Home ಕರಾವಳಿ Archive by category ಮಂಗಳೂರು (Page 274)

ಮಾನವ ಸಂಬಂಧಗಳನ್ನುಗೌರವಿಸಲು ಪ್ರೇರೆಪಿಸುವ ಮೊಂತಿ ಹಬ್ಬ:ಮಂಗಳೂರು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಸಂದೇಶ

ಮಂಗಳೂರು ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾರವರಿಂದ ಮೊಂತಿ ಹಬ್ಬದ ಸಂದೇಶವನ್ನು ಸಾರಿದರು.  ಪ್ರಿಯರೇ ನಿಮಗೆಲ್ಲರಿಗೂ ಮಾತೆ ಮರಿಯಮ್ಮನವರ ಜನುಮದಿನದ ಶುಭಾಶಯಗಳು. ಸಪ್ಟೆಂಬರ್ 08 ರಂದುಆಚರಿಸುವ ಈ ಹಬ್ಬವು ಕರ್ನಾಟಕಕರಾವಳಿಯಕ್ರೈಸ್ತರಿಗೆ ಪ್ರತ್ಯೇಕವಾಗಿ ಕೊಂಕಣಿ ಭಾಷಿಗರಿಗೆ ಅತಿ ಪ್ರೀತಿಯದ್ದಾಗಿದೆ. ನಾವು ಈ ಹಬ್ಬವನ್ನು ‘ಮೊಂತಿ ಫೆಸ್ತ್’ ಅಂತ

ಹಾಸನ ಬಳಿಯಲ್ಲಿ ರಸ್ತೆ ಅಪಘಾತ : ಆಸ್ಪತ್ರೆಗೆ ಸಾಗಿಸಲು ನೆರವಾದ ನಳಿನ್ ಕುಮಾರ್

ರಾಜ್ಯ ಪ್ರವಾಸದಿಂದ ಮರಳಿ ಮಂಗಳೂರಿಗೆ ಬರುವಾಗ ಹಾಸನ ಬಳಿಯಲ್ಲಿ ರಸ್ತೆ ಅಪಘಾತದಲ್ಲಿ ಸಿಲುಕಿದ್ದ ಸಾರ್ವಜನಿಕರನ್ನು ಸುರಕ್ಷಿತವಾಗಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲು ಬಿಜೆಪಿಯ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ನೆರವಾಗಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು, ತಕ್ಷಣವೇ ನಳಿನ್ ಕುಮಾರ್ ಕಟೀಲ್ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

ಶಕ್ತಿನಗರದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಂಜಿನಿಯರಿಂಗ್ ಘಟಕ, ಮಂಗಳೂರು, ಉಪವಿಭಾಗದ ಶಕ್ತಿನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನಡೆಯಿತು.ಶಕ್ತಿನಗರ ಪ್ರಾಥಮಿಕ ಆರೋಗ್ಯ ಕೇಂದ್ರವು ಸುಮಾರು 45 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ನೂತನ ಕೇಂದ್ರವನ್ನು ಶಾಸಕ ವೇದವ್ಯಾಸ್ ಕಾಮತ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನೂತನ ರೀತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಗೊಂಡಿದೆ. ಮುಂದಿನ ದಿನಗಳಲ್ಲಿ ಇಲ್ಲಿನ ಜನತೆಗೆ ಈ

ವೀಕೆಂಡ್ ಕರ್ಫ್ಯೂ ಮರುಪರಿಶೀಲಿಸಿ: ಶಾಸಕ ಯು.ಟಿ.ಖಾದರ್ ಒತ್ತಾಯ

ಮಂಗಳೂರು: ಮಂಗಳೂರಲ್ಲಿ ಜಾರಿ ಮಾಡಿರುವ ವೀಕೆಂಡ್ ಕರ್ಫ್ಯೂವನ್ನು ಮರು ಪರಿಶೀಲಿಸುವಂತೆ ಶಾಸಕ ಯುಟಿ ಖಾದರ್ ಒತ್ತಾಯಿಸಿದ್ದಾರೆ. ಮಂಗಳೂರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಾರಾಂತ್ಯ ಕರ್ಫ್ಯೂವಿನ ಹಿಂದಿನ ತರ್ಕ ಏನೆಂದು ಅರ್ಥವಾಗುತ್ತಿಲ್ಲ. ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತುಗಳ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಪಾದರಕ್ಷೆ, ಜವಳಿ ಮುಂತಾದ ಇತರ ಅಂಗಡಿಗಳಿಗೆ ಏಕೆ ಅನುಮತಿ ಇಲ್ಲ. ಜಿಲ್ಲಾಡಳಿತವು

ಪಂಜಿಮೊಗರುವಿನಲ್ಲಿ ಕೋವಿಡ್ ಲಸಿಕೆ ಶಿಬಿರಕ್ಕೆ ಶಾಸಕ ಡಾ. ವೈ ಭರತ್ ಶೆಟ್ಟಿ ಚಾಲನೆ

ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಕೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನಾಗರಿಕರಿಗೆ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರ ನೇತೃತ್ವದಲ್ಲಿ  ಪ್ರಧಾನ ಮಂತ್ರಿಯವರ ಉಚಿತ ಕೋವಿಡ್ ಲಸಿಕಾ ಯೋಜನೆಯಡಿ ಉಚಿತ ಕೋವಿಡ್ ಲಸಿಕಾ ಶಿಬಿರ ನಡೆಯಿತು. ಪಂಜಿಮೊಗರುವಿನ ಕೂಳೂರು ಮೊಹಿದ್ದೀನ್ ಜುಮಾ ಮಸೀದಿ ಆವರಣದಲ್ಲಿ ಸೋಮವಾರ ಶಿಬಿರಕ್ಕೆ ಶಾಸಕರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್,ಶಾನ್ವಾಜ್ ಹುಸೇನ್ ಅಧ್ಯಕ್ಷರು

ಔಷಧೀಯ ಸಸ್ಯಗಳನ್ನು ಬೆಳೆಸುವುದು ಇಂದಿನ ಅಗತ್ಯ: ಮಾಜಿ ಶಾಸಕ ಜೆ.ಆರ್ ಲೋಬೋ

ಮಂಗಳೂರು: ನಗರ ಪ್ರದೇಶದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುವುದು ಇಂದಿನ ಅಗತ್ಯ ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಹೇಳಿದರು.ಬ್ರಹ್ಮಶ್ರೀ ನಾರಾಯಣ ಗುರುವರ್ಯರ 167ನೇ ಜನ್ಮದಿನ ಪ್ರಯುಕ್ತ ಕುದ್ರೋಳಿ ಗುರು ಬೆಳದಿಂಗಳು ಸೇವಾ ಸಂಸ್ಥೆಯಿಂದ ಔಷಧೀಯ ಸಸ್ಯಗಳ ನೆಡುವ ಸರಣಿ ಕಾರ್ಯಕ್ರಮದ ಅಂಗವಾಗಿ ಭಾನುವಾರ ಜೆಪ್ಪು ಸೇಂಟ್ ಜೋಸೆಫ್ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸೇಂಟ್ ಜೋಸೆಫ್ ಸೆಮಿನರ್ ರೆಕ್ಟರ್ ರೊನಾಲ್ಡ್ ಸೆರಾವೋ, ಆಡಳಿತ ಅಧಿಕಾರಿ ರೆ.ಫಾ.ಲಸ್ರಾದೊ,

ಬಜಾಲ್ ನಿವಾಸಿ ವಾಲ್ಟರ್ ಮೊಂತೆರೋ ವಿಧಿವಶ:ಸೆ.6ರಂದು ಹೋಲಿ ಸ್ಪಿರಿಟ್ ಚರ್ಚ್‌ನಲ್ಲಿ ಅಂತ್ಯಸಂಸ್ಕಾರ

ಮಂಗಳೂರಿನ ಬಜಾಲ್ ನಿವಾಸಿಯಾಗಿರುವ ವಾಲ್ಟರ್ ಮೊಂತೆರೋ(77) ಅವರು ಭಾನುವಾರದಂದು ನಿಧನರಾದರು. ಅವರು ಪುತ್ರಿಯರಾದ ವಾಣಿ ಐವನ್, ಸವಿತಾ ಲ್ಯಾನ್ಸಿ, ಸುನಿತಾ ನೋಬರ್ಟ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಸೆಪ್ಟಂಬರ್ 6ರಂದು ಬೆಳಗ್ಗೆ 9.30ಕ್ಕೆ ಬಜಾಲ್‌ನ ಇವಾನಿ ಹೌಸ್‌ನಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ 10 ಗಂಟೆಗೆ ಬಜಾಲ್‌ನ ಹೋಲಿ ಸ್ಪಿರಿಟ್ ಚರ್ಚ್‌ನಲ್ಲಿ ವಿಶೇಷ ಪೂಜೆ ನೆರವೇರಿದ ಬಳಿಕ ಅಂತ್ಯಸಂಸ್ಕಾರ ನೆರವೇರಲಿದೆ.  

ಪುತ್ತೂರಿನಲ್ಲಿ ಶಿಕ್ಷಕರ ದಿನಾಚರಣೆ: ನಿವೃತ್ತ ಶಿಕ್ಷಕರಿಗೆ, ಸಾಧಕರಿಗೆ, ಅಧಿಕಾರಿಗಳಿಗೆ ಗೌರವ

ಪುತ್ತೂರು: ದ.ಕ.ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಯುಕ್ತ ಆಶ್ರಯದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ನಿವೃತ್ತ ಶಿಕ್ಷಕರು, ಸಾಧಕ ವಿದ್ಯಾರ್ಥಿಗಳು ಹಾಗೂ ವಿವಿಧ ಅಧಿಕಾರಿ ವರ್ಗದವರನ್ನು ಗೌರವಿಸುವ ಮೂಲಕ ಅರ್ಥಪೂರ್ಣವಾಗಿ ಭಾನುವಾರ ಇಲ್ಲಿಯ ಪುರಭವನದಲ್ಲಿ ಆಚರಿಸಲಾಯಿತು. ಸಮಾರಂಭದಲ್ಲಿ ತಾಲೂಕಿನ ವಿವಿಧ ಸರಕಾರಿ ಪ್ರಾಥಮಿಕ,

ಮಂಗಳೂರಿನ ಜಪ್ಪಿನಮೊಗರು ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ: ಸಾಧಕ ಮತ್ತು ನಿವೃತ್ತ ಶಿಕ್ಷಕರಿಗೆ ಸನ್ಮಾನ

ಅಂತರ್ಜಾಲ ಮೂಲಕ ಶಿಕ್ಷಣ ಪಡೆಯುವ ಕಾಲ ಇಷ್ಟು ಬೇಗ ಬರುತ್ತದೆ ಎನ್ನುವ ಭಾವನೆ ಇರದಿದ್ದರೂ ಕೋವಿಡ್‌ನಿಂದಾಗಿ ಅಂತಹ ಪರಿಸ್ಥಿತಿ ಬಂದಿದೆ. ಕೆಲವು ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಎದುರಾಗಿದ್ದು, ಪರಿಹಾರ ನಿಟ್ಟಿನಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು ದಕ್ಷಿಣ ವಲಯ ಶಿಕ್ಷಕರ ದಿನಾಚರಣಾ ಸಮಿತಿ ಹಾಗೂ ಕ್ಷೇತ್ರ

ಕೋವಿಡ್ ನಿಯಂತ್ರಣದಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಳ್ಳಬೇಕು -ಡಾ.ಕೆ.ವಿ.ರಾಜೇಂದ್ರ

ಮಂಗಳೂರು: ಕೋವಿಡ್ ನಿಯಂತ್ರಣ ಮಾಡಲು ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ. ಅವರು ಪಣಂಬೂರು ಕೆಐಒಸಿಎಲ್ ಟೌನ್ ಶಿಫ್ ಆವರಣದಲ್ಲಿಂದು ಕೋವಿಡ್ ನಿಯಂತ್ರಣ ಲಸಿಕೆಯ ವಿತರಣಾ ಕಾರ್ಯ ಕ್ರಮ ವನ್ನುದ್ದೇಶಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಲಸಿಕೆ ವಿತರಣಾ ಕಾರ್ಯಕ್ರಮ ಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಎರಡು ಡೋಸ್ ಲಸಿಕೆ ಪಡೆದವರ