ಕುಂದಾಪುರ: ದೇವಸ್ಥಾನದ ರಕ್ಷಣೆಯ ಹೆಸರಲ್ಲಿ ನಾಟಕವಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಇದೀಗ ಹಿಂದೂ ದೇವಾಲಯಗಳನ್ನು ಉರುಳಿಸಲು ಮುಂದಾಗಿದೆ. ಬಿಜೆಪಿ ನಾಯಕರ ಇಂತಹ ಕಪಟ ಹಿಂದೂತ್ವಕ್ಕೆ ರಾಜ್ಯದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ವಾಗ್ದಾಳಿ ನಡೆಸಿದರು. ಅವರು ಮೈಸೂರು ನಂಜನಗೂಡಿನ ಪುರಾತನ ಹಿಂದೂ
ಠಾಣೆಯಲ್ಲಿ ಇದುವರೆಗೆ ಗೋ ಕಳ್ಳತನ, ಗೋ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪಗಳನ್ನು ಹಾಗೂ ದನದ ದಲ್ಲಾಳಿ ಮಾಡುವವರನ್ನು ಮತ್ತು ದನಸಾಗಾಟ ಮಾಡುವ ವಾಹನಚಾಲಕರ ಪರೇಡ್ ನಡೆಸಿದರು. ಇವರುಗಳು ಮುಂದಕ್ಕೆ ಯಾವುದೇ ಗೋ ಕಳ್ಳತನ ಗೋ ಹತ್ಯೆ ಪ್ರಕರಣದಲ್ಲಿ ಬಾಗಿಯಾದ್ರೆ ಕಠಿಣ ಕ್ರಮ ಕೈಗೊಳ್ಳುವುದಾಗಿ, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣು ವರ್ದನ್ ರವರು ಎಚ್ಚರಿಕೆಯನ್ನು ನೀಡಿದ್ದಾರೆ. ಸಭೆಯಲ್ಲಿ ಪೊಲೀಸ್ ಉಪಾದೀಕ್ಷಕರಾದ ಎಸ್ ವಿಜಯಪ್ರಸಾದ್, ಕಾರ್ಕಳ ವೃತ್ತ
ಹಿಂದು ಜಾಗರಣಾ ವೇದಿಕೆ ನಂದಿಕೂರು ಘಟಕದ ಉಡುಪಿಯಲ್ಲಿ ನಡೆಯಲಿರುವ ಭಾರತ ಮಾತಾ ಪೂಜನಾ ಕಾರ್ಯಕ್ರಮ ಮತ್ತು ದುರ್ಗಾ ದೌಡ್ ಪೂರ್ವಭಾವಿಯಾಗಿ ವಿಶೇಷ ಬೈಠಕ್ ಹಿಂದೂ ಜಾಗರಣ ವೇದಿಕೆಯ ಪ್ರಮುಖರಾದ ಪ್ರತೀಕ್ ಕೋಟ್ಯಾನ್ ನವರ ನಂದಿಕೂರಿನ ಮನೆಯಲ್ಲಿ ನಡೆಯಿತು. ಈ ಸಂದರ್ಭ ನಾಗರಾಜ ಭಟ್ ರವರು ಕಾಶಿ,ಅಯೋಧ್ಯೆ ಕ್ಷೇತ್ರ ಸಂದರ್ಶಿಸಿ ತಂದಿದ್ದ ಪವಿತ್ರವಾದ ತೀರ್ಥಪ್ರಸಾದವನ್ನು ಸದಸ್ಯರಿಗೆ ನೀಡಿ ದೀಪ ಬೆಳಗಿಸಿ ಪುಷ್ಪಾರ್ಚನೆಗೈದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನ ಪ್ರಯುಕ್ತ “ಸೇವಾ ಸಮರ್ಪಣ ” ಎಂಬ ಕಾರ್ಯಕ್ರಮದ ಅಂಗವಾಗಿ ಪಡುಬಿದ್ರಿ ಗ್ರಾ.ಪಂ. ಸದಸ್ಯ ಮಹೇಂದ್ರ ಎಂಬವರ ಮನೆಯಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್ ಅಧ್ಯಕ್ಷತೆಯಲ್ಲಿ ಭಾನುವಾರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾಸಕರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ತದನಂತರ ಭಾರತ ಮಾತೆ, ಪಂಡಿತ್ ದೀನ್ ದಯಾಳ್ ,ಶ್ಯಾಮ ಪ್ರಸಾದ ಮುಖರ್ಜಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಕಾಪು ಕ್ಷೇತ್ರದ ಮಾಜಿ ಶಾಸಕ ವಿನಯ ಕುಮಾರ್ ಸೊರಕೆ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂಬ ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕೊಯಿಲಾಡಿ ಸುರೇಶ್ ನಾಯಕ್ ಹೇಳಿಕೆ ಹಾಸ್ಯಸ್ಪದ ಎಂಬುದಾಗಿ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಪೂಜಾರಿ ಹಾಗೂ ಕೆ.ಪಿ.ಸಿ.ಸಿ ಸಂಯೋಜಕ ನವೀನ್‌ಚಂದ್ರ ಜೆ. ಶೆಟ್ಟಿ ತಿಳಿಸಿದ್ದಾರೆ. ಪಡುಬಿದ್ರಿಯ ಖಾಸಗಿ ಸಭಾಂಗಣದಲ್ಲಿ ಜಂಟಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾದ-ವಿವಾದ
ಬೀಚ್ ಫ್ರೆಂಡ್ಸ್,(ರಿ) ಹೆಜಮಾಡಿ ಇದರ ವತಿಯಿಂದ ಮಹಾತ್ಮ ಗಾಂಧಿ ಮತ್ತು ಲಾಲ್ ಬಹುದ್ದೂರು ಶಾಸ್ತ್ರೀ ಯವರ ಜನ್ಮದಿನಾಚರಣೆಯ ಅಂಗವಾಗಿ ಸಂಸ್ಥೆಯ ಅಧ್ಯಕ್ಷ ಶ್ರೀ ಅಮಿತ್ ಕುಮಾರ್ ನೇತ್ರತ್ವದಲ್ಲಿ ಸ್ವಚ್ಚ ಭಾರತ ಅಭಿಯಾನ ನಡೆಯಿತು. ಸರ್ವಸದಸ್ಯರು ಶ್ರೀ ಶನೀಶ್ವರ ಮಂಡಳಿ ಪರಿಸರ ಮತ್ತು ಬೀಚ್ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕುಂದಾಪುರ ತಾಲೂಕು ಗಂಗೊಳ್ಳಿಯಲ್ಲಿ ಗೋವು ಕಳ್ಳತನದ ವಿರುದ್ಧ ಹಿಂದು ಜಾಗರಣಾ ವೇದಿಕೆ ಹಾಗೂ ಹಿಂದು ಪರ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಸಿದರು. ಹಿಂದುಗಳ ಧಾರ್ಮಿಕ ನಂಬಿಕೆಗಳ ಪ್ರಕಾರ ಗೋವು ಆರಾಧ್ಯ ದೇವತೆ ಯಾಗಿದ್ದು ಗೋಮಾತೆ ಎಂದು ಕರೆಯಲ್ಪಡುತ್ತದೆ, ಅಂತಹ ಗೋಮಾತೆಯನ್ನು ಹಿಂಸಾತ್ಮಕವಾಗಿ ಕೊಂದು ಅದನ್ನು ಚಿತ್ರಿಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಹಿಂದುಗಳ ಭಾವನೆಗಳನ್ನು ಕೆರಳಿಸುವ ಕೆಲಸ ನಡೆಯುತ್ತಿದೆ. ಹಲವಾರು ಬಾರಿ ದೂರು ನೀಡಿದರೂ
ದೇವಸ್ಥಾನ ಸಹಿತ ಪ್ರಾರ್ಥನಾ ಮಂದಿಗಳ ದ್ವಂಸ ವಿರೋಧಿ ಕಾಪು ಬ್ಲಾಕ್ ಕಾಂಗ್ರೆಸ್ ಹಾಗೂ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ಪಡುಬಿದ್ರಿ ಬೀಡು ಬಳಿಯಿಂದ ಪಡುಬಿದ್ರಿ ಮುಖ್ಯ ಪೇಟೆಯವರಗೆ ನಡೆದ ಬೃಹತ್ ಪಂಜಿನ ಮೆರವಣಿಗೆಯಲ್ಲಿ ನೂರಾರು ಮಂದಿ ಕಾರ್ಯಕರ್ತರು ಪಾಲ್ಗೊಂಡಿದ್ದು ರಾಜ್ಯದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿದರು. ಬಳಿಕ ಪಡುಬಿದ್ರಿ ಪೇಟೆಯಲ್ಲಿ ಸೇರಿದ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ನ್ಯಾಯವಾದಿ
ಮಂಜೇಶ್ವರ : ಮಂಜೇಶ್ವರ ಗ್ರಾ. ಪಂ. ಬೋರ್ಡ್ ಸಭೆಯಲ್ಲಿ ಬೀಫ್ ಸ್ಟಾಲ್ ಸ್ಥಾಪನೆಗೆ ಆಡಳಿತ ಮಂಡಳಿ ಅಜೆಂಡಾದ ಬಗ್ಗೆ ಚರ್ಚಿಸಿ ಆ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೆ ಇರುವುದರಿಂದ ಘರಂ ಆದ ವಿರೋಧ ಪಕ್ಷದ ಯುಡಿಎಫ್ ಸದಸ್ಯರುಗಳು ಬೀಫ್ ಸ್ಟಾಲ್‍ಗಳನ್ನು ವಿರೋಧಿಸುತ್ತಿರುವುದು ಆರೆಸ್ಸಸ್ ಅಜೆಂಡಾವನ್ನು ಪ್ರಾಬಲ್ಯಕ್ಕೆ ತರುವ ಯತ್ನವಾಗಿರುವುದಾಗಿ ಆರೋಪಿಸಿ ಬೋರ್ಡ್ ಸಭೆಯನ್ನು ತ್ಯಜಿಸಿ ಹೊರ ಬಂದು ಪ್ರತಿಭಟಿಸಿದರು. ಇವರೊಂದಿಗೆ ಎಸ್ ಡಿ ಪಿ ಐ ಹಾಗೂ ಆಡಳಿತರಂಗ
ಕಾರ್ಕಳ ತಾಲೂಕಿನ ಉದ್ಯಮಿ, ಸಾಮಾಜಿಕ ಕಾರ್ಯಕರ್ತರು ಹಾಗೂ ಕಾರ್ಕಳದ ಲತಾ ಮೆಡಿಕಲ್ಸ್‍ನ ಸ್ಥಾಪಕರಾದ ಜಾರ್ಕಳ ಅಜಿತ್ ಹೆಗ್ಡೆ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತರ ಅಂತಿಮ ದರ್ಶನವು ಸೆ.30ರಂದು ಬೆಳಗ್ಗೆ 8.30ರಿಂದ 10ರ ವರೆಗೆ ಕಾರ್ಕಳದ ತೆಳ್ಳಾರ್ ರಸ್ತೆಯಲ್ಲಿರುವ ಸ್ವಗೃಹ ಕಸ್ತೂರಿಯಲ್ಲಿ ನಡೆಯಲಿದೆ. ನಂತರ ಮಧ್ಯಾಹ್ನ 12.30ಕ್ಕೆ ನಿಂಜೂರು ಪಡುಮನೆ ಎಂಬಲ್ಲಿ ಅಂತಿಮ ಸಂಸ್ಕಾರದ ವಿಧಿ ವಿಧಾನಗಳು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.


















