Home ಕರಾವಳಿ Archive by category ಉಡುಪಿ (Page 97)

ಸರ್ಕಾರದ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸಬೇಕು : ಉದಯ ಶೆಟ್ಟಿ ಮುನಿಯಾಲು

ಸರ್ಕಾರದ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸುವ ಕಾರ್ಯ ನಾವು ಮಾಡಬೇಕಾಗಿದೆ. ಎಂದು ಉದಯ ಶೆಟ್ಟಿ ಮುನಿಯಾಲು ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದ ದೊರೆತ ಹಿನ್ನೆಲೆಯಲ್ಲಿ ಕಾರ್ಕಳದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಮುಂಬರುವ ತಾಲೂಕ್ ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗೆ ನಾವು ಇಂದಿನಿಂದಲೇ ಸಿದ್ಧತೆ

ಅಕ್ರಮ ಮರಳು ಗಣಿಗಾರಿಕೆ ತಡೆಯಲು ಕಾರ್ಯಪ್ರವೃತ್ತರಾಗಿ : ತಹಶೀಲ್ದಾರ್ ರವಿ ಎಸ್ ಅಂಗಡಿ

ಉಡುಪಿ : ಉಡುಪಿ ತಾಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ತಕ್ಷಣವೇ ಅಧಿಕಾರಿಗಳು ಕಾರ್ಯಪ್ರವೃತರಾಗಿ ಮರಳು ಸಾಗಾಣಿಕೆಯನ್ನು ತಡೆಯಲು ಕ್ರಮಕೈಗೊಳ್ಳುವಂತೆ ಉಡುಪಿ ತಾಲೂಕು ತಹಶೀಲ್ದಾರ್ ರವಿ ಎಸ್ ಅಂಗಡಿ ಹೇಳಿದರು.ಅವರು ಶುಕ್ರವಾರ ಉಡುಪಿ ತಾಲೂಕು ಕಚೇರಿಯಲ್ಲಿ ಉಡುಪಿ ತಾಲೂಕು ಮರಳು ಉಪಖನಿಜ ಅಕ್ರಮ ಸಾಗಾಣಿಕೆ, ದಾಸ್ತಾನು ವಿಷಯಗಳ ಕುರಿತು ಟಾಸ್ಕ್ಫೋರ್ಸ್ ಸಮಿತಿ ಸದಸ್ಯರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ

ಅನಧಿಕೃತ ಮರಳು ದಕ್ಕೆಯಲ್ಲಿದ್ದ 5 ಲಾರಿಗಳು ವಶ

ಉಡುಪಿ : ಕುಂದಾಪುರ ತಾಲೂಕು ವಂಡ್ಸೆ ಹೋಬಳಿಯ ಹಟ್ಟಿಯಂಗಡಿ ಹಾಗೂ ಹೆಮ್ಮಾಡಿ ಪರಿಸರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಅವರು ಕಾರ್ಯಾಚರಣೆ ನಡೆಸಿ 5 ಟಿಪ್ಪರ್ ಲಾರಿಗಳನ್ನು ವಶ ಪಡಿಸಿಕೊಂಡಿದ್ದಾರೆ.ಹಟ್ಟಿಯಂಗಡಿ ಗ್ರಾಮದ ಹಟ್ಟಿಕುದ್ರು ಹಾಗೂ ಹೆಮ್ಮಾಡಿ ಗ್ರಾಮದ ಕನ್ನಡಕುದ್ರು ಎಂಬಲ್ಲಿ ಪಂಚಗಂಗವಲ್ಲಿ ನದಿಯಿಂದ ಅನಧಿಕೃತವಾಗಿ ಮರಳುಗಾರಿಕೆ ನಡೆಸಿ, ಸಾಗಾಟ

ಉಡುಪಿ: ಮಾಜಿ ಶಾಸಕ ಯು.ಆರ್ ಸಭಾಪತಿ ನಿಧನ

ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಯು.ಆರ್. ಸಭಾಪತಿ ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ನಿಧನರಾದರು. 1987ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪರಿಷತ್ ನ ಉದ್ಯಾವರ ಕ್ಷೇತ್ರದ ಸದಸ್ಯರಾಗಿದ್ದ ಇವರು, ಪರಿಷತ್ ನ ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಅದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ವಿಭಾಗದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 1989ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉಡುಪಿ ಕ್ಷೇತ್ರದಿಂದ ಟಿಕೆಟ್

ಕಾಪು : ಬಿಜೆಪಿಯಿಂದ ರೋಡ್ ಶೋ

ಕಾಪು ಕ್ಷೇತ್ರವನ್ನು ಗೆದ್ದು ಬೀಗಿದ ಭಾರತೀಯ ಜನತಾ ಪಾರ್ಟಿಯ ನೂರಾರು ಕಾರ್ಯಕರ್ತರು ಹಾಲಿ ಹಾಗೂ ಮಾಜಿ ಶಾಸಕರನ್ನು ಸೇರಿಕೊಂಡು ಕ್ಷೇತ್ರದ್ಯಾಂತ ರೋಡ್ ಶೋ ನಡೆಸುವ ಮೂಲಕ ವಿಜಯೋತ್ಸವ ಆಚರಿಸಿದ್ದಾರೆ.ಹಾಲಿ ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಹಾಗೂ ಮಾಜಿ ಶಾಸಕ ಲಾಲಾಜಿ ಆರ್, ಮೆಂಡನ್ ಉಪಸ್ಥಿತಿಯಲ್ಲಿ ಪಡುಕರೆಯಿಂದ ಚಾಲನೆಗೊಂಡ ರೋಡ್ ಶೋ ಉದ್ಯಾವರ, ಕಟಪಾಡಿ, ಶಿರ್ವ, ಮುದರಂಗಡಿ, ಅಡ್ವೆ, ಪಲಿಮಾರು, ನಂದಿಕೂರು, ಪಡುಬಿದ್ರಿ, ಹೆಜಮಾಡಿ, ಎರ್ಮಾಳು, ಅದಮಾರು, ಕಾಪು

ಕಾಪುವಿನಲ್ಲಿ ಎಲ್‍ಇಡಿ ಸ್ಕ್ರೀನ್‍ನಲ್ಲಿ ಪ್ರಮಾಣ ವಚನದ ನೇರಪ್ರಸಾರ

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕಾರ ಮಾಡಿರುವ ದೃಶ್ಯವನ್ನು ಕಾಪು ಕಾಂಗ್ರೆಸ್ ಎಲ್‍ಇಡಿ ಸ್ಕ್ರೀನ್ ಮೂಲಕ ಕಾಪು ಪೇಟೆಯಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಟ್ಟು ಸಂಭ್ರಮಾಚರಣೆ ನಡೆಸಿದ್ದಾರೆ.ಸಿದ್ಧರಾಮಯ್ಯ ಹಾಗೂ ಅವರ ತಂಡ ಪ್ರಮಾಣವಚನ ಸ್ವೀಕರಿಸುತ್ತಿದಂತೆ ಕಾಂಗ್ರೆಸ್ ಕಾರ್ಯಕರ್ತರು ಸುಡುಮದ್ದು ಸಿಡಿಸಿ…ಸಾರ್ವಜನಿಕರಿಗೆ ಸಿಹಿ ಹಂಚಿ ಸಿದ್ದರಾಮಯ್ಯ ಹಾಗೂ ವಿನಯ ಕುಮಾರ್ ಸೊರಕೆ ಪರ ಘೋಷಣೆಯನ್ನು ಕೂಗಿ

ಪಡುಬಿದ್ರಿ : ವಿದ್ಯುತ್ ಟ್ರಾನ್ಸ್ ಪಾರ್ಮಾರ್ ಧರೆಗುರುಳಿ ಅನಾಹುತ

ಬೀಸಿದ ಬಾರೀ ಗಾಳಿಗೆ ಪಡುಬಿದ್ರಿ ಬೇಂಗ್ರೆಯಲ್ಲಿ ಮರವೊಂದು ವಿದ್ಯುತ್ ಕಂಬವೊಂದಕ್ಕೆ ಬಿದ್ದ ಪರಿಣಾಮ ಸುಮಾರು ಹತ್ತು ವಿದ್ಯುತ್ ಕಂಬಗಳು ಸಹಿತ ಒಂದು ವಿದ್ಯುತ್ ಟ್ರಾನ್ಸ್ ಪಾರ್ಮಾರ್ ಧರೆಗುರುಳಿ ಆರು ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.ಬೇಂಗ್ರೆಯ ಪ್ರಮುಖ ರಸ್ತೆಯಲ್ಲಿ ಈ ದುರಂತ ಸಂಭವಿಸಿದ್ದು, ಆ ವೇಳೆಯಲ್ಲಿ ಯಾವುದೇ ವಾಹನಗಳಾಗಲೀ ಸಾರ್ವಜನಿಕ ಸಂಚಾರವಾಗಲಿ ಇಲ್ಲದ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ, ವಿಷಯ ತಿಳಿದ ತಕ್ಷಣ

ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ – ಕಾರ್ಕಳದಲ್ಲಿ ಸಂಭ್ರಮಾಚರಣೆ

ಸಿದ್ದರಾಮಯ್ಯ ಅವರು ಸಿಎಂ ಅಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಕಾರ್ಕಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ಆಚರಿಸಿದರು. ಕಾರ್ಕಳ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಕಾಂಗ್ರೆಸ್ ಪರ ಘೋಷಣೆ ಕೂಗಿ ಸಂಭ್ರಮವನ್ನು ಆಚರಿಸಿದರು.

ಪಂಜರು ಕೃಷಿಯಲ್ಲಿ ಸಾಧನೆಗೈದ ಉಪ್ಪುಂದ ಕರ್ಕಿಕಳಿ ಯುವ ಸಮುದಾಯ

ಮುಕ್ತ ಸಮಾಜದಲ್ಲಿ ದುಡಿದು ತಿನ್ನುವ ಹಂಬಲವಿದ್ದರೆ, ಕಾಯಕಕ್ಕೇನು ಕೊರತೆ ಇಲ್ಲಾ ಎನ್ನುವುದನ್ನು ನಮ್ಮ ಕರಾವಳಿಯ ಯುವ ಸಮುದಾಯ ಸಾಬೀತು ಪಡಿಸಿದೆ. ಕರಾವಳಿ ಭಾಗದಲ್ಲಿ ಮೀನುಗಾರಿಕೆಗೆ ಪ್ರಮುಖ ಕಸುಬು ಎಂದರೆ ತಪ್ಪಾಗಲಾರದೇನು, ಅದರಿಂದಲೇ ಎಸ್ಟೋ ಜನ ಯಶಸ್ಸು ಕಂಡವರಿದ್ದಾರೆ. ಅಂತೆಯೇ ಇದೀಗ ಹೊಸ ಪ್ರಯೋಗವೆಂಬಂತೆ ಪಂಜರು ಕೃಷಿಯನ್ನು ಆರಂಭಿಸಿ, ಅದರಿಂದ ಯಶಸ್ಸು ಗಳಿಸಿದ ಯುವ ಸಮೂಹ ಸಮಾಜಕ್ಕೇ ಹೊಸ ಉದ್ಯಮದ ಭರವಸೆ ನೀಡಿದೆ. ಬೈಂದೂರು ತಾಲೂಕಿನ ಉಪ್ಪುಂದ ಉಪ್ಪುಂದ

ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ – ಭಾಗವತ ಸಪ್ತಾಹಕ್ಕೆ ಚಾಲನೆ

ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣಕ್ಕಾಗಿ ಅರ್ಚಕರಾದ ಮಧ್ವರಾಜ ಭಟ್ ಇವರು ವಿಶ್ವಹಿಂದೂ ಪರಿಷತ್ ಪಡುಬೆಳ್ಳೆ ಘಟಕದವರೊಂದಿಗೆ ಆಯೋಜಿಸಿರುವ ಭಾಗವತ ಸಪ್ತಾಹ ಕಾರ್ಯಕ್ರಮ ನಡೆಯಿತು. ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಭಾಗವತ ಪುರಾಣದಲ್ಲಿ ಬರುವ ವಿಷಯಗಳನ್ನು ನಮ್ಮಲ್ಲಿ ಅಳವಡಿಸಿ ಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಇದರಲ್ಲಿ ದೇವರ ಚಿಂತನೆಗಳೊಂದಿಗೆ ಜೀವನ ಮೌಲ್ಯಗಳನ್ನು ತಿಳಿಸುವ