Home Archive by category Fresh News (Page 298)

ಬೆಳ್ತಂಗಡಿ ಕ್ಷೇತ್ರದ ಶಾಸಕರು ಪ್ರಚಾರದ ಜೊತೆಗೆ ಹಣ ಹಂಚುತ್ತಿದ್ದಾರೆ : ಮಾಜಿ ಶಾಸಕ ವಸಂತ ಬಂಗೇರ ಅವರಿಂದ ಗಂಭೀರ ಆರೋಪ

ಬೆಳ್ತಂಗಡಿ ಕ್ಷೇತ್ರದ ಶಾಸಕರು ಬಿರುಸಿನ ಪ್ರಚಾರ ಕಾರ್ಯವನ್ನು ಮಾಡುತ್ತಿದ್ದಾರೆ. ಅದರ ಜೊತೆಗೆ ಹಣ ಹಂಚುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ವಸಂತ ಬಂಗೇರ ಅವರು ಆರೋಪಿಸಿದರು. ಅವರು ಬೆಳ್ತಂಗಡಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ ಗಂಭೀರ ಆರೋಪ ಮಾಡಿದರು. ಅವರು ಪ್ರಚಾರ ಮಾಡುವ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯ ಕಾರಿನ ಹಿಂದೆ 4 ಕಾರುಗಳು

ಮಂಗಳೂರು ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯ, ಯು.ಟಿ ಖಾದರ್ ವೈಫಲ್ಯ: ಕುಂಟಾರು ರವೀಶ ತಂತ್ರಿ

ಮಂಗಳೂರು: ಕಳೆದ ಹಲವು ವರ್ಷಗಳಿಂದ ಮಂಗಳೂರು ಕ್ಷೇತ್ರದಿಂದ ಸತತವಾಗಿ ಶಾಸಕರಾಗಿ ಆಯ್ಕೆಯಾದರೂ ಮೂಲಸೌಕರ್ಯವನ್ನು ಒದಗಿಸುವಲ್ಲಿ ಯು.ಟಿ.‌ಖಾದರ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಕೇರಳ ಭಾಗದ ಉಸ್ತುವಾರಿ ಕುಂಟಾರು ರವೀಶ್ ತಂತ್ರಿ ಹೇಳಿದರು‌. ಮಂಗಳೂರಿನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಹಾಲಿ ಶಾಸಕರು ಉಳ್ಳಾಲದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದರು. ಒಳಚರಂಡಿ ವ್ಯವಸ್ಥೆ ಅಸಮರ್ಪಕ: ಸಾಕಷ್ಟು

ಬೆಳ್ತಂಗಡಿ ಜೆಡಿಎಸ್ ಕಚೇರಿ ಉದ್ಘಾಟನೆ

ಕರ್ನಾಟಕ ಪ್ರದೇಶ ಜನತಾದಳ ಜಾತ್ಯಾತೀತ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ಕಚೇರಿಯನ್ನು ವಿಘ್ನೇಶ್ ಸಿಟಿ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟಿಸಲಾಯಿತು. ಮುಖ್ಯ ಗುರುಗಳಾದ ಸಯ್ಯದ್ ಸಲೀಮ್ ತಂಗಳ್ ಸಬರಬೈಲು ಕಚೇರಿ ಉದ್ಘಾಟಿಸಿದರು. ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಜಾಕೆ ಮಾಧವ ಗೌಡ ಮಾತನಾಡಿ, ಬೆಳ್ತಂಗಡಿಯಲ್ಲಿ ಜಾತ್ಯಾತೀತ ಜನತಾದಳ ಶಕ್ತಿಯಿದೆ. ಇಂದು ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. ಕುಮಾರಸ್ವಾಮಿಯವರ ಆಡಳಿತ ಜನ ಮೆಚ್ಚಿದ್ದಾರೆ. ರಾಜ್ಯ ಸರ್ವ ಜನಾಂಗವು

ಅರುಣ್ ಕುಮಾರ್ ಪುತ್ತಿಲರಿಂದ ಪ್ರಣಾಳಿಕೆ ಬಿಡುಗಡೆ

ಪುತ್ತೂರು: ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲರಿಂದ ಹಿಂದುತ್ವದ ರಕ್ಷಣೆ ಜೊತೆಗೆ ಭ್ರಷ್ಟಾಚಾರ ರಹಿತ, ಜನಸ್ನೇಹಿ ಅಡಳಿತ ನೀಡುವ ಭರವಸೆಯ ಜೊತೆಗೆ 31 ವಿಷಯಾಧಾರಿತ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು. ಪುತ್ತೂರು ದರ್ಬೆ ಸುಭದ್ರ ಕಲ್ಯಾಣ ಮಂಟಪದ ಬಳಿ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು. ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ, ಸುನಿಲ್ ಬೋರ್ಕರ್, ಭಾಸ್ಕರ್ ಆಚಾರ್ಯ ಇಂದಾರು, ಡಾ.ಗಣೇಶ್ ಪ್ರಸಾದ್ ಮುದ್ರಾಜೆ, ಪ್ರಸನ್ನ ಕುಮಾರ್ ಮಾರ್ತಾ, ಸ್ನೇಹ ಸಿಲ್ಕ್ ನ

ಪುತ್ತೂರಿನಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶ

ದೇಶದ ಪ್ರಧಾನಿ ನರೇಂದ್ ಮೋದಿ ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಾತಿನಿದ್ಯ ನೀಡುವ ಮುಖಾಂತರ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಡಾ. ಭಾರತಿ ಪ್ರವೀಣ್ ಪವಾರ್ ಹೇಳಿದರು. ಪುತ್ತೂರಿನ ಜೈನಭವನದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶವನ್ನು ಉದ್ಧೇಶಿಸಿ ಅವರು ಮಾತನಾಡಿದರು. ಕೇಂದ್ರದ ಮೋದಿ ಸರಕಾರ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಆ ಮೂಲಕ ಮಹಿಳೆಯರ

ಸೋಮೇಶ್ವರ : ಕಾರ್ ಡೀಲರ್ ನಾಪತ್ತೆ

ಸೋಮೇಶ್ವರ ಸಮುದ್ರ ತೀರದ ರುದ್ರಪಾದೆಯಲ್ಲಿ ಉಳ್ಳಾಲದ ಧರ್ಮನಗರ ನಿವಾಸಿ ಕಾರು ಡೀಲರ್ ಆಗಿರುವ ವ್ಯಕ್ತಿ ಯ ಚಪ್ಪಲಿ, ಮೊಬೈಲ್ ಮತ್ತು ಕಾರು ಪತ್ತೆಯಾಗಿದೆ. ಜಿನ್ನಪ್ಪ ಪೂಜಾರಿ ಎಂಬವರ ಪುತ್ರ ವಸಂತ್ ಅಮೀನ್ (49) ನಾಪತ್ತೆಯಾದವರು. ಮೂಲತ: ಉಳ್ಳಾಲದ ಬಸ್ತಿಪಡ್ಪು ನಿವಾಸಿ ಆಗಿರುವ ಇವರು ಉಳ್ಳಾಲದ ಧರ್ಮನಗರದಲ್ಲಿ ಕೆಲ ತಿಂಗಳುಗಳ ಹಿಂದಷ್ಟೇ ಸುಸಜ್ಜಿತವಾದ ಮನೆಯನ್ನು ಕಟ್ಟಿದ್ದರು. ವಿವಾಹಿತರಾಗಿರುವ ವಸಂತ್ ಅವರಿಗೆ ಎಳೆಯ ಹರೆಯದ ಹೆಣ್ಣು ಮಗುವಿದ್ದಾಳೆ. ಇಂದು

ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರಿಂದ ಮತ ಯಾಚನೆ

ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಗುರುರಾಜ್ ಗಂಟಿಹೊಳೆ ಅವರು ಕಂಡ್ಲೂರಿನ ಸುತ್ತಮುತ್ತಲಿನಲ್ಲಿ ಪ್ರದೇಶಗಳಿಗೆ ಭೇಟಿ ನೀಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಗುರುರಾಜ್ ಗಂಟಿಹೊಳೆಯವರು ಈ ಬಾರಿ ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳನ್ನಾಗಿ ಪಕ್ಷದವರು ಟಿಕೆಟ್ ನೀಡಿದ್ದಾರೆ. ಈ ಬಾರಿ ಬಿಜೆಪಿ ಪಕ್ಷವನ್ನು ಬೆಂಬಲಿಸಿಬೇಕೆಂದು ಹೇಳಿದರು.

“5 ವರ್ಷಗಳ ಕ್ಷೇತ್ರದ ಅಭಿವೃದ್ಧಿಯೇ ನನಗೆ ಶ್ರೀರಕ್ಷೆ” : ಉಮಾನಾಥ್ ಕೋಟ್ಯಾನ್

ಮೂಲ್ಕಿ: “ಕಳೆದ 5 ವರ್ಷಗಳ ಹಿಂದೆ ನಾನು ಮೊದಲ ಬಾರಿಗೆ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕನಾಗಿ ಆಯ್ಕೆಯಾದೆ. ಇದಕ್ಕೆ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಶ್ರಮವೇ ಕಾರಣ. ವಿವಿಧ ಇಲಾಖೆಗಳಿಂದ ಅನುದಾನ ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಶ್ರಮಿಸಿದ್ದೇನೆ. ಹೀಗಾಗಿ ಮತ ಯಾಚನೆಗೆ ಮನೆ ಮನೆಗೆ ಹೋದಾಗ ಬಹಳ ಒಳ್ಳೆಯ ಸ್ಪಂದನೆ ಜನರಿಂದ ಸಿಗುತ್ತಿದೆ. ಮೇ 3ರಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮೂಲ್ಕಿಗೆ ಬರಲಿದ್ದಾರೆ. ಇಲ್ಲಿಯವರೆಗೆ

ಮಂಗಳೂರು ಉತ್ತರ ಬಿಜೆಪಿ ವತಿಯಿಂದ ರೋಡ್ ಶೋ

ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ವೈ. ಶೆಟ್ಟಿ ಅವರು ಬೆಂಬಲಿಗರು, ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರ ಜೊತೆ ಮಂಗಳವಾರ ಸಂಜೆ ಸುರತ್ಕಲ್ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಜಂಕ್ಷನ್ ವರೆಗೆ ರೋಡ್ ಶೋ ನಡೆಸಿದರು.ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಪ್ರಾಸ್ತಾವಿಕ ಮಾತನ್ನಾಡಿದ ಉತ್ತರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ಅವರು, “ಅಭಿವೃದ್ಧಿ ಮತ್ತು ಹಿಂದುತ್ವ ಎರಡನ್ನೂ ಜೊತೆಯಲ್ಲಿ ಕೊಂಡೊಯ್ಯುವ

ಕಟಪಾಡಿ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಕಾಪು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮತಯಾಚನೆ

ಕಾಪು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರು ಕಟಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಪಕ್ಷದ ಪ್ರಮುಖರು ಜೊತೆಗಿದ್ದರು.