Home Archive by category Fresh News (Page 908)

ಡ್ರಗ್ಸ್ ಮುಕ್ತ ಮಂಗಳೂರಿಗೆ ಸಹಕರಿಸಿ: ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್

ಮಂಗಳೂರು ಪೊಲೀಸ್ ಕಮೀಷನರ್ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಮಾದಕದ್ರವ್ಯಗಳಿಗೆ ಸಂಬಂಧಿಸಿ ಸಾಕಷ್ಟು ಪ್ರಕರಣಗಳನ್ನು ಪತ್ತೆಹಚ್ಚಿರುವುದಲ್ಲದೆ, ಪ್ರಮುಖ ಆರೋಪಿಗಳನ್ನೂ ಬಂಧಿಸಲಾಗಿದೆ. ಡ್ರಗ್ಸ್ ಮುಕ್ತ ಮಂಗಳೂರು ಮಾಡುವಲ್ಲಿ ಇಲಾಖೆ ತನ್ನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಜನರು ಸಹಕರಿಸಬೇಕೆಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮನವಿ

ಮರಕಡದಲ್ಲಿ ಹಿರಿಯ ಚೇತನಗಳೊಂದಿಗೆ ಮಾತುಕತೆ : ತ್ಯಾಗವನ್ನು ಅಭಿನಂದಿಸಿ ಸನ್ಮಾನಿಸಿದ ಶಾಸಕ ಡಾ. ಭರತ್ ಶೆಟ್ಟಿ

ಇಂದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ವಂದೇ ಮಾತರಂ ಘೋಷಣೆ ಕೂಗುತ್ತಾ ಪ್ರತಿಭಟನೆ ಮಾಡಿದ ಕಾರಣಕ್ಕೆ ಜೈಲುವಾಸ ಶಿಕ್ಷೆ ಅನುಭವಿಸಿ ಕಳಪೆ ಆಹಾರವನ್ನು ಸೇವಿಸುವ ಪರಿಸ್ಥಿತಿ ಬಂದಾಗಲೂ ಜೈಲಿನಲ್ಲಿ ಸ್ವಾತಂತ್ರ್ಯಯೋಧರ ಕಥೆಗಳನ್ನು ವಾಚಿಸುತ್ತಾ, ಜೈಲಿನಲ್ಲಿಯೇ ಸಂಘದ ಶಾಖೆ ಮಾಡುತ್ತಾ, ಭಜನೆಗಳನ್ನು ಹಾಡುತ್ತಾ ಕಳೆದ ದಿನಗಳನ್ನು ಹಿರಿಯರು ಹೇಳುವಾಗ ರೋಮಾಂಚನವಾಗುತ್ತದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ಹೇಳಿದರು. ಅವರು ಮರಕಡ ವಾರ್ಡಿನ ಲೀಲಾ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೀಕೆಂಡ್ ಕರ್ಪ್ಯೂ : ಮಂಗಳೂರಲ್ಲಿ ಅನಗತ್ಯ ಓಡಾಡುತ್ತಿದ್ದ ವಾಹನಗಳು ಸೀಝ್

 ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ವೀಕೆಂಡ್ ಕರ್ಪ್ಯೂ ಹಿನ್ನೆಲೆನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಗಿ ಬಂದೋ ಬಸ್ ಮಾಡಲಾಗಿದೆ. ನಗರದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರ ವಾಹನಗಳಿಗೆ ಪೊಲೀಸರು ಬ್ರೇಕ್ ಹಾಕಿದ್ದಾರೆ.40ಕ್ಕೂ ಅಧಿಕ ಕಡೆ ಚೆಕ್ ಪೋಸ್ಟ್‍ಗಳನ್ನು ಮಾಡಿದ್ದು ಪ್ರತೀ ಚೆಕ್‍ಪೋಸ್ಟ್‍ನಲ್ಲೂ 10ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.. ಮೆಡಿಕಲ್ ಮತ್ತು ತುರ್ತು ಸೇವೆ ಹೊರತುಪಡಿಸಿ ಸಂಚರಿಸೋ ವಾಹನಗಳನ್ನು ಪೊಲೀಸರು ಸೀಝ್

ಪುತ್ತೂರಿನಲ್ಲಿ ವೀಕೆಂಡ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿ

ರಾಜ್ಯದಾದ್ಯಂತ ಇಂದಿನಿಂದ ಎರಡು ದಿನಗಳ ವೀಕೆಂಡ್ ಕರ್ಫೂ ಜಾರಿಯಲ್ಲಿದ್ದು, ಇಂದು ಮತ್ತೆ ನಾಳೆ ಸಂಪೂರ್ಣ ಬಂದ್ ಇರಲಿದೆ, ದಕ್ಷಿಣಕನ್ನಡ ಜಿಲ್ಲೆಯಲ್ಲೂ ವೀಕೆಂಡ್ ಕರ್ಫೂ ಜಾರಿಯಲ್ಲಿದ್ದು, ಹಾಲು, ಪೇವರ್ ಅಂಗಡಿ,ಮೆಡಿಕಲ್ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಅಗಿದೆ. ಅನಗತ್ಯ ತೆರಳುವ ವಾಹನಗಳಿಗೆ ಪೋಲೀಸರಿಂದ ದಂಡ ವಿಧಿಸಿದ್ದಾರೆ. ಪುತ್ತೂರಿನಲ್ಲಿ ಪೋಲೀಸರ ಬಿಗಿ ಕಾವಲು ಏರ್ಪಡಿಸಿದ್ದಾರೆ. ವೀಕೆಂಡ್ ಕರ್ಫೂವನ್ನು ಪೊಲೀಸರು ಕಟ್ಟು ನಿಟ್ಟಾಗಿ

ವೀಕೆಂಡ್ ಕರ್ಫ್ಯೂಗೆ ಕಟ್ಟುನಿಟ್ಟಿನ ಕ್ರಮ: ಎಸಿಪಿ ಮಹೇಶ್ ಕುಮಾರ್

ಸರಕಾರದ ಆದೇಶದಂತೆ ದಕ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸುವ ಕುರಿತಾಗಿ ಪೋಲಿಸರಿಗೆ ಮುಂಜಾಗ್ರತಾ ನಿಯಮಗಳ ಕುರಿತಾಗಿ ಪಣಂಬೂರು ಉಪವಿಭಾಗ ಮಟ್ಟದ ಪೋಲೀಸರಿಗೆ ಮಾಹಿತಿ ಕಾರ್ಯಕ್ರಮವು ಬೈಕಂಪಾಡಿ ಎಪಿ ಎಮ್ ಸಿ ಸಂಕೀರ್ಣ ಕಟ್ಟಡದ ಬಳಿ ಜರುಗಿತು. ಪಣಂಬೂರು ಸಹಾಯಕ ಪೋಲೀಸ್ ಆಯುಕ್ತ ಎಸ್ ಮಹೇಶ್ ಕುಮಾರ್ ಅವರು ಮಾತನಾಡಿ, ಸರಕಾರದ ಹಾಗೂ ದಕ ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಶುಕ್ರವಾರ ಸಂಜೆ ೭ ರಿಂದ ಕಟ್ಟುನಿಟ್ಟಿನ ಕ್ರಮ ಪಾಲಿಸಲು ಆದೇಶ

ದ.ಕ. ಜಿಲ್ಲೆಯಲ್ಲಿ ಹಡೀಲು ಗದ್ದೆ ಉಳುಮೆಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಮೆಚ್ಚುಗೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 8೦೦೦ ಎಕರೆ ಹಡೀಲು ಭೂಮಿಯಿದ್ದು, ಅಲ್ಲಿ ಕೃಷಿಗೆ ಇರುವ ಕಾನೂನು ತೊಡಕುಗಳನ್ನು ನಿವಾರಿಸುವುದು ಹಾಗೂ ಸಹಕಾರ ಸಂಸ್ಥೆಯ ಮೂಲಕ ಕೃಷಿಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ. ಅವರು ಕುಂಜತ್‌ಬೈಲ್ ಪ್ರದೇಶದ ಮರಕಡ ವಾರ್ಡಿನ ದಿ. ಕಾಂತಣ್ಣ ಶೆಟ್ಟಿ ಕೊಂರ್ಗಿಬೈಲ್ ಅವರ ಹಡೀಲು ಬಿಟ್ಟ ಜಮೀನಿನಲ್ಲಿ ಯಾಂತ್ರೀಕೃತ ಭತ್ತದ ಕೃಷಿಯ ಉದ್ಘಾಟನೆಗೆ ಆಗಮಿಸಿದ

ರಮೇಶ್ ಜಾರಕಿಹೊಳಿ ರಾಜೀನಾಮೆ ಮಾತು ಅವರ ವೈಯಕ್ತಿಕ ಅಭಿಪ್ರಾಯ: ಕೃಷಿ ಸಚಿವ ಬಿ.ಸಿ.ಪಾಟೀಲ್

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಎಂಬ ವಿಚಾರಕ್ಕೆ ಸಂಬಂಧಿಸಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಮಂಗಳೂರಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಜಾರಕಿಹೊಳಿ ರಾಜೀನಾಮೆ ಮಾತು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅವರೇ ಉತ್ತರ ಕೊಡಲಿ, ಅವರು ರಾಜೀನಾಮೆ ಕೊಡೋದು ಏನೂ ಆಗಿಲ್ಲ. ಅವರು ಕಾಂಗ್ರೆಸ್‌ನಲ್ಲಿ ಮೋಸ ಆಯ್ತು ಅಂತ ಬಿಜೆಪಿಗೆ ಬಂದವರು, ಸಿಡಿ ಜಾಲ ಸೇರಿ ಬೇರೆ ಬೇರೆ ಕಾರಣಕ್ಕೆ ಈ ವಿದ್ಯಮಾನ ನಡೀತಿದೆ ಎಂದು

ಶ್ರೀಗಂಧದ ಮರ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಬಂಟ್ವಾಳ: ರಕ್ಷಿತಾರಣ್ಯದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಶ್ರೀಗಂಧದ ಮರಗಳನ್ನು ಕಳವು ಮಾಡಿ ಮಾರಾಟ ಮಾಡಲು ಯತ್ನಿಸಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಬಂಟ್ವಾಳ ವಲಯ ಅರಣಾಧಿಕಾರಿಗಳು ಬಂಧಿಸಿದ್ದು ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಾಚರಣೆಯ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಪಾತೂರು ನಿವಾಸಿ ಇಬ್ರಾಹಿಂ ಹಾಗೂ ಇರಾ ಗ್ರಾಮದ ಮೊಯ್ದೀನ್ ಬಂಧಿತ ಆರೋಪಿಗಳು. ಸಿದ್ದೀಕ್ ಹಾಗೂ ಕೊರುಂಗು

ಲೀಫ್ ಆರ್ಟ್‌ನಲ್ಲಿ ಮೂಡಿದ ಯೋಗಿ ಮಚ್ಚೇಂದ್ರನಾಥರು

ಕದ್ರಿ ಮಂಜುನಾಥ ಹಾಗೂ ಮಂಗಳಾದೇವಿ ದೇಗುಲದ ಸ್ಥಾಪನೆಗೆ ಮೂಲ ಕಾರಣಿಕರ್ತರು ಈ ಮಹಾನ್ ಯೋಗಿ ಗುರು ಮಚ್ಚೇಂದ್ರನಾಥರು. ಇವರ ಕಾಲ್ಪನಿಕ ಭಾವ ಚಿತ್ರವನ್ನು ಲೀಫ್ ಆರ್ಟ್ ಮುಖಾಂತರ ಯುವ ಕಲಾವಿದ ತಿಲಕ್ ಕುಲಾಲ್ ಮೂಡುಬಿದರೆ ಅವರು ಚಿತ್ರಿಸಿದ್ದಾರೆ. ಅವರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ತುಳುನಾಡ ರಕ್ಷಣಾ ವೇದಿಕೆಯಿಂದ ಆಹಾರ ವಿತರಣೆ

ಮಂಗಳೂರು: ಸಮಾಜ ಸೇವೆಗೆ ವಿವಿಧ ಮುಖಗಳು. ಕಷ್ಟ ಕಾರ್ಪಣ್ಯಗಳಿಗೆ ಆಸರೆಯಾಗುವುದರೊಂದಿಗೆ ಸಂತ್ರಸ್ತರಾದವರಲ್ಲಿ ಆತ್ಮ ಸ್ಥೈರ್ಯ ಮೂಡಿಸುವುದೂ ಸಮಾಜಮುಖೀ ಕಾರ್ಯವೆನಿಸುತ್ತದೆ’ ಎಂದು ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅವರ ನೇತೃತ್ವದಲ್ಲಿ ಕೋವಿಡ್ ಸಂತ್ರಸ್ತರಿಗಾಗಿ ನಗರದ ವಿವಿಧ