Home Archive by category ಕರಾವಳಿ (Page 165)

ಬ್ರಹ್ಮಾವರ: ಬಾರಕೂರಿನ ವಿವಿಧ ದೇವಾಲಯಗಳಲ್ಲಿ ವರಮಹಾಲಕ್ಷ್ಮೀ ಪೂಜೆ

ಬ್ರಹ್ಮಾವರ: ಬಾರಕೂರಿನ ವಿವಿಧ ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮೀ ವೃತ ಪೂಜೆ ನಡೆಯಿತು. ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನ, ಮೂಡುಕೇರಿ ಶ್ರೀ ಸರಸ್ವತಿ ನಾರಾಯಣಿ ದೇವಸ್ಥಾನ, ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾ ಪರಮೇಶ್ವರೀ ದೇವಸ್ಥಾನ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ, ಕಚ್ಚೂರು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ, ಶ್ರೀ ಏಕನಾಥೇಶ್ವರೀ ದೇವಸ್ಥಾನ,

ಮೂಡುಬಿದಿರೆ|| ಪಡಂದಡ್ಕದಲ್ಲಿ ಖಾಸಗಿ ಬಸ್ ಪಲ್ಟಿ-ಇಬ್ಬರಿಗೆ ಗಂಭೀರ ಗಾಯ

ಮೂಡುಬಿದಿರೆ: ಮೂಡುಬಿದಿರೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದು ಹೊಸಂಗಡಿ ಸಮೀಪದ ಪಡಂದಡ್ಕದಲ್ಲಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಘಟನೆ ನಡೆದಿದೆ. ಬಸ್‍ನಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು ಉಳಿದಂತೆ ಹಲವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ವೇಣೂರು ಪೆÇಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮಂಗಳೂರು: ರಾಯಿ ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಭಿನ್ನಮತ ಸ್ಪೋಟ – ಬಿಜೆಪಿ ಬೆಂಬಲಿತ ಗ್ರಾ.ಪಂ.ಸದಸ್ಯೆ ಪುಷ್ಪಾವತಿ ಪೂಜಾರಿ ರಾಜೀನಾಮೆ

ಮಂಗಳೂರು: ರಾಯಿ ಗ್ರಾಮ ಪಂಚಾಯತ್‍ನಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದು ಒಂದು ವಾರದಲ್ಲೇ ಬಿಜೆಪಿ ಭಿನ್ನಮತ ಸ್ಪೋಟಗೊಂಡಿದೆ. ಈ ಗ್ರಾ.ಪಂ.ವ್ಯಾಪ್ತಿಯ ಕೊಯಿಲ ಒಂದನೇ ವಾರ್ಡ್ ಬಿಜೆಪಿ ಬೆಂಬಲಿತ ಸದಸ್ಯೆ ಪುಷ್ಪಾವತಿ ಪೂಜಾರಿ ಗುರುವಾರ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಾನು ಕೊಯಿಲ ಒಂದನೇ ವಾರ್ಡಿನ ಬೂತ್ ಸಂಖ್ಯೆ 27ರಲ್ಲಿ ಬಿಜೆಪಿ ಬೆಂಬಲಿತ ಚುನಾಯಿತ ಸದಸ್ಯೆಯಾಗಿದ್ದು, ನನ್ನ ವಾರ್ಡಿನಲ್ಲಿ ಗ್ರಾ.ಪಂ.ಅಧ್ಯಕ್ಷರು ಮತ್ತು

ಮಂಗಳೂರು: ಸೌಜನ್ಯ, ಭಾರತಿ, ಶಿವಪ್ಪ ಬಂಗೇರಾ ಕೊಲೆ ಪ್ರಕರಣದ ಮರು ತನಿಖೆಗೆ ಆಗ್ರಹ

ಮಂಗಳೂರು: ಧರ್ಮಸ್ಥಳದ ಸೌಜನ್ಯ, ಬಂಟ್ವಾಳದ ಸಿದ್ಧಕಟ್ಟೆಯ ಭಾರತಿ ಮತ್ತು ದಲಿತ ಮುಖಂಡ ಬಾಂಬಿಲ ಶಿವಪ್ಪ ಬಂಗೇರ ಕೊಲೆ ಪ್ರಕರಣದ ಮರು ತನಿಖೆ ನಡೆಸಬೇಕೆಂದು ಆಗ್ರಹಿಸಿ ಜಿ.ಪಂ. ಮಾಜಿ ಉಪಾಧ್ಯಕ್ಷರಾದ ಎಂ. ತುಂಗಪ್ಪ ಬಂಗೇರ ನೇತೃತ್ವದಲ್ಲಿ ಬಂಟ್ವಾಳ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಪಿಲಾತಬೆಟ್ಟು ಗ್ರಾ. ಪಂ. ಅಧ್ಯಕ್ಷರಾದ ಶಾರದ, ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷರಾದ ವಿಜಯ ಕುಮಾರ್, ಪ್ರಮುಖರಾದ ಸುರೇಶ್ ಕುಲಾಲ್, ಲಕ್ಷ್ಮೀನಾರಾಯಣ ಹೆಗ್ಡೆ,

‘ತಾರೆ ಜಮೀನ್ ಪರ್’ ಚಿತ್ರಕ್ಕೆ ಅನಿಮೇಷನ್‌ ಕೊಡುಗೆ ನೀಡಿದ್ದ ಧೀಮಂತ್‌ ವ್ಯಾಸ್‌ ಹಾಗೂ ಪುತ್ರಿ ಕಾವ್ಯ ವ್ಯಾಸ್‌ ಅವರ ಚಿತ್ರಕಲಾ ಪ್ರದರ್ಶನ

ಬೆಂಗಳೂರಿನಲ್ಲಿ ತಂದೆ-ಮಗಳ ಬಾಂಧವ್ಯದ ಅನಾವರಣ: ‘ತಾರೆ ಜಮೀನ್ ಪರ್’ ಚಿತ್ರಕ್ಕೆ ಅನಿಮೇಷನ್‌ ಕೊಡುಗೆ ನೀಡಿದ್ದ ಧೀಮಂತ್‌ ವ್ಯಾಸ್‌ ಹಾಗೂ ಪುತ್ರಿ ಕಾವ್ಯ ವ್ಯಾಸ್‌ ಅವರ ಚಿತ್ರಕಲಾ ಪ್ರದರ್ಶನ ಮೂರು ಗ್ರಾಮಿ ಪ್ರಶಸ್ತಿ ವಿಜೇತ, ಸಂಯೋಜಕ, ಪರಿಸರವಾದಿ ರಿಕಿ ಕೇಜ್, ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್, ಅಮೀರ್ ಖಾನ್, ರಾಕೇಶ್ ಓಂಪ್ರಕಾಶ್ ಮೆಹ್ರಾ, ನಿರ್ದೇಶಕ ಶೇಖರ್ ಕಪೂರ್, ನಟಿ ನಂದಿತಾ ದಾಸ್, ಖ್ಯಾತ ಚಿತ್ರಕಲಾವಿದ ಸಮೀರ್ ಮೊಂಡಲ್ ಮುಂತಾದವರ

ರಾಜ್ಯಾದ್ಯಂತ “ಟೋಬಿ” ಸಿನಿಮಾ ರಿಲೀಸ್- TOBY

ರಾಜ್ ಬಿ. ಶೆಟ್ಟಿ, ಚೈತ್ರಾ ಆಚಾರ್ ನಟನೆಯ ಟೋಬಿ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಗೊಂಡಿದೆ. ರಾಜ್ಯದೆಲ್ಲೆಡೆ ಟೋಬಿ ಸಿನಿಮಾ ನೋಡಿ ಪ್ರೇಕ್ಷಕರು ಭೇಷ್ ಎನ್ನುತ್ತಿದ್ದಾರೆ. ತಮ್ಮ ಸಹಜ ಅಭಿನಯದ ಮೂಲಕ ಎಲ್ಲರ ಮನ ಗೆದ್ದಿರುವ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ `ಟೋಬಿ' ಚಿತ್ರದ ಫಸ್ಟ್ ಲುಕ್ ನಲ್ಲಿ ಡಿಫರೆಂಟಾಗಿ ಕಾಣಿಸಿಕೊಂಡಿದ್ದರು. ಅದಾಗಲೇ ಸಿನಿಮಾದ ಬಗ್ಗೆ ಪ್ರೇಕ್ಷಕರು ತುಂಬಾ ನಿರೀಕ್ಷೆಯನ್ನಿರಿಸಿದ್ದರು. ಇಂದು ರಾಜ್ಯದ್ಯಾಂತ 175

ಬಂಟ್ವಾಳ: ಕಲ್ಲಡ್ಕದಲ್ಲಿ ಹದಗೆಟ್ಟ ರಸ್ತೆ-ವರ್ತಕರು, ಸಾರ್ವಜನಿಕರಿಂದ ಪ್ರತಿಭಟನೆ

ಬಂಟ್ವಾಳ: ಕಲ್ಲಡ್ಕದಲ್ಲಿ ಸಂಪೂರ್ಣ ಹದಗೆಟ್ಟ ರಸ್ತೆ ಮತ್ತು ಧೂಳಿನಿಂದ ಸಮಸ್ಯೆಯಿಂದ ರೋಸಿಹೋದ ವರ್ತಕರು ಹಾಗೂ ಸಾರ್ವಜನಿಕರು ಗುತ್ತಿಗೆ ಕಂಪನಿ ವಾಹನಗಳನ್ನು ತಡೆಗಟ್ಟಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಗುತ್ತಿಗೆ ಕಂಪನಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ್ದು, ಮುಂದಿನ ಬುಧವಾರದೊಳಗೆ ಕೆಲಸ ಆರಂಭಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಲ್ಯಾಡರ್ ನಿಂದ ರೋವರ್ ಹೊರಬಂದ ದೃಶ್ಯ ಹಂಚಿಕೊಂಡ ಇಸ್ರೋ

ಇಸ್ರೊದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಯಶಸ್ವಿಯಾಗಿ ಚಂದ್ರನ ದಕ್ಷಿಣ ದ್ರುವ ಸೇರಿದೆ ಲ್ಯಾಡರ್ ನಿಂದ ರೋವರ್ ಹೊರಬಂದ ದೃಶ್ಯ ಹಂಚಿಕೊಂಡ ಇಸ್ರೋ ಹೊರಬಂದ ರೋವರ್ ತನ್ನ ಕಾರ್ಯ ಆರಂಭಿಸಿದೆ. ವಿಕ್ರಮ್ ಲ್ಯಾಡರ್ ನಿಂದ ರೋವರ್ ಹೊರಬಂದ ದೃಶ್ಯ ಹಂಚಿಕೊಂಡ ಇಸ್ರೋ ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈ ಮೇಲೆ ಚಲನೆ ಆರಂಭಿಸಿದೆ ಎಂದು ಇಸ್ರೊ ಮಾಹಿತಿ ನೀಡಿದೆ. ಚಂದಿರನ ಅಂಗಳದ ಮೇಲೆ ಚಂದ್ರಯಾನ-3 ಯೋಜನೆಯ ಪ್ರಗ್ಯಾನ್ ರೋವರ್ ಉರುಳುತ್ತಿರುವ ಚಿತ್ರವನ್ನು ಭಾರತೀಯ

ಮಂಗಳೂರು: ಸಮಾಜ ಸೇವಕ ಡಾ. ಅಬ್ದುಲ್ ಶಕೀಲ್‍ಗೆ ಏಷ್ಯಾ ಅಚೀವರ್ಸ್ ಅವಾರ್ಡ್

ಮಂಗಳೂರು: ಕೋವಿಡ್ ಸಂದರ್ಭ ಹತ್ತು ಸಾವಿರಕ್ಕೂ ಅಧಿಕ ಅರ್ಹ ಕುಟುಂಬಗಳಿಗೆ ಅಕ್ಕಿ ವಿತರಣೆ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಹಿತ ಹಲವು ರೀತಿಯಲ್ಲಿ ಸಾಮಾಜಿಕ ಸೇವೆಯನ್ನು ನಡೆಸುತ್ತಿರುವ ಡಾ. ಅಬ್ದುಲ್ ಶಕೀಲ್ ಅವರು ಭಾರತೀಯ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್, ಸ್ವಾಮಿ ವಿವೇಕಾನಂದ ಕಲ್ಚರಲ್ ಸೆಂಟರ್ ಕೊಲಂಬೊ ಮತ್ತು ಹೈ ಕಮಿಷನ್ ಆಫ್ ಇಂಡಿಯಾ ಕೊಲಂಬೊ ಕೊಡಮಾಡುವ ಏಷ್ಯಾ ಅಚೀವರ್ಸ್

ಉಳ್ಳಾಲ: ಆ.27ಕ್ಕೆ ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉದ್ಘಾಟನೆ

ಉಳ್ಳಾಲ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಘಟಕದ ಉದ್ಘಾಟನಾ ಸಮಾರಂಭ ಆ.27 ರಂದು ಭಾನುವಾರ ಸಂಜೆ 3.00 ಗಂಟೆಗೆ ತೊಕ್ಕೊಟ್ಟು ಅಂಬಿಕಾ ರೋಡಿನ ಗಟ್ಟಿ ಸಮಾಜ ಭವನದಲ್ಲಿ ನೆರವೇರಲಿದೆ ಎಂದು ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್.ಕೊಣಾಜೆ ಹೇಳಿದ್ದಾರೆ. ಉಳ್ಳಾಲ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್