ಕೇಂದ್ರ ಸಂಪುಟದಲ್ಲಿ ಪ್ರಥಮ ಬಾರಿ ಸಹಕಾರಿ ಸಚಿವಾಲಯ ಸ್ಥಾಪಿಸಿದ್ದು, ಸಹಕಾರಿ ಕ್ಷೇತ್ರದ ಬೆಳವಣಿಗೆ ದೃಷ್ಟಿಯಿಂದ ಸ್ವಾಗತಾರ್ಹ ಮತ್ತು ಅಭಿನಂದನೆ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗ್ಡೆಯವರು ಹೇಳಿದರು.ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ ಅವರು, 97ನೇ ಸಂವಿಧಾನಿಕ ತಿದ್ದುಪಡಿಯಂತೆ ರಾಜ್ಯಗಳ ಸಹಕಾರಿ ಕಾಯ್ದೆಯಲ್ಲಿ ಪುನರಪಿ ಸಂಘಗಳ
ಸೇತುವೆಯೆಂದರೆ ಕೇವಲ ಎರಡು ಊರಿನ ಸಂಪರ್ಕದ ಕೊಂಡಿ ಮಾತ್ರವಲ್ಲ ಎರಡು ಊರಿನ ಜನರ ಸಂಬಂಧದ ಕೊಂಡಿ. ಮರವೂರು ಸೇತುವೆ ಕುಸಿತದಿಂದ ಎರಡು ಊರಿನ ಸಂಪರ್ಕ ಕಳೆದುಕೊಂಡು 3 ವಾರಗಳು ಕಳೆದಿವೆ. ಆದರೆ ಇದರ ದುರಸ್ತಿ ಕಾರ್ಯ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿದೆ ಈ ಬಗ್ಗೆ ಸ್ಪೆಷಲ್ ರಿಪೋರ್ಟ್. ಮರವೂರು ಸೇತುವೆ ಕುಸಿತವಾಗಿ ಸುಮಾರು 3 ವಾರಗಳು ಕಳೆದಿವೆ. ಸಂಪೂರ್ಣ ಎರಡು ಕಡೆಯ ಸಂಪರ್ಕ ಕಳೆದುಕೊಂಡಿದೆ. ಕಾರಣಗಳ ಕುರಿತು
ಅದು ಬರೋಬರಿ 13.5 ರೂ ಕೋಟಿ ವೆಚ್ಚದಲ್ಲಿ ನಡೆದ ಮಾರ್ಕೇಟ್….. ಉದ್ಘಾಟನೆಗೊಂಡು 3 ವರ್ಷ ಕಳೆದರೂ , ವ್ಯಾಪಾರಕ್ಕಾಗಿ ಗ್ರಾಹಕರಿಗೆ ಬಿಟ್ಟುಕೊಟ್ಟಿಲ್ಲ…. ಬೀಕೋ ಎನ್ನುತ್ತಿರುವ ಕಟ್ಟಡ… ಹಾಗಾದ್ರೆ ಅದು ಯಾವ ಮಾರುಕಟ್ಟೆ ಅಂತೀರಾ ಇಲ್ಲಿದೆ ಸ್ಟೋರಿ… 2019ರ ಜೂನ್ 28ರಂದು ಮಂಗಳೂರಿನ ಉರ್ವನಲ್ಲಿ ನಿರ್ಮಾಣಗೊಂಡ ಮಾರ್ಕೇಟ್…..ಉದ್ಘಾಟನೆಗೊಂಡ ಬಳಿಕ ಮಳಿಗೆಗಳನ್ನು ಏಲಂ ಮಾಡದೇ ಬಿಕೋ ಎನ್ನುತ್ತಿರುವ ಕಟ್ಟಡ….. ಹೌದು ಮಂಗಳೂರು
ಉಡುಪಿ: ಕಾರ್ಮಿಕರ ಹೆಸರಲ್ಲಿ ನೀಡಲಾದ ಆಹಾರ ಕಿಟ್ ಅವ್ಯವಹಾರ ತನಿಖೆಗೆ ಅಗ್ರಹಿಸಿ ಹಾಗೂ ತೈಲ ಬೆಲೆ ಏರಿಕೆ ವಿರೋಧಿಸಿ ಉಡುಪಿಯಲ್ಲಿ ಸಿಐಟಿಯು ಕಾರ್ಮಿಕ ಸಂಘಟನೆ ಪ್ರತಿಭಟನೆ ನಡೆಸಿದರು. ಕೊವಿಡ್ ಸಂಕಷ್ಟ ಕಾಲದಲ್ಲಿ ಕಾರ್ಮಿಕರ ಹೆಸರಲ್ಲಿ ಬಿಡುಗಡೆಗೊಂಡ ಆಹಾರ ಕಿಟ್ ಖರೀದಿಯಲ್ಲಿ ಭಾರೀ ನಡೆದಿರುವ ಅವ್ಯಹಾರ ತನಿಖೆ ನಡೆಸುವ ಜೊತೆಗೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಉಡುಪಿ ತಾಲೂಕು ಕಚೇರಿ ಎದುರುಗಡೆ ಸಿಐಟಿಯು ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ
ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಡಬೆಟ್ಟು-ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನ ಸಂಪರ್ಕಿಸುವ ಮಣ್ಣಿನ ರಸ್ತೆ ಪ್ರಥಮ ಮಳೆಗೆ ಸಂಪೂರ್ಣ ಹದಗೆಟ್ಟು ಕೆಸರುಗದ್ದೆಯಾಗಿ ಪರಿವರ್ತನೆಯಾಗಿದೆ.ಈಗಾಗಲೇ ಕಿರಿದಾಗಿರುವ ಈ ರಸ್ತೆಯು ಬೇಸಿಗೆಯಲ್ಲಿ ಧೂಳು ತುಂಬಿಕೊಂಡರೆ ಮಳೆಗಾಲದಲ್ಲಿ ಕೆಸರುಮಯಗೊಂಡು ಪಾದಚಾರಿಗಳಿಗೆ ನಡೆದಾಡಲು ಕೂಡ ಅಸಾಧ್ಯವಾಗಿದೆ. ಇದೇ ಪರಿಸರದಲ್ಲಿ ಕಾರಣಿಕ ಪ್ರಸಿದ್ಧ ಗಾಯತ್ರಿ ದೇವಿ ದೇವಸ್ಥಾನವೂ ಇದೆ. ವಗ್ಗ
ಕಡಬ ತಾಲೂಕು ಐತ್ತೂರು ಗ್ರಾಮದ ಯುವಕನೊಬ್ಬ ಇಲಿ ಜ್ವರಕ್ಕೆ ಬಲಿಯಾಗಿದ್ದಾನೆ. ಪಂಜೋಡಿ ನಿವಾಸಿ ಶಿವಪ್ಪ ಗೌಡರ ಪುತ್ರ ಮೋಹಿತ್ (19) ಇಲಿ ಜ್ವರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ ಯುವಕ.ಕಳೆದ ಕೆಲವು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ
ಕುಂದಾಪುರ: ಕೆಆರ್‌ಎಸ್ ಅಣೆಕಟ್ಟಿನ ಮಾಮೂಲಿ ನಿರ್ವಹಣೆಯ ಕಾಮಗಾರಿಗಾಗಿ ಹಣ ಬಿಡುಗಡೆ ಆಗಿರಬಹುದು. ಬಿರುಕು ಹಾಗೂ ಇನ್ನಿತರ ತಾಂತ್ರಿಕ ಮಾಹಿತಿಗಳನ್ನು ನೀಡಲು ಪರಿಣಿತ ತಾಂತ್ರಿಕ ತಜ್ಙರ ವಿಭಾಗವೇ ಇದೆ. ಅವರ ವರದಿ ಹಾಗೂ ಸಲಹೆ ಆಧಾರದಲ್ಲಿಯೇ ಕಾಮಗಾರಿಗಳು ನಡೆಯುತ್ತದೆ. ಸುಮ್ಮನೆ ಜನರಿಗೆ ಆತಂಕ ಮೂಡಿಸುವುದು ಹಾಗೂ ಪ್ರಚಾರಕ್ಕಾಗಿ ಹೇಳಿಕೆ ನೀಡುವುದನ್ನು ಎಲ್ಲರೂ ನಿಲ್ಲಿಸುವುದು ಸೂಕ್ತ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟರು. ಅವರು
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿಯಲ್ಲಿರುವ ಒಳಚರಂಡಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಮತ್ತು ಪಿಲಿಕುಳದಲ್ಲಿರುವ ಟರ್ಶಿಯರಿ ಟ್ರೀಟ್ ಮೆಂಟ್ ಪ್ಲಾಂಟ್‍ಗೆ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು ಕಾರ್ಯಪಾಲಕ ಅಭಿಯಂತರ ಗುರುಪ್ರಸಾದ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಚ್ಚನಾಡಿಯಲ್ಲಿರುವ ಒಳಚರಂಡಿಯ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮೇಯರ್ ಪ್ರೇಮಾನಂದ ಶೆಟ್ಟಿ ಪ್ರತಿಕ್ರಿಯೆ ನೀಡಿ,
ವಿಟ್ಲ: ಮನೆಗೆ ಸಿಡಿಲು ಬಡಿದು ಮೂವರು ಗಾಯಗೊಂಡು ಮನೆ ಭಾಗಶಃ ಹಾನಿಗೊಂಡ ಘಟನೆ ವೀರಕಂಬ ಗ್ರಾಮದ ಕಲ್ಮಲೆ ಎಂಬಲ್ಲಿ ಸಂಭವಿಸಿದೆ.ಜಯಂತಿ ಮಕ್ಕಳ ಮಕ್ಕಳಾದ ಪ್ರಜೀತಾ(19) ರಕ್ಷಿತ (24) ಅವರು ಗಾಯಗೊಂಡಿದ್ದು, ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೀರಕಂಬ ಕಲ್ಮಲೆ ಜಯಂತಿ ಮತ್ತು ರಘುನಾಥ ಶೆಟ್ಟಿ ದಂಪತಿಗಳ ಮನೆಗೆ ಸಂಜೆ ವೇಳೆ ಸಂಭವಿಸಿದ ಭಾರೀ ಸಿಡಿಲು ಅವರ ಮನೆಗೆ ಬಡಿದಿದೆ. ಇದರಿಂದ ಮನೆ ಭಾಗಶಃ ಹಾನಿಗೊಂಡಿದೆ. ಮನೆಯಲ್ಲಿದ್ದ ವಿದ್ಯುತ್ ಉಪಕರಣಗಳು
ಪ್ರಧಾನಿ ನರೇಂದ್ರ ಮೋದಿ ಅವರ ನೂತನ ಕೇಂದ್ರ ಸಂಪುಟದಲ್ಲಿ ಕರ್ನಾಟಕದಿಂದ ಮೊದಲಿಗರಾಗಿ ರಾಜೀವ್ ಚಂದ್ರಶೇಖರ್ ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ರಾಜೀವ್ ಚಂದ್ರಶೇಖರ್ ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಜ್ಞಾ ವಿಧಿ ಬೋಧಿಸಿದರು. ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಕೂಡಾ ರಾಜ್ಯ ಖಾತೆ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ


















