Home ಕರಾವಳಿ Archive by category ಉಡುಪಿ (Page 164)

ಪ್ರಮಾಣ ವಚನ ಸ್ವೀಕಾರವನ್ನು ಟಿವಿಯಲ್ಲಿಯೇ ನೋಡಿ ಸಂಭ್ರಮಿಸಿದ ಕೋಟ ಕುಟುಂಬಿಕರು

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿ ಸ್ಥಾನ ಪಡೆದುಕೊಂಡ ಕೋಟ ಶ್ರೀನಿವಾಸ ಪೂಜಾರಿಯವರ ಹುಟ್ಟೂರಾದ ಕೋಟದ ಮನೆಯಲ್ಲಿ ಕುಟುಂಬಿಕರು ಸರಳವಾಗಿ ಸಂಭ್ರಮಿಸಿದರು. ಶ್ರೀನಿವಾಸ ಪೂಜಾರಿಯವರ ಸಚಿವರಾಗುವ ಪ್ರಮಾಣವಚನಕ್ಕೆ ಬೆಂಗಳೂರಿಗೆ ತೆರಳಿದ್ದರೂ ಕೂಡ ಪತ್ನಿ ಶಾಂತಾ ಅವರು ಮನೆಯಲ್ಲಿ ತಮ್ಮ ದೈನಂದಿನ ಕೆಲಸದಲ್ಲಿಯೇ ಮಗ್ನರಾಗಿದ್ದರು. ಕಾರ್ಯಕರ್ತರ

ಭಾಷಾ ಬಾಂಧವ್ಯದಿಂದ ಸೌಹಾರ್ದತೆ ಸಾಧ್ಯ – ಡಾ. ತಮಿಳ್ ಸೆಲ್ವಿ

ನಾವು ನಮ್ಮದಲ್ಲದ ಭಾಷೆ ಮತ್ತು ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡರೆ ಆ ಭಾಷೆ ಬಗ್ಗೆ ಅರಿವು ಹೆಚ್ಚಾಗಿ ಸೌಹಾರ್ದತೆ ಸಾಧ್ಯವಾಗುತ್ತದೆ. ತಮಿಳು-ಕನ್ನಡದ ದೃಷ್ಟಿಯಿಂದ ಇದು ಅತೀ ಮುಖ್ಯ. ಇದರಿಂದ ರಾಜ್ಯಗಳ ನಡುವಿನ ಹಲವು ಸಮಸ್ಯೆಗಳು ಪರಿಹಾರ ಕಾಣಬಹುದು ಎಂದು ಖ್ಯಾತ ಭಾಷಾ ವಿದ್ವಾಂಸರು ಮತ್ತು ಮದ್ರಾಸ್ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ.ತಮಿಳ್ ಸೆಲ್ವಿ ಹೇಳಿದ್ದಾರೆ. ತೆಂಕನಿಡಿಯೂರಿನ ಸರಕಾರಿಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ

ನಾಪತ್ತೆಯಾಗಿದ್ದ ಲೆಕ್ಕಪರಿಶೋಧಕ ಬಾವಿಯಲ್ಲಿ ಶವವಾಗಿ ಪತ್ತೆ

ಉಡುಪಿ: ಕೆಲವು ದಿನಗಳಿಂದ ಮನೆಯಿಂದ ನಾಪತ್ತೆಯಾಗಿದ್ದ, ಲೆಕ್ಕಪರಿಶೋಧಕನ ಶವವು, ಮನೆಯ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ಅಗ್ನಿಶಾಮಕ ದಳದ ಸಹಾಯದಿಂದ ಕಳೇಬರವನ್ನು ಮೇಲೆತ್ತಲಾಗಿದೆ. ವ್ಯಕ್ತಿ ಮೃತಪಟ್ಟು ಒಂದು ವಾರ ಕಳೆದಿರಬಹುದೆಂದು ಹೇಳಲಾಗುತ್ತಿದೆ. ಕಳೇಬರವನ್ನು ವೈದ್ಯಕೀಯ ಪರೀಕ್ಷೆಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು, ಉಚಿತ ಅಂಬುಲೇನ್ಸ್ ಸೇವೆಯನ್ನು ಒದಗಿಸಿ ಇಲಾಖೆಗೆ ನೆರವಾದರು.

ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ದನಗಳಿಗೆ ವಿಚಿತ್ರ ಖಾಯಿಲೆ: ಆತಂಕದಲ್ಲಿ ಸ್ಥಳೀಯರು

ಜನವಿರೋಧಿಯಾಗಿ ಕಾರ್ಯಾಚರಿಸುತ್ತಿರುವ ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ತಲೆ ಎತ್ತಿದ ಯುಪಿಸಿಎಲ್ ಕಂಪನಿಯ ಸುತ್ತಲ ಪ್ರದೇಶದಲ್ಲಿ ದನಗಳಿಗೆ ವಿಚಿತ್ರ ಖಾಯಿಲೆ ಕಾಣಿಸಿಕೊಂಡು ಬಹಳಷ್ಟು ದನಗಳು ಮರಣ ಹೊಂದುತ್ತಿದ್ದು ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದರೂ ಯಾವುದೇ ವರದಿ ನೀಡುತ್ತಿಲ್ಲ ಎಂಬುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಎಲ್ಲೂರು ಗ್ರಾಮದ ತಜೆ ನಿವಾಸಿ ಹೈನುಗಾರಿಕೆಯನ್ನೇ ಜೀವನಾಧಾರವಾಗಿ ನಡೆಸಿಕೊಂಡು ಬಂದು ಇದೀಗ ಹತ್ತಕ್ಕೂ ಅಧಿಕ

ಯುಪಿಸಿಎಲ್ ಪ್ರದೇಶಕ್ಕೆ ಪರಿಸರ ಅಧಿಕಾರಿಗಳ ತಂಡ ಭೇಟಿ: ರಾಸಾಯನಿಕ ನೀರು ಬಿಡುತ್ತಿರುವ ವಿರುದ್ಧ ಆಕ್ರೋಶ

ಕೃಷಿಕರ ಜೀವನಾಡಿ ನೀರಿನ ಮೂಲಕ್ಕೆ ಯುಪಿಸಿಎಲ್ ಕಂಪನಿ ಗುಪ್ತವಾಗಿ ರಾಸಾಯನಿಕ ನೀರು ಬಿಡುತ್ತಿರುವ ಬಗ್ಗೆ ಸ್ಥಳೀಯ ಮಳೆಯೊರ್ವರು ಆರೋಪಿಸಿದ ಮೇರೆಗೆ ಉಡುಪಿ ಪರಿಸರ ಅಧಿಕಾರಿಗಳ ತಂಡ ಪರಿಶೀಲಿಸಿ ಬಾವಿ, ತೊರೆ ಸಹಿತ ಇತರೆ ನೀರಿನ ಮೂಲಗಳಿಂದ ನೀರು ಸಂಗ್ರಹಿಸಿ ಪ್ರಯೋಗಲಯಕ್ಕೆ ಪರೀಕ್ಷೆಗಾಗಿ ರವಾನಿಸಿದ್ದಾರೆ. ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ಳೂರಿನ ಕೃಷಿಕ ಕರಿಯಶೆಟ್ಟಿ ಎಂಬವರ ಮನೆಯ ಸುತ್ತಮುತ್ತಲ ಹತ್ತಾರು ಮನೆಗಳಿದ್ದು ಎಲ್ಲರೂ ಕೃಷಿಯನ್ನೇ ನಂಬಿ ಜೀವನ

ಹೊಸ ಕಾರು ಖರೀದಿಯಲ್ಲಿ ವೈಷಮ್ಯ: ಕುತ್ತಿಗೆ ಕೊಯ್ದು ಫೈನಾನ್ಶಿಯರ್ ಬರ್ಬರ ಹತ್ಯೆ

ಕುಂದಾಪುರ: ಕೋಟೇಶ್ವರದ ಕಾಳಾವರ ಸಮೀಪದಲ್ಲಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಯುವಕನೋರ್ವನ ಕುತ್ತಿಗೆ ಕೊಯ್ದು ಭೀಕರವಾಗಿ ಹತ್ಯೆಗೈದಿದ್ದು, ಹತ್ಯೆಗೆ ಹಣಕಾಸಿನ ವ್ಯವಹಾರ ಹಾಗೂ ಹೊಸ ಕಾರು ಖರೀದಿ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತಾಲೂಕಿನ ಯಡಾಡಿ ಮತ್ಯಾಡಿ ಕೂಡಾಲು ನಿವಾಸಿ ಅಜೇಂದ್ರ ಶೆಟ್ಟಿ (33) ಕೊಲೆಯಾದ ಯುವಕ. ಮೇಲ್ನೋಟಕ್ಕೆ ಹಣಕಾಸಿನ ವಿಚಾರದಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದ್ದು, ಫೈನಾನ್ಸ್ ಪಾಲುದಾರ ಅನೂಪ್ ಮೇಲೆ ಅನುಮಾನ

ಕತ್ತು ಕೊಯ್ದು ಯುವ ಉದ್ಯಮಿಯ ಬರ್ಬರ ಹತ್ಯೆ

ಕುಂದಾಪುರ: ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಕಾಳಾವರದಲ್ಲಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ ಉದ್ಯಮಿಯೋರ್ವರನ ಕುತ್ತಿಗೆ ಕತ್ತರಿಸಿ ಭೀಕರವಾಗಿ ಹತ್ಯೆಗೈದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ. ತಾಲೂಕಿನ ಯಡಾಡಿ ಮತ್ಯಾಡಿ ಕೂಡಲ್ ನಿವಾಸಿ ಅಜೇಂದ್ರ ಶೆಟ್ಟಿ (33) ಕೊಲೆಯಾದ ಉದ್ಯಮಿ. ಮೇಲ್ನೋಟಕ್ಕೆ ಹಣಕಾಸು ವಿಚಾರದಲ್ಲಿ ಈ ಕೊಲೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಅಜೇಂದ್ರ ಅವರು ಕಳೆದ ಕೆಲ ವರ್ಷಗಳಿಂದ ಅಸೋಡು-ಕಾಳಾವರ ಎಂಬಲ್ಲಿ ಸ್ನೇಹಿತ ಅನೂಪ್

ಯುಪಿಸಿಎಲ್‌ ನಿಂದ ಮತ್ತೆ ಪರಿಸರಕ್ಕೆ ಉಪ್ಪು ಮಿಶ್ರಿತ ರಾಸಾಯನಿಕ ನೀರು

ಕಾಪು ತಾಲೂಕಿನ ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಜನವಿರೋಧಿಯಾಗಿ ಕಾರ್ಯಚರಿಸುತ್ತಿರುವ ಯುಪಿಸಿಎಲ್ ಕಂಪನಿಯಿಂದ ಸ್ಥಳೀಯರಿಗೆ ನಿರಂತರವಾಗಿ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆ ಉದ್ಬವವಾಗುತ್ತಿದೆ. ಇದೀಗ ಮತ್ತೆ ಇಂದು ಸಮದ್ರಕ್ಕೆ ಸಂಪರ್ಕ ಕಲ್ಪಿಸಲಾಗಿದ್ದ ಪೈಪ್ ಲೈನ್ ನ ಗೇಟ್ ವಾಲ್ ಭಾಗದಲ್ಲಿ ಉಪ್ಪು ಮಿಶ್ರಿತ ರಾಸಾಯನಿಕ ನೀರು ಹೊರ ಚುಮ್ಮಿದ್ದು, ಆ ನೀರು ತೆಂಕ ಗ್ರಾ.ಪಂ. ವ್ಯಾಪ್ತಿಯ ಬಹುತೇಕ ಕುಡಿಯುವ ನೀರಿನ ಬಾವಿ ಪ್ರದೇಶದಲ್ಲಿ ಇಂಗಿದ ಪರಿಣಾಮ ಈ ಭಾಗದ

ಕುಂದಾಪುರದ ನೆರೆಪೀಡಿತ ಪ್ರದೇಶಗಳಿಗೆ ದೋಣಿ ವ್ಯವಸ್ಥೆ..!

ಕುಂದಾಪುರದ ಬೈಂದೂರು ತಾಲೂಕು ನೆರೆ ಪೀಡಿತ ಪ್ರದೇಶಗಳಾದ ನಾಡ, ಮರವಂತೆ, ಬಡಾಕೆರೆ ಮತ್ತು ಹೇರೂರು ಗ್ರಾಮ ಪಂಚಾಯಿತಿಗಳಿಗೆ ದೋಣಿಯನ್ನು ಜಿಲ್ಲಾಡಳಿತದಿಂದ ಹಸ್ತಾಂತರಿಸಿದ್ರು. ಕುಂದಾಪುರದ ಬೈಂದೂರು ತಾಲೂಕಿನ ಪ್ರದೇಶದಲ್ಲಿ  5 ಕಡೆಗಳಲ್ಲಿ ಪ್ರಾಕೃತಿವಿಕೋಪದಿಂದ ಸಾಕಷ್ಟು ತೊಂದರೆ ಆಗಿದ್ದು, ಅಲ್ಲಿನ ಸಮಸ್ಯೆಗಳ ಕುರಿತು ವಿ೪ನ್ಯೂಸ್ ವಿಸ್ಕೃತವಾಗಿ ವರದಿ ಮಾಡಿತ್ತು. ಈ ವರದಿಗೆ ಎಚ್ಚೆತ್ತುಕೊಂಡು, ನೆರೆ ಪೀಡಿತ ಪ್ರದೇಶಗಳಾದ ನಾಡ, ಮರವಂತೆ, ಬಡಾಕೆರೆ ಮತ್ತು

ಸೈಕಲ್‌ಗೆ ಢಿಕ್ಕಿಯಾದ ಕಾರು: ಸೈಕಲ್ ಸವಾರ ಸಾವು

ಕುಂದಾಪುರ: ಸೈಕಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಕಾರೊಂದು ಢಿಕ್ಕಿಯಾದ ಪರಿಣಾಮ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡು ಸಾವನ್ನಪ್ಪಿದ ದಾರುಣ ಘಟನೆ ಇಲ್ಲಿನ ಹೆಮ್ಮಾಡಿ ಸಮೀಪದ ಜಾಲಾಡಿಯಲ್ಲಿ ನಡೆದಿದೆ. ಹೆಮ್ಮಾಡಿಯ ಸಂತೋಷನಗರ ನಿವಾಸಿ ರಾಮ ಕುಲಾಲ್(60) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ.ರಾಮ ಕುಲಾಲ್ ಅವರು ಹೆಮ್ಮಾಡಿಯಿಂದ ತಮ್ಮ ಸೈಕಲ್ ನಲ್ಲಿ ತಲ್ಲೂರಿಗೆ ತೆರಳುತ್ತಿರುವ ಹೊತ್ತಿಗೆ ಈ ಅಪಘಾತ ನಡೆದಿದೆ. ಸೈಕಲ್ ಡಿವೈಡರ್