ಮೂಡುಬಿದಿರೆ: ಕಳೆದ ಮೇ ತಿಂಗಳನಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ ಅಂತಿಮ ಬಿಇ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕೃಷಿ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ರ‍್ಯಾಂಕ್‌ಗಳನ್ನು ಪಡೆದಿದ್ದಾರೆ.ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕೃಷಿ ಇಂಜಿನಿಯರಿಂಗ್ ವಿಭಾಗದ ಪ್ರಥಮ ಬ್ಯಾಚ್‌ನ
ಮೂಡುಬಿದಿರೆ : ಸೌತ್‌ಕೆನರಾ ಹೋಂ ಇಂಡಸ್ಟ್ರೀಸ್‌ನ ನಿವೃತ್ತ ಉದ್ಯೋಗಿ, ಕಾಳಿಕಾಂಬಾ ದೇವಸ್ಥಾನದ ಬಳಿಯ ನಿವಾಸಿ, ಸೃಜನಶೀಲ ಛಾಯಾಗ್ರಾಹಕ ಅಶ್ವತ್ಥಾಮ ಆಚಾರ್ಯ (73) ಬುಧವಾರ ರಾತ್ರಿ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.ಹವ್ಯಾಸಿ ಛಾಯಾಗ್ರಾಹಕರಾಗಿದ್ದ ಅವರು ನಿವೃತ್ತಿಯ ಬಳಿಕ ಮೂಡುಬಿದಿರೆಯಲ್ಲಿ ದುರ್ಗಾ ಸ್ಟುಡಿಯೋ ಸ್ಥಾಪಿಸಿ ಮುನ್ನಡೆಸಿದ್ದರು. ಅವರು ಸೆರೆಹಿಡಿದ ಅಪರೂಪದ ಛಾಯಾಚಿತ್ರಗಳು ಹಲವೆಡೆ
ಮೂಡುಬಿದಿರೆ: ಇಲ್ಲಿನ ಶಿವರಾಮ ಕಾರಂತ ಪ್ರತಿಷ್ಠಾನ ನೀಡುವ ಪ್ರಸಕ್ತ ವರ್ಷದ ಶಿವರಾಮ ಕಾರಂತ ಪ್ರಶಸ್ತಿಗೆ ಸಾಹಿತಿಗಳಾದ ಪ್ರೊ.ಎನ್.ಟಿ ಭಟ್, ಪ್ರೊ.ಬರಗೂರು ರಾಮಚಂದ್ರಪ್ಪ ಹಾಗೂ ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಜಯಶ್ರೀ ಅಮರನಾಥ್ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಡಾ.ಜಯಪ್ರಕಾಶ ಮಾವಿನಕುಳಿ ತಿಳಿಸಿದ್ದಾರೆ.
ವಿದ್ಯೆ ಎನ್ನುವುದು ಅಭಿನಾಷಿಯಾದದ್ದು ವಿದ್ಯೆ ನಮ್ಮ ಬದುಕಿಗೆ ಕವಿದಿರುವ ಕತ್ತಲೆಯನ್ನು ಕಳೆದು ಸುಜ್ಞಾನದ ಬೆಳಕನ್ನು ನೀಡುತ್ತದೆ ಇಂತಹ ಉತ್ತಮ ಕೆಲಸವನ್ನು ಆಕಾಂಕ್ಷಿಗಳ ತಂಡ ಮಾಡುತ್ತಿದೆ.ಅಂಚೆ ಇಲಾಖೆಯ ಪದೋನ್ನತಿ ಪರೀಕ್ಷೆಗಳಿಗಾಗಿ ಆಯೋಜಿಸಿದ ಉಚಿತ ತರಬೇತಿ ಶಿಬಿರ ಶ್ಲಾಘನೀಯ. ವಿದ್ಯೆ ಕಲಿತಷ್ಟು ಮುಗಿಯದೇ ಇರುವಂಥದ್ದು. ಇಲಾಖೆಯೊಳಗೆ ಪದೋನ್ನತಿಯನ್ನು ಹೊಂದಿ ಉತ್ತಮ ಪದವಿಯನ್ನು ಏರುವುದಕ್ಕೆ ಈ ಒಂದು ಉಚಿತ ತರಬೇತಿ ಶಿಬಿರ ಕಾರಣವಾಗುತ್ತದೆ.ತಾಯಿ ದುರ್ಗಾದೇವಿ
ಮೂಡುಬಿದಿರೆ : ಎಸ್.ಎನ್. ಮೂಡುಬಿದಿರೆ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆಯ ಐದು ವಿದ್ಯಾರ್ಥಿಗಳು ಜೂನ್ 4 ರಿಂದ 7ರ ತನಕ ಮಂಗಳೂರಿನ ಯೆನಪೋಯ ವಿಶ್ವ ವಿದ್ಯಾಲಯದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಗ್ಲೋಬಲ್ ಯೂಥ್ ಸಮ್ಮಿಟ್ 2025 ಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲೆ ನೊರೊನ್ಹಾ ತರೀನಾ ರೀಟಾ ತಿಳಿಸಿದ್ದಾರೆ. ಈ ಸಮ್ಮೇಳನದಲ್ಲಿ ಭಾರತದ 20 ರಾಜ್ಯಗಳಿಂದ ಹಾಗು 10 ಇತರ ದೇಶಗಳನ್ನು ಒಳಗೊಂಡಂತೆ ಸುಮಾರು 500ಕ್ಕೂ ಹೆಚ್ಚು ಯುವ
ಮೂಡುಬಿದಿರೆ : ಕಳೆದ ಎರಡು ದಿನಗಳ ಹಿಂದೆ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಗೊಟ್ಟು ಎಂಬಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದ ಆನೆಗುಡ್ಡೆಯ ಗುರುಪ್ರಸಾದ್ ಅವರ ಮೃತದೇಹವನ್ನು ಈಜು ತಜ್ಞ ಈಶ್ವರ್ ಮಲ್ಪೆ ಅವರು ಮೇಲಕ್ಕೆತ್ತಿದ್ದಾರೆ. ಜೋಗೊಟ್ಟು ಬಳಿಯ ಪಡ್ಡಾಯಿಮಜಲು ಎಂಬಲ್ಲಿರುವ ಅಣೆಕಟ್ಟಿನಲ್ಲಿ ನೀರು ತುಂಬಿಕೊಂಡಿತ್ತು ಅದರ ಹಲಗೆಯನ್ನು ತೆಗೆಯಲೆಂದು ಗುರುಪ್ರಸಾದ್ ಅವರು ಕೆಳಗಿಳಿಯುತ್ತಿದ್ದ ಸಂದಭ೯ದಲ್ಲಿ ಕಾಲು ಜಾರಿ ನೀರಿಗೆ
ಮೂಡುಬಿದಿರೆ : ಕಳೆದ ಎರಡು ದಿನಗಳ ಹಿಂದೆ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಗೊಟ್ಟು ಎಂಬಲ್ಲಿ ಆನೆಗುಡ್ಡೆಯ ಗುರುಪ್ರಸಾದ್ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದು ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಈಜು ತಜ್ಞ ಈಶ್ವರ್ ಮಲ್ಪೆ ಅವರನ್ನು ಕರೆಸಿಕೊಂಡಿದ್ದು ಅವರು ನೀರಿಗಿಳಿದು ಹುಡುಕಾಟವನ್ನು ಆರಂಭಿಸಿದ್ದಾರೆ. ಜೋಗೊಟ್ಟು ಬಳಿಯ ಪಡ್ಡಾಯಿಮಜಲು ಎಂಬಲ್ಲಿರುವ ಅಣೆಕಟ್ಟಿನಲ್ಲಿ ನೀರು ತುಂಬಿಕೊಂಡಿತ್ತು ಅದರ ಹಲಗೆಯನ್ನು ತೆಗೆಯಲೆಂದು
ಮೂಡುಬಿದಿರೆ : ದರೋಡೆ ಮಾಡಲು ಸಂಚು ರೂಪಿಸಿದ್ದ ಐವರ ಗುಂಪಲ್ಲಿ ಇಬ್ಬರನ್ನು ಮೂಡುಬಿದಿರೆ ಪೊಲೀಸರು ಗುರುವಾರ ರಾತ್ರಿ ಬಡಗ ಮಿಜಾರಿನ ಬೆಳ್ಳೆಚ್ಚಾರಿನಲ್ಲಿ ಬಂಧಿಸಿದ್ದಾರೆ. ಮೂಡುಬಿದಿರೆ ಮಾರ್ಪಾಡಿ ಗ್ರಾಮ ಸುಭಾಸ್ ನಗರದ ಜಗದೀಶ( 29), ಬೆಳ್ತಂಗಡಿ ತಾಲೂಕು ಹೊಸಂಗಡಿ ಗ್ರಾಮದ ಅಂಗರಕರಿಯ ನಿವಾಸಿ ಪ್ರಶಾಂತ್(27) ಬಂಧಿತ ಆರೋಪಿಗಳು.ಮೂಡುಬಿದಿರೆ ಪೊಲೀಸ್ ಉಪನಿರೀಕ್ಷಕಿ ಪ್ರತಿಭಾ ಕೆ.ಸಿ ಹಾಗೂ ಪೊಲೀಸ್ ಸಿಬ್ಬಂದಿಗಳು ವಿದ್ಯಾಗಿರಿಲ್ಲಿ ರೌಂಡ್ಸ್ ನಡೆಸುತ್ತಿದ್ದ
ಮೂಡುಬಿದಿರೆ : ತಾಲೂಕಿನ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಗೊಟ್ಟು ಎಂಬಲ್ಲಿ ವ್ಯಕ್ತಿಯೋವ೯ರು ಕಾಲು ಜಾರಿ ನೀರಿಗೆ ಬಿದ್ದ ಘಟನೆ ನಡೆದಿದೆ.ವಾಲ್ಪಾಡಿಯ ಆನೆಗುಡ್ಡೆ ಬಳಿಯ ಶ್ರೀನಿವಾಸ್ ಭಟ್ ಎಂಬವರ ಪುತ್ರ ಗುರುಪ್ರಸಾದ್ ಭಟ್ (36ವ) ನೀರಿಗೆ ಬಿದ್ದವರು.ಜೋಗೊಟ್ಟು ಬಳಿಯ ಪಡ್ಡಾಯಿಮಜಲು ಎಂಬಲ್ಲಿರುವ ಅಣೆಕಟ್ಟಿನಲ್ಲಿ ನೀರು ತುಂಬಿಕೊಂಡಿತ್ತು ಇದರಲ್ಲಿ ಸಿಲುಕಿಕೊಂಡಿರುವ ಕಸವನ್ನು ತೆಗೆಯಲೆಂದು ಬದಿಗೆ ಇಳಿದ ಸಂದಭ೯ದಲ್ಲಿ ಕಾಲು ಜಾರಿ ನೀರಿಗೆ ಬಿದ್ದು
ಮೂಡುಬಿದಿರೆ : ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್( ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ 63ನೇ ಸೇವಾ ಯೋಜನೆಯ ಅಂಗವಾಗಿ ಮೇ ತಿಂಗಳ 1ನೇ ಯೋಜನೆಯನ್ನು ದರೆಗುಡ್ಡೆ ಗ್ರಾಮದ ಆನೆಗುಡ್ಡೆ ಪರಿಸರದ ಅನಾರೋಗ್ಯ ಪೀಡಿತರಾಗಿರುವ ವಿಜಯ್ ಪೂಜಾರಿ ಅವರ ಚಿಕಿತ್ಸೆಗೆ ಆಥಿ೯ಕ ನೆರವನ್ನು ನೀಡಲಾಯಿತು.ಆನೆಗುಡ್ಡೆ ಪರಿಸರದ ವಿಜಯ್ ಪೂಜಾರಿ ಅವರು ಮುಂಬೈಯಲ್ಲಿ ಸಣ್ಣ ಉದ್ಯೋಗದಲ್ಲಿರುವಾಗ ಆಕ್ಸಿಡೆಂಟ್ ಆಗಿ ಕಾಲಿನ ಎಲುಬು ಮುರಿತವಾಗಿರುತ್ತದೆ. ಅವರಿಗೆ ಒಂದು ವರ್ಷ ಕೆಲಸಕ್ಕೆ




























