ಎಪ್ರಿಲ್ 21. ಮಗಳೇ ಚಿತ್ರ ರಾಜ್ಯಾದ್ಯಂತ ಬಿಡುಗಡೆ
ವಿನೂತನ ಕಥಾಹಂದರ ಹೊಂದಿರುವ ‘ಮಗಳೇ’ ಸಿನಿಮಾ ಏಪ್ರಿಲ್ 21ರಂದು ರಾಜ್ಯಾದ್ಯಂತ ತೆರೆಕಾಣಲಿದ್ದು, ಇದೀಗ ಸಿನಿಮಾ ಟ್ರೈಲರ್ ಬಿಡುಗಡೆಗೊಂಡಿದ್ದು ಸಿನಿ ಪ್ರೇಕ್ಷಕರಿಂದ ಉತ್ತಮ ರೆಸ್ಫಾನ್ಸ್ ವ್ಯಕ್ತವಾಗಿದೆ. ಮಗಳೇ ಸಿನಿಮಾ ತಂದೆ, ತಾಯಿ ಮತ್ತು ಮಗಳ ನಡುವಿನ ಟ್ರಯಾಂಗಲ್ ಎಮೋಷನಲ್ ಲವ್ ಸ್ಟೋರಿಯಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆ. ಜೆಡ್ ನೆಟ್ ಕಮ್ಯುನಿಕೇಷನ್ಸ್ ಬ್ಯಾನರ್‍ನಡಿಯಲ್ಲಿ ಮಕ್ಕಿನ್, ಸಯೂರಿ ಮತ್ತು ಎಬಿಎಂ ನಿರ್ಮಾಣದಲ್ಲಿ ಸೋಮು ಕೆಂಗೇರಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಚಿತ್ರ ಮಗಳೇ ಆಗಿದೆ. ಈ ಸಿನಿಮಾ ಎಪ್ರಿಲ್ 21 ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.
ಒಂದು ಕುಟುಂಬದಲ್ಲಿ ಮಕ್ಕಳಿಗೆ ಅಪ್ಪನ ಪ್ರೀತಿ ಸಿಕ್ಕಿ, ಅಮ್ಮನ ಪ್ರೀತಿ ಸಿಗದಿದ್ದಾಗ ಮತ್ತು ಅಮ್ಮನ ಪ್ರೀತಿ ಸಿಕ್ಕಿ ಅಪ್ಪನ ಪ್ರೀತಿ ಸಿಗದಿದ್ದಾಗ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರಲಿದೆ ಮತ್ತು ಅದು ಯಾವ ಮಟ್ಟಕ್ಕೆ ಹೋಗಿ ನಿಲ್ಲಲಿದೆ ಅನ್ನುವುದನ್ನು ಈ ಸಿನಿಮಾದ ಕಥಾಹಂದರ. ‘ಹೋದೆಯಾ ದೂರ ನೀ ಬಿಟ್ಟು ನನ್ನಿಲ್ಲಿ’ ಎಂಬ ಹಾಡು ಮತ್ತು ಟೀಸರ್ ಈಗಾಗಲೇ ಯೂಟ್ಯೂಬ್‍ನಲ್ಲಿ ಬಿಡುಗಡೆಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಸಿನಿಮಾ ಟ್ರೈಲರ್ ಬಿಡುಗಡೆಗೊಂಡಿದ್ದು, ಸಿನಿ ಪ್ರೇಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಚಿತ್ರದ ಸಂಭಾಷಣೆಯನ್ನು ಉಮೇಶ್ ಬಾಬು ಮತ್ತು ಸೋಮು ಕೆಂಗೇರಿ ಬರೆದಿದ್ದಾರೆ. ಛಾಯಾಗ್ರಹಣವನ್ನು ರೇ ನು ಸೋಮ್ ಜಮಾದಾರ್ ಮಾಡಿದ್ದಾರೆ , ಸಂಕಲನಕಾರರಾಗಿ ಬಿ ಎಸ್ ಕೆಂಪರಾಜು ಮತ್ತು ಸಂಗೀತ ಎ.ಬಿ.ಎಮ್ ಹಾಗೂ ಪ್ರಶಾಂತ್ ಗುಣಕಿ ಯವರ ಸಾಹಿತ್ಯ ಈ ಚಿತ್ರದಲ್ಲಿದೆ. ಮಡಿಕೇರಿ, ಕೊಡಗರಹಳ್ಳಿ ಎಂಬ ಗ್ರಾಮದ ಒಂದು ಕುಟುಂಬದಲ್ಲಿ ಗಂಡ ಸುಬ್ಬು, ಹೆಂಡತಿ ಗೀತ ಮತ್ತು ಮಗಳು ಆಧ್ಯಾ ಇವರ ನಡುವೆ ನಡೆಯುವಂತಹ ಒಂದು ವಿಚಿತ್ರವಾದ ಕಥೆಯೇ ಮಗಳೇ… ಈ ಸಿನಿಮಾ ಏಪ್ರಿಲ್ 21ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದ್ದು, ಚಿತ್ರ ಬಿಡುಗಡೆಗೆ ಸಿನಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.