Home Archive by category ಶೈಕ್ಷಣಿಕ (Page 14)

ಪುತ್ತೂರಿನ ಪರ್ಲಡ್ಕ ಶಾಲೆಯಲ್ಲಿ ಕಲಿಕಾ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ

ಪುತ್ತೂರು:ರಾಜ್ಯಾದ್ಯಂತ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ನಡೆಯುವ ಮಕ್ಕಳ ಕಲಿಕಾ ಹಬ್ಬ ಪುತ್ತೂರಿನ ಪರ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಮೂಹ ಸಂಪನ್ಮೂಲ ಕೇಂದ್ರ ಹಾಗೂ ಪರ್ಲಡ್ಕ ಹಿರಿಯ ಪ್ರಾಥಮಿಕ ಶಾಲಾ ಸಂಯುಕ್ತ

ಮುದ್ರಣಕ್ಷೇತ್ರವು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗ – ಶೇಖರ್ ಟಿ

“ಮುದ್ರಣ ಕ್ಷೇತ್ರದಲ್ಲಿನ ಕಾರ್ಯ ಎರಡು ಮೂರು ದಿನಕ್ಕೆ ಸೀಮಿತವಾದದ್ದಲ್ಲ ನಿರಂತರ ಕೆಲಸವನ್ನು ಒಳಗೊಂಡಿದ್ದು ಜನರ ನಿರೀಕ್ಷೆಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುವುದು ಅತಿ ಮುಖ್ಯವಾಗುತ್ತದೆ “ಎಂದು ಉಜಿರೆಯ ಮಂಜುಶ್ರೀ ಪ್ರಿಂಟಿಂಗ್ ಪ್ರೆಸ್ ನ ವ್ಯವಸ್ಥಾಪಕ ಶೇಖರ್ ಟಿ ಹೇಳಿದರು.       ಉಜಿರೆ ಶ್ರೀ ಧ ಮಂ ಕಾಲೇಜಿನ ಕನ್ನಡ ವಿಭಾಗವು ಆಯೋಜಿಸಿದ “ಮುದ್ರಣ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು” ಎಂಬ ವಿಷಯದ ಕುರಿತಾದ

ಐತಿಹಾಸಿಕ ಪರಂಪರೆಯನ್ನು ಉಳಿಸಿದರೆ ಮಾತ್ರ ಉತ್ತಮ ಭವಿಷ್ಯ ನಿರ್ಮಾಣ ಸಾಧ್ಯ: ಡಾ. ದಿವಾಕರ್ ಕೆ.

ಉಜಿರೆ: ನಮ್ಮ ಪರಂಪರೆ ಶ್ರೇಷ್ಠ ಇತಿಹಾಸದ ಸಂರಕ್ಷಣೆ ಅತ್ಯಗತ್ಯ. ವಿದ್ಯಾರ್ಥಿಗಳು ಈಗಿನಿಂದಲೇ ಈ ದಿಶೆಯಲ್ಲಿ ಜಾಗೃತರಾಗಿರಬೇಕೆಂದು ಮುಖ್ಯ ಅತಿಥಿಗಳಾದ ಡಾ. ದಿವಾಕರ್ ಕೆ ರವರು ತಿಳಿಸಿದರು.         ಇತ್ತೀಚೆಗೆ ಉಜಿರೆ ಎಸ್ ಡಿ ಎಂ. ಪದವಿ ಕಾಲೇಜಿನಲ್ಲಿ “ಐತಿಹಾಸಿಕ ಪರಂಪರೆ ಉಳಿಸಿ” ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭವು ನೆರವೇರಿತು. ಇದರ ಅಭ್ಯಾಗತರಾಗಿ ಆಗಮಿಸಿದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.

1-100ರ ಮಗ್ಗಿಬಾಯಿಪಾಠ ; ಶ್ರೀ ಚೈತನ್ಯ ಟೆಕ್ನೋ ಶಾಲಾ 31 ಮಕ್ಕಳ ದಾಖಲೆ

ಮಂಗಳೂರು: ಈ ಹಿಂದೆ ಮಗ್ಗಿಯನ್ನು ಭಾಯಿಪಾಠ ಮಾಡೋದು ಒಂದು ಸಾಧನೆಯಾಗಿತ್ತು ಹಾಗೂ ವಿದ್ಯಾರ್ಥಿಗಳಿಗೆ ಸವಾಲು ಕೂಡ ಆಗಿತ್ತು. ಆದರೆ ಇದೀಗ ಬದಲಾದ ಶಿಕ್ಷಣ ಕಲಿಕೆಯಲ್ಲಿ ಸರಳವಾಗಿ ಮಗ್ಗಿ ಅಥವಾ ಟೇಬಲ್ ಗಳನ್ನು ಮಕ್ಕಳು ಲೀಲಾಜಾಲವಾಗಿ ಕಂಠ ಪಾಠದಿಂದ ಹೇಳುತ್ತಾ ಇದೀಗ ದಾಖಲೆಯ ಮೇಲೆ ದಾಖಲೆ ನಿರ್ಮಿಸುತ್ತಿದ್ದಾರೆ. ಅಂತಹ ಒಂದು ದಾಖಲೆಯನ್ನು ಶ್ರೀ ಚೈತನ್ಯ ಟೆಕ್ನೋ ಶಾಲೆಯ ಮಕ್ಕಳು ಮಾಡಿದ್ದಾರೆ. ನಗರದ ಶ್ರೀ ಚೈತನ್ಯ ಟೆಕ್ನೋ ಶಾಲೆಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು

ಗೊನ್ಝಾಗ ಯುವಪ್ರತಿಭೆ ಸಾಹಿತ್ಯಿಕ ಅನಾವರಣ

ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ದಶಮಾನೋತ್ಸವ ಸಂದರ್ಭದಲ್ಲಿ 15ರ ಹರೆಯದ ಬಾಲ ಸಾಹಿತಿ ಸಾಹಿತಿ ಶಿನೈದ್ ಫೆರ್ನಾಂಡಿಸ್ ಅವರ ಎರಡನೆಯ ಕೃತಿ ‘ದಿ ಸರ್ಚ್’ ಅನಾವರಣಗೊಳಿಸಲಾಯಿತು. ಮೊದಲ ಕೃತಿ ‘ದಿ ಇನ್ಸಿಡೆಂಟ್’ 2022 ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಶಿನೈದ್ ಫೆರ್ನಾಂಡಿಸ್ ರವರು, ಶ್ರೀಮತಿ ಶರಲ್ ಮತ್ತು ಸಮಿತ್ ಫೆರ್ನಾಂಡಿಸ್ ಅವರ ಪುತ್ರಿಯಾಗಿದ್ದು, ಗೊನ್ಝಾಗ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ. ಪುಸ್ತಕ ಬಿಡುಗಡೆಯ

ಜ್ಞಾನದ ಪ್ರಾಯೋಗಿಕ ಅನ್ವಯದಿಂದ ಕಲಿಕೆ ಸಾರ್ಥಕ

ಉಜಿರೆ: ಜ್ಞಾನ ಮತ್ತು ಕೌಶಲ್ಯಗಳು ಪ್ರಾಯೋಗಿಕವಾಗಿ ಅನ್ವಯವಾದಾಗ ಮಾತ್ರ ಕಲಿಕೆಯ ಸಾರ್ಥಕತೆ ಸಾಧ್ಯ ಎಂದು ‘ಜೆಸಿಐ ಬೆಳ್ತಂಗಡಿ ಮಂಜುಶ್ರೀ’ಯ ಅಧ್ಯಕ್ಷರಾದ ಶಂಕರ್ ರಾವ್ ಬಿ ನುಡಿದರು. ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜಿನ ಸಮ್ಯಕ್ ದರ್ಶನ್ ಸಭಾಂಗಣದಲ್ಲಿ ವ್ಯವಹಾರ ಆಡಳಿತ ವಿಭಾಗವು ಶನಿವಾರ ಆಯೋಜಿಸಿದ್ದ ಅಂತರ್ ವಿಭಾಗ ‘ಶಾರ್ಟ್ ಫಿಲ್ಮ್ ಫೆಸ್ಟಿವಲ್’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲಿಕೆಯ ಹಂತದಿಂದಲೇ ವಿದ್ಯಾರ್ಥಿಗಳು ವಿಭಿನ್ನವಾಗಿ ಯೋಚಿಸುವ

ಯಡ್ತೆರೆ ಮಂಜಯ್ಯ ಶೆಟ್ಟರ ಕನಸಿನ ಕೂಸು ನೆಂಪು ಪಬ್ಲಿಕ್ ಸ್ಕೂಲ್ :ವಜ್ರ ಸಂಗಮದ ಉದ್ಘಾಟನಾ ಕಾರ್ಯಕ್ರಮ

ಬೈಂದೂರು: ಗ್ರಾಮೀಣ ಭಾಗಗಳ ಅಭಿವೃದ್ಧಿಯ ಬಗ್ಗೆ ಕನಸು ಕನಸು ಕಂಡು ನನಸು ಮಾಡಲು ಹೊರಟಿದ್ದ ಯಡ್ತೆರೆ ಮಂಜುಯ್ಯ ಶೆಟ್ಟಿ ಕರಾವಳಿಯ ಧೀಮಂತ ನಾಯಕ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.ವಂಡ್ಸೆ ಸಮೀಪದ ನೆಂಪುವಿನ ಮಲ್ನಾಡ್ ಸ್ಲೂಲ್, ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ವಜ್ರ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಂಡ್ಸೆ ಪಿರ್ಕಾ ಎನ್ನುವುದು ಉಡುಪಿ ಜಿಲ್ಲೆಯಲ್ಲಿಯೇ ಅತೀ ದೊಡ್ಡ ಪಿರ್ಕಾ ಆಗಿದೆ. ನಿಜವಾಗಿ ವಂಡ್ಸೆ ಪಿರ್ಕಾ

ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದಲ್ಲಿ ಉಜಿರೆಯ ಐಚ್ಛಿಕ ಕನ್ನಡ ವಿದ್ಯಾರ್ಥಿಗಳು

ಉಜಿರೆ ಶ್ರೀಧ ಮಂ ಕಾಲೇಜಿನ ಐಚ್ಛಿಕ ಕನ್ನಡ ವಿದ್ಯಾರ್ಥಿಗಳು ಶ್ರೀ ಧರ್ಮಸ್ಥಳ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನಕ್ಕೆ ಶನಿವಾರ ಭೇಟಿ ನೀಡಿ ಪುರಾತನ ಸಾಹಿತ್ಯದ ಪರಿಕರಗಳನ್ನು ವೀಕ್ಷಿಸಿದರು.       ಸ್ವತಃ ಕೈಯಲ್ಲಿ ಮುದ್ರಿಸಲಾದ ಹಾಳೆಗಳಲ್ಲಿ ಚಿನ್ನದ ಮಿಶ್ರಣವನ್ನು ಸೇರಿಸಿ ಬರೆಯಲಾದ ಲಿಪಿಗಳನ್ನು ಹಾಗೂ ಹಿಂದಿನ ತಾಳೆಗರಿಗಳು, ಪುಸ್ತಕಗಳು ಹಾಗೂ ಲಿಪಿಗಳನ್ನು ಸಂಗ್ರಹಿಸಿ ಸಂರಕ್ಷಿಸುವ ವಿಧಾನವನ್ನು ವಿದ್ಯಾರ್ಥಿಗಳು ತಿಳಿದುಕೊಂಡರು.  

ಪರಿಸರದೊಂದಿಗೆ ನಮ್ಮ ಮನಸ್ಥಿತಿ ಕೂಡ ಕಲುಷಿತಗೊಳ್ಳುತ್ತಿದೆ: ಡಾ. ನರೇಂದ್ರ ರೈ ದೇರ್ಲ

ಗುರುಕೇಂದ್ರಿತವಾಗಿದ್ದ ಶಿಕ್ಷಣ ವ್ಯವಸ್ಥೆ ಇಂದು ಪೋಷಕ ಕೇಂದ್ರಿತವಾಗಿಯೂ ಉಳಿಯದೇ ಬರೀ ಯಂತ್ರ ಕೇಂದ್ರಿತವಾಗಿ ಮಾರ್ಪಟ್ಟಿದೆ. ಹಾಗಾಗಿ ನಾವು ಭಾವನಾತ್ಮಕ ಸಂಬಂಧಗಳನ್ನು, ನೈತಿಕ ಜವಾಬ್ದಾರಿಗಳನ್ನು ಕಳೆದುಕೊಳ್ಳುತ್ತಾ ಸಾಗುತ್ತಿದ್ದೇವೆ ಎಂಬುದಾಗಿ ಪುತ್ತೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ನರೇಂದ್ರ ರೈ ದೇರ್ಲ ಅಭಿಪ್ರಾಯಪಟ್ಟರು      ಉಜಿರೆ ಶ್ರೀ ಧ. ಮಂ. ಕಾಲೇಜಿನ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಕೋಶ

ಎಚ್ಚರಿಕೆಯ ಬಳಕೆದಾರ ಹಾಗೂ ಗ್ರಾಹಕರಾಗಬೇಕು : ಡಾ. ಎ. ಜಯಕುಮಾರ್ ಶೆಟ್ಟಿ 

ಹಿಂದಿನ ಕಾಲದಲ್ಲಿ ಗ್ರಾಹಕನಿಗಿಂತ ವ್ಯಾಪಾರಸ್ಥನ ಹಿತಾಸಕ್ತಿಯನ್ನು ಗಮನಿಸಲಾಗುತ್ತಿತ್ತು, ಗ್ರಾಹಕರ ಆಯ್ಕೆಗೆ ಅವಕಾಶ ಇರುತ್ತಿರಲಿಲ್ಲ. ಆದರೆ ಗ್ರಾಹಕರ ಸಂರಕ್ಷಣಾ ಕಾಯ್ದೆ, 1986 ಚಾಲ್ತಿಗೆ ಬಂದ ನಂತರ ಗ್ರಾಹಕರಿಗೂ ಮಾರುಕಟ್ಟೆಯಲ್ಲಿ ಮಹತ್ವ ದೊರಕಿತು. ನಾವು ಜಾಗೃತ ಹಾಗೂ ಎಚ್ಚರಿಕೆಯ ಬಳಕೆದಾರ ಹಾಗೂ ಗ್ರಾಹಕರಾಗಬೇಕು ಎಂದು ಶ್ರೀ ಧ. ಮಂ ಕಾಲೇಜಿನ ಪ್ರಾಂಶುಪಾಲ ಡಾ. ಎ. ಜಯಕುಮಾರ್ ಶೆಟ್ಟಿ ಹೇಳಿದರು.   ಉಜಿರೆ ಶ್ರೀ ಧ. ಮಂ ಕಾಲೇಜಿನ ವಾಣಿಜ್ಯ ವಿಭಾಗವೂ