Home Archive by category ಕರಾವಳಿ (Page 316)

ಕಣಚೂರು ನಾಗರಿಕ ಸನ್ಮಾನದ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಹಾಜಿ ಯು.ಕೆ. ಮೋನು ಕಣಚೂರು ಇವರಿಗೆ ಹುಟ್ಟೂರ ನಾಗರಿಕ ಸನ್ಮಾನ ಮತ್ತು ಸೌಹಾರ್ದ ಇಫ್ತಾರ್ ಕೂಟವು ಇದೇ ಮಾರ್ಚ್ 26 ರವಿವಾರ ಸಂಜೆ ನಾಲ್ಕು ಗಂಟೆಗೆ ದೇರಳಕಟ್ಟೆ ಸಿಟಿ ಗ್ರೌಂಡ್ ನಲ್ಲಿ ನಡೆಯಲಿದೆ. ಸೌಹಾರ್ದ ಇಫ್ತಾರ್ ಕೂಟವನ್ನು ದೇರಳಕಟ್ಟೆ ಬಿಬಿಸಿ ಹಾಲ್ ನಲ್ಲಿ ಆಯೋಜಿಸಲಾಗುತ್ತದೆ. ಈ ಸಮಾರಂಭದ

ಪೌರ ಕಾರ್ಮಿಕರ ಬೇಡಿಕೆ ಹಾಗೂ ತ್ಯಾಜ್ಯ ವಿಲೇವಾರಿ ಕೂಡಲೇ ಮಾಡದಿದ್ದಲ್ಲಿ ಶಾಸಕರ ಮನೆಯೆದುರು ತ್ಯಾಜ್ಯ ಸುರಿದು ಪ್ರತಿಭಟನೆ – ಬಿ ಕೆ ಇಮ್ತಿಯಾಜ್

ಕಳೆದ 9 ದಿನಗಳಿಂದ ರಾಜ್ಯಾದ್ಯಂತ ಪೌರ ಕಾರ್ಮಿಕರು,ಮುನ್ಸಿಪಲ್ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದರೂ,ಡಬ್ಬಲ್ ಇಂಜಿನ್ ಸರಕಾರವೆಂದು ಬೀಗುತ್ತಿರುವ BJP ಸರಕಾರವು ಯಾವುದೇ ರೀತಿಯ ಸ್ಪಂದನ ಮಾಡದೆ ತನ್ನ ಕ್ರೌರ್ಯವನ್ನು ಪ್ರದರ್ಶಿಸಿದೆ.ನಗರ ಪಟ್ಟಣ ಪ್ರದೇಶದ ಸುಂದರೀಕರಣ ಹಾಗೂ ಸ್ವಚ್ಛತೆಗಾಗಿ ತನ್ನ ಸರ್ವಸ್ವವನ್ನೂ ಮುಡಿಪಾಗಿಟ್ಟ ಪೌರ ಕಾರ್ಮಿಕರ ಉತ್ತಮ ಬದುಕಿಗಾಗಿ ಎಳ್ಳಷ್ಟೂ ಕಾಳಜಿ ವಹಿಸದ ರಾಜ್ಯ ಸರಕಾರ

ವಿನಾಯಕ ಬಾಳಿಗಾ ಕೊಲೆ ಪ್ರಕರಣ : ಮೆರವಣಿಗೆ

ಆರ್.ಟಿ.ಐ ಹಾಗೂ ಬಿಜೆಪಿ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಕೊಲೆ ನಡೆದು7 ವರ್ಷಗಳಾದರೂ ನಿಧಾನಗತಿಯಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಪ್ರತಿಭಟಿಸಿ ಮಂಗಳವಾರ ಸಂಜೆ ಮಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನದ ಎದುರಿನಿಂದ ವಿನಾಯಕ ಬಾಳಿಗರ ಮನೆ ತನಕ ಮೆರವಣಿಗೆ ಸಾಗಿತು.ಮೆರವಣಿಗೆಯಲ್ಲಿ ವಿನಾಯಕ ಬಾಳಿಗಾ ಸಹೋದರಿ ರಾಧಾ ಬಾಳಿಗಾ , ಪ್ರೊ.ನರೇಂದ್ರ ನಾಯಕ್ , ಎಂ.ದೇವದಾಸ್

ಶಕುಂತಳಾ ಶೆಟ್ಟಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿ : ಪಕ್ಷದ ವರಿಷ್ಠರಿಗೆ ಮಹಿಳಾ ಕಾಂಗ್ರೆಸ್ ಸಮಿತಿ ಆಗ್ರಹ

ಪುತ್ತೂರು ಕಾಂಗ್ರೇಸ್ ನಲ್ಲಿ ಅಭ್ಯರ್ಥಿಯಾಗಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರಿಗೆ ಆದ್ಯತೆ ನೀಡಬೇಕು. ಅದರಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿ ಅವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ. ಪುತ್ತೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷೆ ಶಾರದಾ ಅರಸ್ ಅವರು ಮಂಗಳವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ

ಹಾವು ಕಡಿತಕ್ಕೆ ತುತ್ತಾಗಿದ್ದ ತಾಯಿಗೆ ಮರು ಜನ್ಮ ನೀಡಿದ ಮಗಳು

ತಾಯಿಗೆ ವಿಷದ ಹಾವು ಕಚ್ಚಿದ ಸಂದರ್ಭ ದೃತಿಗೆಡದ ಮಗಳು, ಆ ವಿಷವನ್ನು ಚೀಪಿ ಹೊರ ತೆಗೆದು ಸಿನಿಮೀಯ ರೀತಿಯಲ್ಲಿ ಅಮ್ಮನನ್ನು ರಕ್ಷಿಸಿದ ಘಟನೆ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದಿಂದ ವರದಿಯಾಗಿದೆ. ಈ ಸಾಹಸ ಮೆರೆದ ಯುವತಿಗೆ ಸಾರ್ವಜನಿಕ ವಲಯದಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ತಾಯಿಗೆ ಮರು ಜನ್ಮ ನೀಡಿದ ಮಗಳು ಎಂದು ಜನರು ಕೊಂಡಾಡುತ್ತಿದ್ದಾರೆ.ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಎಟ್ಯಡ್ಕ ಎಂಬಲ್ಲಿ ವಾರದ ಹಿಂದೆ ಈ ಘಟನೆ ನಡೆದಿದ್ದು,

ಏ.10ರಿಂದ ಪುತ್ತೂರು ಜಾತ್ರೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹತ್ತಾರು ಮಾಸ್ಟರ್ ಪ್ಲಾನ್ ಅಭಿವೃದ್ದಿ ಕಾರ್ಯಗಳು ನಿರಂತರ ನಡೆಯುತ್ತಿದ್ದು, ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿ ಶಿಲಾ ಕಟ್ಟೆಯ ಕಾಮಗಾರಿ ಜಾತ್ರೆ ಮುಂದೆ ಪೂರ್ಣಗೊಳ್ಳಲಿದೆ. ಇದರ ಜೊತೆಗೆ ಅನ್ನಛತ್ರ ಮೇಲಂತಸ್ತು ನಿರ್ಮಾಣ, ಸಭಾಭವನದ ನವೀಕರಣ, ಆವರಣಗೋಡೆ, ದೇವಳದ ಹೊರಾಂಗಣ ಚರಂಡಿ ಅಭಿವೃದ್ಧಿ, ಇಂಟರ್‍ಲಾಕ್ ಅಳವಡಿಕೆ, ರಥ ಮಂದಿರ ನಿರ್ಮಾಣ ಸಹಿತ ಹಲವಾರು

ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕುವಂತೆ ಏಕಾಂಗಿ ಪ್ರತಿಭಟನೆ

ಬೆಳ್ತಂಗಡಿ; ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು, ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ನಡೆಸಬೇಕು ಎಂದು ಒತ್ತಾಯಿಸಿ ಸಿಪಿಐ ಎಂ ಮುಖಂಡ ಸಾಮಾಜಿಕ ಹೋರಾಟಗಾರ ಶೇಖರ ಲಾಯಿಲ ಅವರು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಏಕಾಂಗಿ ಪ್ರತಿಭಟನೆಗೆ ಸೋಮವಾರ ಚಾಲನೆ ನೀಡಿದರು. ಬೆಳಿಗ್ಗೆ ಹತ್ತು ಗಂಟೆಗೆ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ಆರಂಭಿಸಿದ ಅವರು ಸಂಜೆ

ಮಾ.26 : ಕ್ಲಬ್ ಮಂತ್ರ ವತಿಯಿಂದ ಅತಿ ದೊಡ್ಡ ಹೋಲಿ ಹಬ್ಬ

ಕ್ಲಬ್ ಮಂತ್ರ ವತಿಯಿಂದ ಮಂಗಳೂರಿನಲ್ಲಿ ಅತಿ ದೊಡ್ಡ ಹೋಲಿ ಹಬ್ಬವನ್ನು ಮಾರ್ಚ್ 26ರಂದು ಆಯೋಜನೆ ಮಾಡಿದ್ದಾರೆ. ಇವಿಎಮ್ ಪ್ರೆಸೆಂಟ್ಸ್ ರಂಗ್ ದ ಬರ್ಸ ಸೀಸನ್-6 ನಗರದ ಮರೋಳಿಯ ಸೂರ್ಯವುಡ್ಸ್‍ನಲ್ಲಿ ಅದ್ಧೂರಿಯ ಕಾರ್ಯಕ್ರಮ ನಡೆಯಲಿದೆ.ಮಂಗಳೂರಿನ ಜನತೆ ಬಣ್ಣದ ಓಕುಳಿಯಲ್ಲಿ ಸಂಭ್ರಮಿಸಲು ಸಿದ್ದರಾಗಿ ಇದೇ ಮಾರ್ಚ್ 26ರಂದು ಕ್ಲಬ್ ಮಂತ್ರ ವತಿಯಿಂದ ಇವಿಎಮ್ ಪ್ರೆಸೆಂಟ್ಸ್ ರಂಗ್ ದ ಬರ್ಸ ಸೀಸನ್-6ನ್ನು ಆಯೋಜನೆ ಮಾಡಿದ್ದಾರೆ. ಪರಸ್ಪರ ಬಣ್ಣ ಹಚ್ಚಿ

ಗೀತಾ ಲಕ್ಷ್ಮೀಶ್ ಅವರ ‘ಪೆರ್ಗದ ಸಿರಿ’ ಕವನ ಸಂಕಲನ ಅನಾವರಣ

ಮಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದವರಲ್ಲಿ ಸಾಹಸ ಹಾಗೂ ಸಾಹಿತ್ಯದ ಗುಣ ಅಡಕವಾಗಿರುತ್ತದೆ. ಅದು ಬರವಣಿಗೆಗೆ ಪೂರಕ. ಬೆವರು ಅದ್ದಿದ ಮಣ್ಣಿನಲ್ಲಿ ಹುಟ್ಟಿದ ಸಾಹಿತ್ಯ ಕೃಷಿ ಎಲ್ಲಕ್ಕಿಂತಲೂ ಶ್ರೇಷ್ಠ ಎಂದು ತುಳು ಜಾನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಹೇಳಿದರು. ನಗರದ ಕೆನರಾ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ತುಳು ಲಿಪಿ ಶಿಕ್ಷಕಿ, ಲೇಖಕಿ ಗೀತಾ ಲಕ್ಷ್ಮೀಶ್ ಅವರ ‘ಪೆರ್ಗದ ಸಿರಿ’ ತುಳು ಕವನ ಸಂಕಲನವನ್ನು ಭಾನುವಾರ ಬಿಡುಗಡೆಗೊಳಿಸಿ

ಮಳೆ ನೀರು ಚರಂಡಿಗೆ ತಡೆಗೋಡೆ ನಿರ್ಮಿಸಲು ವಿಳಂಬ : ಕೂಡಲೇ ಕ್ರಮ ವಹಿಸಲು DHS ಒತ್ತಾಯ

ಅಳಪೆ ಉತ್ತರ ವಾರ್ಡಿನ ಕೊಡಕ್ಕಲ್ ಪ್ರದೇಶದ ದಲಿತ ಸಮುದಾಯಕ್ಕೆ ಸೇರಿದ ಲೀಲಾರವರ ಮನೆಯ ಎರಡೂ ಭಾಗದಲ್ಲಿ ಮಳೆನೀರು ಹರಿಯುವ ರಾಜಕಾಲುವೆಗೆ ತಡೆಗೋಡೆಯನ್ನು ಕೂಡಲೇ ನಿರ್ಮಿಸಬೇಕೆಂದು ದಲಿತ ಹಕ್ಕುಗಳ ಸಮಿತಿಯ ನೇತೃತ್ವದಲ್ಲಿ ಮನಪಾ ಕಚೇರಿಯೆದುರು ಪ್ರತಿಭಟನಾ ಪ್ರದರ್ಶನ ಜರುಗಿತು. ಪ್ರತೀ ವರ್ಷವೂ ಸುರಿಯುವ ವಿಪರೀತ ಮಳೆಗೆ ರಾಜಕಾಲುವೆಗಳು ಭರ್ತಿಗೊಂಡು ಕೃತಕ ನೆರೆ ಉಂಟಾಗುತ್ತಿದೆ.ಕಳೆದ ವರ್ಷದ ಮಳೆಗೆ ಲೀಲಾರವರ ಮನೆ ಮುಳುಗಿದ್ದು,ಅಕ್ಕಪಕ್ಕದ ಮನೆಗಳಿಗೂ ಭಾರೀ ಹಾನಿ