Home ಕರಾವಳಿ Archive by category ಮಂಗಳೂರು (Page 146)

ಬಿಜೆಪಿ ಕಾರ್ಪೋರೇಟರ್ ಗೆ ಕೊಲೆ ಬೆದರಿಕೆ!

ಸುರತ್ಕಲ್: ಇಲ್ಲಿನ ಕಾಟಿಪಳ್ಳ 3ನೇ ಬ್ಲಾಕ್ ನಲ್ಲಿ ಬಿಜೆಪಿ ಕಾರ್ಪೋರೇಟರ್ ಒಬ್ಬರ ಮೇಲೆ ಯುವಕನೊಬ್ಬ ಹಲ್ಲೆಗೆ ಯತ್ನಿಸಿ ಕೊಲೆ ಬೆದರಿಕೆಯೊಡ್ಡಿದ ಘಟನೆ ನಡೆದಿದ್ದು ಈ ಕುರಿತು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ವಿವರ:ಬಿಜೆಪಿ ಕಾರ್ಪೋರೇಟರ್ ಲೋಕೇಶ್ ಬೊಳ್ಳಾಜೆ ಎಂಬವರು ದೂರಿದ್ದು ಅದರಲ್ಲಿ ಸ್ಥಳೀಯ ನಿವಾಸಿ ಗಣೇಶ್ ದೇವಾಡಿಗ ಎಂಬವನನ್ನು ಆರೋಪಿ

ಅತ್ಯಾಚಾರ ಆರೋಪ , ಕೊಣಾಜೆ ವಿ.ವಿ ಸಹಪ್ರಾಧ್ಯಾಪಕ:ಡಾ| ವೇದವ ಪಿ.ಗೆ ಹೈಕೋರ್ಟಿನಿಂದ ಕ್ಲೀನ್‌ ಚಿಟ್‌

ಉಳ್ಳಾಲ: ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಸಹಪ್ರಾಧ್ಯಾಪಕ ಡಾ| ವೇದವ ಪಿ. ವಿರುದ್ಧ ಕನ್ನಡ ವಿಭಾಗದ ಕೊಡವ ಅಧ್ಯಯನ ಕೇಂದ್ರದ ಸಂಶೋಧನಾ ಸಹಾಯಕಿ ದಾಖಲಿಸಿದ್ದ ಅತ್ಯಾಚಾರ ಪ್ರಕರಣದಿಂದ ಕ್ಲೀನ್‌ ಚಿಟ್‌ ನೀಡಿ ನಿರಪರಾಧಿ ಎಂದು ಸಾಬೀತುಪಡಿಸಿದೆ. 2014ರಲ್ಲಿ ಬಂಟ್ವಾಳ ಪೊಲೀಸ್‌ ಠಾಣೆಯಲ್ಲಿ ಕೊಡವ ಅಧ್ಯಯನ ಕೇಂದ್ರದ ಸಂಶೋಧನಾ ಸಹಾಯಕಿ ಪೂರ್ಣಿಮಾ ಎಂಬವರು ಸಹಪ್ರಾಧ್ಯಾಪಕ ಡಾ| ವೇದವ .ಪಿ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದರು.

ಅಡುಗೆ ಅನಿಲ ದರ ಏರಿಕೆ : ದೊಂದಿ ಮೆರವಣಿಗೆ

ಕಾಸರಗೋಡು ಜಿಲ್ಲೆಯ ಪೆರ್ಲದ ಬೆದ್ರಂಪಳ್ಳದಲ್ಲಿ ಡಿ.ವೈ.ಎಫ್.ಐ ನೇತೃತ್ವದಲ್ಲಿ ಅಡುಗೆ ಅನಿಲ ದರ ಏರಿಕೆಯನ್ನು ಖಂಡಿಸಿ ದೊಂದಿ ಮೆರವಣಿಗೆ ನಡೆಯಿತು. ಅಡುಗೆ ಅನಿಲ ದರ ಏರಿಕೆಯನ್ನು ವಿರೋಧಿಸಿ ಬೆದ್ರಂಪಳ್ಳದಲ್ಲಿ ನಡೆದ ದೊಂದಿ ಮೆರವಣಿಗೆಯನ್ನು ಡಿ.ವೈ.ಎಫ್.ಐ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯೆ ಸಚಿತಾ ಬಿ ಪೆರ್ಲ ಉದ್ಘಾಟಿಸಿದರು. ವಾಣಿಜ್ಯ ಸಿಲಿಂಡರ್ ಗೆ 350 ರೂಪಾಯಿ ಹಾಗೂ ಗೃಹ ಬಳಕೆಯ ಸಿಲಿಂಡರ್ ಗೆ 50 ರೂಪಾಯಿ ಏರಿಕೆ ಮಾಡುವ ಮೂಲಕ ಕೇಂದ್ರ ಸರಕಾರವು ಜನರ ಮೇಲೆ

ಕೊರಗಜ್ಜನ ಆರಾಧಕ ಖಾಸಿಂ ಸಾಹೇಬ್(66) ನಿಧನ

ಮಂಗಳೂರು: ಕಳೆದ 20 ವರ್ಷಗಳಿಂದ ಕೊರಗಜ್ಜನ ಆರಾಧಕರಾಗಿ ಗುರುತಿಸಿಕೊಂಡಿದ್ದ ಖಾಸಿಂ ಸಾಹೇಬ್(66) ಅವರು ಹೃದಯಾಘಾತದಿಂದಾಗಿ ಮಾ. 5ರಂದು ಮುಂಜಾನೆ ನಿಧನರಾಗಿದ್ದಾರೆ. ಖಾಸಿಂ ಅವರು ಮೂಲತಃ ಕೇರಳದ ಪಾಲಕ್ಕಾಡ್‌ ಜಿಲ್ಲೆಯವರಾಗಿದ್ದು, ಕೇರಳದಿಂದ 35 ವರ್ಷದ ಹಿಂದೆ ಬಂದು ಸದ್ಯ ಮಂಗಳೂರು ಹೊರವಲಯದ ಮುಲ್ಕಿ ಬಳ್ಕುಂಜೆಯಲ್ಲಿ ನೆಲೆಸಿದ್ದರು. ಇವರು ದೈವಗಳಿಗೆ ಗುಡಿ ನಿರ್ಮಿಸಿ ಪ್ರತಿದಿನ ಪೂಜಿಸುತ್ತಿದ್ದರು.

ವಿಶ್ವಕರ್ಮ ಸಮುದಾಯವನ್ನು ನಿರ್ಲಕ್ಷಿಸುತ್ತಿರುವ ಸರ್ಕಾರ : ಪರಿಷತ್‍ನ ರಾಜ್ಯ ಸಂಚಾಲಕ ಉದಯ ಜಿ ಆಚಾರ್ಯ

ರಾಜ್ಯ ಸರ್ಕಾರ ವಿಶ್ವಕರ್ಮ ಸಮುದಾಯವನ್ನು ನಿರ್ಲಕ್ಷಿಸುತ್ತಾ ಬಂದಿದ್ದು, ಈ ಬಾರಿಯ ಬಜೆಟ್‍ನಲ್ಲೂ ಸಮುದಾಯಕ್ಕೆ ವಿಶೇಷ ಅನುದಾನ, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಅನುದಾನ ಘೋಷಣೆ ಮಾಡಿಲ್ಲ ಎಂದು ಅಖಿಲ ಭಾರತ ವಿಶ್ವಕರ್ಮ ಪರಿಷತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.ಈ ಬಗ್ಗೆ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಪರಿಷತ್‍ನ ರಾಜ್ಯ ಸಂಚಾಲಕ ಉದಯ ಜಿ ಆಚಾರ್ಯ ಅವರು, ಸಮುದಾಯದ ಶೇ.90ರಷ್ಟು ಜನರು

ಚಿತ್ರಾಪುರದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ

ಚಿತ್ರಾಪುರದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಮಾರ್ಚ್ 13ರಂದು ಬ್ರಹ್ಮಕಲಶೋತ್ಸವ ನಡೆಯಲಿದ್ದು, ಈ ಪ್ರಯುಕ್ತ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಹಾಗೂ ವಿವಿಧ ದಾನಿಗಳಿಂದ ದೇವಸ್ಥಾನಕ್ಕೆ ನೀಡಲಾದ ಕೊಡುಗೆಗಳ ಉದ್ಘಾಟನೆ ಹಾಗೂ ಮೆರವಣಿಗೆ ಜರುಗಿತು. ದಾನಿ ಕೃಷ್ಣ ಶೆಟ್ಟಿ ಶ್ರೀದ್ವಾರ ಅವರು ನಿರ್ಮಿಸಿದ ಹೆದ್ದಾರಿ ಬದಿಯ ರಾಜಗೋಪುರದ ಉದ್ಘಾಟನೆಯನ್ನು ಕಟೀಲು ಕ್ಷೇತ್ರದ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ, ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಚಿತ್ರಾಪುರ

ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆ

ಮಂಗಳೂರು: ಸೂಕ್ಷ್ಮ, ಸಂವೇದನಾಶೀಲ ಬೆಳೆಸಿಕೊಂಡು ಟೀಕೆ, ಟಿಪ್ಪಣಿ ಎದುರಿಸಿ ನಿರ್ಭೀತಿಯಿಂದ ಕೆಲಸ ಮಾಡಬೇಕಾದುದು ಪತ್ರಕರ್ತರ ಧರ್ಮ. ಸಮಾಜದ ಆರೋಗ್ಯ ಕಾಪಾಡುವ ಜವಾಬ್ದಾರಿ ಕೂಡ ಪತ್ರಕರ್ತರದ್ದಾಗಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಕೆ.ಸದಾಶಿವ ಶೆಣೈ ಹೇಳಿದರು. ಬೋಳೂರಿನ ಪ್ಯಾರಡೈಸ್ ಐಲ್ಯಾಂಡ್‍ನಲ್ಲಿ ಭಾನುವಾರ ಮಂಗಳೂರು ಪ್ರೆಸ್ ಕ್ಲಬ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪತ್ರಿಕಾ ಭವನ ಟ್ರಸ್ಟ್ ಆಶ್ರಯದಲ್ಲಿ ನಡೆದ ಪ್ರೆಸ್

ಮಂಗಳೂರು: ಪ್ರೆಸ್ ಕ್ಲಬ್ ದಿನಾಚರಣೆ : ಕಡಬ ತಾಲೂಕು ಪತ್ರಕರ್ತರ ಸಂಘಕ್ಕೆ ECG ಯಂತ್ರ ಹಸ್ತಾಂತರ

ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನಗರದ ಕುಡ್ಲ ಕುದ್ರು ಪ್ಯಾರಡೈಸ್ ಐಲ್ಯಾಂಡ್ ನಲ್ಲಿ ಭಾನುವಾರದಂದು ನಡೆದ ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ಖ್ಯಾತ ಹೃದ್ರೋಗ ತಜ್ಞ ಡಾ. ಪದ್ಮನಾಭ ಕಾಮತ್ ಅವರು ಕಡಬ ಪ್ರೆಸ್ ಕ್ಲಬ್ ಗೆ ಇಸಿಜಿ ಯಂತ್ರವನ್ನು ಹಸ್ತಾಂತರ ಮಾಡಿದರು. ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ್ ಎನ್.ಕೆ., ಕಾರ್ಯದರ್ಶಿ ವಿಜಯ ಕುಮಾರ್ ಇಸಿಜಿ ಯಂತ್ರವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಖ್ಯಾತ ಚಿತ್ರನಟ, ಬಿಗ್ ಬಾಸ್ ವಿನ್ನರ್ ರೂಪೇಶ್

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಮತ್ತೋರ್ವ ಆರೋಪಿ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಮತ್ತೋರ್ವ  ಅರೋಪಿಯನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.  ಬಂಧಿತ ಆರೋಪಿಯನ್ನು ಮಡಿಕೇರಿ ಮೂಲದ ತುಫೈಲ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ದಾಸರಹಳ್ಳಿಯಲ್ಲಿ ಆತನನ್ನು ಎನ್‌ಐಎ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ.2022 ರ ಜುಲೈ 26 ರಂದು ರಾತ್ರಿ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಕೊಲೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹತ್ತು

ಮಂಗಳೂರು ವಿವಿಯಲ್ಲಿ ‘ಕನಕ ಪುರಸ್ಕಾರ’ ಕಾರ್ಯಕ್ರಮ

ಮುಡಿಪು : ಕಲಾವಿದನಾಗಲಿ ಗಾಯಕನಾಗಲಿ ಸಂಗೀತದ ಎಲ್ಲಾ ಪ್ರಕಾರಗಳನ್ನು ಒಂದೇ ರೀತಿ ಇಷ್ಟಪಡಬೇಕು. ಸಂಗೀತ ಕ್ಷೇತ್ರದಲ್ಲಿ ಸ್ವರಗಳ ಜ್ಞಾನ ಅರಿತುಕೊಂಡು ಬೆಳೆದರೆ ಯಶಸ್ಸು ಸಾಧ್ಯ. ಸಂಗೀತ ಮತ್ತು ಸಾಹಿತ್ಯ ಎನ್ನುವಂತದ್ದು ಸಾಗರ. ಅದರಲ್ಲಿಯೂ ಕನಕದಾಸರು ಹಾಗೂ ಪುರಂದರದಾಸರ ರಚನೆಗಳು ಅಪೂರ್ವ. ಗಾಯಕರು ಸಾಹಿತ್ಯಕ್ಕೆ ಗಮನಕೊಟ್ಟು ಹಾಡಿದರೆ ಅದರ ಚಂದವೇ ಬೇರೆ ಎಂದು ಬೆಂಗಳೂರಿನ ಖ್ಯಾತ ಗಾಯಕರು, ಗಾನ ಗಂಧರ್ವ ಶಶಿಧರ್ ಕೋಟೆ ಅವರು ಹೇಳಿದರು. ಮಂಗಳೂರು