ಕಾರ್ಕಳ: 75ನೇ ಅಮೃತ ಮಹೋತ್ಸವ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಕೋವಿಡ್ ನಿಯಮಾನುಸಾರವಾಗಿ ಬಹಳ ಸರಳವಾಗಿ ಕಾರ್ಕಳದ ಗಾಂಧಿ ಮೈದಾನದಲ್ಲಿ ಆಚರಿಸಲಾಯಿತು. ಕಾರ್ಕಳ ತಾಲೂಕು ತಹಶೀಲ್ದಾರರಾದ ಪ್ರಕಾಶ್ ಮರಬಳ್ಳಿ ಧ್ವಜಾರೋಹಣ ಮಾಡಿ ಮಾತನಾಡಿದರು. ಬ್ರಿಟಿಷರ ದಾಸ್ಯ ಸಂಕೋಲೆಯಿಂದ ಮುಕ್ತಿ ಗೊಂಡ ಭವ್ಯ ಭಾರತವು ನಡೆದು ಬಂದ ದಾರಿ ಹಾಗೂ ಸಾಧನೆ ತುಂಬಾ
ಪಹಣೆ ಪತ್ರದಲ್ಲಿ ಹತ್ತು ಮಂದಿ ಹಕ್ಕುದಾರರಿದ್ದರೂ, ಒರ್ವ ವ್ಯಕ್ತಿ ನೀಡಿದ ಅರ್ಜಿಗೆ ಗ್ರಾ.ಪಂ.ನ ಅಧ್ಯಕ್ಷೆ, ಉಪಾಧ್ಯಕ್ಷೆ ಸಹಿತ ಪಿಡಿಒ ಒಳ ಒಪ್ಪಂದ ನಡೆಸಿ ಅನುಮತಿ ನೀಡುವ ಮೂಲಕ ಅಕ್ರಮ ನಡೆಸಿದ್ದಾರೆ ಎಂಬುದಾಗಿ ಒರ್ವ ಹಕ್ಕುದಾರ ಜಾನ್ ರಿಚಾರ್ಡ್ ತಿಳಿಸಿದ್ದಾರೆ. ಕಾಪು ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖವಾಗಿ ಪಾರ್ಮ್ ನಂಬರ್ ೧೦ ಸಹಿತ ಪೂರಕ ದಾಖಲೆಗಳೇ ಇಲ್ಲದೆ ನೀಡಿದ ಅರ್ಜಿಗೆ ಕಟಪಾಡಿ ಗ್ರಾ.ಪಂ. ಪಿಡಿಒ ಮಮತ ವಿ.
ಕುಂದಾಪುರ: ಇತ್ತೀಚೆಗಷ್ಟೇ ದೋಣಿಯ ಮೂಲಕ ಪರೀಕ್ಷಾ ಕೇಂದ್ರಕ್ಕೆ ಸಾಗಿ ಎಸೆಸ್ಸೆಲ್ಸಿ ಪರೀಕ್ಷೆ ಬರೆದು ರಾಜ್ಯಾದ್ಯಂತ ಸುದ್ದಿಯಾದ ಮರವೆಂತೆಯ ಕುರು ದ್ವೀಪದ ವಿದ್ಯಾರ್ಥಿನಿಯರ ಮನೆಗೆ ಡಿಡಿಪಿಐ ಭೇಟಿ ನೀಡಿ ಶುಭ ಹಾರೈಸಿದ್ದಾರೆ. ಉಡುಪಿ ಡಿಡಿಪಿಐ ಎನ್ ಎಚ್ ನಾಗೂರ ಹಾಗೂ ಶಿಕ್ಷಣಾ ಇಲಾಖೆಯ ಅಧಿಕಾರಿಗಳು ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದ್ಚಿತೀಯ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿನಿ ಸಂಜನಾ ಮತ್ತು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣಳಾದ ಶಿಲ್ಪಾ ಅವರನ್ನು
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ ಬಸವರಾಜ್ ಬೊಮ್ಮಾಯಿ ಅವರನ್ನು ಜಿಲ್ಲೆಯ ಗಡಿಭಾಗದ ಹೆಜಮಾಡಿಯಲ್ಲಿ ಸಾಂಪ್ರದಾಯಿಕವಾಗಿ ಮಹಿಳೆಯರು ಆರತಿ ಎತ್ತಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಭದ್ರತೆಯ ದೃಷ್ಠಿಯಿಂದ ಉಡುಪಿ ಜಿಲ್ಲಾ ಗಡಿಭಾಗ ಹೆಜಮಾಡಿ ಟೋಲ್ ಗೇಟ್ ಬಳಿಯ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಪೆÇಲೀಸರು ಮುಚ್ಚಿಸಿದ್ದರು. ಮುಖ್ಯಮಂತ್ರಿಗಳಿಗೆ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಸಹಿತ ಉನ್ನತ ಪೆÇಲೀಸ್
ಬಹುನಿರೀಕ್ಷಿತ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಉಡುಪಿ ಜಿಲ್ಲೆಯ ನಾಲ್ಕು ವಿದ್ಯಾರ್ಥಿಗಳಿಗೆ 625ರಲ್ಲಿ 625 ಅಂಕ ಸಿಕ್ಕಿದೆ. ಸಾಂಕ್ರಾಮಿಕ ಕೊರೋನಾದ ಹಿನ್ನೆಲೆಯಲ್ಲಿ ಈ ಬಾರಿ ಹಲವಾರು ಸವಾಲುಗಳ ನಡುವೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಎರಡು ದಿನ ಒಟ್ಟು 6 ಪರೀಕ್ಷೆಗಳು ನಡೆದಿತ್ತು. ನಾಲ್ವರು ವಿದ್ಯಾರ್ಥಿಗಳು ಪೋಷಕರ ಬೆಂಬಲ ಮತ್ತು ಶಿಕ್ಷಕರ ಪರಿಶ್ರಮದಿಂದ ಈ ಸಾಧನೆ ಸಾಧ್ಯ ಆಗಿದೆ ಎಂದು ನಾಲ್ಕು ವಿದ್ಯಾರ್ಥಿಗಳು ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66 ಕಟಪಾಡಿ ಮೂಡಬೆಟ್ಟು ಕಂಬಳ ದ ಬಳಿ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ ಘಟನೆ ಆದಿತ್ಯವಾರ ನಡೆದಿದೆ. ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಹೆದ್ದಾರಿ ಪಕ್ಕದ ವಿದ್ಯುತ್ ಕಂಬಕ್ಕೆ ಗುದ್ದಿದೆ. ಈ ಪರಿಣಾಮವಾಗಿ ವಿದ್ಯುತ್ ಕಂಬಗಳು ತುಂಡಾಗಿ ಉರುಳಿ ಬಿದ್ದಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಾಪು ಪೊಲೀಸರು
ಬೈಂದೂರು ತಾಲೂಕು ಮರವಂತೆ ಮಹಾರಾಜ ವರಾಹ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ನಡೆಯುವ ಕರ್ಕಾಟಕ ಅಮಾವಾಸ್ಯೆ ಜಾತ್ರಾ ಮಹೋತ್ಸವವು ಜಿಲ್ಲಾಡಳಿತ ಹೇರಿರುವ ಕೋವಿಡ್ ನಿರ್ಬಂಧನುಸಾರ ಜಾತ್ರೆಗೆ ಅವಕಾಶ ನೀಡದೆ ಸ್ಥಳೀಯರಿಗಷ್ಟೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ದೇವಸ್ಥಾನದಲ್ಲಿ ನಡೆಯುವ ಪೂಜೆಗೆ ಬರುವ ಭಕ್ತಾದಿಗಳನ್ನು ಸರತಿ ಸಾಲಿನಲ್ಲಿ, ಅಂತರ ಕಾಯ್ದುಕೊಂಡು ಸ್ಯಾನಿಟೈಸ್ ಮಾಡಿ ದೇಗುಲದ ಪ್ರವೇಶಕ್ಕೆ ಅನುವು ಮಾಡಿಕೊಡಲಾಯಿತು. ದೇವಸ್ಥಾನದಲ್ಲಿ
ಉಡುಪಿಯ ಮಲಬಾರ್ ಗೋಲ್ಡ್ & ಡೈಮಂಡ್ಸ್, ಮಲಬಾರ್ ಚಾರಿಟೇಬಲ್ ಟ್ರಸ್ಟ್ ಮೂಲಕ ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಾದ್ಯಂತ ರೇಷನ್ ಕಿಟ್, ಔಷಧ ವಿತರಣೆ ಮಾಡಿ ಬಡವರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಅವರ ಮಹಾನ್ ಕಾರ್ಯವನ್ನು ಪರಿಗಣಿಸಿ ಉಡುಪಿ ಜಿಲ್ಲಾ ಜೆಡಿಎಸ್ ವತಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಸುಮಾರು ೫ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ರೇಷನ್ ಕಿಟ್ ನೀಡಿರುವುದಲ್ಲದೆ
ರಾಜ್ಯದ ನೂತನ ಸಚಿವರಾಗಿ ಆಯ್ಕೆಗೊಂಡಿರುವ ಕಾರ್ಕಳ ಕ್ಷೇತ್ರದ ವಿ.ಸುನೀಲ್ ಕುಮಾರ್ ರವರನ್ನು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆರವರು ಹೂಗುಚ್ಛ ನೀಡಿ ಅಭಿನಂದಿಸಿದರು. ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಿ ಎಂದು ಶುಭ ಹಾರೈಸಿದರು.
ಉಡುಪಿ : ಶೈಕ್ಷಣಿಕ ಸಂಶೋಧನೆಯಲ್ಲಿ ಸಂಶೋಧಕನ ನೈತಿಕತೆ ಅತಿ ಮುಖ್ಯವಾಗುತ್ತದೆ. ಇದು ಸಂಶೋಧನೆಯಲ್ಲಿ ಸತ್ಯಶೋಧನೆಗೆ ದಾರಿಯಾಗುತ್ತದೆ. ಸಂಶೋಧಕನಲ್ಲಿ ಕರ್ತವ್ಯ ನಿಷ್ಠೆ ಇದ್ದಲ್ಲಿ ಕ್ಷೇತ್ರಕಾರ್ಯದ ಮೂಲಕ ಅಧ್ಯಯನ ಮಾಡಿ ಬೆಳಕಿಗೆ ಬಂದ ವಿಚಾರವನ್ನು ನಿರ್ಭೀತಿಯಿಂದ ಪ್ರಸ್ತುತಪಡಿಸಲು ಸಾಧ್ಯವಾಗುತ್ತದೆ. ಒಳ್ಳೆಯ ಸಂಶೋಧನಾ ವರದಿಯು ಸರಕಾರಕ್ಕೆ ಮುಂದಿನ ಯೋಜನೆಗಳನ್ನು ರೂಪಿಸಲು ದಾರಿದೀಪವಾಗುತ್ತದೆ ಎಂದು ಖ್ಯಾತ ಸಮಾಜಶಾಸ್ತ್ರಜ್ಞ, ನಿವೃತ್ತ ಪ್ರಾಂಶುಪಾಲ ಡಾ.


















