ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುಟ್ಠಳ್ಳಿಯಲ್ಲಿ ಮಳೆಯಿಂದಾಗಿ ಅಪಾರ ಹಾನಿಗೊಳಗಾಗಿದ್ದು, ಸಿಎಂ ಬಸರವಾಜ್ ಬೊಮ್ಮಾಯಿ ಅವರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ಮುಟ್ಠಳ್ಳಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿತವಾದ ಸ್ಥಳ ವೀಕ್ಷಣೆ ಮಾಡಿದರು. ನಿನ್ನೆ ದಿನ ಲಕ್ಷ್ಮಿ ನಾರಾಯಣ ನಾಯ್ಕ ರವರ ಮನೆಯಮೇಲೆ ಗುಡ್ಡ ಕುಸಿದು ಅನಂತನಾಯ್ಕ(,35), ಮಗಳು
ವಿದ್ಯೆಯೂ ಕಲೆಯೂ ಜೊತೆ ಜೊತೆಯಾಗಿ ಸಾಗಲಿ. ಇಂದು ಅವಕಾಶಗಳ ಆಕಾಶವೇ ನಮ್ಮ ಮುಂದಿದೆ ಅದನ್ನು ಸದುಪಯೋಗಪಡಿಸಿಕೊಳ್ಳಬೇಕು’ಎಂಬುದಾಗಿ ರಂಗಭೂಮಿ ಕಲಾವಿದ,ಚಲನಚಿತ್ರ ನಟ ಶ್ರೀ ಪ್ರಕಾಶ್ ತೂಮಿನಾಡು ನುಡಿದರು.ಅವರು ಮಂಜೇಶ್ವರ ಉಪಜಿಲ್ಲಾಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ 2022-23ನೇ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳನ್ನು ಜಿ.ವಿ.ಎಚ್.ಎಸ್.ಎಸ್.ಕುಂಜತ್ತೂರು ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡುತ್ತಿದ್ದರು.ಶಾಲೆಯ ಹಳೆ ವಿದ್ಯಾರ್ಥಿಯೂ ಆಗಿರುವ
ಕೊಡಗು ಸಂಪಾಜೆ ಗ್ರಾಮದ ಕೊಯನಾಡು ಬಳಿಯಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಮಧ್ಯೆ ಭಾರೀ ಪ್ರಮಾಣದಲ್ಲಿ ಬಿರುಕು ಉಂಟಾಗಿದ್ದು, ಮಾಣಿ-ಮೈಸೂರು ಸಂಪರ್ಕ ಕಡಿತಗೊಳ್ಳುವ ಆತಂಕ ಸೃಷ್ಠಿಯಾಗಿದೆ. ಕೊಡಗು ಜಿಲ್ಲೆಯ ಕೆಲವೆಡೆ ಧಾರಾಕಾರವಾಗಿ ಮಳೆ ಸುರಿದಿದೆ. ಸದ್ಯ ಮುಂಜಾಗರೂಕತೆಯ ಕ್ರಮವಾಗಿ ಈ ಹೆದ್ದಾರಿಯಲ್ಲಿ ಘನ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೆದ್ದಾರಿಯ ಸ್ಥಿತಿಯನ್ನು ಪರಿಶೀಲನೆ
ದೇಶದಲ್ಲೇ ಕರ್ನಾಟಕದಲ್ಲಿರುವ ಹುಲಿಗಳ ಗಣತಿಯಲ್ಲಿ ಎರಡನೇ ಸ್ಥಾನ ಹೊಂದಿದ್ದರೂ, ರಾಜ್ಯದಲ್ಲೇ ಅತ್ಯಾಧಿಕ ಹುಲಿಗಳನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಹುಲಿ ಸಂರಕ್ಷಿತ ಪ್ರದೇಶಕ್ಕೆ ವಿಸ್ತಾರಗೊಂಡಿದೆ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿ ಬಳಿ ಇರುವ ಬಂಡೀಪುರ ಸಫಾರಿ ಕೇಂದ್ರದ ಆವರಣದಲ್ಲಿ 12 ನೇ ವಿಶ್ವ ಹುಲಿ
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಮತ್ತು ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಬೆಂಗಳೂರಿನಲ್ಲಿ ಅರಗ ಜ್ಞಾನೇಂದ್ರ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ಧ ಹಾಗೂ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಉಳ್ಳಾಲ: ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯ ಬಳಿಕ ಗಡಿಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ತಲಪಾಡಿ ಗಡಿಯಲ್ಲಿ ಕೇರಳದಿಂದ ಮಂಗಳೂರು ಕಡೆಗೆ ಆಗಮಿಸುತ್ತಿರುವ ವಾಹನಗಳ ತಪಾಸಣೆಯನ್ನು ನಡೆಸುತ್ತಿದ್ದು , ಮಂಗಳೂರಿನಿಂದ ಕೇರಳ ಕಡೆಗೆ ಸಂಚರಿಸುವ ವಾಹನಗಳನ್ನು ಕೇರಳ ಪೊಲೀಸರು ತಪಾಸಣೆ ಆರಂಬಿಸಿದ್ದಾರೆ,. ಕೇರಳ – ಕರ್ನಾಟಕ ಗಡಿಭಾಗವಾಗಿರುವ ತಲಪಾಡಿ, ದೇವಿಪುರ, ನೆತ್ತಿಲಪದವು ಬಳಿ ತಪಾಸಣೆ ನಡೆಸುತ್ತಿದ್ದು, ನೆತ್ತಿಲಪದವು
ಪ್ರವೀಣ್ ನೆಟ್ಟಾರು ಕೊಲೆಯನ್ನು ಖಂಡಿಸಿ ಆರ್ಯ ಈಡಿಗ ಮಹಾಮಂಡಲದ ರಾಷ್ಟ್ರೀಯ ಅಧ್ಯಕ್ಷ ಡಾ.ಪ್ರಣಾವನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಗುರುವಾರದಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.ಬೆಂಗಳೂರು ಕಬ್ಬನ್ ಪಾರ್ಕ್ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಶ್ರೀ ಪ್ರಣಾವನಂದ ಸ್ವಾಮೀಜಿ ಅವರು , ಮೃತ ಪ್ರವೀಣ್ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಹಾಗೂ ಅವರ ಪತ್ನಿಗೆ ಸರಕಾರಿ ಉದ್ಯೋಗ ನೀಡಬೇಕೆಂದು ಆಗ್ರಹಿಸಿದರು.
ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಸದಸ್ಯ ಪ್ರವೀಣ್ ನೆಟ್ಟಾರ್‍ಅವರ ಕೊಲೆಗೆ ಸಂಬಂಧಿಸಿದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಬಿ.ಸಿ.ರೋಡ್ ಸುತ್ತಮುತ್ತ ಸ್ವಯಂಪ್ರೇರಿತ ಬಂದ್ ಗೆ ಕರೆ ನೀಡಿದಂತೆ ಹೆಚ್ಚಿನ ಅಂಗಡಿ ಮುಂಗಟ್ಟುಗಳು ಬುಧವಾರ ಬಂದ್ ಆದವು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಕಿಶೋರ್ ಪಲ್ಲಿಪ್ಪಾಡಿ, ನಿರಂತರವಾಗಿ
ಸೌತ್ ಇಂಡಿಯ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ 27 ನೇ ಮೂರು ದಿನಗಳ ಸೌತ್ ಇಂಡಿಯ ಗಾರ್ಮೆಂಟ್ಸ್ ಬಿ 2 ಬಿ ಮೇಳ: 100 ಕೋಟಿ ರೂ ವಹಿವಾಟು ನಿರೀಕ್ಷೆ – ಏಕರೂಪ ಜಿ.ಎಸ್.ಟಿ ದರ ನಿಗದಿಪಡಿಸುವಂತೆ ಒತ್ತಾಯ ಬೆಂಗಳೂರು, ಜು, 26; ಸೌತ್ ಇಂಡಿಯಾ ಗಾರ್ಮೆಂಟ್ಸ್ ಅಸೋಸಿಯೇಷನ್ ನಿಂದ ಮೂರು ದಿನಗಳ ಅತಿ ದೊಡ್ಡ ಗಾರ್ಮೆಂಟ್ಸ್ ಮೇಳ ಇಂದಿನಿಂದ ಆರಂಭವಾಗಿದ್ದು, ಬಿ2ಬಿ ಮೇಳದಲ್ಲಿ ವೈವಿದ್ಯಮ ಬ್ರಾಂಡ್ ಗಳ ಜವಳಿ ಉಡುಪು ವಲಯದಲ್ಲಿ 100 ಕೋಟಿ ರೂ ಗಿಂತ […]
ಹಾಸನದ ಆಲೂರಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮಕ್ಕಳು ಕಲುಷಿತ ಆಹಾರ ಸೇವನೆಯಿಂದ ಅಸ್ವಸ್ಥಗೊಂಡಿದ್ದ ಶಾಲೆಗೆ ಶಾಸಕ ಎಚ್ ಕೆ ಕುಮಾರಸ್ವಾಮಿ ನೀಡಿ, ಪರಿಶೀಲನೆ ನಡೆಸಿದ್ರು. ಅಡುಗೆ ಕೊಠಡಿ, ಸಾಮಗ್ರಿಗಳ ಕೊಠಡಿ, ಆಹಾರ ಪದಾರ್ಥಗಳನ್ನು ಪರೀಶೀಲನೆ ಮಾಡಿ, ಶಾಲಾ ಕೊಠಡಿಗಳು, ಸ್ನಾನಗೃಹಗಳು, ಶೌಚಲಯಕ್ಕೆ ಭೇಟಿ ನೀಡಿದ್ರು. ನಂತರ ಮಾತನಾಡಿದ ಅವರು ಸದ್ಯ ಈ ವಸತಿ ಶಾಲೆ ಕಟ್ಟಡದಲ್ಲಿ 204 ಮಕ್ಕಳು ಇದ್ದು 25 ಮಕ್ಕಳಿಗೆ ವಾಂತಿ ಬೇಧಿ ಸುಸ್ತು ಕಾಣಿಸಿಕೊಂಡಿದ್ದು.