Home ಕರಾವಳಿ Archive by category ಉಡುಪಿ (Page 153)

ಗಿರಿಜಾ ಹೆಲ್ತ್ ಕೇರ್ ಹಾಗೂ ಸರ್ಜಿಕಲ್ಸ್ ಸಂಸ್ಥೆ : ಮೂರನೇ ಶೋರೂಮ್ ಮತ್ತು ಮೆಡಿಕೇರ್ ಪೊಲಿಕ್ಲಿನಿಕ್ ಉದ್ಘಾಟನೆ

ಕುಂದಾಪುರ: ಮಂಗಳೂರು ಮತ್ತು ಉಡುಪಿಯಲ್ಲಿ ಕಾರ್ಯಾಚರಿಸುತ್ತಿರುವ ಗಿರಿಜಾ ಹೆಲ್ತ್ ಕೇರ್‍ನ ಮತ್ತೊಂದು ಮಳಿಗೆ ಕುಂದಾಪುರದಲ್ಲಿ ಉದ್ಘಾಟನೆಗೊಂಡಿತು. ಉಡುಪಿಯ ಗಿರಿಜಾ ಗ್ರೂಪ್ಸ್ ಆಫ್ ಕನ್ಸರ್ನ್ ವತಿಯಿಂದ ಗಿರಿಜಾ ಹೆಲ್ತ್ ಕೇರ್ ಹಾಗೂ ಸರ್ಜಿಕಲ್ಸ್ ಮೂರನೇ ಶೋರೂಮ್ ಮತ್ತು ಮೆಡಿಕೇರ್ ಪೆÇಲಿಕ್ಲಿನಿಕ್ ಕುಂದಾಪುರ ಮುಖ್ಯರಸ್ತೆಯ ಪಾರಿಜಾತ ಹೊಟೇಲಿನ ಎದುರಿನ ಅಥರ್ವ

ಬೀಚ್ ಫ್ರೆಂಡ್ಸ್ ಹೆಜಮಾಡಿ ವತಿಯಿಂದ ಮಕ್ಕಳ ದಿನಾಚರಣೆ

ಬೀಚ್ ಫ್ರೆಂಡ್ಸ್ (ರಿ) ಹೆಜಮಾಡಿ ಇದರ ವತಿಯಿಂದ ಮಕ್ಕಳ ದಿನಾಚರೆಣೆಯ ಅಂಗವಾಗಿ ಚಿಣ್ಣರ ಕಲರವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಪುಟಾಣಿ ಮಕ್ಕಳು ಅತಿಥಿಗಳ ಸಮ್ಮುಖದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿವೃತ್ತ ಮುಖ್ಯೋಪಧ್ಯಾಯರಾದ ಸಂಜೀವ ಟಿ ಹಾಗೂ ನಿವೃತ್ತ ಅಧ್ಯಾಪಕಿ ಮಾಲತಿ ಟೀಚರ್ ಹಾಗೂ ಪಾಂಡುರಂಗ ಕರ್ಕೇರಾ, ಲೀಲೇಶ್ ಸುವರ್ಣ, ದಿನೇಶ್ ಕೋಟಿಯನ್ ಆಚೆಮಟ್ಟು ಮುಂಬೈ ,ಲೋಕನಾಥ ಗುರಿಕಾರ, ಜಗದೀಶ್ ಕೋಟ್ಯಾನ್ ಇವರು

ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸುವುದು ಅನಿವಾರ್ಯ: ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷ ರವಿ ಶೆಟ್ಟಿ

ದೇಶಕ್ಕಾಗಿ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಕಾರ್ಖನೆಗಳು ಶಾಲೆ, ಶಾಲೆಗಳು ಪಾಠ ಸಹಿತ ಪಠ್ಯೇತರ ಚಟುವಟಿಕೆ ನಡೆಸಿದರೆ, ಅದೇ ಮಕ್ಕಳಿಗೆ ಮನೆಗಳಲ್ಲಿ ನಮ್ಮ ನಮ್ಮ ಧರ್ಮಗಳ ಸಂಸ್ಕಾರ ಕಲಿಸುವ ಅಗತ್ಯತೆ ಇದೆ ಎಂಬುದಾಗಿ ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷ ರವಿ ಶೆಟ್ಟಿ ಹೇಳಿದ್ದಾರೆ. ಅವರು ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣಾ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭ ಮಕ್ಕಳ ದಿನಾಚರಣಾ ಅಂಗವಾಗಿ ಆಯೋಜಿಸಿದ

ವಿಧಾನ ಪರಿಷತ್ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿಯೇ ಸ್ಪರ್ಧೆ: ಎಸ್‍ಸಿಡಿಸಿಸಿ ಬ್ಯಾಂಕ್‍ನ ಅಧ್ಯಕ್ಷ ಡಾ. ಎಂ. ಎನ್ ರಾಜೇಂದ್ರ ಕುಮಾರ್

ವಿಧಾನ ಪರಿಷತ್ ಚುನಾವಣೆಗೆ ಯಾವುದೇ ಪಕ್ಷದಿಂದ ಸ್ಪರ್ಧೆ ಮಾಡುವುದಿಲ್ಲ. ಈ ಬಗ್ಗೆ ನ.17ರೊಳಗೆ ತೀರ್ಮಾನ ತೆಗೆದುಕೊಂಡು, ಒಂದೊಮ್ಮೆ ಸ್ಪರ್ಧಿಸುವುದಾದರೂ ಸ್ವತಂತ್ರ ಅಭ್ಯರ್ಥಿಯಾಗಿಯೇ ಸ್ಪರ್ಧೆ ಮಾಡಲಿದ್ದೇನೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. ಮಂಗಳವಾರ ಡಯಾನಾ ಹೋಟೆಲ್‍ನಲ್ಲಿ ನಡೆದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಂದಾಗ ಒಬ್ಬ ಅಭ್ಯರ್ಥಿಯನ್ನು

ಕಾರ್ಕಳ ಪುರಸಭೆಯಲ್ಲಿ ಹಿಟ್ಲರ್ ಆಡಳಿತ

ಕಾರ್ಕಳ ಪುರಸಭಾಧ್ಯಕ್ಷೆ ಸುಮಾಕೇಶವ್ ರಿಂದ ಸಾಮಾಜಿಕ ತಾರತಮ್ಯ, ಪರಿಶಿಷ್ಟ ಪಂಗಡದವರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಹಾಗೂ ತುಚ್ಚವಾಗಿ ಕಾಣುತ್ತಿದ್ದಾರೆ. ಪರಿಶಿಷ್ಟ ಪಂಗಡದ ಮೀಸಲಾತಿ ನಿಧಿಯನ್ನು ಪರಿಶಿಷ್ಟ ಪಂಗಡದ ಪುರಸಭಾ ಸದಸ್ಯರ ಗಮನಕ್ಕೆ ತರದೆ ಸಾಮಾನ್ಯ ವರ್ಗಗಳ ನಿಧಿಗೆ ವರ್ಗಾಯಿಸಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ಘಟಕದ ಉಪಾಧ್ಯಕ್ಷ ಸೋಮನಾಥ್ ನಾಯ್ಕ್ ಆರೋಪಿಸಿದ್ದಾರೆ. ಅವರು ಕಾರ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ

ಹೆಮ್ಮಾಡಿ ರಿಕ್ಷಾ ಚಾಲಕರಿಂದ ನಟ ಪುನೀತ್‍ಗೆ ಅಶ್ರುತರ್ಪಣ || Puneeth Rajkumar

ಕುಂದಾಪುರ: ನಟ ಪುನೀತ್ ರಾಜಕುಮಾರ್ ಸಮಾಜಕ್ಕೆ ಬಹುದೊಡ್ಡ ಶಕ್ತಿಯನ್ನು ನೀಡಿದವರು. ಏನೂ ಪ್ರಚಾರ ಬಯಸದೆ ಸಮಾಜದ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದ ಅಪರೂಪದ ವ್ಯಕ್ತಿತ್ವದ ಪುನೀತ್ ಪರಿಪೂರ್ಣ ವ್ಯಕ್ತಿತ್ವ ಅನಾವರಣಗೊಂಡದ್ದೆ ಅವರ ಸಾವಿನ ಬಳಿಕ ಎನ್ನುವುದು ದುರಂತ ಎಂದು ಶಿಕ್ಷಕ ಉದಯ್ ಬಳೆಗಾರ್ ಹೇಳಿದರು. ಅವರು ಮಂಗಳವಾರ ಸಂಜೆ ಇಲ್ಲಿನ ಹೆಮ್ಮಾಡಿ ರಿಕ್ಷಾ ನಿಲ್ದಾಣದಲ್ಲಿ ಶ್ರೀ ಲಕ್ಷ್ಮೀನಾರಾಯಣ ರಿಕ್ಷಾ ಚಾಲಕ-ಮಾಲಕರ ಸಂಘದ ವತಿಯಿಂದ, ಇತ್ತೀಚೆಗಷ್ಟೇ ಅಗಲಿದ ನಟ

ಸಿಟಿ ಬಜಾರ್ ಆಲ್ ಇನ್ ವನ್ ಶಾಪಿಂಗ್ ಬಜಾರ್ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರಿಂದ ಉದ್ಘಾಟನೆ

ಬೈಂದೂರಿನ ಶನೀಶ್ವರ ಮಂದಿರದ ಮುಖ್ಯ ರಸ್ತೆಯಲ್ಲಿ ನೂತವಾಗಿ ಇಂತಿಯಾಸ್ ಶಿರೂರು ಹಾಗೂ ಮುಸಾದಿಕ್ ಹಳ್ಗೇರಿ ಮಾಲಕತ್ವದ ಸಿಟಿ ಬಜಾರ್ ಅಲ್ ಇನ್ ಒನ್ ಶಾಪಿಂಗ್ ಬಜಾರ್ ಉದ್ಘಾಟನೆ ಗೊಂಡಿತು.   ಉದ್ಘಾಟನೆಯನ್ನು ಬೈಂದೂರಿನ ಜನಪ್ರಿಯ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು. ಉದ್ಘಾಟನೆ ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಶರತ್ ಶೆಟ್ಟಿ ಉಪ್ಪುಂದ ,ರವೀಂದ್ರ ಶಾನಭಾಗ್ ಹಾಗೂ ಊರ ಪರವೂರ ಗ್ರಾಮಸ್ಥರು ಉಪಸ್ಥಿತರಿದ್ದರು.

ಡೆಹ್ರಾಡೂನ್‌ನಲ್ಲಿ ನಡೆದ ಕರಾಟೆ ಚಾಂಪಿಯನ್ ಶಿಪ್ ಕುಂದಾಪುರದ ಹನೀಶ್ ಕುಮಾರ್‌ಗೆ ಬೆಳ್ಳಿ ಪದಕ

ಪಿಯೊನಿಕ್ಸ್ ಅಕಾಡೆಮಿ ಇಂಡಿಯಾ ಕುಂದಾಪುರದ ಸದಸ್ಯ ಹನೀಶ್ ಕುಮಾರ್ ರವರಿಗೆ ಡೆಹ್ರಾಡೂನ್‌ನಲ್ಲಿ ನಡೆದ ಅಖಿಲ ಭಾರತ ಸಿಯೊಕೊಕೈ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಸೀನಿಯರ್ ಐವತ್ತು ಕೆ.ಜಿ ವಿಭಾಗದಲ್ಲಿ ಬೆಳ್ಳಿ ಹಾಗೂ ಇಪ್ಪತ್ತೊಂದು ವರ್ಷ ಒಳಗಿನ ವಯೋಮಿತಿಯ ವಿಭಾಗದಲ್ಲಿ ಬೆಳ್ಳಿ ಪದಕ ಲಭಿಸಿದೆ. ಅಖಿಲ ಭಾರತ ಸಿಯೊಕೊಕೈ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ಪರವಾಗಿ ಕುಂದಾಪುರದ ಆರು ಮಂದಿ ಕರಾಟೆ ಪಟುಗಳು ಪ್ರತಿನಿಧಿಸಿದ್ದರು. ಹನೀಶ್ ಕುಮಾರ್ ರವರು ಉಪ್ಪುಂದದ

ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟ ಆಸಕ್ತ ಗುಂಪಿನ ರೈತರಿಗೆ ಟರ್ಪಾಲ್ ವಿತರಣೆ

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರವರ್ತಕರಾಗಿ ನಡೆಸುತ್ತಿರುವ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟದಿಂದ ಮೂರು ಆಸಕ್ತ ಗುಂಪಿನ ರೈತರಿಗೆ ಇಪ್ಪತ್ತಮೂರು ಟರ್ಪಾಲ್ ನ್ನು ಒಕ್ಕೂಟದ ಅಧ್ಯಕ್ಷ ರಾದ ಶ್ರೀ ಚಂದ್ರ ಪೂಜಾರಿಯವರು ವಿತರಿಸಿದರು ವಿತರಿಸಿ ಮಾತನಾಡಿದ ಅವರು ಆಕಸ್ಮಿಕ ಮಳೆ ಬರುತ್ತಿರುವ ಕಾರಣ ಭತ್ತ ಕಟಾವಿಗೆ ಸಹಾಯವಾಗಲೆಂದು ಒಕ್ಕೂಟದ ಸದಸ್ಯರಿಗೆ ಉತ್ತಮ ಗುಣಮಟ್ಟದ ಕ್ರಷಿ ಪರಿಕರಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗಿರುತ್ತದೆ

ಗಂಭೀರ ಸ್ಥಿತಿಯಲ್ಲಿರುವ ಎತ್ತಿನ ಆರೈಕೆಯಲ್ಲಿ ಯುವಕರು

ಪಡುಬಿದ್ರಿ ಪೊಲೀಸರ ಕಾರ್ಯಚರಣೆಯಲ್ಲಿ ವಶಪಡಿಸಿಕೊಂಡ ಜಾನುವಾರುಗಳ ಪೈಕಿ ಗಂಭೀರ ಸ್ಥಿತಿಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಎತ್ತು ಒಂದನ್ಬು ಸ್ಥಳೀಯ ಹಿಂದೂ ಸಂಘಟನೆಯ ಯುವಕರು ಆರೈಕೆ ನಡೆಸಿ ಬದುಕಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಕಳೆದರೆಡು ದಿನಗಳಿಂದಲೂ ಕಾಲಿಗೆ ಗಂಭೀರ ಗಾಯಗೊಂಡು ಮಲಗಿದ್ದಲೇ ಇದ್ದ ಎತ್ತನ್ನು ಯುವಕರು ಬಹಳಷ್ಟು ಶ್ರಮ ವಹಿಸಿ ಸ್ಥಳೀಯ ಪಶು ವೈದ್ಯಾಧಿಕಾರಿಗಳ ಸಹಾಯದೊಂದಿಗೆ ಬದುಕಿಸುವ ಎಲ್ಲಾ ಪ್ರಯತ್ನಗಳನ್ನು