Home ಕರಾವಳಿ Archive by category ಮಂಗಳೂರು (Page 250)

ಸುರತ್ಕಲ್ ಪರಿಸರಕ್ಕೆ ವೀರ ಸಾವರ್ಕರ್ ಹೆಸರು ಇಡುವುದರಲ್ಲಿ ತಪ್ಪೇನಿದೆ : ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ

ಸುರತ್ಕಲ್ ಪರಿಸರಕ್ಕೆ ವೀರಾ ಸಾವರ್ಕರ್ ಹೆಸರಿಡುವ ವಿಚಾರ ಬಗ್ಗೆ ಕಾಂಗ್ರೆಸ್ ಇತರ ಪಕ್ಷಗಳಿಂದ ವಿರೋಧ ಪ್ರತಿಭಟನೆ ವ್ಯಕ್ತವಾಗಿದೆ. ವೀರ ಸಾವರ್ಕರ್ ಹೆಸರು ಇಡುವುದರಲ್ಲಿ ತಪ್ಪೇನಿದೆ. ಅವ್ರೇನು ದೇಶ ದ್ರೋಹಿ ಅಲ್ಲ …ದುರಾದೃಷ್ಟ ಅವರನ್ನು ದೇಶ ದ್ರೋಹಿ ಎಂದು ಬಿಂಬಿಸುತ್ತಾರೆ. ದೇಶದಲ್ಲಿ ಅನೇಕ ಕಡೆ ವಿದೇಶಿಯರ ಹೆಸರಿದೆ ಅದಕ್ಕೆ ಯಾರೂ ವಿರೋಧ ವ್ಯಕ್ತ ಪಡಿಸಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಹೇಳಿದರು. ಅವರು ಮಂಗಳೂರಿನ ಬಿಜೆಪಿ

ಬಲ್ಲಾಳ್ ಭಾಗ್‍ನಲ್ಲಿ ಹಿಂದೂಗಳ ಮೇಲೆ ಹಲ್ಲೆ ಪ್ರಕರಣ : ಆರೋಪಿಗಳನ್ನ ಬಂಧಿಸುವಂತೆ ರಕ್ಷಿತ್ ಕೊಟ್ಟಾರಿ ಆಗ್ರಹ

ಬಲ್ಲಾಳ್ ಭಾಗ್‍ನಲ್ಲಿ ಹಿಂದೂಗಳ ಮೇಲೆ ಅನ್ಯಧರ್ಮದವರಿಂದ ನಡೆದಿರುವ ದೌರ್ಜನ್ಯದ ಬಗ್ಗೆ ಕೂಲಂಕುಷವಾಗಿ ಮತ್ತು ಪಾರದರ್ಶಕವಾಗಿ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುವಂತೆ ಬಲ್ಲಾಳ್ ಭಾಗ್ ಫ್ರೆಂಡ್ಸ್‍ನ ರಕ್ಷಿತ್ ಕೊಟ್ಟಾರಿ ಅವರು ಆಗ್ರಹಿಸಿದ್ದರು. ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಬಲ್ಲಾಳ್ ಭಾಗ್ ಪರಿಸರದ ಸುತ್ತಮುತ್ತ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಸೇವೆ

ಇಂದಿನಿಂದ ಪೂರ್ವ ಪ್ರಾಥಮಿಕ, ಅಂಗನವಾಡಿ ಆರಂಭ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ ಪೂರ್ವ ಪ್ರಾಥಮಿಕ ತರಗತಿಗಳು ಮತ್ತು ಅಂಗನವಾಡಿಗಳು ಆರಂಭವಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಲ್ಲಿ ಮಕ್ಕಳ ಕಲರವ ಮನೆಮಾಡಿದೆ. ಇಂದಿನಿಂದ ಅಂಗನವಾಡಿ, ಎಲ್‍ಕೆಜಿ ಮತ್ತು ಯುಕೆಜಿ ತರಗತಿ ಆರಂಭವಾಗಿದ್ದು ಮಕ್ಕಳ ಶಾಲೆಗಳ ಕಡೆ ಮುಖ ಮಾಡಿದ್ದಾರೆ. ಅಂಗನವಾಡಿ ಕೇಂದ್ರಗಳನ್ನು ಮೊದಲಿನ ಹಂತದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ತೆರೆಯಬಹುದಾಗಿದೆ. ಮುಂದಿನ ಸೂಚನೆವರೆಗೆ ಪೂರಕ ಪೌಷ್ಟಿಕ ಆಹಾರವನ್ನು

ಸಾವರ್ಕರ್ ವಿಜೃಂಭಣೆಯ ಹಿಂದೆ ತುಳುನಾಡಿನ ರಾಜಕೀಯ ಇತಿಹಾಸವನ್ನು ಮರೆಮಾಚುವ ಹುನ್ನಾರ : ಮುನೀರ್ ಕಾಟಿಪಳ್ಳ ಆರೋಪ

ಸುರತ್ಕಲ್ ವೃತ್ತಕ್ಕೆ ಸಾವರ್ಕರ್ ಹೆಸರು ಪ್ರಸ್ತಾಪದ ಹಿಂದೆ ಬಿಜೆಪಿಯ ಹಿಡೆನ್ ಅಜೆಂಡಾ ಅಡಗಿದೆ. ಮತದಾರರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಜೊತೆಗೆ ತುಳುನಾಡಿನ ರಾಜಕೀಯ ಇತಿಹಾಸವನ್ನು ಮರೆ ಮಾಚುವ ಹುನ್ನಾರವೂ ಇದರ ಹಿಂದೆ ಇದೆ ಎಂದು ಸಿಪಿಐಎಂ ‌ದ.ಕ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮುನೀರ್ ಕಾಟಿಪಳ್ಳ ಹೇಳಿದರು. ಅವರು ನಗರದ ಬಜಾಲ್ ನ ಭಗತ್ ಸಿಂಗ್ ಭವನದಲ್ಲಿ ಜರುಗಿದ 23ನೇ ಸಿಪಿಐಎಂ ಮಂಗಳೂರು ನಗರ ದಕ್ಷಿಣ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. 

ನ.8ರಂದು ಲೇಡಿಹಿಲ್‌ನಲ್ಲಿ ಎಸ್.ಎಲ್. ಶೇಟ್ ಡೈಮಂಡ್ ಹೌಸ್‌ನ ಹೊಸ ಮಳಿಗೆ ಉದ್ಘಾಟನೆ

ಚಿನ್ನ ಮತ್ತು ವಜ್ರಾಭರಣಗಳಿಗೆ ಪ್ರಸಿದ್ಧಿಯನ್ನು ಪಡೆದಿರುವ ಎಸ್.ಎಲ್ ಶೇಟ್ ಡೈಮಂಡ್ ಹೌಸ್ ನ ಹೊಸ ಮಳಿಗೆ ನವಂಬರ್ 8ರಂದು ನಗರದ ಲೇಡಿಹಿಲ್‌ನಲ್ಲಿ ಗಣ್ಯರ ಸಮ್ಮುಖದಲ್ಲಿ  ಉದ್ಘಾಟನೆಗೊಳ್ಳಲಿದೆ. 1947ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾದ ಎಸ್.ಎಲ್ ಶೇಟ್ ಡೈಮಂಡ್ ಹೌಸ್ ಚಿನ್ನಾಭರಣ ಮಳಿಗೆ ಕೇವಲ ಕರಾವಳಿಯಲ್ಲಿ ಮಾತ್ರವಲ್ಲ ನೆರೆಹೊರೆಯ ಜಿಲ್ಲೆಯವರಿಗೂ ಚಿರಪರಿಚಿತವಾಗಿದೆ. ಆಭರಣಗಳ ಸುಂದರ ವಿನ್ಯಾಸ ಮತ್ತು ಕಸೂತಿ ಕೌಶಲದಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ

ಐಡಿಯಲ್ ಐಸ್ ಕ್ರೀಮ್ ಮಾಲಕರು ಪ್ರಭಾಕರ ಕಾಮತ್ ನಿಧನ

ನಾಡಿನ ಪ್ರಸಿದ್ಧ ಸಂಸ್ಥೆಯಾಗಿರುವ ಐಡಿಯಲ್ ಐಸ್‍ಕ್ರೀಂ ಸ್ಥಾಪಕರಾದ ಶಿಬರೂರು ಪ್ರಭಾಕರ ಕಾಮತ್ (79) ಶನಿವಾರ ಮುಂಜಾನೆ 3.30ಕ್ಕೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅವರು ಅ.29ರಂದು ಬಿಜೈನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಓರ್ವ ಪುತ್ರ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮಂಗಳೂರಿನಲ್ಲಿ ಟೈಲರಿಂಗ್ ವಸ್ತುಗಳ ವಿತರಣೆ, ಪಟಾಕಿ ವಿತರಣೆ ಮಾಡಿಕೊಂಡಿದ್ದ

ಶ್ರೀ ಕ್ಷೇತ್ರ ಪೊಳಲಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ‘ಹಣತೆ ದೀಪ’

ಪೊಳಲಿ ಟೈಗರ್ಸ್ ಫ್ರೆಂಡ್ಸ್ ಮತ್ತು ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು ತಂಡದ ವತಿಯಿಂದ ಶ್ರೀ ಕ್ಷೇತ್ರ ಪೊಳಲಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ‘ಹಣತೆ ದೀಪ’ ಬೆಳಕಿನ ಹಬ್ಬಕ್ಕೆ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿಯಲ್ಲಿ ದೇವಸ್ಥಾನದ ಆವರಣದಲ್ಲಿ ತುಪ್ಪ ದೀಪ ಅಲಂಕಾರ ಸೇವೆ ನೆರವೇರಿತು… ಈ ವಿಶೇಷ ಸೇವೆಯು ಕಳೆದ ಎರಡು ವರ್ಷಗಳಿಂದ ನಡೆದುಕೊಂಡು ಬಂದಿದ್ದು ಈ ಬಾರಿಯ ಸೇವಾಕಾರ್ಯಕ್ಕೆ ಅತಿಥಿಯಾಗಳು ಸೇರಿ ಚಾಲನೆ ನೀಡಿದರು. ಈ ವೇಳೆ ದೇವಸ್ಥಾನದ ಪ್ರಧಾನ

ಬೊಲ್ಯ ರಸ್ತೆ ಕಾಂಕ್ರೀಟೀಕರಣ : ಶಾಸಕ ವೇದವ್ಯಾಸ್ ಕಾಮತ್ ರಿoದ ಭೂಮಿಪೂಜೆ

ಮಂಗಳೂರು ಮಹಾನಗರ ಪಾಲಿಕೆಯ ಪದವು ಪಶ್ಚಿಮ ವಾರ್ಡಿನ ಬೊಲ್ಯ ರಸ್ತೆಗೆ 1 ಕೋಟಿ ವೆಚ್ಚದಲ್ಲಿ ಕಾಂಕ್ರೀಟೀಕರಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು. ಆ ಬಳಿಕ ಮಾತನಾಡಿದ ಅವರು, ಬೊಲ್ಯ ಪರಿಸರದ ಜನರ ಬಹುಕಾಲದ ಬೇಡಿಕೆಯಾಗಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ 1 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ಭಾಗದಲ್ಲಿ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ವಾಹನ ಸಂಚಾರಕ್ಕೆ ತೊಡಕು ಉಂಟಾಗುತ್ತಿರುವ‌ ಹಿನ್ನೆಲೆಯಲ್ಲಿ ರಸ್ತೆಯ

ಜಿ.ಪಂ. ಮಾಜಿ ಸದಸ್ಯ ಸದಾನಂದ ಮಲ್ಲಿ ನಿಧನ

ಹಿರಿಯ ರಾಜಕೀಯ, ಸಾಮಾಜಿಕ ನೇತಾರ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಸದಾನಂದ ಮಲ್ಲಿ (82) ಬಂಟ್ವಾಳದ ಪಲ್ಲಮಜಲುವಿನಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರಿ, ಪುತ್ರ ಇಂಟಕ್ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ರಾಜ್ಯದ ಕಾರ್ಯಾಧ್ಯಕ್ಷ ರಾಕೇಶ್ ಮಲ್ಲಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಸುದೀರ್ಘ ಅವಧಿಗೆ ಆಗಿನ ಬಂಟ್ವಾಳ ಪಟ್ಟಣ ಪಂಚಾಯತ್ ಈಗಿನ ಪುರಸಭೆಯ ಸದಸ್ಯರಾಗಿದ್ದ ಅವರು ಬಂಟ್ವಾಳ ಪಟ್ಟಣ ಪಂಚಾಯತ್