Home ಕರಾವಳಿ Archive by category ಮಂಗಳೂರು (Page 154)

ಅಮೃತ ವಿದ್ಯಾಲಯಂನಲ್ಲಿ ಸಾರ್ವಜನಿಕ ಮಕ್ಕಳ ಆರೋಗ್ಯ ಶಿಬಿರ

ಇದೇ ಬರುವ ಆದಿತ್ಯವಾರ ಫೆಬ್ರವರಿ 5ರಂದು ಬೋಳೂರಿನಲ್ಲಿರುವ ಅಮೃತ ವಿದ್ಯಾಲಯಂನ ಆವರಣದಲ್ಲಿ ಸಾರ್ವಜನಿಕ ಮಕ್ಕಳಿಗೆ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವು ಬೆಳಿಗ್ಗೆ 8.30ರಿಂದ ಅಪರಾಹ್ನ 1.30ರ ವರೆಗೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಡಾ. ಚಾಂದಿನಿ ವಿಕ್ರಂ ಶೆಟ್ಟಿ ಎಚ್ ಒ ಡಿ, ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್,ಇವರಿಂದ ದಂತ

ಶ್ರಮದಾನದ ಮೂಲಕ ರಸ್ತೆಗೆ ಚೆಲ್ಲಿದ್ದ ಮರಳು : ಅಲೋಶಿಯಸ್ ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಂದತೆರವು ಕಾರ್ಯ

ನಗರದ ಅಲೋಶಿಯಸ್ ಐಟಿಐ ಕಾಲೇಜಿನ ರಸ್ತೆಯಲ್ಲಿ ಮರಳು ಸಾಗಾಟ ಲಾರಿಯಿಂದ ಮರಳು ರಸ್ತೆಗೆ ಚೆಲ್ಲಿದ್ದು ಇದರಿಂದ ದ್ವಿಚಕ್ರ ವಾಹನದಲ್ಲಿ ಚಲಿಸುವ ಸವಾರರು ಅಪಘಾತಕ್ಕೊಳಗಾಗುತ್ತಿದ್ದರು. ಇದನ್ನು ಗಮನಿಸಿದ ಅಲೋಶಿಯಸ್ ಕಾಲೇಜಿನ ಐಟಿಐ ವಿದ್ಯಾರ್ಥಿಗಳು ರಸ್ತೆಗೆ ಚೆಲ್ಲಿದ್ದ ಮರಳನ್ನು ತೆರವು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವಿದ್ಯಾರ್ಥಿಗಳ ಸೇವಾ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಊರ್ಮಿಳಾ ರಮೇಶ್‌ಗೆ ಮಾತೃ ವಿಯೋಗ

ಮಂಗಳೂರು: ಪ್ರತಿಷ್ಠಿತ ದೀಪಾ ಕಂಫರ್ಟ್‌ ಮಾಲಕಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಉಪಾಧ್ಯಕ್ಷರಾದ ಊರ್ಮಿಳಾ ರಮೇಶ್ ಅವರ ಮಾತೃಶ್ರೀ ರಾಧಾ ಡಿ. ಅಮೀನ್(93) ಗುರುವಾರ ಮಂಗಳೂರು ಗಾಂಧಿನಗರದ ನಿವಾಸದಲ್ಲಿ ನಿಧನರಾದರು. ಅವರು ಪುತ್ರ, ಪುತ್ರಿ ಸೇರಿ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ವಿಧಿ ಗಾಂಧಿನಗರದ ನಿವಾಸದಲ್ಲಿ ಇಂದು ಸಂಜೆ 4ಗಂಟೆಗೆ ನೆರವೇರಲಿದೆ

ಕಾಟಿಪಳ್ಳದ ಗಣೇಶಪುರದಲ್ಲಿ ವಾಹನಕ್ಕೆ ಸೈಡ್ ಕೊಡುವ ವಿಚಾರವಾಗಿ ಗಲಾಟೆ

ವಾಹನಕ್ಕೆ ಸೈಡ್ ಕೊಡುವ ವಿಚಾರವಾಗಿ ನಡೆದ ಗಲಾಟೆಯು ಪರಸ್ಪರ ಹಲ್ಲೆ ನಡೆದು ಕೆಲಕಾಲ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾದ ಘಟನೆ ಕಾಟಿಪ್ಪಳ್ಳದ ಗಣೇಶಪುರದಲ್ಲಿ ನಡೆದಿದೆ. ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಫಾಝಿಲ್ ಸಹೋದರ ಆದಿಲ್ ಮತ್ತು ನಾಗೇಶ್ ಎಂಬವರ ನಡುವೆ ಸೈಡ್ ಕೊಡುವ ವಿಚಾರವಾಗಿ ಗಲಾಟೆ ನಡೆದಿದೆ. ನಾಗೇಶ್ ಹಾಗು ಜೊತೆಗಿದ್ದವರು ಫಾಝಿಲ್ ಸಹೋದರ ಆದಿಲ್ ಮೇಲೆ ಹಲ್ಲೆ ನಡೆಸಿದ್ದು, ಹಲ್ಲೆ ನಡೆಸಿದವರನ್ನು ಸಾರ್ವಜನಿಕರು ಪೆÇಲೀಸರಿಗೆ ಒಪ್ಪಿಸಿದ್ದಾರೆ.

ಫೆ. 11 ಮತ್ತು 12ರಂದು ದ.ಕ. ಮತ್ತು ಉಡುಪಿ ಜಿಲ್ಲಾ ಪುರುಷ, ಮಹಿಳೆಯರ ಪವರ್‍ ಲಿಫ್ಟಿಂಗ್ ಸ್ಪರ್ಧೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಪುರುಷರ ಮತ್ತು ಮಹಿಳೆಯರ ಪವರ್ ಲಿಫ್ಟಿಂಗ್ ಸ್ಪರ್ಧೆಯು ಫೆಬ್ರವರಿ 11 ಮತ್ತು 12ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಮಿನಿ ಪುರಭವನದಲ್ಲಿ ಜರುಗಲಿದೆ ಎಂದು ದ.ಕ.ಜಿಲ್ಲಾ ಪವರ್ ಲಿಫ್ಟಿಂಗ್ ಎಸೋಸಿಯೇಶನ್ ಕಾರ್ಯದರ್ಶಿ ಮಧುಚಂದ್ರ ತಿಳಿಸಿದರು. ಅವರು ನಗರದ ಪ್ರೆಸ್ ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮಂಗಳೂರು ಮಹಾನಗರಪಾಲಿಕೆ ಸಹಯೋಗದೊಂದಿಗೆ ಮೇಯರ್ ಕಪ್ ಪ್ರಶಸ್ತಿ ಸ್ಪರ್ಧೆ ಮಂಗಳೂರು ಬಾಲಾಂಜನೇಯ

ನವಮಂಗಳೂರು ಬಂದರಿಗೆ ಅಗಮಿಸಿದ 5ನೇ ಹಡಗು ‘ಎಂಎಸ್ ನಾಟಿಕಾ’ : MS NAUTICA

ನವ ಮಂಗಳೂರು ಬಂದರಿಗೆ 5ನೇ ಪ್ರಯಾಣಿಕರ ಹಡಗು `ಎಂಎಸ್ ನಾಟಿಕಾ’ ಮಂಗಳವಾರ ಬೆಳಗ್ಗೆ ಆಗಮಿಸಿತು. 550 ಪ್ರಯಾಣಿಕರು ಹಾಗೂ 400 ಸಿಬ್ಬಂದಿಯನ್ನು ಒಳಗೊಂಡ ಹಡಗು ಬರ್ತ್ ಸಂಖ್ಯೆ 4ರಲ್ಲಿ ನಿಂತಿತು. ಈ ಹಡಗಿನ ಒಟ್ಟು ಉದ್ದ 180.5 ಮೀಟರ್. ಇದು 30,277 ಟನ್ ಭಾರವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಈ ಹಡಗು ಮಸ್ಕತ್‍ನಿಂದ ಮಾಲ್ಡಿವ್ಸ್ ಮೂಲಕ ಭಾರತಕ್ಕೆ ಆಗಮಿಸಿದೆ. ಈ ಹಡಗು ಹಿಂದೆ ಮುಂಬೈ ಹಾಗೂ ಮುರ್ಮುಗೋವಾ ಬಂದರಿನಲ್ಲಿ ನಿಂತಿತ್ತು. ಈ ಹಡಗಿನಲ್ಲಿ

ಸಹ್ಯಾದ್ರಿಯಲ್ಲಿ ಔರಾ 2023 – ಫ್ರೆಶರ್ಸ್ ಡೇ ಆಚರಿಸಲಾಯಿತು

ಔರಾ 2023 – ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಮೆಂಟ್, ಇಂಜಿನಿಯರಿಂಗ್ ಬ್ಯಾಚ್ 2022ರ ಫ್ರೆಶರ್ಸ್ ಡೇ ಅನ್ನು ಫೆಬ್ರವರಿ 7, 2023 ರಂದು ಆಚರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಗ್ಲೋಬಲ್ ಆರ್‌ಎಂಜಿ ಮುಖ್ಯಸ್ಥರಾದ ಶ್ರೀ ಚಕ್ರವರ್ತಿ ಇ.ಎಸ್. ಹಾಗೂ ಗೌರವ ಅತಿಥಿಗಳಾಗಿ ಶ್ರೀ ಎನ್. ಶಶಿಕುಮಾರ್ IPS, DIGP ಮತ್ತು ಪೊಲೀಸ್ ಆಯುಕ್ತರು, ಮಂಗಳೂರು ಇವರುಗಳು ಭಾಗವಹಿಸಿದರು.

ಬೆಂಗ್ರೆ ಫೆ .12ರಂದು ಸರ್ವೇ ನಂಬರ್ ಸಹಿತ ಹಕ್ಕುಪತ್ರ ವಿತರಣೆ

ಸರ್ವೇ ನಂಬರ್ ಹಗೂ ಖಾತಾ ನೀಡಬೇಕು ಎನ್ನುವ ಬೆಂಗ್ರೆ ಗ್ರಾಮದ ಸಾರ್ವಜನಿಕರ ಬಹುಕಲಾದ ಬೇಡಿಕೆಯನ್ನು ಶಾಸಕರಾದ ವೇದವ್ಯಾಸ ಕಾಮತ್ ಅವರು ಈಡೇರಿಸಿದ್ದು, ಫೆ.12ರಂದು ಸಂಜೆ 5 ಗಂಟೆಗೆ ಬೆಂಗ್ರೆ ಫೆರಿ ಪಾಯಿಂಟ್ ಬಳಿಯ ಮಹಾಜನ ಸಂಘದ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು 2 ಸಾವಿರ ಮನೆಯವರಿಗೆ ಸರ್ವೇ ನಂಬರ್ ಸಹಿತವಾದ ಹಕ್ಕುಪತ್ರ ವಿತರಿಸಲಿದ್ದಾರೆ ಎಂದು ಕಾರ್ಪೋರೇಟರ್ ಸುನೀತಾ ತಿಳಿಸಿದರು. ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ

ಲೋಕಕಲ್ಯಾಣಾರ್ಥವಾಗಿ ನಡೆಯುವ ಶ್ರೀ ಸಹಸ್ರ ನರಸಿಂಹಯಾಗದ ಪ್ರಯುಕ್ತವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಮುಲ್ಕಿ: ಕಿನ್ನಿಗೋಳಿಯ ಮಹಾಮಾಯಿ ಕಟ್ಟೆಯ ಬಳಿಯ ಶ್ರೀ ಶಾರದ ಮಂಟಪದಲ್ಲಿ ಜರಗುತ್ತಿರುವ ಅತಿ ವಿಶಿಷ್ಟ ಶ್ರೀ ಸಹಸ್ರ ನೃಸಿಂಹಯಾಗ ಸಮಿತಿ ವತಿಯಿಂದ ಆಯೋಜಿಸಿದ್ದ ಲೋಕಕಲ್ಯಾಣಾರ್ಥವಾಗಿ ನಡೆಯುವ ಶ್ರೀ ಸಹಸ್ರ ನೃಸಿಂಹಯಾಗ ಯಾಗದ ಪ್ರಯುಕ್ತ ಬುಧವಾರ ಪ್ರಾತಃಕಾಲ 5 ಗಂಟೆಗೆ ಗುರು ಗಣಪತಿ ಪೂಜನ,ಆವಾಹಿತ ದೇವತಾ ಪೂಜನ, ಬೆಳಿಗ್ಗೆ 7 ಗಂಟೆಗೆ ಸಹಸ್ರ ನೃಸಿಂಹ ಹವನ,11.30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಮಧ್ಯಾಹ್ನ 1.30 ಲಘ ಪುರ್ಣಾಹುತಿ, ಮಧ್ಯಾಹ್ನ ಪೂಜೆ, ಗೋಪೂಜೆ,

ಫೆ.19ರಂದು ಕೋಟಿ ಚೆನ್ನಯ ಟ್ರೋಫಿ – 2023

ಮಂಗಳೂರಿನ ಕೋಟಿ ಚೆನ್ನಯ ಸೇವಾ ಬ್ರಿಗೇಡ್ ರಿಜಿಸ್ಟರ್ ಇದರ ಆಶ್ರಯದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್ ಇವರ ಸಾರಥ್ಯದಲ್ಲಿ ಫೆ.19ರಂದು ಕೋಟಿ ಚೆನ್ನಯ ಟ್ರೋಫಿ – 2023ರ ನಡೆಯಲಿದ್ದು, ಈ ಪ್ರಯುಕ್ತ ನಗರದ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ಆಮಂತ್ರಣ ಪ್ರತಿಕೆಯ ಬಿಡುಗಡೆ ಸಮಾರಂಭ ಜರುಗಿತ್ತು. ತಾಂತ್ರಿಕತೆ, ವೈಜ್ಞಾನಿಕತೆಯಿಂದಾಗಿ ಗ್ರಾಮೀಣ ಕ್ರೀಡೆಗಳನ್ನೇ ಮರೆಯುತ್ತಿದ್ದಾರೆ.ಇದಕ್ಕಾಗಿಯೇ ಯುವಕರನ್ನು ಹಾಗೂ