ಹಿಮಾಲಯದಲ್ಲಿ ವಾಸಿಸುತ್ತಿರುವ ನಾಥ ಸಂಪ್ರದಾಯದ ಅವಧೂತ ಮಹಾಸಭಾದ ಬಾಬಾ ಶ್ರೀ ಸೋಮರನಾಥ ಬಾಬಜಿ ಇವರು ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದ ಪೂರ್ವ ತಯಾರಿಯನ್ನು ನೋಡಿ ಈ ಮಹಾಕಾರ್ಯ ಆ ಶಿವನ ಪ್ರೇರಣೆ ಮತ್ತು ಅನುಗ್ರಹದಿಂದ ನೆರವೇರುತ್ತಿದೆ. ಶಿವನನ್ನು ಇಲ್ಲಿ ಭಜಿಸುವುದರಿಂದ ಈ ಪ್ರದೇಶ ಪಾವನ ತಾಣವಾಗಿ
ಮರೋಳಿಯ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ, ಜನ್ಮಭೂಮಿ ಫೌಂಡೇಶನ್ ಮಂಗಳೂರು ವತಿಯಿಂದ ಫೆ.11ರಂದು ಶ್ರೀ ಸೂರ್ಯನಾರಾಯಣ ಸನ್ನಿಧಿಯಲ್ಲಿ ಸಪ್ತಗಿರಿವಾಸಿಯಾದ ಶ್ರೀನಿವಾಸ ಮತ್ತು ಪದ್ಮಾವತಿಯ ಕಲ್ಯಾಣೋತ್ಸವದ ಪುಣ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗಣೇಶ್ ಶೆಟ್ಟಿ ಜಪ್ಪು ಗುಡ್ಡೆಗುತ್ತು ಹೇಳಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಫೆ.11ರಂದು ಸಂಜೆ 4 ಗಂಟೆಗೆ ಬ್ರಹ್ಮಶ್ರೀ ಕೆ.ಯು ನೀಲೇಶ್ವರ
ಮಣಿಪಾಲ ಸರಳೆಬೆಟ್ಟುವಿನ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಫೆಬ್ರವರಿ 22, 2023 ರಿಂದ ಮಾರ್ಚ್ 05, 2023 ರವರೆಗೆ ಲೋಕಕಲ್ಯಾಣಕ್ಕಾಗಿ ನಡೆಯಲಿರುವ “ಅತಿರುದ್ರ ಮಹಾಯಾಗ” ಪ್ರಯುಕ್ತ ದೇವಸ್ಥಾನದಲ್ಲಿ ಹಲವಾರು ಕಾರ್ಯಕ್ರಮಗಳೊಂದಿಗೆ ಅತಿರುದ್ರ ಮಹಾಯಾಗಕ್ಕೆ ಸಾಕಷ್ಟು ತಯಾರಿಗಳು ಬಿಡುವಿಲ್ಲದೆ ನಡೆಯುತ್ತಿವೆ. ಈಗಾಗಲೇ ಉಡುಪಿ ತಾಲೂಕು ಮಟ್ಟದ ಪುಟಾಣಿಗಳ ಚಿತ್ರಕಲಾ ಪ್ರತಿಭೆಯನ್ನು ಗುರುತಿಸಲು “ಶಿವ ಚಿತ್ತಾರ”
ಕಟಪಾಡಿ ಪೇಟೆಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನದಲ್ಲಿನ ಕಾರ್ಣಿಕ ಪ್ರಸಿದ್ಧ ಕರಾವಳಿಯ ಅತ್ಯಂತ ನಂಬಿಕೆಯ ದೈವ ಕೊರಗಜ್ಜ ಸನ್ನಿಧಿಗೆ ಜೊತೆ ಜೊತೆಯಲಿ ಧಾರಾವಾಹಿಯ ನಾಯಕಿ ಮೇಘ ಶೆಟ್ಟಿ ಭೇಟಿ ನೀಡಿ, ಕೊರಗಜ್ಜನಲ್ಲಿ ಇಷ್ಟಾರ್ಥ ಸಿದ್ದಿಗೆ ಬೇಡಿಕೊಂಡರು.ಇತ್ತೀಚಿನ ದಿನಗಳಲ್ಲಿ ಸೆಲೆಬ್ರೆಟಿಗಳ ದಂಡೇ ಕೊರಗಜ್ಜ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಸಿನಿಮಾ ನಟ, ನಟಿಯರು, ಉದ್ಯಮಿಗಳು, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು ಕೊರಗಜ್ಜ ಕ್ಷೇತ್ರಗಳಿಗೆ ಭೇಟಿ
ಬಂಟ್ವಾಳ: ಇತಿಹಾಸ ಪ್ರಸಿದ್ದ ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬ ದೇವಸ್ಥಾನದ ಅಷ್ಡಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಅದ್ದೂರಿ ಹೊರೆಕಾಣಿಕೆ ಮೆರವಣಿಗೆಗೆ ಮಾರ್ನಬೈಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಚಾಲನೆ ನೀಡಿದರು. ಮಾರ್ನಬೈಲು ಮುಖ್ಯ ರಸ್ತೆಯ ಮೂಲಕ ದೇವಸ್ಥಾನಕ್ಕೆ ಸಾಗಿ ಬಂದ ಮೆರವಣಿಗೆಗೆ ಗೊಂಬೆ ಕುಣಿತ,
ಕರಾವಳಿಯಲ್ಲಿರುವ ಆ ಪವಿತ್ರ ಪುಣ್ಯ ಕ್ಷೇತ್ರ ಸೌಹಾರ್ದತೆಯ ಪಾಠ ಮಾಡ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಅಲ್ಲಿಗೆ ಸರ್ವಧರ್ಮದ ಭಕ್ತರ ದಂಡೇ ಹರಿದು ಬಂದಿದೆ. ಅಷ್ಟಕ್ಕೂ ಕರಾವಳಿಯಲ್ಲಿ ಸೌಹಾರ್ದತೆ ಸಾರ್ತಿರೋ ಆ ಪುಣ್ಯಕ್ಷೇತ್ರ ಯಾವುದು? ಅಲ್ಲಿನ ವಾರ್ಷಿಕ ಜಾತ್ರಾ ಸಂಭ್ರಮ ಹೇಗಿದೆ ಅಂತೀರಾ! ಮಂಗಳೂರಿನ ಬಿಕರ್ನಕಟ್ಟೆಯ ಆ ಬಾಲ ಯೇಸು ಮಂದಿರ ಸೌಹಾರ್ದತೆಯ ಪಾಠ ಮಾಡ್ತಿದೆ. ಇತಿಹಾಸ ಪ್ರಸಿದ್ಧವಾಗಿರೋ ಕ್ರೈಸ್ತರ ಧಾರ್ಮಿಕ ತಾಣ ಬಾಲ ಯೇಸು ಮಂದಿರ ಈ ಭಾಗದ ಸರ್ವಧರ್ಮದ
ನಂದಾವರ ದೇವಳಕ್ಕೆ ನೂತನ ರಜತ ಪಲ್ಲಕಿ ಹಾಗೂ ಪೀಠ ಪ್ರಭಾವಳಿ ಸಮರ್ಪಣೆ ನಂದಾವರ ಶ್ರೀ ವೀರ ಮಾರುತಿ ದೇವಸ್ಥಾನ ದ ಶ್ರೀ ದೇವರ ಉತ್ಸವಾದಿ ಕಾರ್ಯಕ್ರಮಗಳಿಗಾಗಿ ನೂತನವಾಗಿ ನಿರ್ಮಿಸಲಾದ ರಜತ ಪಲ್ಲಕಿ ಹಾಗೂ ಶ್ರೀ ದೇವರ ರಜತ ಪೀಠ ಪ್ರಭಾವಳಿಗಳನ್ನು ಶ್ರೀದೇವರಿಗೆ ಹತ್ತು ಸಮಸ್ತರ ಪರವಾಗಿ ಶ್ರೀ ದೇವರಿಗೆ ಸಮರ್ಪಿಸಲಾಯಿತು . ಸುಮಾರು 28ಕಿಲೋ ಬೆಳ್ಳಿಯನ್ನು ಬಳಸಲಾಗಿದ್ದು , 25 ಲಕ್ಷ ವೆಚ್ಚ ತಗಲಿದ್ದು ಶ್ರೀದೇವಳದ ವೈದಿಕರಿಂದ ವಿಧಿ ವಿಧಾನಪೂರ್ವಕ ಪೂಜೆನಡೆದು
ಮೂಡುಬಿದಿರೆ : ದೈವರಾಧನೆ ತುಳುನಾಡಿನ ಪರಂಪರೆ, ನಾವು ದೈವ-ದೇವರನ್ನು ಆರಾಧಿಸುತ್ತೇವೆ ಇದು ಇಲ್ಲಿನ ಮೂಲ ನಿವಾಸಿಗಳ ಸಂಸ್ಕೃತಿ’ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಹೇಳಿದರು. ಅವರು ವಾಲ್ಪಾಡಿ ಮಾಡದಂಗಡಿ ಶಾಲಾ ವಠಾರದಲ್ಲಿ ನಡೆದ ತುಳುನಾಡ ದೈವರಾಧನೆ ರಕ್ಷಣಾ ಚಾವಡಿ ಮೂಡುಬಿದಿರೆ ವಲಯದ 5ನೇ ವಾರ್ಷಿಕೋತ್ಸವದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಕನ್ಯಾನ ಕಣಿಯೂರು, ಶ್ರೀ ಮಹಾಬಲೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ ಕಮರ್ಷಿಯಲ್ ದೃಷ್ಟಿಕೋನದಿಂದ
ಬೇರೆಲ್ಲೂ ಕಾಣದ ವಿಶಿಷ್ಠ ಉತ್ಸವ : ಇಳಿದ ಕೊಪ್ಪರಿಗೆ: ಮಹಾಸಂಪ್ರೋಕ್ಷಣೆ : ಯಶಸ್ವಿಯನೀರಾಟ : ಚಿಣ್ಣರ ಸಂಭ್ರಮ ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದ ವಾರ್ಷಿಕ ಜಾತ್ರಾ ಮಹೋತ್ಸವವವು ಸೋಮವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊoಡಿತು. ಮುಂಜಾನೆ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತರಾಮ ಎಡಪಡಿತ್ತಾಯರು ವೈದಿಕ ವಿದಾನ ನೆರವೇರಿಸಿದರು. ಬಳಿಕ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಪೂರ್ವ ಶಿಷ್ಠ ಸಂಪ್ರದಾಯದ ಪ್ರಕಾರ
ಚಿತ್ರಾಪುರ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಚಿತ್ರಾಪುರ ಇಲ್ಲಿನ ಜೀರ್ಣೋದ್ಧಾರಕ್ಕೆ ಸರ್ವ ಭಕ್ತರು ಕೈ ಜೋಡಿಸಿ ದೇವಸ್ಥಾನವನ್ನು ಐತಿಹಾಸಿಕವಾಗಿ ಬೆಳಗಿಸಿ ಶ್ರೀ ದೇವಿಯ ಆಶೀರ್ವಾದ ಪಡೆಯುವಂತಾಗಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು. ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಬ್ರಹ್ಮಕಲಶಾಧಿ ದಾರ್ಮಿಕ ಸೇವಾ ಕಾರ್ಯಗಳು ಮಾ.5 ರಿಂದ 13 ರವರೆಗೆ ಜರಗಲಿದ್ದು ,13 ರಂದು ಬ್ರಹ್ಮಕಲಶ ಮತ್ತು 14 ರಿಂದ ಜಾತ್ರಾ ಮಹೋತ್ಸವ




























