ಮಂಗಳೂರಿನ ವೆಲೆನ್ಸಿಯಾದ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯದ ವಿದ್ಯಾರ್ಥಿನಿಯಾದ ಅನನ್ಯಾ ಸಿಂಗ್ ಅವರು ’ಗ್ಲೋಬಲ್ ಮಿಸ್ ಇಂಟರ್ ನ್ಯಾಶನಲ್ ಇಂಡಿಯಾ ಯೂನಿವರ್ಸ್’ ಕಿರೀಟವನ್ನು ಮುಡಿಗೇರಿಸಿದ್ದಾರೆ ನವದೆಹಲಿಯ ಗ್ಲೋಬಲ್ ಇಂಡಿಯಾ ಎಂಟರ್‌ಟೈನ್‌ಮೆಂಟ್ ಪ್ರೊಡಕ್ಷನ್ ಆಯೋಜಿಸಿರುವ ’ಗ್ಲೋಬಲ್ ಮಿಸ್ ಇಂಟರ್ ನ್ಯಾಶನಲ್ ಇಂಡಿಯಾ ಯೂನಿವರ್ಸ್-
ಮಂಗಳೂರು : ಕರಾವಳಿ ಜಿಲ್ಲೆಗಳಲ್ಲಿ ವಿದೇಶಿ ಮಿಷನರಿಗಳು ಸಲ್ಲಿಸಿದ ಸೇವೆಗಳು ಸ್ಮರಣೀಯ. ಇದಕ್ಕೆ ಪೂರಕವಾಗಿ ದೇಶೀಯ ಸಭಾ ಪಾಲಕರುಗಳು ಸಭಾ ಪ್ರಾಂತ್ಯದ ಅಭಿವೃದ್ಧಿಗಾಗಿ ಸಭಾ ಸೇವೆಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಇಂಥವರಲ್ಲಿ ರೆ. ಜಾರ್ಜ್ ಎ. ಬೆರ್ನಾಡ್ ಕೂಡ ಒಬ್ಬರು. ಇಂಥವರನ್ನು ಸ್ಮರಿಸಿ ಇವರ ಹೆಸರಿನಲ್ಲಿ ಕರ್ನಾಟಕ ಥಿಯಲಾಜಿಕಲ್ ಕಾಲೇಜಿನ ಮುಖಾಂತರ ಗಾರ್ಡನ್ ಒಂದನ್ನು ನಿರ್ಮಾಣ ಮಾಡಿರುವುದು ಅಭಿನಂದನೀಯ ಎಂದು ಚರ್ಚ್ ಆಫ್ ಸೌತ್ ಇಂಡಿಯಾ
ಉಪಚುನಾವಣೆ ಸೋಲು ಮೋದಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ. ಹಾಗಾಗಿ ರೈತ ವಿರೋಧಿ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಲು ಸಾಧ್ಯವಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಅವರು ಹೇಳಿದರು. ಅವರು, ಕೃಷಿ ಮಸೂದೆ ವಿರೋಧಿಸಿ ಹೋರಾಟ ನಡೆಸಿದ ರೈತರ ಹೋರಾಟಕ್ಕೆ ಗೆಲುವು ಸಿಕ್ಕಿರುವುದಕ್ಕೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿ ಮಾತನಾಡಿದರು. ರೈತರ ನಿರಂತರ ಹೋರಾಟಕ್ಕೆ ಜಯ ಸಿಕ್ಕಿದೆ. ಸೋಲಿನಿಂದ ಮೋದಿ ಸರ್ಕಾರ
ಸುರತ್ಕಲ್ ಮುಕ್ಕದ ಶ್ರೀನಿವಾಸ ವಿಶ್ವವಿದ್ಯಾಲಯ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸಂಧ್ಯಾ ಶೆಣೈ ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ವೈಜ್ಞಾನಿಕ ಪ್ರಬಂಧಗಳಿಗೆ ಇತರ ಸಂಶೋಧಕರಿಂದ ಸಿಗುವ ಉಲ್ಲೇಖಗಳನ್ನಾಧರಿಸಿ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ, ಲಂಡನ್ ಅವರು ತಯಾರಿಸಿದ ಪಟ್ಟಿಯಲ್ಲಿ ಡಾ. ಸಂಧ್ಯಾ ಶೆಣೈ ಸ್ಥಾನ ಪಡೆದುಕೊಂಡಿದ್ದಾರೆ. ವಸ್ತು ವಿಜ್ಞಾನ ಮತ್ತು ರಸಾಯನ
ಶ್ರೀನಿವಾಸ್ ಯುನಿವರ್ಸಿಟಿಯ ಕಾಲೇಜ್ ಆಫ್ ಫಿಸಿಯೋಥೆರಫಿ ವಿಭಾಗದ ವತಿಯಿಂದ 2021-22ನೇ ಬ್ಯಾಚ್‌ನ ವಿದ್ಯಾರ್ಥಿಗಳ ಪ್ರೆಶರ್‍ಸ್ ಪೈರ್ ಕಾರ್ಯಕ್ರಮವು ಮಂಗಳೂರಿನ ಹೋಟೆಲ್ ಶ್ರೀನಿವಾಸ್ ಸಭಾಂಗಣದಲ್ಲಿ ಜರುಗಿತು.ಕಾರ್ಯಕ್ರಮವನ್ನು ಶ್ರೀನಿವಾಸ್ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಾಧಿಪತಿಗಳಾದ ಡಾ. ಸಿಎ ಎ ರಾಘವೇಂದ್ರ ರಾವ್ ಅವರ ಸಮ್ಮುಖದೊಂದಿಗೆ ಫಿಸಿಯೋಥೆರಫಿ ವಿಭಾಗದ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ
ರಾಜ್ಯದಲ್ಲಿ ಏಕಾಏಕಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿದ್ಯಾರ್ಥಿಗಳ ಮೇಲೆ ಹೇರಲಾಗುತ್ತಿದೆ. ಶಿಕ್ಷಣ ನೀತಿ ಹೇಗಿರಬೇಕು, ಏನೆಲ್ಲಾ ಬದಲಾವಣೆ ಆಗಿದೆ ಎನ್ನುವುದರ ಬಗ್ಗೆ ಶಾಲೆ, ಕಾಲೇಜಿನ ಆಡಳಿತ ಸಂಸ್ಥೆಯಾಗಲೀ, ಶಿಕ್ಷಕ ವೃಂದಕ್ಕಾಗಲೀ ಮಾಹಿತಿ ಇಲ್ಲ. ಹತ್ತನೇ ಕ್ಲಾಸ್ ಕಲಿಯದವರು ಶಿಕ್ಷಣ ನೀತಿ ಮಾಡಿದ್ದಾರೆ. ಇಲ್ಲಿನ ಬಿಜೆಪಿ ನಾಯಕರಿಗಾಗಲೀ, ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಗೆ ಆಗಲೀ ಶಿಕ್ಷಣ ನೀತಿಯ ಬಗ್ಗೆ ಗೊತ್ತಾ ಎಂದು ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕ
ಮಂಗಳೂರು: ಕರ್ನಾಟಕ ಲೋಕಾಯುಕ್ತ, ನಗರದ ರಥಬೀದಿಯ ಡಾ. ದಯಾನಂದ ಪೈ – ಪಿ. ಸತೀಶ್ ಪೈ ಸರಕಾರಿ ಪ್ರಥಮದರ್ಜೆ ಸಹಯೋಗದಲ್ಲಿ ವಿಚಕ್ಷಣ ಜಾಗೃತಿ ಸಪ್ತಾಹ -2021ರ ಅಂಗವಾಗಿ ಪ್ರತಿಜ್ಞಾವಿಧಿ, ಜಾಗೃತಿ ಮತ್ತು ಬಹುಮಾನ ವಿತರಣಾ ಕಾರ್ಯಕ್ರಮವನ್ನು ಇತ್ತೀಚೆಗೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಲೋಕಾಯುಕ್ತದ ಮಂಗಳೂರು ನಿರೀಕ್ಷಕರಾದ ಅಮಾನುಲ್ಲಾ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ರಹಿತ
ಕಾಂಗ್ರೆಸ್ ಪಕ್ಷದ ಮಾನವ ಹಕ್ಕುಗಳ ಘಟಕದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾಗಿ ತೋಮಸ್ ಪ್ರಸಾದ್ ಡಿಸೋಜಾ ನೇಮಕಗೊಂಡಿದ್ದಾರೆ. ತೋಮಸ್ ಪ್ರಸಾದ್ ಡಿಸೋಜಾ ಅವರು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಹಿಂದಿನ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಅವರನ್ನು ನೇಮಿಸಲಾಗಿದೆ.
ತುಳುನಾಡಿದ ಹತ್ತು ಹಲವು ನಾಟಕ ತಂಡಗಳಲ್ಲಿ ತನ್ನ ನಟನಾ ಸಾಮರ್ಥ್ಯವನ್ನು ತೋರಿಸಿ ಅಲ್ಲದೇ ವಿ4ನ್ಯೂಸ್ ಕರ್ನಾಟಕದ ಕಾಮಿಡಿ ಪ್ರೀಮಿಯರ್ ಲೀಗ್‌ನಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಪ್ರಸಿದ್ಧ ಕಲಾವಿದ ಯತೀಶ್ ಶೆಟ್ಟಿ ಉಚ್ಚಿಲರವರು ಅನಾರೋಗ್ಯದ ಕಾರಣದಲ್ಲಿ ವಿಧಿವಶರಾಗಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ತನ್ನ ಉತ್ತಮ ನಡವಳಿಕೆ ಮತ್ತು ಉತ್ತಮ ನಟನೆಯ ಮೂಲಕ ಎಲ್ಲ ಮೆಚ್ಚುಗೆಗೆ ಪಾತ್ರರಾಗಿದ್ದ ಯತೀಶ್ ಶೆಟ್ಟಿ ಉಚ್ಚಿಲರವರು ಅನಾರೋಗ್ಯದಿಂದ ತನ್ನ ಚಿಕ್ಕ
ಮಂಗಳೂರು: ಒಂದು ಭಾಷೆ ಶೈಕ್ಷಣಿಕವಾಗಿ ಗಟ್ಟಿಯಾದಷ್ಟು ಎಲ್ಲ ಸ್ತರಗಳಲ್ಲಿ ಬಲವರ್ಧನೆಗೊಳ್ಳುತ್ತಾ ಹೋಗುತ್ತದೆ. ತುಳು ಭಾಷೆಯಾಗಿ ಬೆಳೆದಿದ್ದರೂ, ಶೈಕ್ಷಣಿಕ ಅವಕಾಶಗಳು ಇರಲಿಲ್ಲ. ಈ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು 2018-19ನೇ ಸಾಲಿನಲ್ಲಿ ಹಂಪನಕಟ್ಟೆಯ ವಿಶ್ವವಿದ್ಯಾನಿಲಯದ ಸಂಧ್ಯಾ ಕಾಲೇಜಿನಲ್ಲಿ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗವನ್ನು ಆರಂಭಿಸಿತ್ತು. ಈ ಮೂಲಕ ತುಳು ಭಾಷೆಯ ಜನಪದ, ಸಾಹಿತ್ಯ, ಇತಿಹಾಸ, ಪರಂಪರೆಯ ಬಗ್ಗೆ ತಿಳಿಯಲು ಉನ್ನತ


















