Home ಕರಾವಳಿ Archive by category ಮಂಗಳೂರು (Page 258)

ಮಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿಗಳು

ಉಡುಪಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳು ಹಾಗೂ ಮಂಗಳೂರಿನ ಕುದ್ರೋಳಿ ದೇವಸ್ಥಾನದ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ಸಂದರ್ಭದಲ್ಲಿ ಜಿಲ್ಲಾಡಳಿತದ ವತಿಯಿಂದ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.ಕನ್ನಡ ಮತ್ತು ಸಂಸ್ಕೃತಿ ಸಚಿವರಾದ

ಪ್ರಾಯೋಗಿಕ ಕಂಬಳದಲ್ಲಿ ಮೂಡಿ ಬಂದ ಭರವಸೆಯ ಓಟಗಾರರಿಗೆ ಬಹುಮಾನ

ಮೂಡುಬಿದಿರೆ : ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ಆಶ್ರಯದಲ್ಲಿ 6ನೇ ವರ್ಷದ ಶಿಬಿರಾರ್ಥಿಗಳಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಕಡಲಕೆರೆಯ ಕೋಟಿ ಚೆನ್ನಯ ಜೋಡುಕರೆ ಕಂಬಳ ಕೆರೆಯಲ್ಲಿ ನಡೆದ ಪ್ರಾಯೋಗಿಕ ಕಂಬಳದಲ್ಲಿ ಹಗ್ಗ ಕಿರಿಯ ವಿಭಾಗದಲ್ಲಿ ರೆಂಜಾಳ ಡ್ರೀಮ್ ಹೌಸ್ ವಲೇರಿಯನ್ ಸಾಂತ್‌ಮೇರ್ (ಪ್ರ), ಬೈಂದೂರು ದುರ್ಗಾ ಫ್ರೆಂಡ್ಸ್ (ದ್ವಿ) ನೇಗಿಲು ವಿಭಾಗದ ಈದು ಬಟ್ಟೇನಿ ಶ್ರೀಧರ್ ಗಿರಿಯಪ್ಪ ಪೂಜಾರಿ(ಪ್ರ) ಮತ್ತು ಶ್ರೀ

ಕುಂಟಿಕಾನದಲ್ಲಿ ಖಾಸಗಿ ಬಸ್ ಮತ್ತು ಸ್ಕೂಟರ್ ನಡುವೆ ಅಪಘಾತ : ಸ್ಕೂಟರ್ ಸವಾರನಿಗೆ ಗಾಯ

ಮಂಗಳೂರಿನ ಕುಂಟಿಕಾನದ ಎಜೆ ಆಸ್ಪತ್ರೆಯ ಮುಂಭಾಗದಲ್ಲಿ ಖಾಸಗಿ ಬಸ್‌ನ ಹಿಂಬದಿಗೆ ಸ್ಕೂಟರ್ ವಾಹನ ಢಿಕ್ಕಿಯಾಗಿದ್ದು, ಸ್ಕೂಟರ್ ಸವಾರ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಾಸಗಿ ಬಸ್‌ನ ಹಿಂಬದಿಗೆ ದ್ವಿಚಕ್ರ ವಾಹನ ಸವಾರ ಹಿಮ್ಮುಖವಾಗಿ ಢಿಕ್ಕಿಯಾಗಿದೆ. ಢಿಕ್ಕಿಯಾದ ರಭಸಕ್ಕೆ ದ್ವಿಚಕ್ರವಾಹನ ಸವಾರ ಬಸ್‌ನ ಅಡಿಗೆ ನುಗ್ಗಿದ್ದು, ಗಂಭೀರ ಗಾಯಗೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.  ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.

ಭಾರತೀಯ ಜೀವ ವಿಮಾ ನಿಗಮದ ವತಿಯಿಂದ ಲೇಡಿಗೋಷನ್ ಆಸ್ಪತ್ರೆಗೆ ವಾಟರ್ ಪ್ಯೂರಿಫೈಯರ್ -ಕಮ್ -ಹೀಟರ್ನ ನ ಕೊಡುಗೆ

ಮಂಗಳೂರು ಲೇಡಿಗೋಶನ್ ಆಸ್ಪತ್ರೆಗೆ ವಾಟರ್ ಪ್ಯೂರಿಫೈಯರ್ ಕಂ ಹೀಟರ್ ನ್ನು ಭಾರತೀಯ ಜೀವ ವಿಮಾ ನಿಗಮವು ಕೊಡುಗೆಯಾಗಿ ನೀಡಿದೆ. ಈ ಕಾರ್ಯ ಮಾದರಿಯಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾ ಪ್ರಸಾದ್ ಅವರು ಹೇಳಿದರು. ಭಾರತೀಯ ಜೀವವಿಮಾ ನಿಗಮದ 65ನೇ ವರ್ಷಾಚರಣೆ ಸಂದರ್ಭದಲ್ಲಿ ಆಸ್ಪತ್ರೆಯ ಸುಪರಿಂಟೆಂಡೆಂಟ್ ಅವರು ವಾಟರ್ ಪ್ಯುರಿಫಯ್ಯರ್ ಕಂ ಹೀಟರ್ ಅನ್ನು ಸ್ವೀಕರಿಸಿ ಮಾತನಾಡಿದರು. ನಿಗಮದ ಮಂಗಳೂರು ಶಾಖೆಯ ಹಿರಿಯ ಪ್ರಬಂಧಕರಾದ ಶ್ರೀ ಎಚ್

ಮೂಡುಬಿದಿರೆ : ಎಸ್‌ ಕೆ ಎಸ್‌ ಎಸ್‌ ಎಫ್‌ ನಿಂದ ಪ್ರತಿಭಟನೆ

ಮೂಡುಬಿದಿರೆ: ಪ್ರವಾದಿ ನಿಂದನೆ ಹಾಗೂ ಮುಸ್ಲಿಂ ಸಮುದಾಯದ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ಎಸ್‌ಕೆಎಸ್‌ಎಸ್‌ಎಫ್ ನಿಂದ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಸಂಜೆ ಪ್ರತಿಭಟನೆ ನಡೆಯಿತು. ವಾಗ್ಮಿ ಅಹ್ಮದ್ ನಹೀಮ್ ಪೈಝಿ ಮುಕ್ವೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಜಾತಿ, ಧರ್ಮದ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಅವಹೇಳನ ಮಾಡಿ ದೇಶ ಒಡೆಯುವ ಕೋಮುವಾದಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.ಆಹಾರದ ಕಾರಣಕ್ಕಾಗಿ ನಮ್ಮ ಮೇಲೆ ದೌರ್ಜನ್ಯವೆಸಗುವ

ಕೊಟ್ಟಾರ ಚೌಕಿಯಲ್ಲಿ ಹೊಂಡಾ ಬಿಗ್ ವಿಂಗ್ ಮಳಿಗೆ ಶುಭಾರಂಭ

ಹೊಂಡಾ ಮೋಟಾರ್‍ಸ್‌ನವರ ಅತ್ಯುನ್ನತ ಶ್ರೇಣಿಯ ಬೈಕ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಹೊಂಡಾ ಬಿಗ್ ವಿಂಗ್ ಮಳಿಗೆ ಶುಭಾರಂಭಗೊಂಡಿತು. ನಗರದ ಕೊಟ್ಟಾರ ಚೌಕಿಯ ವಿಎಸ್‌ಕೆ ಟವರ್‌ನಲ್ಲಿ ಆರಂಭಗೊಂಡಿತು. ದ್ವಿಚಕ್ರ ವಾಹನ ಪ್ರೀಯರ ನೆಚ್ಚಿನ ಶೋರೋಂ ಆಗಿರುವ ಹೊಂಡಾ ಮೊಟಾರ್‍ಸ್‌ನವರ ಹೊಂಡಾ ಬಿಗ್ ವಿಂಗ್ ನಗರದ ಕೊಟ್ಟಾರ್ ಚೌಕಿಯ ವಿಎಸ್‌ಕೆ ಟವರ್‌ನಲ್ಲಿ ಆರಂಭಗೊಂಡಿತು. ಹೊಂಡಾ ಬಿಗ್ ವಿಂಗ್ ಮಳಿಗೆಯನ್ನು ಇಂಡಿಯನ್ ಐಡಲ್ 12 ರ ಖ್ಯಾತಿಯ ನಿಹಾಲ್ ತಾವ್ರೋ ಮತ್ತು ಸಚಿನ್

ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್: ದೇರಳಕಟ್ಟೆಯ ಬಿಸಿಸಿ ಹಾಲ್‌ನಲ್ಲಿ ರಕ್ತದಾನ ಶಿಬಿರ

ಉಳ್ಳಾಲ. ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಂಗಳೂರು ಬ್ಲಡ್ ಡೋನರ್ಸ್ ಆಶ್ರಯದಲ್ಲಿ ಇಂದು ದೇರಳಕಟ್ಟೆಯ ಬಿಸಿಸಿ ಹಾಲ್‌ನಲ್ಲಿ ರಕ್ತದಾನ ಶಿಬಿರ ನಡೆಯಿತು ಅಸ್ಸಯ್ಯದ್ ಅಮೀರ್ ತಙಳ್ ಕಿನ್ಯ ದುಆ ನೆರವೇರಿಸಿದರು. ಶಾಸಕ ಯು.ಟಿ ಖಾದರ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ ಡಾ. ಶಕೀಲ್ ಚಾರಿಟೇಬಲ್ ಟ್ರಸ್ಟ್ ಹಲವು ರೀತಿಯ ಸೇವೆಗಳನ್ನು ಮಾಡುತ್ತಾ ಬಂದಿದ್ದು, ಇದೀಗ ಆರೋಗ್ಯಕ್ಕೆ ಸಂಬಂಧಿಸಿದ ರಕ್ತದಾನ ಶಿಬಿರ ಆಯೋಜಿಸಿದೆ. ಮುಂದಿನ ದಿನಗಳಲ್ಲಿ

ಪ್ರವಾದಿ ನಿಂದನೆಯನ್ನು ವಿರೋಧಿಸಿ ಪ್ರತಿಭಟನೆ

ಗುರುಪುರ ಕೈಕಂಬ; ಪ್ರವಾದಿ ನಿಂದನೆ ಹಾಗೂ ಮುಸ್ಲಿಂ ಸಮುದಾಯದ ಮೇಲಾಗುತ್ತಿರುವ ನಿರಂತರ ದೌರ್ಜನ್ಯದ ವಿರುದ್ಧ ಎಸ್‌ಕೆಎಸ್‌ಎಸ್‌ಎಫ್ ಕೈಕಂಬ ವಲಯದಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಎಂ. ಇಸ್ಹಾಕ್ ಕೌಸರಿ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ನಿಮಗಿಂತಲೂ ಪ್ರವಾದಿಯನ್ನು ನಿಂದಿಸಿದ ಜನರು ಕಳೆದುಹೋಗಿದ್ದಾರೆ. ಅವರಲ್ಲಿ ಬಹಳಷ್ಟು ಜನರು ಪ್ರವಾದಿಯವರನ್ನು ಅರಿತಾಗ ಇಸ್ಲಾಂ ಸ್ವೀಕರಿಸಿದ ಚರಿತ್ರೆಯಿದೆ. ಪ್ರವಾದಿಯನ್ನು

ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ

ಕಳೆದ 2 ದಿನದ ಹಿಂದೆ ಸೋಲದೇವನಹಳ್ಳಿಯಿಂದ ನಾಪತ್ತೆಯಾಗಿದ್ದ ಅಮೃತವರ್ಷಿಣಿ(21), ಭೂಮಿ(12), ಚಿಂತನ್(12), ರಾಯನ್(12) ಮಕ್ಕಳನ್ನು ಮಂಗಳೂರಿನಲ್ಲಿ ಅಟೋ ಚಾಲಕ ಪತ್ತೆ ಹಚ್ಚಿ ಪಾಂಡೇಶ್ವರ ಪೊಲೀಸ್‌ ಠಾಣೆಗೆ ತಿಳಿಸಿದ್ದಾರೆ ಎನ್ನಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಈ ಮಕ್ಕಳು ಕಾಣೆಯಾಗಿದ್ದರು. ಈ ಬಗ್ಗೆ ಬೆಂಗಳೂರು ಪೊಲೀಸರು ವಿಶೇಷ ತಂಡ ರಚನೆ ಮಾಡಿ ಮಕ್ಕಳ ಹುಡುಕಾಟದಲ್ಲಿ ತೊಡಗಿದ್ದರು. ಒಟ್ಟಾರೆ ಪ್ರಕರಣ ಸುಖ್ಯಾಂತ್ಯ ಕಂಡಿದೆ.