Home Archive by category ವಿಟ್ಲ (Page 11)

ವಿಟ್ಲ: ಹಾಳೆ ತಟ್ಟೆ ಕಾರ್ಖಾನೆಯಲ್ಲಿ ಬೆಂಕಿ: ಲಕ್ಷಾಂತರ ರೂ. ನಷ್ಟ

ವಿಟ್ಲ ಪಡ್ನೂರು ಗ್ರಾಮದ ಬಲಿಪಗುಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಳೆ ತಟ್ಟೆ ತಯಾರಿಕಾ ಘಟಕ ಇಕೋ ವಿಶನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಕಟ್ಟಡದ ಮೇಲ್ಭಾಗದಲ್ಲಿ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಫ್ಯಾಕ್ಟರಿ ಯಿಂದ ದಟ್ಟ ಹೊಗೆ ಆವರಿಸುತ್ತಿದ್ದಂತೆ ಸ್ಥಳಕ್ಕೆ ವಿಟ್ಲ ಪೆÇಲೀಸರು, ಅಗ್ನಿ ಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದರೂ

ವಿಟ್ಲದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮ

ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ ವಿಟ್ಲ ಇದರ ವತಿಯಿಂದ ಮಹಿಳಾ ಘಟಕದ ನೇತೃತ್ವದಲ್ಲಿ ಆಟಿಡೊಂಜಿ ದಿನ ವಿಟ್ಲದ ಶಾಂತಿನಗರ ಅಕ್ಷಯ ಸಭಾಭವನದಲ್ಲಿ ನಡೆಯಿತು. ಪುತ್ತೂರು ಉಪತಹಶೀಲ್ದಾರ್ ಸುಲೋಚನಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಸತ್ಕಾರ್ಯಗಳಿಗೆ ಸ್ಪಂದಿಸಬೇಕು. ಹಳ್ಳಿಯಲ್ಲಿ ಮಳೆಗಾಲಕ್ಕೆ ಅವಶ್ಯವಿರುವ ವಿವಿಧ ವಸ್ತುಗಳನ್ನು ಸಂಗ್ರಹಿಸಿಡುವುದು ವಾಡಿಕೆ. ಆಟಿ ತಿಂಗಳ ಕಾಲಕ್ಕೆ ಇದು

ವಿಟ್ಲ: ಕೆಟ್ಟು ನಿಂತ ಅಡುಗೆ ಎಣ್ಣೆ ಸಾಗಾಟದ ಟ್ಯಾಂಕರ್ , ಕಿಲೋಮೀಟರ್ ಸಾಲು ನಿಂತ ವಾಹನಗಳು

ವಿಟ್ಲ: ಇಲ್ಲಿನ ಸೂರಿಕುಮೇರು ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುವಲ್ಲಿ ರಸ್ತೆಯ ಮಧ್ಯೆ ಅಡುಗೆ ಎಣ್ಣೆ ಸಾಗಾಟದ ಟ್ಯಾಂಕರ್ ಕೆಟ್ಟು ನಿಂತಿದ್ದರ ಪರಿಣಾಮ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲಾಗಿ ನಿಂತಿದೆ,ಸ್ಥಳದಲ್ಲಿ ಪೋಲಿಸರು ಮತ್ತು ಸೂರಿಕುಮೇರು ಪರಿಸರದ ಯುವಕರು ವಾಹನಗಳ ಸಂಚಾರಕ್ಕೆ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ಸಾರೆ

ಕುಡ್ತಮುಗೇರು ರಸ್ತೆ ಸಂಪೂರ್ಣ ಜಲಾವೃತ: ರಸ್ತೆ ಸಂಚಾರ ಸ್ಥಗಿತ

ವಿಟ್ಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ರಸ್ತೆ ಜಲಾವೃತವಾದ ಘಟನೆ ರಂದು ನಡೆದಿದೆ. ನೀರಿನ ಮಟ್ಟ ಏರಿಕೆಯಾಗುತ್ತಿರು ಹಿನ್ನೆಲೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ ವಿಟ್ಲ-ಸಾಲೆತ್ತೂರು ರಸ್ತೆಯ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ರಸ್ತೆ ಬದಿಯಲ್ಲಿ ಹರಿಯುತ್ತಿರುವ ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ರಸ್ತೆ ಜಲಾವೃತವಾಗಿದೆ. ಇದರಿಂದಾಗಿ ಈ ದಾರಿಯಾಗಿ ವಾಹನ ಸಂಚಾರಕ್ಕೆ

ವಿಟ್ಲ ಲಯನ್ಸ್ ಕ್ಲಬ್‍ನ ಪದಾಧಿಕಾರಿಗಳ ಪದಗ್ರಹಣ

ವಿಟ್ಲ: ವಿಟ್ಲ ಲಯನ್ಸ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ವಿಟ್ಲದ ಸಿಂಹಗಿರಿ ಲಯನ್ಸ್ ಭವನದಲ್ಲಿ ನಡೆಯಿತು. ನೂತನ ಅಧ್ಯಕ್ಷ ಸುದೇಶ್ ಭಂಡಾರಿ ಎರ್ಮೆನಿಲೆ, ಕಾರ್ಯದರ್ಶಿ ಜಲಜಾಕ್ಷಿ ಬಾಲಕೃಷ್ಣ, ಕೋಶಾಧಿಕಾರಿ ರವಿಶಂಕರ್ ಅವರಿಗೆ ಲಯನ್ಸ್ ಕ್ಲಬ್ ಪ್ರಥಮ ಉಪರಾಜ್ಯಪಾಲ ಮೆಲ್ವಿನ್ ಡಿ ಸೋಜ ಪದಗ್ರಹಣಆ ನಡೆಸಿಕೊಟ್ಟರು. ಬಳಿಕ ಮಾತನಾಡಿದ ಅವರು ವಿಟ್ಲ ಲಯನ್ಸ್ ಕ್ಲಬ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇಡೀ ಜಿಲ್ಲೆಗೆ ವಿಟ್ಲ ಲಯನ್ಸ್ ಕ್ಲಬ್

ವಿಟ್ಲದ ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ : ಸಹೋದರತ್ವದ ಭಾನುವಾರ ಕಾರ್ಯಕ್ರಮ

ವಿಟ್ಲ: ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ನಲ್ಲಿ “ಸಹೋದರತ್ವದ ಭಾನುವಾರ” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಧಾನ ಧರ್ಮಗುರುಗಳಾಗಿ ಭಾಗವಹಿಸಿ ಪ್ರಬೋದನೆ ನೀಡಿ ದಿವ್ಯ ಬಲಿಪೂಜೆಯನ್ನು ಅರ್ಪಿಸಿ ಎಲ್ಲರಿಗೂ ಆಶೀರ್ವಚನ ನೀಡಿದ ಮಂಗಳೂರು ಧರ್ಮ ಪ್ರಾಂತ್ಯದ ಜುಡೀಶಿಯಲ್ ವಿಕಾರ್ ರವರಾದ ಅತೀ ವಂದನೀಯ ಫಾದರ್ ವಾಲ್ಟರ್ ಡಿಮೆಲ್ಲೊ ಅವರು ನಿತ್ಯ ಜೀವನದಲ್ಲೂ ಬೈಬಲ್ ನ ಆದರ್ಶಗಳನ್ನು ಪಾಲಿಸಬೇಕು, ಆಗ ಮಾತ್ರ ಸಹೋದರತ್ವದ ಭಾನುವಾರದ ಆಚರಣೆಗೆ

ಅಡಿಕೆ ಮತ್ತು ತೆಂಗಿನ ಮರಗಳಿಗೆ ಬಾಧಿಸುತ್ತಿರುವ ಹಳದಿ ರೋಗ

ವಿಟ್ಲದಲ್ಲಿ ಕೇಂದ್ರ ಕಚೇರಿ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ತೆಂಗು ರೈತ ಉತ್ಪಾದಕರ ಸಂಸ್ಥೆ ವಿಜ್ಞಾನಿಗಳ ನೇತೃತ್ವದಲ್ಲಿ ಅಡಿಕೆ ಮತ್ತು ತೆಂಗಿನ ಮರಗಳಿಗೆ ಬಾಧಿಸುತ್ತಿರುವ ಹಳದಿ ರೋಗದ ವಿರುದ್ಧ ಹೋರಾಡಲು ಸಜ್ಜಾಗುವ ಮೂಲಕ ರೈತರ ಕಷ್ಟಗಳಿಗೆ ಸ್ಪಂದಿಸಲು ಮುಂದಾಗಿದೆ ದ.ಕ ಜಿಲ್ಲೆಯಾದ್ಯಂತ ಅಡಿಕೆ ಮರಗಳಿಗೆ ಹಳದಿ ರೋಗ ಬಾಧಿಸಿದ್ದರಿಂದ ಜಿಲ್ಲೆಯ ರೈತರು ಅಡಿಕೆ ಕೃಷಿಯಿಂದ ಹಿಂದೆ ಸರಿಯಲು ಮುಂದಾಗುತ್ತಿದ್ದಾರೆ. ಈಗಾಗಲೇ ಅಡಿಕೆ ಗಿಡಗಳಲ್ಲಿ ಹಳದಿ ರೋಗ ಕಂಡು

ವಿಟ್ಲದ ಇಡ್ಕಿದು ಎಂಬಲ್ಲಿ ರಸ್ತೆ ಅಪಘಾತ: ದ್ವಿಚಕ್ರ ವಾಹನ ಸವಾರ ಮೃತ್ಯು

ವಿಟ್ಲ: ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ದ್ವಿಚಕ್ರ ಸವಾರರೋರ್ವರು ಆಸ್ಪತ್ರೆಗೆ ಸಾಗಿಸುತ್ತಿದ್ದ ದಾರಿಮಧ್ಯೆ ಮೃತಪಟ್ಟ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದ ಮಿತ್ತೂರು ಮಸೀದಿ ಸಮೀಪ ನಡೆದಿದೆ   ನಿಡ್ಪಳ್ಳಿ ಗ್ರಾಮದ ವಾಲ್ತಾಜೆ ನಾರಾಯಣ ನಾಯ್ಕ್ ರವರ ಪುತ್ರ, ರಿಬ್ಕೋ ಟ್ರೇಡಿಂಗ್ ಕಂಪೆನಿಯ ನೌಕರ ಸುರೇಶ್ ನಾಯ್ಕ್ ಮೃತ ದುರ್ದೈವಿ. ಬೆಳಿಗ್ಗೆ ಸ್ಥಳೀಯ ನಿವಾಸಿಯೋರ್ವರು ಆಟೋ ರಿಕ್ಷಾವೊಂದರಲ್ಲಿ ಮಿತ್ತೂರಿಗೆ ಹಾಲು

ರಾಜ್ಯಾದ್ಯಂತ ತಾಂಡವಾಡುತ್ತಿದೆ ಭ್ರಷ್ಟಾಚಾರ: ಮುರಳೀಧರ ರೈ ಮಠಂತಬೆಟ್ಟು ಆರೋಪ

ವಿಟ್ಲ: ರಾಜ್ಯ ಸರ್ಕಾರ ಅನುದಾನ ಕೊಡುವುದಕ್ಕೆ ಗುತ್ತಿಗೆದಾರರಿಂದ ಶೇ.15ಕ್ಕೂ ಮೇಲ್ಪಟ್ಟು ವಸೂಲಿ ಮಾಡುತ್ತಿದೆ. ಕಾಂಗ್ರೆಸ್ ಮುಕ್ತವಾದರೆ ಭ್ರಷ್ಟಾಚಾರ ಮುಕ್ತ ಎಂಬ ಹೇಳಿಕೆಯನ್ನು ಹೇಳಿರುವ ಪುತ್ತೂರು ಶಾಸಕರಿಗೆ ಇದು ಗಮನದಲ್ಲಿ ಇಲ್ಲವಾ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಪ್ರಪಂಚ ನೋಡಲ್ಲ ಎಂಬ ಗಾದೆ ಮಾತಿನಂತೆ ಬಿಜೆಪಿ ಸರ್ಕಾರದ ಪರಿಸ್ಥಿಯಾಗಿದೆ ಎಂದು ಡಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು ಹೇಳಿದರು. ವಿಟ್ಲದಲ್ಲಿ ಕರೆದ

ಲಾರಿ ಮತ್ತು ಆಕ್ಟೀವ್ ವಾಹನ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು

ವಿಟ್ಲ: ಲಾರಿ ಮತ್ತು ಆಕ್ಟೀವ್ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬುಡೋಳಿ ಎಂಬಲ್ಲಿ ಸಂಭವಿಸಿದೆ. ಸವಾರ ವಾಹನ ದಾಖಲೆಗಳ ಪ್ರಕಾರ ಕನ್ಯಾನ ಗ್ರಾಮದ ನಿವಾಸಿ ಗಣೇಶ ಬಂಗೇರ ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಲಾರಿ ಮಾಣಿಯಿಂದ ಬುಡೋಳಿಗೆ ಆಕ್ಟೀವಾ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಘಟನೆ ಸವಾರನ ತಲೆಗೆ ಛಿದ್ರಗೊಂಡು ಸ್ಥಳದಲ್ಲೇ