Home Archive by category ವಿಟ್ಲ (Page 12)

ಕೊಳ್ನಾಡುವಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಅನುದಾನ ಮಂಜೂರು: ಎಂ.ಎಸ್.ಮಹಮ್ಮದ್

ವಿಟ್ಲ : ಕೊಳ್ನಾಡು ಜಿ.ಪಂ. ವ್ಯಾಪ್ತಿಯ ಕನ್ಯಾನ, ಕರೋಪಾಡಿ, ಕೊಳ್ನಾಡು, ಸಾಲೆತ್ತೂರು ಗ್ರಾ.ಪಂ.ಗಳಿಗೆ ಒಟ್ಟು ಜಲಜೀವನ್ ಮಿಷನ್ ಯೋಜನೆಯಡಿ 7.81 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಜಿ.ಪಂ.ಮಾಜಿ ಎಂ.ಎಸ್.ಮಹಮ್ಮದ್ ತಿಳಿಸಿದರು.ಅವರು ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾನು ಪ್ರತಿನಿಧಿಸಿದ ಕೊಳ್ನಾಡು ಜಿ.ಪಂ.ಕ್ಷೇತ್ರವು

ಒಕ್ಕೆತ್ತೂರು ಹೊಳೆಯ ಸುರುಂಬಡ್ಕ ಕಿರು ಸೇತುವೆ ಮುಳುಗಡೆ

ವಿಟ್ಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಹೊಳೆಯ ಸುರುಂಬಡ್ಕ ಕಿರು ಸೇತುವೆ ಮುಳುಗಡೆಯಾಗಿದೆ. ಕಳೆದ ಭಾರಿಯ ಮಳೆಗೆ ಎರಡು ಬಾರಿ ಕಿಂಡಿ ಅಣೆಕಟ್ಟು ಮುಳುಗಡೆಯಾಗಿತ್ತು. ಇದರಿಂದ ಸುತ್ತಮುತ್ತಲಿನ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಆಗಿನ ಶಾಸಕಿ ಶಕುಂತಾಳ ಶೆಟ್ಟಿ ಅವರ ಮೂಲಕ ಒಂದು ಕೋಟಿ ರೂ. ಅನುದಾನದಲ್ಲಿ ಈ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗಿತ್ತು. ಕಳೆದ ವರ್ಷ ಈ ಹೊಳೆಯಲ್ಲಿ ಕೊಚ್ಚಿಕೊಂಡು

ವಿಟ್ಲದಲ್ಲಿ  ಅಡುಗೆ ಅನಿಲ ದರ  ಇಳಿಸುವಂತೆ  ಡಿ.ವೈ.ಎಫ್.ಐನಿಂದ ಪ್ರತಿಭಟನೆ

ವಿಟ್ಲ : ಅಡುಗೆ ಅನಿಲ ದರ ಕೂಡಲೇ ಇಳಿಸುವಂತೆ ಒತ್ತಾಯಿಸಿ ಡಿ.ವೈ.ಎಫ್.ಐ ವಿಟ್ಲ ವಲಯ ಸಮಿತಿ ವತಿಯಿಂದ ವಿಟ್ಲ ನಾಡ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನುದ್ದೇಶಿಸಿ ಸಿ.ಪಿ.ಐ.ಎಂ ಬಂಟ್ವಾಳ ತಾಲೂಕು ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ ಕೋವಿಡ್ ಮಹಾಮಾರಿಯಿಂದ ಜನತೆ ಈಗಾಗಲೇ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಈಗಾಗಲೇ ಗಗನಕ್ಕೇರಿದ್ದು, ಅಲ್ಲದೇ ದಿನ ಬಳಕೆಯ ಎಲ್ಲಾ ಸಾಮಾಗ್ರಿಗಳ ಬೆಲೆ ಏರಿಕೆಯಾಗಿದೆ.

ವಿಟ್ಲದಲ್ಲಿ ಕಾಲೇಜ್ ಬಸ್ ಮತ್ತು ಬೈಕ್ ನಡುವೆ ಅಪಘಾತ

ವಿಟ್ಲ: ಮಡಿಕಲ್ ಕಾಲೇಜಿನ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬಸ್ಸಿನಲ್ಲಿದ್ದ ಮಹಿಳಾ ಸಿಬ್ಬಂದಿಗಳು ಹಾಗೂ ಬೈಕ್ ಸವಾರ ಗಾಯಗೊಂಡ ಘಟನೆ ಮಂಗಳಪದವು ಅನಂತಾಡಿ ರಸ್ತೆಯ ಸುರುಳಿಮೂಲೆ ಎಂಬಲ್ಲಿ ನಡೆದಿದೆ. ಆಸ್ಪತ್ರೆಯ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದು ಬಸ್ ರಸ್ತೆ ಬದಿಯ ಪ್ರಪಾತದ ಬಳಿ ಸಿಕ್ಕಿಹಾಕಿಕೊಂಡಿದೆ. ಘಟನೆಯಲ್ಲಿ ಬಸ್ಸಿನಲ್ಲಿದ್ದ ಮೂವರು ಸ್ಟಾಪ್ ನರ್ಸ್ ಮತ್ತು ಬೈಕ್ ಸವಾರ

ವಿಟ್ಲದಲ್ಲಿ ವಾರಾಂತ್ಯದ ಕರ್ಪ್ಯೂ ಯಶಸ್ವಿ

ವಿಟ್ಲ: ಜಿಲ್ಲಾಡಳಿತ ಆದೇಶ ನೀಡಿದ ವಾರಾಂತ್ಯ ಕರ್ಫ್ಯೂ ವಿಟ್ಲದಲ್ಲಿ ಯಶಸ್ವಿಯಾಗಿದೆ. ವಿಟ್ಲದ ನಾಲ್ಕು ರಸ್ತೆಗಳಲ್ಲಿ ವಿಟ್ಲ ಪ್ರಭಾರ ಎಸೈ ರಾಜೇಶ್ ಕೆ.ವಿ ನೇತೃತ್ವದಲ್ಲಿ ಪ್ರೊಬೆಷನರಿ ಎಸೈ ಮಂಜುನಾಥ ಮತ್ತು ಪೊಲೀಸರ ತಂಡ ನಾಕಾಬಂಧಿ ಅಳವಡಿಸಿದ್ದರು. ಹಾಲು ಮತ್ತು ಮೆಡಿಕಲ್ ಹೊರತುಪಡಿಸಿ, ಅನಗತ್ಯವಾಗಿ ಪೇಟೆಗೆ ಬಂದ ವಾಹನಗಳನ್ನು ಮುಟ್ಟುಗೋಲು ಹಾಕಲಾಯಿತು. ವಿಟ್ಲ ಪೇಟೆಯಲ್ಲಿ ಜನಸಂಚಾರ, ವಾಹನಗಳಿಲ್ಲದೇ ಬಿಕೋ ಎನ್ನುತ್ತಿದ್ದು, ಪೇಟೆ ಸಂಪೂರ್ಣ ಸ್ತಬ್ಧಗೊಂಡಿದೆ.