾವಿತ ಸೀಫುಡ್ ಪಾರ್ಕ್‌ನಿಂದ ಪರಿಸರ ಮಾಲಿನ್ಯ ಖಂಡಿತ: ಅಭಯಚಂದ್ರ ಜೈನ್

ಮೂಡುಬಿದಿರೆ : ನಿಡ್ಡೋಡಿಯ ಪ್ರಸ್ತಾವಿತ ಸೀಫುಡ್ ಪಾರ್ಕ್‌ನಿಂದ ಪರಿಸರ ಮಾಲಿನ್ಯ ವ್ಯಾಪಕವಾಗಿ ಹರಡಲಿದೆ. ಜಲ ಸಂಪನ್ಮೂಲ ಕಲುಷಿತವಾಗಿ ಕೃಷಿ ಚಟುವಟಿಕೆಗಳಿಗೆ ಮಾರಕವಾಗಿ ಪರಿಣಮಿಸಲಿದೆ. ಇಂಥ ಯೋಜನೆ ನಿಡ್ಡೋಡಿಗೆ ತಕ್ಕುದಾಗಿಲ್ಲ’ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಅಭಿಪ್ರಾಯಪಟ್ಟರು. ಮೂಡುಬಿದಿರೆ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ನಿಡ್ಡೋಡಿಗೆ ಸೀಫುಡ್ ಪಾರ್ಕ್ ಬೇಕೆಂಬುವವರು ಕಾರವಾರದಲ್ಲಿ ಹಲವಾರು ವರ್ಷಗಳ ಹಿಂದೆ

ಲಾಕ್ ಡೌನ್ ನಿಯಮ ಉಲ್ಲಂಘನೆ : 31 ವಾಹನಗಳ ಜಫ್ತಿ, 70 ಕೇಸು ದಾಖಲು

ಮೂಡುಬಿದಿರೆ : ಕಳೆದ ಮೂರು ದಿನಗಳಿಂದ ಬೆಳಿಗ್ಗೆ 6-10 ಗಂಟೆಯ ನಂತರ ಸುಮ್ಮನೆ ಕಾಲ ಕಳೆಯಲು ಮೂಡುಬಿದಿರೆ ಪೇಟೆಯಲ್ಲಿ ಅಡ್ಡಾದಿಡ್ಡಿ ಓಡಾಟ ಮಾಡಿ ಲಾಕ್ ಡೌನ್ ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದ 31 ವಾಹನಗಳನ್ನು ಮೂಡುಬಿದಿರೆ ಪೊಲೀಸರು ಜಫ್ತಿ ಮಾಡಿದ್ದು ಅಲ್ಲದೆ ಮಾಸ್ಕ್ ಧರಿಸದಿದ್ದ 70 ಜನರ ವಿರುದ್ಧ ಕೇಸು ದಾಖಲಿಸುವ ಮೂಲಕ ಕಾರ್ಯಚರಣೆಯನ್ನು ಬಿಗಿಗೊಳಿಸಿದ್ದಾರೆ. ಅಗತ್ಯ ವಸ್ತುಗಳ ಖರೀದಿಯ ಸಂದರ್ಭ ಬೆಳಿಗ್ಗೆ ಮೂಡುಬಿದಿರೆಯ ಪೇಟೆಯಲ್ಲಿ ಮತ್ತು