Home ಕರಾವಳಿ Archive by category ಮೂಡಬಿದರೆ (Page 66)

ಶಿರ್ತಾಡಿ ಮೌಂಟ್ ಕಾರ್ಮೆಲ್‌ನಲ್ಲಿ ಮೊಂತಿ ಹಬ್ಬ, ಬಲಿಪೂಜೆ

ಶಿರ್ತಾಡಿ : “ಮಾತೃ ಸ್ವರೂಪ ಭೂಮಿಯ ಮೇಲೆ ಇರುವ ಉನ್ನತವಾದ ಭಾವನೆಯಾಗಿದೆ. ದೇವರ ಸೃಷ್ಟಿಯಲ್ಲಿ ಉತ್ಕೃಷ್ಟ ಸಂಬಂಧವಾಗಿ ಮತ್ತು ಅಷ್ಟೇ ಗಟ್ಟಿ ಬಾಂಧವ್ಯವನ್ನು ಪ್ರತಿಪಾದಿಸುವ ಮಾತೃಶಕ್ತಿಯು ಮನುಷ್ಯನನ್ನು ಭೂಮಿಯ ಮೇಲೆ ಪೊರೆಯುವ ಮೂಲಕ ಚೈತನ್ಯ ತುಂಬುತ್ತದೆ. ಮೇರಿ ಮಾತೆಯ ಹುಟ್ಟು ಮಾನವ ಕುಲಕ್ಕೆ ಒಳಿತನ್ನು ಉಂಟುಮಾಡಿದೆ” ಎಂದು ಶಿರ್ತಾಡಿ ಮೌಂಟ್

ಆನೆಯ ಸೀನಿಗೆ ಹೆದರಿ ಓಡಿದ ವ್ಯಕ್ತಿ ಕಾಲು ಜಾರಿ ಬಿದ್ದು ಮೃತ್ಯು

ಮೂಡುಬಿದಿರೆ : ಆನೆ ಸೀನಿದ ಶಬ್ದಕ್ಕೆ ಹೆದರಿ ಓಡಿ ಹೋಗುವಾಗ ಕಾಲು ಜಾರಿ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೊಡ್ಯಡ್ಕ ದೇವಸ್ಥಾನದಲ್ಲಿ ಸೋಮವಾರ ಸಂಜೆ ನಡೆದಿದೆ. ಕೊಡ್ಯಡ್ಕ ದೇವಸ್ಥಾನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕಾರ್ಕಳ ಇಂಡಸ್ಟ್ರಿಯಲ್ ಬಳಿಯ ನಿವಾಸಿ ವಿಶ್ವನಾಥ ದೇವಾಡಿಗ (58ವ) ಮೃತಪಟ್ಟ ವ್ಯಕ್ತಿ. ಇವರು ದೇವಸ್ಥಾನದ ಆನೆಯ ಸಮೀಪ ಕೆಲಸ ಮಾಡುತ್ತಿದ್ದ ಸಂದರ್ಭ ಆನೆ ಸೀನಿದ್ದು ಈ ಸಂದರ್ಭ ಹೆದರಿ ಓಡಿ ಹೋಗುವಾಗ ಬಿದ್ದು ತಲೆಗೆ ಏಟು ಬಿದ್ದು ಗಂಭೀರ

ಉದ್ಯಮಿ ಕಜಂಗೆ ಸುದರ್ಶನ್ ಜೈನ್ ನಿಧನ

ಮೂಡುಬಿದರೆ ಎಸ್‌ಜೆಆರ್ ಟಿಂಬರ್ಸ್ ಮಾಲಕ, ರಿಯಲ್ ಎಸ್ಟೇಟ್ ಉದ್ಯಮಿ ಕಜಂಗೆ ಸುದರ್ಶನ್ ಜೈನ್(56) ಅವರು ನಿಧನ ಹೊಂದಿದ್ದಾರೆ. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಮೂಡುಬಿದರೆ ರೋಟರಿ ಮಾಜಿ ಕಾರ್ಯದರ್ಶಿ, ಜೈನ್ ಮಿಲನ್ ಉಪಾಧ್ಯಕ್ಷರಾಗಿ, ಧಾರ್ಮಿಕ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು. ಮೂಡುಬಿದರೆಯ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸುದರ್ಶನ್ ಅವರಿಗೆ ಸದ್ಗತಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶಾಸಕ ಉಮಾನಾಥ

ಕೋವಿಡ್ ಲಸಿಕೆ ಹಂಚಿಕೆಯಲ್ಲಿ ತಾರತಮ್ಯ : ಮೂಡುಬಿದರೆಯಲ್ಲಿ ಕಾಂಗ್ರೆಸ್‍ನಿಂದ ಪ್ರತಿಭಟನೆ

ಮೂಡುಬಿದಿರೆ: ತಾಲೂಕಿನ ವಿವಿಧ ಕಡೆ ಕೋವಿಡ್ ಲಸಿಕೆ ಕೊಡುವಲ್ಲಿ ತಾರತಮ್ಯವಾಗುತ್ತಿದೆ ಎಂದು ಆರೋಪಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಸೀಲ್ದಾರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಕೋವಿಡ್ ವ್ಯಾಕ್ಸಿನ್ ವಿಚಾರದಲ್ಲಿ ಶಾಸಕರು, ಬಿಜೆಪಿ ಮುಖಂಡರು ತಾರತಮ್ಯ ಮಾಡುತ್ತಿದ್ದಾರೆ. ಸರ್ಕಾರಿ ಆರೋಗ್ಯ ಕೇಂದ್ರಗಳು, ಪಂಚಾಯಿತಿ ಕಾರ್ಯಾಲಯ ಅಥವಾ ಶಾಲೆಗಳಲ್ಲಿ ಕೋವಿಡ್

ಮೂಡುಬಿದಿರೆಯ ಪುರಸಭೆ- ಗ್ರಾ.ಪಂ ಸದಸ್ಯರಿಗೆ ಪ್ರಶಿಕ್ಷಣ ವರ್ಗ ಕಾರ್ಯಕ್ರಮ

ಮೂಡುಬಿದಿರೆ : ಭಾರತೀಯ ಜನತಾ ಪಾರ್ಟಿ ಮೂಲ್ಕಿ-ಮೂಡುಬಿದಿರೆ ಮಂಡಲದ ವತಿಯಿಂದ ಪುರಸಭೆ ಮತ್ತು ಗ್ರಾ.ಪಂಚಾಯತ್ ಸದಸ್ಯರಿಗೆ ಪ್ರಶಿಕ್ಷಣ ವರ್ಗ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ  ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಘಟನೆಯ ಆಧಾರ ಕಾರ್ಯಕರ್ತರು. ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕು ಮತ್ತು ವಿಚಾರವಂತರಾಗಿ ಸಾಗಬೇಕೆನ್ನುವ ದೃಷ್ಠಿಕೋನದಿಂದ ಪ್ರಶಿಕ್ಷಣ ವರ್ಗ ರೂಪುಗೊಂಡಿದೆ. ಹಲವು ವರ್ಷಗಳ ನಂತರ ಜನರು

ಎಸ್‌ಕೆಎಸ್‌ಎಸ್‌ಎಫ್ ಕೈಕಂಬ ವಲಯ ವಿಖಾಯದಿಂದ ರಕ್ತದಾನ ಶಿಬಿರ ಹಾಗೂ ಕೊರೊನಾ ವಾರಿಯರ್ಸ್‌ಗೆ ಸನ್ಮಾನ

ಗುರುಪುರ: ಎಸ್‌ಕೆಎಸ್‌ಎಸ್‌ಎಫ್ ಕೈಕಂಬ ವಲಯ ವಿಖಾಯ ವತಿಯಿಂದ ಬ್ರಹತ್ ರಕ್ತದಾನ ಶಿಬಿರ ಹಾಗೂ ಕೊರೊನಾ ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ ಆದಿತ್ಯವಾರ ಗುರುಪುರ ಕೈಕಂಬ ಪ್ರೀಮಿಯರ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಲಯ ಅಧ್ಯಕ್ಷರಾದ ಬಹು: ಜಮಲುದ್ದೀನ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಬಹು:ಝುಬೈರ್ ಫೈಝಿ ಅಂಕೋಲಾ ದುಆ: ನೆರವರಿಸಿದರು. ಸಮಸ್ತ ಕೇರಳ ಜಮಿಯತುಲ್ ಉಲೆಮಾ ಕೇಂದ್ರ ಮುಶಾವರ ಸದಸ್ಯರಾದ ಬಾಂಬ್ರಣ ಉಸ್ತಾದ್ ರವರು

ಕೌಟುಂಬಿಕ ಕಲಹ : ದರೆಗುಡ್ಡೆಯಲ್ಲಿ ಪತ್ನಿಯನ್ನು ಕೊಂದ ಪತಿ

ಮೂಡುಬಿದಿರೆ ತಾಲೂಕಿನ ದರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಮಠ ಎಂಬಲ್ಲಿ ಪತಿ ಪತ್ನಿಯನ್ನು ಕೊಂದ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಸುನೀತಾ(30 ) ಸಾವನ್ನಪ್ಪಿದಾಕೆ. ಪತಿ ಮೂಡುಬಿದಿರೆಯ ದಿನ್ ರಾಜ್ ನನ್ನು ಇಂದು ಮುಂಜಾನೆ ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ ಗಂಡ- ಹೆಂಡತಿಯ ಮಧ್ಯೆ ಜಗಳ ನಡೆದಿದ್ದು ಈ ಸಂದರ್ಭ ದಿನ್ ರಾಜ್ ಹೆಂಡತಿಯ ತಲೆಗೆ ಹೊಡೆದಿದ್ದಾನೆ. ಆಗ ರಕ್ತ ಸೋರುತ್ತಿರುವುದನ್ನು ಕಂಡ ದಿನ್ ರಾಜ್ ಸುನೀತಾ ಅವರ ಸಹೋದರ

ಕಬಕ ಪ್ರಕರಣ: ಮೂಲ್ಕಿ-ಮೂಡುಬಿದಿರೆ ಬಿಜೆಪಿ ಖಂಡನೆ

ಮೂಡುಬಿದಿರೆ: ಪುತ್ತೂರಿನ ಕಬಕದಲ್ಲಿ ನಡೆದ ಪ್ರಕರಣವನ್ನು ಮೂಲ್ಕಿ ಮೂಡುಬಿದಿರೆ ಮಂಡಲ ಬಿಜೆಪಿ ಖಂಡಿಸಿದೆ. ಮಂಡಲ ಅಧ್ಯಕ್ಷ ಸುನೀಲ್ ಆಳ್ವ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾವರ್ಕರ್ ಬಗ್ಗೆ ವಿವಾದ ಎಬ್ಬಿಸಿ ಸ್ವಾತಂತ್ರ್ಯ ರಥಕ್ಕೆ ಅಡ್ಡಿಪಡಿಸಿದ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗ ಸಂಘಟನೆಗಳ ನಿಷೇಧಕ್ಕಾಗಿ ಮತ್ತು ಕಬಕ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಗೃಹ ಸಚಿವರನ್ನು ಒತ್ತಾಯಿಸುತ್ತೇನೆ. ಟಿಪ್ಪು ಸುಲ್ತಾನ್ ನೈಜ್ಯ ಸ್ವಾತಂತ್ರ್ಯ

ಮೂಡುಬಿದರೆಯಲ್ಲಿ 75ನೇ ಸ್ವಾತಂತ್ರೋತ್ಸವ ಆಚರಣೆ

ಮೂಡುಬಿದಿರೆಯ ಪುರಸಭಾ ಕಾರ್ಯಾಲಯದ ಆವರಣದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಧ್ವಜವನ್ನುಅರಳಿಸುವ ಮೂಲಕ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ನಂತರ ಮಾತನಾಡಿದ ಕೋಟ್ಯಾನ್ ಅವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುಜಾತ ಶಶಿಕಿರಣ್ ಮತ್ತು ಸದಸ್ಯರು, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಪುರಸಭಾ ಮುಖ್ಯಾಧಿಕಾರಿ

ಮೂಡುಬಿದರೆಯಲ್ಲಿ ತಾಲೂಕು ಕಚೇರಿಗೆ ಶಾಸಕ ಉಮಾನಾಥ್ ಕೋಟ್ಯಾನ್ ದಿಢೀರ್ ಭೇಟಿ

ಮೂಡುಬಿದಿರೆಯ ತಾಲೂಕು ಕಚೇರಿಗೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ದಿಢೀರ್ ಭೇಟಿ ನೀಡಿದರು. ಭೂಮಿ ದಾಖಲೆಗಳ ವಿಳಂಬ ನೀತಿಯನ್ನು ಪ್ರಶ್ನಿಸಿದ ಶಾಸಕರು, ನಿರ್ಲಕ್ಷ್ಯ ತೋರುವಂತಹ ಸಿಬ್ಬಂದಿಯನ್ನು ಕೂಡಲೇ ಆ ಸ್ಥಾನದಿಂದ ಬದಲಾಯಿಸುವಂತೆ ಖಡಕ್ ಆಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜನರು ಹಾಗೂ ಗ್ರಾಮ ಪಂಚಾಯತಿ ಸದಸ್ಯರ ದೂರಿನ ಮೇರೆಗೆ ತಾಲೂಕು ಕಚೇರಿಗೆ ಶಾಸಕರು ದಿಢೀರ್ ಭೇಟಿ ಕೊಟ್ಟು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.