ಮಂಗಳೂರು: ಯುವಕನೋರ್ವ ಆಕಸ್ಮಿಕವಾಗಿ ಮನೆಯ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಕುದ್ರೋಳಿಯ ಟಿಪ್ಪು ಸುಲ್ತಾನ್ ನಗರದಲ್ಲಿ ರಾತ್ರಿ ನಡೆದಿದೆ. ಕುದ್ರೋಳಿ ಸಮೀಪದ ಕಂಡತ್ ಪಳ್ಳಿ ಬಳಿಯ ಟಿ.ಕೆ.ಎಚ್. ಖಾದರ್ ಎಂಬವರ ಪುತ್ರ ಮುಹಮ್ಮದ್ ರಿಯಾಝ್ (33) ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ. ರಿಯಾಝ್ ಮನೆಯ ಮಹಡಿ ಹತ್ತಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು
ಸುರತ್ಕಲ್: ಸುರತ್ಕಲ್ ಟೋಲ್ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಟೋಲ್ ವಿರೋಧಿ ಹೋರಾಟಗಾರರ ಸಮಿತಿ ಕರೆ ನೀಡಿರುವ ಪ್ರತಿಭಟನೆ. ಟೋಲ್ ಗೇಟ್ ಮುತ್ತಿಗೆ ಸಂದರ್ಭ ಪೋಲಿಸ್ ಹಾಗೂ ಪ್ರತಿಭಟನಾಕಾರರ ನಡುವೆ ನೂಕಾಟ-ತಳ್ಳಾಟ ನಡೆದಿದ್ದು, ಈ ವೇಳೆ ಪೊಲೀಸರು ಪ್ರತಿಭಟನಾಕಾರರಿಗೆ ಲಾಠಿ ಪ್ರಯೋಗ ಮಾಡಿರುವುದಾಗಿ ಎಂದು ತಿಳಿದು ಬಂದಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಂದರ್ಭದಲ್ಲಿ ಪ್ರತಿಭಟನಾಕಾರ ಅಬ್ದುಲ್ ಖಾದರ್ ಎಂಬವರ ಕಣ್ಣಿಗೆ ಲಾಠಿ ತಾಗಿ
ಮಂಗಳೂರು,ಅ.18(ಕ.ವಾ):- ಪಂಪ್ ವೆಲ್ ನಲ್ಲಿ ಕರ್ನಾಟಕ ಬ್ಯಾಂಕ್ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ ಮಹಾವೀರ ವೃತ್ತ ಅಭಿವೃದ್ಧಿ ಕಾಮಗಾರಿಗೆ ಅ.18ರಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಮೇಯರ್ ಜಯಾನಂದ ಅಂಚನ್, ಉಪ ಮೇಯರ್ ಪೂರ್ಣಿಮಾ, ಸ್ಮಾರ್ಟ್ ಸಿಟಿ, ಕರ್ನಾಟಕ ಬ್ಯಾಂಕ್ ಅಧಿಕಾರಿಗಳು, ಮಹಾನಗರ ಪಾಲಿಕೆ ಸದಸ್ಯರು ಹಾಗೂ ಇತರೆ ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಟೋಲ್ ಗೇಟ್ ಎದುರು ಜಮಾಯಿಸಿರುವ ಪ್ರತಿಭಟನಾಕಾರರು ಬಿಜೆಪಿ ಸರ್ಕಾರ, ಸಂಸದ, ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.ಸುರತ್ಕಲ್ ಟೋಲ್ ಗೇಟ್ ಅನ್ನು ಅಕ್ಟೋಬರ್ 18 ರೊಳಗೆ ರದ್ದುಪಡಿಸುವಂತೆ ಸೆ.13 ರಂದು ಸರ್ಕಾರಕ್ಕೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯು ಗಡುವು ನೀಡಿತ್ತು, ಸರ್ಕಾರ ತಮ್ಮ ಮನವಿಗೆ ಮಣಿಯದಿದ್ದರೆ ಅಕ್ಟೋಬರ್ 18 ರಂದು ಟೋಲ್ ಗೇಟ್‌ಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದ್ದು, ಇಮ್ದು ಪ್ರತಿಭಟನೆ ನಡೆಸುತ್ತಿದ್ದಾರೆ.ಈ ವೇಳೆ ಸುರತ್ಕಲ್
ಮಂಗಳೂರು ಬಂದರ್‌ನಿಂದ ಮುನವಳ್ಳಿಗೆ ಕೋಲ್ ಸಾಗಾಟ ಮಾಡುತ್ತಿದ್ದ ಟ್ರಕ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳದ ಸಿಬಂದಿಗಳ ಸಕಾಲಿಕ ಕಾರ್ಯಾಚರಣೆಯಿಂದಾಗಿ ಭಾರಿ ಅವಘಡವೊಂದು ತಪ್ಪಿದಂತಾಗಿದೆ. ಟ್ರಕ್‌ನಲ್ಲಿ ತುಂಬಿದ್ದ ಕೋಲ್‌ನಲ್ಲಿ ಘರ್ಷಣೆಯುಂಟಾಗಿ ಬೆಂಕಿ ಕಾಣಿಸಿಕೊಂಡಿದ್ದು ಟ್ರಕ್ ಚಾಲಕ ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಉಡುಪಿ ಅಗ್ನಿಶಾಮಕದಳಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ
ಮ.ನ.ಪಾ ಸದಸ್ಯೆ ಪ್ರತಿಭಾ ಕುಳಾಯಿ ಮನೆಗೆ ಅವರು ಇಲ್ಲದೇ ಇದ್ದಾಗ ಪೊಲೀಸರು ಮಧ್ಯರಾತ್ರಿ ವೇಳೆ ಹೋಗಿರುವುದು ಸರಿಯಾದ ಕ್ರಮವಲ್ಲ , ಆ ಹೊತ್ತಿನಲ್ಲಿ ಹೋಗಿ ಕಿರುಕುಳ ನೀಡುವ ಅವಶ್ಯಕತೆ ಇರಲಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದು , ಇದು ಹೋರಾಟಗಾರರ ಧ್ವನಿ ಅಡಗಿಸುವ ಕೆಲಸ ಮಾಡಲಾಗುತ್ತಿದೆ . ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಳ್ಳುವ ಅಗತ್ಯ ಇದೆ ಎಂದು ಹೇಳಿದ್ದಾರೆ . ಇದು ಪ್ರತಿಭಟನಾಕಾರರನ್ನು ಹತ್ತಿಕ್ಕುವ ಕಾರ್ಯವಾಗಿದ್ದು ,
ಖಾಸಗಿ ಬಸ್ ಚಾಲಕನ ಅತಿ ವೇಗ ಮತ್ತು ಧಾವಂತದ ಚಾಲನೆಗೆ ಎಂಟನೇ ತರಗತಿಯ ವಿದ್ಯಾರ್ಥಿ ನಡು ರಸ್ತೆಯಲ್ಲಿ ದುರಂತವಾಗಿ ಮೃತಪಟ್ಟ ಘಟನೆ ನಗರದ ಲಾಲ್ ಭಾಗ್ ವೃತ್ತದ ಬಳಿ ನಡೆದಿದೆ. ಮೃತ ಬಾಲಕನನ್ನು ಪಡೀಲ್ ಕಣ್ಣೂರಿನ ನಿವಾಸಿ ಕರುಣಾಕರ ಬೆಳ್ಚಡ ಅವರ ಪುತ್ರ ರಕ್ಷಣ್(13) ಎಂದು ಗುರುತಿಸಲಾಗಿದೆ. ಪಡೀಲಿನ ಕಪಿತಾನಿಯೋ ಸ್ಕೂಲಿನಲ್ಲಿ ಎಂಟನೇ ತರಗತಿ ಓದುತ್ತಿದ್ದ ರಕ್ಷಣ್ ಇವತ್ತು ಮನೆಯಲ್ಲಿ ಪೂಜೆ ಇದೆಯೆಂದು ಶಾಲೆಗೆ ರಜೆ ಹಾಕಿದ್ದ. ಬೆಳಗ್ಗೆ ಚಿಕ್ಕಪ್ಪ ಪಡು ಬೊಂಡಂತಿಲ
ಸಾಹಿತ್ಯ ಪ್ರಶಸ್ತಿಗೆ ಲೇಖಕಿಯರಿಂದ ಕೃತಿಗಳ ಆಹ್ವಾನ ಮಂಗಳೂರು; ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ಕರಾವಳಿ ಲೇಖಕಿಯರ ವಾಚಕಿಯರ ಸಂಘವು 2022-23ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳಿಗಾಗಿ ಲೇಖಕಿಯರ ಕೃತಿಗಳನ್ನು ಆಹ್ವಾನಿಸಿದೆ. ನವೆಂಬರ್ 10ರೊಳಗೆ ಕೃತಿಗಳನ್ನು ಕಳುಹಿಸಿಕೊಡುವಂತೆ ಪ್ರಕಟಣೆ ತಿಳಿಸಿದೆ. 1) ರಾಜ್ಯ ಮಟ್ಟದ `ಸಾರಾ’ ದತ್ತಿ ಪ್ರಶಸ್ತಿಗಾಗಿ ಉದಯೋನ್ಮುಖ ಬರಹಗಾರ್ತಿಯರ 2020ರ ನಂತರ ಪ್ರಕಟವಾÀದ ಮೊದಲ ಪ್ರಕಟಿತ ಕವನ ಸಂಕಲನ 2)
ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆಯ ಅಂಗವಾಗಿ 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್ ಯೂನಿಟ್ ಉದ್ಘಾಟನೆಯ ಅಂಗವಾಗಿ ನಗರದ ಯೆಯ್ಯಾಡಿ ಕೊಂಚಾಡಿಯಲ್ಲಿಂದು ಕರ್ಣಾಟಕ ಬ್ಯಾಂಕ್‍ನ ಡಿಜಿಟಲ್ ಬ್ಯಾಂಕ್ ಘಟಕ ಉದ್ಘಾಟನೆಗೊಂಡಿತು. ನೂತನ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಹೊಸದಿಲ್ಲಿಯ ಹಣಕಾಸು ಸಚಿವಾಲಯದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಜೊತೆ
ವಿಶ್ವ ತುಳು ಲಿಪಿ ದಿನದ ಅಂಗವಾಗಿ ನಗರದ ಸುರತ್ಕಲ್ ನ ಗೋವಿಂದದಾಸ್ ಕಾಲೇಜು ಮುಂಭಾಗದಲ್ಲಿ ‘ತುಳು ದಿಬ್ಬಣ’ ಕಾರ್ಯಕ್ರಮ ನಡೆಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರು ಮಾತನಾಡಿ, ಇಂದು ನಾವು ಮಲಯಾಳಂಗೆ ತುಳುಲಿಪಿಯನ್ನು ಮಾರುವ ಕಾಲ ಬಂದಿದೆ. ಆದರೆ, ಮಲಯಾಳಂಗೆ ಲಿಪಿಯನ್ನು ನೀಡಿರುವ ಭಾಷೆ ತುಳು ಎಂದು ಹೇಳಲು ನಮಗೆ ಹೆಮ್ಮೆಯಾಗುತ್ತದೆ ಎಂದು ಹೇಳಿದರು.




























