Home Archive by category ರಾಜ್ಯ (Page 63)

ಆತುರವಾಗಿ ಶಿಕ್ಷಣ ನೀತಿ ಜಾರಿ ಮಾಡಿಲ್ಲ: ಡಾ.ಸಿ.ಎನ್.ಅಶ್ವತ್ಥನಾರಾಯಣ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಾತುರಿಯಲ್ಲಿ ಜಾರಿಗೆ ತರಲಾಗುತ್ತಿದೆ ಎಂದು ಪ್ರತಿಪಕ್ಷಗಳು ಮಾಡುತ್ತಿರುವ ಆರೋಪವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಸಾರಾಸಗಟಾಗಿ ತಳ್ಳಿಹಾಕಿದಲ್ಲದೆ, ಇದು ಅರ್ಥರಹಿತ ಹಾಗೂ ರಾಜಕೀಯ ದುರುದ್ದೇಶದಿಂದ ಕೂಡಿದ ಟೀಕೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಭಾನುವಾರ ಕಾಲೇಜು ಶಿಕ್ಷಣ ಮತ್ತು

ಸೆ.10 ರಂದು ಬಿ.ಸಿ.ಸಿ.ಐ(ಯು.ಎ.ಯಿ) ವತಿಯಿಂದ ‘ಡಿಜಿಟಲ್ ರೆವಲ್ಯೂಶನ್’ ವೆಬಿನಾರ್

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಬಿಸಿಸಿಐ) ಯುಎಇ ವತಿಯಿಂದ ಸೆಪ್ಟೆಂಬರ್ 10ರಂದು ‘ಡಿಜಿಟಲ್ ರೆವಲ್ಯೂಶನ್ ಆನ್ ಬ್ಯುಸಿನೆಸ್ ಆಂಡ್ ಎಂಟ್ರಪನರ್’ಶಿಪ್’ ಎಂಬ ವಿಷಯದಲ್ಲಿ ವೆಬಿನಾರ್ ಹಮ್ಮಿಕೊಂಡಿದೆ. ಬ್ಯುಸಿನೆಸ್ ನೆಟ್ವರ್ಕಿಂಗ್ ಮೂಲಕ ಸಮಾಜದ ಉದ್ಯಮಿಗಳನ್ನು, ವೃತ್ತಿಪರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಆ ಮೂಲಕ ವ್ಯಾಪಾರ ಸಬಲೀಕರಣ ಹಾಗೂ ಸಮಾಜ ಸೇವೆ ನಡೆಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಯುಎಇಯಲ್ಲಿ

ಕರ್ನಾಟಕ ಮುಕ್ತ ವಿವಿ .ಕುಲಪತಿ ಡಾ. ಎಸ್. ವಿದ್ಯಾಶಂಕರ್ ವಿರುದ್ಧ ರಾಜ್ಯಪಾಲರಿಗೆ ದೂರು: ವಿವಿ ರಕ್ಷಣೆಗೆ ಥಾವರ್ ಚಂದ್ ಗೆಲ್ಹೋಟ್ ಭರವಸೆ

ಬೆಂಗಳೂರು: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಿ, ವಿಶ್ವವಿದ್ಯಾಲಯದ ರಕ್ಷಣೆಗೆ ಕಾನೂನಿನ ವ್ಯಾಪ್ತಿಯಲ್ಲಿ ಸಾಧ್ಯವಿರುವ ಕ್ರಮಗಳನ್ನು ಕೈಗೊಳ್ಳುವುದಾಗಿ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಭರವಸೆ ನೀಡಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎನ್.ಎಸ್. ರಾಮೇಗೌಡ ಹಾಗೂ ನಿವೃತ್ತ ಡೀನ್ ಡಾ. ಚಂಬಿ ಪುರಾಣಿಕ್ ಅವರು ಶಿಕ್ಷಕರ ದಿನದ ಹಿನ್ನೆಲೆಯಲ್ಲಿ ರಾಜ್ಯದ ಪ್ರಪ್ರಥಮ ಪ್ರಜೆ

ಗಣೇಶೋತ್ಸವಕ್ಕೆ ಷರತ್ತು ಬದ್ಧ ಅನುಮತಿ:ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿಷೇಧ

ರಾಜ್ಯದಾದ್ಯಂತ ಐದು ದಿನಗಳ ಕಾಲ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿಷೇಧ ಹೇರಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಭಾನುವಾರ ನಡೆದ ಕೋವಿಡ್‌ ನಿರ್ವಹಣೆಗೆ ಸಂಬಂಧಿಸಿದ ಉನ್ನತಮಟ್ಟದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪೊಲೀಸ್‌ ಇಲಾಖೆ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳು ವಿಧಿಸುವ ಷರತ್ತುಗಳನ್ನು ಪಾಲಿಸಿಕೊಂಡು ಗಣೇಶೋತ್ಸವ

ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭೂಕಂಪ:ಕೂಡಗಿ ಗ್ರಾಮದಲ್ಲಿ ಮನೆಯ ಮೇಲ್ಚಾವಣಿ ಕುಸಿತ

ವಿಜಯಪುರ ನಗರದಲ್ಲಿ ಶನಿವಾರ ರಾತ್ರಿ 11-47 ಮತ್ತು 11-48ಕ್ಕೆ ಎರಡು ಬಾರಿ ದೊಡ್ಡ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ. ಜಲನಗರ, ಕೀರ್ತಿ ನಗರ, ಟ್ರಜರಿ ಕಾಲೊನಿ, ಗಣೇಶ ನಗರ, ನವಭಾಗ್ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಹಾಗೂ ಜಿಲ್ಲೆಯ ಕೂಡಗಿ, ಮುಳವಾಡ, ಬಬಲೇಶ್ವರ ಇನ್ನು ಹಲವೆಡೆ ಎರಡು ಬಾರಿ ದೊಡ್ಡದಾಗಿ ಶಬ್ಧವಾಗಿದೆ. ಜೊತೆಗೆ ಭೂಮಿಯೂ ಕಂಪಿಸಿದೆ. ಇನ್ನೂ ಕೂಡಗಿ ಗ್ರಾಮದ ಅಬ್ದುಲ್ ಖಾದ್ರೀ ಜಾಗೀರದ್ದಾರ ಎಂಬುವವರು ಮನೆ ಕುಸಿದು ಬಿದ್ದಿದೆ. ಅದೃಷ್ಟವಶಾತ್

ಹುತಾತ್ಮ ಪತ್ರಕರ್ತೆ ಗೌರಿ ಲಂಕೇಶ್ ಸ್ಮರಣೆ: ಗೌರಿ ನೆನಹು ಕಾರ್ಯಕ್ರಮ

ಹಿಂದೂತ್ವವಾದಿಗಳ ಗುಂಡಿಗೆ ಎದೆಯೊಡ್ಡಿ ಹುತಾತ್ಮರಾದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌ರವರ ನೆನಪಿನಲ್ಲಿ ಗೌರಿ ಮೆಮೋರಿಯಲ್ ಟ್ರಸ್ಟ್‌ನಿಂದ ‘ಗೌರಿ ನೆನಹು’ ಕಾರ್ಯಕ್ರಮವು ಚಾಮರಾಜಪೇಟೆಯಲ್ಲಿ ನಡೆಯಿತು. ಸೆಪ್ಟಂಬರ್ 05 ಅಂದರೆ ಇಂದು ಗೌರಿ ಲಂಕೇಶ್‌ರವರ ಹತ್ಯೆಯಾಗಿ 4 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 8.30ಕ್ಕೆ ಚಾಮರಾಜಪೇಟೆಯಲ್ಲಿರುವ ಗೌರಿ ಲಂಕೇಶ್‌ರವರ ಸಮಾಧಿ ಬಳಿ ಗೌರವ ಸಲ್ಲಿಸಲಾಯಿತು. ಗೌರಿ ಲಂಕೇಶ್‌ರವರ ನಮ್ಮನ್ನು ಅಗಲಿ ನಾಲ್ಕು

ವಿದ್ಯುತ್ ಬಿಲ್ ನಲ್ಲಿ ಅಕ್ರಮ, ಮೂವರ ಅಮಾನತು: ಸಚಿವ ಸುನಿಲ್ ಕುಮಾರ್

ಬೆಂಗಳೂರು: ವಿದ್ಯುತ್ ಬಿಲ್ ನಲ್ಲಿ ತಿದ್ದುಪಡಿ ಮಾಡಿ ಬೆಸ್ಕಾಂಗೆ ನಷ್ಟ ಉಂಟು ಮಾಡಿದ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿರುವುದಾಗಿ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಮುಳಬಾಗಿಲು ಉಪವಿಭಾಗದ ಮೆಹಬೂಬ್ ಪಾಷ, ಕಿರಿಯ ಸಹಾಯಕ, ಗಾಯತ್ರಮ್ಮ ,ಕಿರಿಯ ಸಹಾಯಕಿ ಹಾಗೂ ಸುಜಾತಮ್ಮ, ಕಿರಿಯ ಸಹಾಯಕಿ ,ಈ ಮೂವರು ಅಮಾನತಿ ಗೊಳಗಾದ ಸಿಬ್ಬಂದಿ ಯಾಗಿದ್ದಾರೆ. ಇವರು ಪ್ರತಿ ಮಾಹೆ ಗ್ರಾಹಕರಿಗೆ ವಿದ್ಯುತ್ ಬಿಲ್ಲು ವಿತರಿಸುವ ವೇಳೆಯಲ್ಲಿ

ತುಳುಕೂಟ ಫೌಂಡೇಶನ್ ನಾಲಾಸೋಪಾರ ನೂತನ ಅಧ್ಯಕ್ಷರಾಗಿ ಶಶಿಧರ ಕೆ. ಶೆಟ್ಟಿ ಆಯ್ಕೆ

ನಾಲಾಸೋಪಾರ;; ತುಳು ಕೂಟ ಫೌಂಡೇಶನ್ ನಾಲಾಸೋಪಾರ ಇದರ ಸಭೆಯು. ಆಗಸ್ಟ್ 31ರಂದು ರಿಜನ್ಸಿ ಬ್ಯಾಂಕ್ವಿಟ್ ಹಾಲ್  ನಾಲಾಸೋಪಾರ (ಪೂರ್ವ )ದಲ್ಲಿ  ತುಳುಕೂಟ ಫೌಂಡೇಶನ್ ಅಧ್ಯಕ್ಷರಾದ  ರಮೇಶ್ ಶೆಟ್ಟಿ ಕಾಪು ಇವರ ಅದ್ಯಕ್ಷತೆಯಲ್ಲಿ ಜರಗಿತು. ಕಾರ್ಯದರ್ಶಿ ಜಗನಾಥ. ಡಿ. ಶೆಟ್ಟಿ ವಾರ್ಷಿಕ ಚಟುವಟಿಕೆಗಳ ವರದಿಯನ್ನು ಸಭೆಯ ಮುಂದಿಟ್ಟರು. ಕೋಶಾಧಿಕಾರಿಯವರ ಅನುಪಸ್ಥಿತಿಯಲ್ಲಿ ಅಧ್ಯಕ್ಷರ ಅನುಮತಿ ಮೇರೆಗೆ ಕಾರ್ಯದರ್ಶಿಯವರು ಲೆಕ್ಕಪತ್ರವನ್ನು ಮಂಡಿಸಿದರು ಈ ಸಂದರ್ಭದಲ್ಲಿ

ಹಾಸನ : ಅತಂತ್ರ ಸ್ಥಿತಿಯಲ್ಲಿರುವ ಗಣೇಶ ಮೂರ್ತಿ ತಯಾರಕರ ಬದುಕು

ಇಂದು ದೇಶದಾದ್ಯಂತ ಕೋವಿಡ್‍ನಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ ಕೆಲವೊಂದು ಕಸುಬುಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದ ಕಲಾವಿದರ ಬದುಕು ಇಂದು ಹೀನಾಯವಾಗಿದೆ ಅದಕ್ಕೆ ಉದಾಹರಣೆ ಎಂಬಂತೆ ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಬರುತ್ತಿದೆ. ಅದರ ಅಂಗವಾಗಿ ಪ್ರತಿ ವರ್ಷವೂ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದ ಕಲಾವಿದರು ಇಂದು ಕೋವಿಡ್‍ನಿಂದಾಗಿ ಹೀನಾಯ ಬದುಕನ್ನು ಬದುಕುತ್ತಿದ್ದಾರೆ. ಪ್ರತಿವರ್ಷವು ವಿಜೃಂಭಣೆಯಿಂದ ನಡೆಯುತ್ತಿದ್ದ ಗಣೇಶ

ಗಮನ ಸೆಳೆದ ಕೃಷ್ಣ ಜನ್ಮಾಷ್ಠಮಿಯ ಡಿಸೈನರ್ ವೇರ್

ಪ್ರತಿಯೊಂದು ವಿಶೇಷ ಹಬ್ಬದ ಸಂದರ್ಭದಲ್ಲಿ ಆಯಾ ಹಬ್ಬದ ಮಹತ್ವಕ್ಕೆ ಸಂಬಂಧಿಸಿದ ಫೆಸ್ಟಿವ್ ವೇರ್ ಮೂಲಕ ಫ್ಯಾಶನ್ ಪ್ರಿಯರನ್ನು ಆಕರ್ಷಿಸುತ್ತಿದೆ ಬೆಂಗಳೂರಿನ ಜಿಯಾನಿ ಡಿಸೈನರ್ಸ್ ಸಂಸ್ಥೆ.ಈ ಬಾರಿಯ ಶ್ರೀ ಕೃಷ್ಣಾಷ್ಟಮಿಗೆ ಯಶೋಧೆ ಕೃಷ್ಣ ಪರಿಕಲ್ಪನೆಯ ಧಿರಿಸಿನ ಫೋಟೋ ಶೂಟ್ ಮೂಲಕ ಜಿಯಾನಿ ಡಿಸೈನರ್ ಸಂಸ್ಥೆ ಫ್ಯಾಷನ್ ಪ್ರಿಯರ ಗಮನ ಸೆಳೆಯಿತು . ಜನಪ್ರಿಯ ಮೊಡೇಲ್ ಪ್ರಿಯಾ ಕುಮಾರ್ ಅವರು ಯಶೋಧೆಯಾಗಿ ಆಕರ್ಷಕ ಫೆಸ್ಟಿವ್ ವೇರ್ ನಲ್ಲಿ ಮಿಂಚಿದರು. ಯಶೋಧೆ ಪುಟ್ಟ