Home ಕರಾವಳಿ Archive by category ಸುರತ್ಕಲ್ (Page 6)

ಚೇಳ್ಯಾರು ಮತ್ತು ಮುಂಚೂರಿನಲ್ಲಿ ಅಕ್ರಮ ಮರಳು ದಾಸ್ತಾನು ವಶಕ್ಕೆ ಪಡೆದ ಸುರತ್ಕಲ್ ಪೊಲೀಸರು

ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚೇಳಾಯರು ಮತ್ತು ಮುಂಚೂರಿನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಸುಮಾರು 250-300 ಲೋಡ್ ಮರಳನ್ನು ಸುರತ್ಕಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೇಳ್ಯಾರು ಗ್ರಾಮ ಪಂಚಾಯತ್ ಬಳಿ ರಸ್ತೆ ಬದಿಯ ಕಾಂಪೌಂಡ್ ಒಳಭಾಗದಲ್ಲಿ ಸಿಸಿ ಕ್ಯಾಮಾರ ಕಣ್ಗಾವಲಿನಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಸುಮಾರು 150-200 ಲೋಡ್ ಮರಳು ಹಾಗೂ ಮುಂಚೂರು

ಹೊಸಬೆಟ್ಟು ಜಟ್ಟಿ ನಿರ್ಮಾಣಕ್ಕೆ ವಿರೋಧವಿಲ್ಲ,ನಿರ್ವಸಿತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು : ಗ್ರಾಮಸ್ಥರಿಂದ ಆಗ್ರಹ

ಸಾಗರಮಾಲಾ ಯೋಜನೆಯಡಿ ಹೊಸಬೆಟ್ಟುವಿನಲ್ಲಿ ಜಟ್ಟಿ ನಿರ್ಮಾಣಕ್ಕೆ ನಮ್ಮದು ಯಾವುದೇ ವಿರೋಧವಿಲ್ಲ. ಆದರೆ ನಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲಿನ ನಿರ್ವಸಿತರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು. ಅಧಿಕಾರಿಗಳು ಗ್ರಾಮಸ್ಥರ ಅಭಿಪ್ರಾಯವನ್ನು ಕೇಳದೆ, ನಮ್ಮ ನಿರ್ಧಾರಕ್ಕೆ ವಿರುದ್ಧವಾಗಿ ಕಾಮಗಾರಿ ಸಂಬಂಧ ಸರ್ವೆಗೆ ಮುಂದಾಗಿರುವುದು ಖಂಡನೀಯ. ನಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು ಮತ್ತು ಜಟ್ಟಿ

ಕುಡ್ಲ ಕಬಡ್ಡಿ-2023″ ಉದ್ಘಾಟನಾ ಸಮಾರಂಭ

ಸುರತ್ಕಲ್: ವರುಣ್ ಶೇಣವ ಅವರ ನೇತೃತ್ವದಲ್ಲಿ ನಡೆದ ಸೇವಾಶಿಖರ್ ಫೌಂಡೇಶನ್ ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಮಂಗಳೂರು ತಾಲೂಕು ಕಬಡ್ಡಿ ಅಸೋಸಿಯೇಷನ್ ಇದರ ಸಹಯೋಗದಲ್ಲಿ “ಕುಡ್ಲ ಕಬಡ್ಡಿ-2023” ಇದರ ಉದ್ಘಾಟನಾ ಸಮಾರಂಭ ಆದಿತ್ಯವಾರ ಬೆಳಗ್ಗೆ ಪಣಂಬೂರಿನ ಎನ್ಎಂಪಿಎ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಬಂಟರ ಯಾನೆ ನಾಡವರ ಮಾತ್ರ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್

ಎನ್‍ಐಟಿಕೆ ಟೋಲ್‍ಗೇಟ್ ಬಳಿ ಭೀಕರ ಅಪಘಾತ : ವಿದ್ಯಾರ್ಥಿ ಮೃತ್ಯು

ಸುರತ್ಕಲ್: ಪೋಲೀಸ್ ಠಾಣಾ ವ್ಯಾಪ್ತಿಯ ಎನ್ ಐಟಿಕೆ ಟೋಲ್ ಗೇಟ್ ಬಳಿ ತಡರಾತ್ರಿ 1 ಗಂಟೆಯ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದ್ದು ಖಾಸಗಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತನನ್ನು ಮಡಿಕೇರಿ ಸೋಮವಾರಪೇಟೆ ಬಿಟಿ ಕಟ್ಟೆ ಮೂಲದ ಶಶಾಂಕ್(21) ಎಂದು ಗುರುತಿಸಲಾಗಿದೆ. ಶಶಾಂಕ್ ತನ್ನ ಸ್ನೇಹಿತನ ಜೊತೆ ಹಿಂಬದಿ ಸವಾರನಾಗಿ ಎನ್ ಎಸ್ 200 ಬೈಕ್ ನಲ್ಲಿ ರಾತ್ರಿ 1 ಗಂಟೆಯ ಸುಮಾರಿಗೆ ಸುರತ್ಕಲ್ ಕಡೆಯಿಂದ ಮುಕ್ಕ ಕಡೆಗೆ ಹೋಗುತ್ತಿದ್ದಾಗ

ಬಿಜೆಪಿ ಕಾರ್ಪೋರೇಟರ್ ಗೆ ಕೊಲೆ ಬೆದರಿಕೆ!

ಸುರತ್ಕಲ್: ಇಲ್ಲಿನ ಕಾಟಿಪಳ್ಳ 3ನೇ ಬ್ಲಾಕ್ ನಲ್ಲಿ ಬಿಜೆಪಿ ಕಾರ್ಪೋರೇಟರ್ ಒಬ್ಬರ ಮೇಲೆ ಯುವಕನೊಬ್ಬ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆಯೊಡ್ಡಿದ ಘಟನೆ ನಡೆದಿದ್ದು ಈ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ವಿವರ:ಬಿಜೆಪಿ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ ಎಂಬವರು ದೂರಿದ್ದು ಅದರಲ್ಲಿ ಸ್ಥಳೀಯ ನಿವಾಸಿ ಗಣೇಶ್ ದೇವಾಡಿಗ ಎಂಬವನನ್ನು ಆರೋಪಿ ಎಂದು ಹೆಸರಿಸಲಾಗಿದೆ. ಕಾಟಿಪಳ್ಳದಲ್ಲಿ ಸೇವಾ ಚಾರಿಟೇಬಲ್ ಟ್ರಸ್ಟ್ ಕಟ್ಟಿಕೊಂಡಿರುವ ಎ.ಪಿ.

ಚಿತ್ರಾಪುರದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ

ಚಿತ್ರಾಪುರದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಾರ್ಚ್ 13ರಂದು ಬ್ರಹ್ಮಕಲಶೋತ್ಸವ ನಡೆಯಲಿದ್ದು, ಈ ಪ್ರಯುಕ್ತ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಹಾಗೂ ವಿವಿಧ ದಾನಿಗಳಿಂದ ದೇವಸ್ಥಾನಕ್ಕೆ ನೀಡಲಾದ ಕೊಡುಗೆಗಳ ಉದ್ಘಾಟನೆ ಹಾಗೂ ಮೆರವಣಿಗೆ ಜರುಗಿತು. ದಾನಿ ಕೃಷ್ಣ ಶೆಟ್ಟಿ ಶ್ರೀದ್ವಾರ ಅವರು ನಿರ್ಮಿಸಿದ ಹೆದ್ದಾರಿ ಬದಿಯ ರಾಜಗೋಪುರದ ಉದ್ಘಾಟನೆಯನ್ನು ಕಟೀಲು ಕ್ಷೇತ್ರದ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ, ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಚಿತ್ರಾಪುರ

ಕೂಳೂರಿನ ಮೇಲ್ಸೇತುವೆ ತಳಭಾಗ ಸುಂದರೀಕರಣ :ಫೆ.9ಕ್ಕೆ ಲೋಕಾರ್ಪಣೆ ಕಾರ್ಯಕ್ರಮ

ಸುರತ್ಕಲ್: “ಕುಳೂರಿನ ಮೇಲ್ಸೇತುವೆ ತಳಭಾಗದಲ್ಲಿ ತ್ಯಾಜ್ಯ ರಾಶಿ ಬಿದ್ದು ಸಾರ್ವಜನಿಕರು ಓಡಾಡದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಗಮನಿಸಿದ ನಾವು ನಾಗರಿಕ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ ತಂದು 1,100,00 ರೂ. ಖರ್ಚು ಮಾಡಿ ಫ್ಲೈ ಓವರ್ ಕೆಳಗಡೆ ಸುಂದರಗೊಳಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದ್ದು, ಫೆಬ್ರವರಿ 9ರಂದು ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದುನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗುರುಚಂದ್ರ ಹೆಗ್ಡೆ ಗಂಗಾರಿ ಕೂಳೂರು ಹೇಳಿದರು.

ರಾಜ್ಯವನ್ನು ಚೋರ ಗುರು ಶಿಷ್ಯರು ಆಳುತ್ತಿದ್ದಾರೆ : ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಸುರತ್ಕಲ್: “ರಾಜ್ಯದಲ್ಲಿ ಬಿಜೆಪಿ ಸರಕಾರ ಮೈ ಭಿ ಖಾವೂಂಗಾ ತುಮ್ಕೋ ಭಿ ಖಿಲಾವೂಂಗಾ ಎಂಬ ಸ್ಲೋಗನ್ ಅಡಿಯಲ್ಲಿ ಕಾರ್ಯಾಚರಿಸುತ್ತಿದೆ. ಕಂಟ್ರಾಕ್ಟರ್ ಅಸೋಷಿಯೇಷನ್ ಶಾಸಕರು 40% ಕಮಿಷನ್ ತಗೊಳ್ಳೋದನ್ನು ಒಪ್ಪಿಕೊಂಡಿದೆ. ಇವರದ್ದು ಬರೀ ಸುಳ್ಳುಗಳ ಸರಕಾರ, ಚೋರ ಗುರು ಚಾಂಡಾಲ ಶಿಷ್ಯರು ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಆಳ್ತಾ ಇದ್ದಾರೆ. ನರೇಂದ್ರ ಮೋದಿ ಅವರಿಂದ ಹಿಡಿದು ತಳಮಟ್ಟದ ನಾಯಕರವರೆಗೆ ಎಲ್ಲರೂ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ”

ಪೇಪರ್ ಸ್ಟೂಡೆಂಟ್ಸ್ ತುಳು ಚಿತ್ರ ಸುರತ್ಕಲ್ ಗ್ಯಾಲಕ್ಸಿ ಥೇಟರ್ ನಲ್ಲಿ ಬಿಡುಗಡೆ

ವಾದಿರಾಜ್ ಉಪ್ಪೂರ್ ನಿರ್ದೇಶನದ ಪೇಪರ್ ಸ್ಟೂಡೆಂಟ್ಸ್ ತುಳು ಚಿತ್ರ ಸುರತ್ಕಲ್ ಗ್ಯಾಲಕ್ಸಿ ಥೇಟರ್ ನಲ್ಲಿ ಕಳೆದ ಶುಕ್ರವಾರ ಬಿಡುಗಡೆ ಗೊಂಡಿತು. ಹಿರಿಯ ನಿರ್ದೇಶಕ ಕೃಷ್ಣಪ್ಪ ಉಪ್ಪೂರು , ಸಾಹಿತಿ ಯಶವಂತ್ ಬೋಳೂರು , ಯೋಗೀಶ್ ಕಾಂಚನ್ , ಚಿತ್ರದ ನಾಯಕ , ನಾಯಕಿ , ಮುಂತಾದವರು ಪಾಲ್ಗೊಂಡಿದ್ದರು.

“ಸ್ಮಾರ್ಟ್ & ಡಿಜಿಟಲ್ ಸುರತ್ಕಲ್”ಗೆ ಶಾಸಕ ಡಾ.ವೈ. ಭರತ್ ಶೆಟ್ಟಿ ಅವರಿಂದ ಚಾಲನೆ

ಸುರತ್ಕಲ್: ರಾಜ್ಯದಲ್ಲೇ ಪ್ರಥಮ ಹೈಟೆಕ್ ಬಸ್ ನಿಲ್ದಾಣವನ್ನು ಇಲ್ಲಿನ ಗೋವಿಂದ ದಾಸ್ ಕಾಲೇಜ್ ಮುಂಭಾಗ ಸೋಮವಾರ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ಉದ್ಘಾಟಿಸಿದರು.ಈ ವೇಳೆ ಮಾತಾಡಿದ ಶಾಸಕರು, “ಸ್ಮಾರ್ಟ್ ಆಂಡ್ ಡಿಜಿಟಲ್ ಸುರತ್ಕಲ್” ಯೋಜನೆಯಡಿಯಲ್ಲಿ ಸುರತ್ಕಲ್ ಗೋವಿಂದ ದಾಸ್ ಕಾಲೇಜ್ ಮುಂಭಾಗ ರಾಜ್ಯದಲ್ಲೇ ಪ್ರಥಮವಾಗಿ ಸರ್ವ ರೀತಿಯಲ್ಲೂ ಸುಸಜ್ಜಿತವಾದ ಹೈಟೆಕ್ ಬಸ್ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಲಾಗಿದೆ. ಶುದ್ಧ ಕುಡಿಯುವ