Home ಕರಾವಳಿ Archive by category ಮಂಗಳೂರು (Page 280)

ಕಾಬೂಲಿನ ಮಿಲಿಟರಿ ಏರ್ ಬೇಸ್ ನಲ್ಲಿ ಉದ್ಯೋಗದಲ್ಲಿದ್ದ ಮಂಗಳೂರು ಮೂಲದ ನಾಲ್ಕು ಮಂದಿ ಸುರಕ್ಷಿತವಾಗಿ ಮನೆಗೆ

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲಿನ ಮಿಲಿಟರಿ ಏರ್ ಬೇಸ್ ನಲ್ಲಿ ಉದ್ಯೋಗದಲ್ಲಿದ್ದ ಮಂಗಳೂರು ಮೂಲದ ನಾಲ್ಕು ಮಂದಿ ಸುರಕ್ಷಿತವಾಗಿ ಮನೆ ಸೇರಿದ್ದಾರೆ. ಕಾಬೂಲಿನ ನ್ಯಾಟೋ ಏರ್ ಬೇಸ್ ನಲ್ಲಿ ಕೆಲಸಕ್ಕಿದ್ದ ನಾಲ್ವರನ್ನು ಅಮೆರಿಕದ ವಾಯುಪಡೆ ಆಗಸ್ಟ್ 17 ರಂದು ಕತಾರ್ ಗೆ ಏರ್ ಲಿಫ್ಟ್ ಮಾಡಿತ್ತು. ಅಲ್ಲಿಂದ ಭಾರತದ ವಾಯುಪಡೆ ವಿಮಾನ ಭಾನುವಾರ ದೆಹಲಿಗೆ ಕರೆತಂದಿತ್ತು.

ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮ ದಿನದ ಕಾರ್ಯಕ್ರಮ

 ಅಖಿಲ ಭಾರತ ಬಿಲ್ಲವರ ಯೂನಿಯನ್, ಬಿಲ್ಲವ ಮಹಿಳಾ ಸಂಘ ಮತ್ತು ನಾರಾಯಣಗುರು ವಿದ್ಯಾ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮ ದಿನದ ಕಾರ್ಯಕ್ರಮವನ್ನು ನಗರದ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ಆಚರಿಸಲಾಯ್ತು. ಈ ವೇಳೆ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷರಾದ ನವೀನ್ ಚಂದ್ರ ಡಿ.ಸುವರ್ಣ, ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಕುದ್ರೊಳಿ ನಾರಾಯಣ ಗುರು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ|ವಸಂತ್ ಕುಮಾರ್,

ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ: ಕುದ್ರೋಳಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದ ಸಂಸದ ನಳಿನ್

ಸಮಾಜ ಸುಧಾರಕ ಬ್ರಹ್ಮ ಶ್ರೀ ನಾಯಾಯಣ ಗುರುಗಳ ಜಯಂತಿಯ ಪ್ರಯುಕ್ತ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ‌ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ, ಪಾಲಿಕೆ‌ ಸದಸ್ಯರಾದ ಜಯಶ್ರೀ ಕುಡ್ವ, ಸಂಧ್ಯಾ ಮೋಹನ್

ಮಿತ್ರಪಟ್ಟಣ ಮೊಗವೀರ ಸಮಾಜದ ವತಿಯಿಂದ ಸಮುದ್ರ ಪೂಜೆ

ಮಂಗಳೂರು: ಮೀನುಗಾರಿಕಾ ಋತುವಿನ ಆರಂಭದಲ್ಲಿ ಸಮುದ್ರಪೂಜೆಯನ್ನು ಮಾಡುವ ಮೂಲಕ ಮತ್ಥ್ಯ ಸಂಪತ್ತನ್ನು ಕರುಣಿಸಲು ಮತ್ತು ಮೀನುಗಾರ ಬಂಧುಗಳ ಸುರಕ್ಷೆಗಾಗಿ ಪ್ರಾರ್ಥಿಸಿ ಮಿತ್ರಪಟ್ಟಣ ಮೊಗವೀರ ಮಹಾ ಸಮಾಜದ ವತಿಯಿಂದ ಸಮುದ್ರ ಪೂಜಾ ಕಾರ್ಯಕ್ರಮ ನಡೆಯಿತು. ಸಮುದ್ರ ಪೂಜೆಯ ಕಾರ್ಯಕ್ರಮದಲ್ಲಿ ಶಾಸಕರಾದ ಡಾ. ಭರತ್ ಶೆಟ್ಟಿಯವರು ಸಮುದ್ರಕ್ಕೆ ಹಾಲು ಹಾಕುವುದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.ಈ ಸಂದರ್ಭದಲ್ಲಿ ಮಿತ್ರಪಟ್ಟಣ ಮೊಗವೀರ ಸಮಾಜದ ಅಧ್ಯಕ್ಷರಾದ ರವೀಂದ್ರ

ದ.ಕ., ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಸದ್ಯ ಶಾಲಾರಂಭ ಇಲ್ಲ

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಮತ್ತು ಸೋಂಕುಪೀಡಿತರ ಸಾವು ಏರಿಳಿಕೆಯಾದರೂ ಸತತ ಒಂದು ವಾರದಿಂದ ಪರೀಕ್ಷೆಗಳ ಪಾಸಿಟಿವಿಟಿ ದರ ಶೇ. 1ಕ್ಕಿಂತಲೂ ಕಡಿಮೆ ವರದಿಯಾಗುತ್ತಿದೆ. ಈ ಮೂಲಕ ಮೂರನೇ ಅಲೆ ಆತಂಕ ಸದ್ಯದ ಮಟ್ಟಿಗೆ ದೂರವಾಗಿದೆ. ಇದರ ಮಧ್ಯೆ ಸೋಮವಾರದಿಂದ ರಾಜ್ಯದಲ್ಲಿ ಶಾಲಾರಂಭ ಆಗಲಿದ್ದರೂ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾತ್ರ ತರಗತಿ ಆರಂಭವಾಗುವುದಿಲ್ಲ ಎಂದು ಸರಕಾರ ಹೇಳಿದೆ. ಈ ಮೊದಲು ಶೇ. 2ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ

ವ್ಯಕ್ತಿಯೋರ್ವನಿಂದ ಮಂಗಳೂರಿನ ಹೊಟೇಲ್ ಗಳಿಗೆ ಪಂಗನಾಮ: ಬಂಧನ

ವ್ಯಕ್ತಿಯೊಬ್ಬ ನಗರದ ವಿವಿಧ ಹೊಟೇಲ್ ಗಳಲ್ಲಿ ಉಳಿದುಕೊಂಡು ಮೋಸ ಎಸಗಿರುವ ಆರೋಪಿಯನ್ನು ಬಂದರು ಪೊಲೀಸರು ಬಂಧಿಸಿದ್ದಾರೆ. ಶ್ರೀನಿವಾಸ್ ಬಂಧಿತ ಆರೋಪಿಯಾಗಿದ್ದಾನೆ. ಈತ ದೆಹಲಿ ಏಮ್ಸ್ ಆಸ್ಪತ್ರೆಯ ಡಾಕ್ಟರ್ ಅಂತ ಹೇಳಿಕೊಂಡು , ಪ್ರೊಫೆಸರ್ ಮತ್ತು ಸರ್ಜನ್ ಆಗಿರುವ ಐಡಿ ತೋರಿಸಿದ್ದ.  ನಗರದ ಸ್ಟೇಟ್ ಬ್ಯಾಂಕ್ ಬಳಿಯ ನೆಲ್ಲಿಕಾಯಿ ರಸ್ತೆಯಲ್ಲಿರುವ ಹೊಟೇಲ್ ಸಿಟಿ ವಾಕ್ ರೆಸಿಡೆನ್ಸಿಯಲ್ಲಿ ರೂಮ್ ಪಡೆದು ಕೊನೆಗೆ ಚೆಕ್ ಔಟ್ ವೇಳೆ, ಹಣ ಕೊಡದೆ ಪರಾರಿಯಾಗಿದ್ದ. ಹೊಟೇಲ್

ತಿರಸ್ಕೃತದ ಪುಸ್ತಕಕ್ಕೆ ಮತ್ತೊಮ್ಮೆ ಮಣೆ : ಮಂಗಳೂರು ವಿ.ವಿ. ಪುಸ್ತಕ ವಿವಾದ !!

ಮಂಗಳೂರು ವಿಶ್ವವಿದ್ಯಾನಿಯಲದ ಪ್ರಸಾರಾಂಗದ ಸಂಶೋಧನಾ ಮಾಲಕೆಯ ಕೃತಿ ಪ್ರಕಟನೆಯಲ್ಲಿ ಈ ಹಿಂದೆ ತಿರಸ್ಕೃತವಾಗಿದ್ದ ಪುಸ್ತಕಕ್ಕೆ ಇದೀಗ ವಿಶ್ವವಿದ್ಯಾನಿಲಯದ ಅಧಿಕೃತ ಮುದ್ರೆ ಲಭಿಸುವ ಸಾಧ್ಯತೆ ಕಂಡು ಬಂದಿದೆ. ಮಂಗಳೂರು ನಗರದ ಕಾಲೇಜೊಂದರ ನಿವೃತ್ತ ಉಪನ್ಯಾಸಕ ಡಾ.ಪಿ. ಅನಂತಕೃಷ್ಣ ಭಟ್ ಅವರು ಬರೆದಿರುವ “ಭಾರತ ಸಂವಿಧಾನ ” ಎಂಬ ಕನ್ನಡ ಕೃತಿ ಹಾಗೂ ಆಂಗ್ಲ ಭಾಷೆಯ ” ಇಂಡಿಯನ್ ಕ್ವಾನ್ಸಿಟಿಟ್ಯೂಶನ್ ” ಎಂಬ ಪುಸ್ತಕಕ್ಕೆ

ಕೆ.ಪಿ.ಎಸ್.ಸಿಯನ್ನು ಸ್ವಚ್ಛಗೊಳಿಸಿ-ಅನರ್ಹ ಅಧ್ಯಕ್ಷರನ್ನು ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ

“ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇನ್ನಿತರ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳಲ್ಲಿ ಅಕ್ರಮ, ಭ್ರಷ್ಟಾಚಾರ, ಸ್ವಜನಪಕ್ಷಪಾತ ನಡೆಯುವುದನ್ನು ತಪ್ಪಿಸಬೇಕು. ಎಲ್ಲ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಸಿಗಬೇಕು” ಎಂದು ಅಖಿಲ ಭಾರತ ನಿರುದ್ಯೋಗಿ ಯುವಜನರ ಹೋರಾಟ ಸಮಿತಿ ಕರ್ನಾಟಕ ರಾಜ್ಯ ಕಾರ್ಯದರ್ಶಿಗಳಾದ ಸಿದ್ದಲಿಂಗ ಬಾಗೇವಾಡಿ ಅವರು ಹೇಳಿದರು. ಕೆ.ಪಿ.ಎಸ್.ಸಿ.ಯನ್ನು ಭ್ರಷ್ಟ ಆಢಳಿತಗಾರರಿಂದ ಸ್ವಚ್ಛಗೊಳಿಸಲು ಆಗ್ರಹಿಸಿ ಹಾಗೂ ಅನರ್ಹ