Home Archive by category Fresh News (Page 311)

ಸುಬ್ರಹ್ಮಣ್ಯ: ಕರ್ನಾಟಕ ಜನತೆಯ ಸುಭೀಕ್ಷೆಗಾಗಿ ಧಾರ್ಮಿಕ ಕ್ಷೇತ್ರಕ್ಕೆ ಭೇಟಿ: ಸಿಎಂ ಬೊಮ್ಮಾಯಿ

ದ.ಕ ಜಿಲ್ಲೆಯ ಹಲವು ದೇವಸ್ಥಾನಕ್ಕೆ ಬೇಟಿ ನೀಡಿದ್ದೇನೆ. ಧರ್ಮಸ್ಥಳ, ಕೊಲ್ಲೂರು, ಕಟೀಲು ದೇವಸ್ಥಾನಗಳಿಗೆ ಹೆಚ್ಚಾಗಿ ಭೇಟಿ ನೀಡುತಿದ್ದು ಇಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ಕ್ಕೆ ಭೇಟಿ ನೀಡಿ ಕರ್ನಾಟಕ ಜನತೆಯ ಸುಭೀಕ್ಷೆಗಾಗಿ ಪ್ರಾರ್ಥಿಸಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. ಅವರು  ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ

ಸೋಮೇಶ್ವರ : ಮೀನಿನ ಬಲೆಗೆ ಬೆಂಕಿ

ಉಳ್ಳಾಲ: ಮೀನಿನ ಬಲೆಗೆ ಆಕಸ್ಮಿಕ ಬೆಂಕಿ ಬಿದ್ದು ರೂ.15 ಲಕ್ಷ ಸೊತ್ತುಗಳು ಹಾನಿಯಾಗಿರುವ ಘಟನೆ ಸೋಮೇಶ್ವರ ಸಮುದ್ರ ತೀರದ ರುದ್ರಪಾದೆಯಲ್ಲಿ ಜರಗಲಿದೆ. ಇಂದು ಮದ್ಯಾಹ್ನದ ವೇಳೆ ಸೋಮೇಶ್ವರ ಕಡಲ ಕಿನಾರೆಯ ರುದ್ರಪಾದೆ ಬಳಿಯ ನಾಡ ದೋಣಿಗಳ ಶೆಡ್ ಹತ್ತಿರ ಇಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೀನಿನ ಬಲೆಗೆ ಬೆಂಕಿ ತಗುಲಿದ್ದು ಬಲೆಗಳು ಸುಟ್ಟು ಕರಕಲಾಗಿವೆ. ಕಿಡಿಗೇಡಿಗಳ ಕೃತ್ಯದಿಂದ ಘಟನೆ ಸಂಭವಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ನಾಡ ದೋಣಿ ಮೀನುಗಾರರಾದ

ಎಲ್ಲರೂ ಜೊತೆಗೂಡಿ ಕಾಪು ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸುತ್ತೇವೆ: ಲಾಲಾಜಿ ಮೆಂಡನ್

 ನಮ್ಮಲ್ಲಿ ಯಾವುದೇ ಬಂಡಾಯವಿಲ್ಲ. ಪಕ್ಷವನ್ನು ಎರಡೂವರೆ ಸಾವಿರ ಮತಗಳಿಂದ 75 ಸಾವಿರ ಮತಗಳವರೆಗೆ ಬೆಳೆಸಿದ್ದೇವೆ. ಮುಂದೆಯೂ ಬಿಜೆಪಿ ಕ್ಷೇತ್ರವನ್ನಾಗಿ ಉಳಿಸಿಕೊಳ್ಳಲು ಹಗಲಿರುಳು ಶ್ರಮಿಸುತ್ತೇನೆ ಎಂದು ಬಿಜೆಪಿ ಟಿಕೆಟ್ ವಂಚಿತ ಲಾಲಾಜಿ ಆರ್. ಮೆಂಡನ್ ಹೇಳಿದರು.  ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಅವರು ಲಾಲಾಜಿ ಮೆಂಡನ್ ಅವರ ಮನೆಗೆ ತೆರಳಿ ಅವರೊಂದಿಗೆ ಚರ್ಚೆ ನಡೆಸಿದರು. ಬಳಿಕ ಸುದ್ಧಿಗೋಷ್ಠಿಯಲ್ಲಿ  ಮಾತನಾಡಿದ ಲಾಲಾಜಿ ಮೆಂಡನ್

ಎಪ್ರಿಲ್ 21. ಮಗಳೇ ಚಿತ್ರ ರಾಜ್ಯಾದ್ಯಂತ ಬಿಡುಗಡೆ

ವಿನೂತನ ಕಥಾಹಂದರ ಹೊಂದಿರುವ ‘ಮಗಳೇ’ ಸಿನಿಮಾ ಏಪ್ರಿಲ್ 21ರಂದು ರಾಜ್ಯಾದ್ಯಂತ ತೆರೆಕಾಣಲಿದ್ದು, ಇದೀಗ ಸಿನಿಮಾ ಟ್ರೈಲರ್ ಬಿಡುಗಡೆಗೊಂಡಿದ್ದು ಸಿನಿ ಪ್ರೇಕ್ಷಕರಿಂದ ಉತ್ತಮ ರೆಸ್ಫಾನ್ಸ್ ವ್ಯಕ್ತವಾಗಿದೆ. ಮಗಳೇ ಸಿನಿಮಾ ತಂದೆ, ತಾಯಿ ಮತ್ತು ಮಗಳ ನಡುವಿನ ಟ್ರಯಾಂಗಲ್ ಎಮೋಷನಲ್ ಲವ್ ಸ್ಟೋರಿಯಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆ. ಜೆಡ್ ನೆಟ್ ಕಮ್ಯುನಿಕೇಷನ್ಸ್ ಬ್ಯಾನರ್‍ನಡಿಯಲ್ಲಿ ಮಕ್ಕಿನ್, ಸಯೂರಿ ಮತ್ತು ಎಬಿಎಂ ನಿರ್ಮಾಣದಲ್ಲಿ ಸೋಮು

ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಚಿವ ಸುನಿಲ್ ಕುಮಾರ್ ಭೇಟಿ

ಸುಬ್ರಹ್ಮಣ್ಯ: ಉಡುಪಿ ಜಿಲ್ಲೆಯ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ವಿ.ಸುನಿಲ್ ಕುಮಾರ್ ಮಂಗಳವಾರ ರಾತ್ರಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದರು. ಬುಧವಾರ ಬೆಳಗ್ಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದರುಶನ ಪಡೆದು, ಪ್ರಾರ್ಥನೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು. ಬಳಿಕ ಹೊಸಳಿಗಮ್ಮನ ದರುಶನ ಪಡೆದು, ಪ್ರಸಾದ ಸ್ವೀಕರಿಸಿದರು. ಕುಕ್ಕೆಯಲ್ಲಿ ಸುನಿಲ್ ಕುಮಾರ್ ಶೇಷ ಸೇವೆ ನೆರವೇರಿಸಿದರು. ಬಳಿಕ ಆದಿ ಸುಬ್ರಹ್ಮಣ್ಯಕ್ಕೆ ತೆರಳಿ ಶ್ರೀ ದೇವರ

ವಿಜ್ಞಾನ ಸ್ಪರ್ಧೆಯಲ್ಲಿ ಎಸ್.ಡಿ. ಎಂ ವಿದ್ಯಾರ್ಥಿಗಳಿಗೆ ಬಹುಮಾನ

ಉಜಿರೆ : ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಮಂಗಳೂರಿನ ಸಂತ  ಅಲೋಶಿಯಸ್ ಕಾಲೇಜಿನಲ್ಲಿ ಆಯೋಜಿಸಿದ್ದ ವಿಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇದೇ ಶುಕ್ರವಾರದಂದು ಸಂತ ಅಲೋಶಿಯಸ್ ಕಾಲೇಜಿನ ವಾರ್ಷಿಕ ಉತ್ಸವದ ಅಂಗವಾಗಿ ಇಂಪ್ರಿಂಟ್ಸ್ ಎಂಬ ಅಂತರ್ ಕಾಲೇಜು ವಿಜ್ಞಾನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಜೀವಶಾಸ್ತ್ರ, ಜೈವಿಕ ತಂತ್ರಜ್ಞಾನ ವಿಭಾಗಗಳಿಂದ ವಿವಿಧ ಹಂತಗಳ

ಬಪ್ಪನಾಡು: ಒಂದೂವರೆ ಲಕ್ಷ ಮಲ್ಲಿಗೆ ಚೆಂಡು ಸಮರ್ಪಣೆ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಉತ್ಸವದ ಅತ್ಯಂತ ಶ್ರೇಷ್ಠ ಸೇವೆಯಾಗಿರುವ ಶ್ರೀದೇವಿಯ ಶಯನೋತ್ಸವಕ್ಕೆ ಹೂ ಅರ್ಪಿಸುವ ಸೇವೆಯಂಗವಾಗಿ ಈ ಬಾರಿ ಒಂದೂವರೆ ಲಕ್ಷಕ್ಕೂ ಮಿಕ್ಕಿದ ಮಲ್ಲಿಗೆ ಚೆಂಡು ಸಮರ್ಪಣೆಯಾಗಿದೆ ಎಂದು ದೇಗುಲದ ಮೂಲಗಳು ತಿಳಿಸಿವೆ. ಸಂಜೆ 3 ಗಂಟೆಯ ಬಳಿಕ ಮಲ್ಲಿಗೆ ಸಮರ್ಪಣೆ ಸೇವೆ ಆರಂಭ ಗೊಂಡಿತ್ತು. ಮಲ್ಲಿಗೆಯನ್ನು ತಡ ರಾತ್ರಿ ಗರ್ಭಗುಡಿಯೊಳಗೆ ಜೋಡಿಸಿ ದೇವಿಗೆ ಶಯನೋತ್ಸವ ನಡೆಯಿತು.

ಏ.16 : ಅಣಿಲೆ ವೆಂಕಪ್ಪ ರೈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಪುತ್ತೂರು: ಡಾ.ಪಿ.ಬಿ.ರೈ ಪ್ರತಿಷ್ಠಾನದ ನೂಜಿ ತರವಾಡು ಮನೆ ಮಾಡಾವು ಇದರ ವತಿಯಿಂದ ದಿ.ಅಣಿಲೆ ವೆಂಕಪ್ಪ ರೈಗಳ ಹೆಸರಿನಲ್ಲಿ ಕಳೆದ 25 ವರ್ಷಗಳಿಂದ ಪ್ರದಾನ ಮಾಡಲಾಗುತ್ತಿರುವ `ಅಣಿಲೆ ವೆಂಕಪ್ಪ ರೈ’ ಪ್ರಶಸ್ತಿಯನ್ನು ಈ ಬಾರಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ನಾಲ್ವರಿಗೆ ಪ್ರದಾನ ಮಾಡಲಾಗುವುದು ಎಂದು ಡಾ.ಪಿ.ಬಿ.ರೈ ಪ್ರತಿಷ್ಠಾನದ ಗೌರವಾಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿ ಪ್ರದಾನ

ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಭೇಟಿ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಜಿ.ಪಂ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರಿಗೆ ಪಕ್ಷ ಅವಕಾಶ ನೀಡಿದ ಹಿನ್ನಲೆಯಲ್ಲಿ ಎ.12 ರಂದು ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ದಂಪತಿ ಮಹಾಲಿಂಗೇಶ್ವರ ದೇವಳಕ್ಕೆ ಭೇಟಿ ನೀಡಿ ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಬಳಿಕ ಅವರು ಡಾ.ಎಂ.ಕೆ ಪ್ರಸಾದ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಪುತ್ತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿದರು.

ಶಕುಂತಳಾ ಶೆಟ್ಟಿ ಅವರಿಗೆ ಟಿಕೆಟ್ ನೀಡದಿದ್ದಲ್ಲಿ ಸಾಮೂಹಿಕ ರಾಜೀನಾಮೆ : ಪುತ್ತೂರು ಮಹಿಳಾ ಕಾಂಗ್ರೆಸ್

ಈ ಬಾರಿಯ ಚುನಾವಣೆಯಲ್ಲಿ ಮಾಜಿ ಶಾಸಕಿ ಹಾಗೂ ಕಾಂಗ್ರೆಸ್ ಮುಖಂಡೆ ಶಕುಂತಳಾ ಶೆಟ್ಟಿಯವರಿಗೆ ಟಿಕೆಟ್ ನೀಡದಿದ್ದಲ್ಲಿ ಪುತ್ತೂರು ಮಹಿಳಾ ಕಾಂಗ್ರೆಸ್ ನ ಎಲ್ಲ ಪದಾಧಿಕಾರಿಗಳು ಸಾಮೊಹಿಕ ರಾಜೀನಾಮೆ ನೀಡುವುದಾಗಿಯೂ ಹಾಗು ಶಕುಂತಳಾ ಶೆಟ್ಟಿಯವರು ಪಕ್ಷೇತರರರಾಗಿ ಸ್ಪರ್ಧಿಸಲು ಅಗ್ರಹಿಸುವುದಾಗಿಯೂ ಮಹಿಳಾ ಕಾಂಗ್ರೆಸ್ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅದ್ಯಕ್ಷೆ ಶಾರದ್ ಅರಸ್, ಮತ್ತು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ವಿಶಾಲಕ್ಷಿ ಬನ್ನೂರು ತಿಳಿಸಿದ್ದಾರೆ.