ಉಡುಪಿ: ಉಡುಪಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಎಡೆಬಿಡದೆ ಭಾರೀ ಮಳೆ ಸುರಿಯುತ್ತಿದೆ.ಜಿಲ್ಲೆಯಲ್ಲಿ ಅರೆಂಜ್ ಅಲರ್ಟ್ ಮುಂದುವರೆದಿದ್ದು.ಜೀವ ನದಿಗಳು ತುಂಬಿ ಹರಿಯುತ್ತಿವೆ. ಉಡುಪಿ ನಗರದ ಮಠದಬೆಟ್ಟು ಪರಿಸರದಲ್ಲಿ ಇಂದ್ರಾಣಿ ನದಿ ತುಂಬಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ.ಭಾರೀ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಕೃಷಿ ಪ್ರದೇಶಗಳು ಭಾಗಶಃ
ಕಾರ್ಕಳ: ರಾಜ್ಯದಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಸೆ ಬಗೆಹರಿಯಲಿದೆ. ರಾಜ್ಯದಲ್ಲಿ ಒಟ್ಟು 15 ಲಕ್ಷ ಹೆಕ್ಟೇರ್ ಪ್ರದೇಶವು ಡೀಮ್ಡ್ ಫಾರೆಸ್ಟ್ ಒಳಗೊಂಡಿದ್ದು, ಜಿಲ್ಲೆಯಲ್ಲಿ 34ಸಾವಿರ ಹೆಕ್ಟೇರ್ ಡೀಮ್ಡ್ ಫಾರೆಸ್ಟ್‌ನಲ್ಲಿದೆ. ಅದನ್ನು ಮುಕ್ತ ಮಾಡುವುದು ಸರಕಾರದ ಬದ್ಧತೆಯಾಗಿದೆ. ಕುಮ್ಕಿ ಸಮಸ್ಸೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸರಕಾರದ ಮುಂದಿಡಲಾಗಿದೆ. ಹಿಂದಿನ ಕಾಂಗ್ರೆಸ್ ಸರಕಾರದ ಇದರ ಬಗ್ಗೆ ನಿರ್ಲಕ್ಷ್ಯ ತೋರಿತ್ತೆಂದು ಧಾರ್ಮಿಕ ದತ್ತಿ ಸಚಿವ ಕೋಟಾ
ಎರಡು ಕಾರು ಹಾಗೂ ಅಟೋ ರಿಕ್ಷಾ ನಡುವೆ ಸರಣಿ ಅಪಘಾತ ನಡೆದು ರಿಕ್ಷಾ ಚಾಲಕ ಸಹಿತ ಮೂವರು ಗಾಯಗೊಂಡ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರ ತೆಂಕ ಎರ್ಮಾಳು ಗರಡಿ ಬಳಿ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 66 ರ ತೆಂಕ ಎರ್ಮಾಳು ಗರಡಿ ಬಳಿ ಪಡುಬಿದ್ರಿಯತ್ತ ಚಲಿಸುತ್ತಿದ್ದ ಆಟೋ ರಿಕ್ಷಕ್ಕೆ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಫೊರ್ಡ್ ಕಾರು ಡಿಕ್ಕಿಯಾಗಿದೆ. ಪರಿಣಾಮ ರಿಕ್ಷಾ ಕಮರಿಗೆ ಉರುಳಿದೆ. ಈ ಸಂದರ್ಭ ಅದೇ ರಸ್ತೆಯಾಗಿ
ಪಂಪ್‌ವೆಲ್‌ನಲ್ಲಿ ನೀರು ನಿಲ್ಲುವುದು ಮಾಧ್ಯಮದ ಸೃಷ್ಟಿ. ಅವರು ಕ್ಯಾಮರಾದಲ್ಲಿ ಝೂಮ್ ಮಾಡಿ ತೋರಿಸುತ್ತಿದ್ದಾರೆ ಹೀಗಂತ.ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯಕಾರಿ ಇಂಜಿನಿಯರ್ ಶಿಶುಮೋಹನ್ ಅವರು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಹೇಳಿಕೊಂಡಿದ್ದಾರೆ. ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಇಂದು ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ
ಎಸೆಸೆಲ್ಸಿ ಪರೀಕ್ಷೆಗೆ ದ.ಕ. ಜಿಲ್ಲೆಯಲ್ಲಿ ಸಕಲ ಸಿದ್ಧತೆಯನ್ನು ಮಾಡಲಾಗಿದ್ದು, ಈಗಾಗಲೇ 9 ಮಂದಿ ಕೊರೋನ ಸೋಂಕಿತ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು ಅವರಿಗೆ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಸಕಲ ವ್ಯವಸ್ಥೆಯೊಂದಿಗೆ ಪರೀಕ್ಷೆಗೆ ಸಿದ್ಧತೆ ನಡೆಸಲಾಗಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಇಂದು ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿ ಡಿಡಿಪಿಐ
ಕರ್ನಾಟಕ ಕೇರಳ ಗಡಿಯಿಂದ ತಲಪಾಡಿ ಚೆಕ್‌ಪೋಸ್ಟ್ ಸೇರಿದಂತೆ 7 ಕಡೆಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ರು. ಜಿಲ್ಲೆಯ ಗಡಿ ಭಾಗವನ್ನು ಹೊಂದಿರುವ ಚೆಕ್ ಪೋಸ್ಟ್‌ಗಳಲ್ಲಿ ಪ್ರತೀ ದಿನ ಹೆಚ್ಚು ಜನರು ತಮ್ಮ ವೃತ್ತಿಯನ್ನರಸಿ ಮಂಗಳೂರು ನಗರಕ್ಕೆ ಬರುತ್ತಿದ್ದಾರೆ. ಇವರುಗಳ ಕೋವಿಡ್ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯನ್ನು ಗಡಿಯ ಚೆಕ್ ಪೋಸ್ಟ್‌ನಲ್ಲಿಯೇ ಮಾಡಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಜಿಲ್ಲಾಡಳಿತ ಸೂಚನೆ
ಮಂಗಳೂರಿನ ಫಳ್ನೀರ್‌ನ ಖಾಸಗಿ ಕಾಲೇಜಿನಲ್ಲಿ ರ್‍ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿ, ಆರು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ. ಫಳ್ನೀರ್‌ನಲ್ಲಿರುವ ಖಾಸಗಿ ಕಾಲೇಜಿ ವಿದ್ಯಾರ್ಥಿಗಳಾದ ಶ್ರೀಲಾಲ್ , ಶಾಹಿದ್, ಅಮ್ಜದ್, ಜುರೈಜ್, ಹುಸೈನ್, ಲಿಮ್ಸ್, ಬಂಧಿತ ಆರೋಪಿಗಳಾಗಿದ್ದಾರೆ. ಜುಲೈ 14ರಂದು ರಾತ್ರಿ 8ಗಂಟೆಗೆ ನಗರದ ಹೋಟೆಲೊಂದರಲ್ಲಿ ರ್‍ಯಾಗಿಂಗ್‌ಗೆ ಒಳಗಾದ ಸಂತ್ರಸ್ತ ಮ್ಯಾನುಯಲ್ ಬಾಬು
ಕಡಬ ತಾಲೂಕಿನ ಪೆರಾಬೆ ಗ್ರಾಮದ ಮಾರ್ ಇವಾನಿಯೋಸ್ ಮಹಿಳಾ ಬಿಎಡ್ ಕಾಲೇಜಿನ ಕಟ್ಟಡದ ಹಿಂಬದಿಯಲಲ್ಲಿ ಮುಖಕ್ಕೆ ಬಟ್ಟೆಯನ್ನು ಕಟ್ಟಿ ವ್ಯಕ್ತಿಯ ಗುರುತು ಸಿಗದಂತೆ ಅಡಗಿ ಕುಳಿತುಕೊಂಡೊಬ್ಬನನ್ನು, ರಾತ್ರಿ ಗಸ್ತು ತಿರುಗುತ್ತಿದ್ದ ಕಡಬ ಠಾಣೆಯ ಸಹಾಯಕ ಉಪನರೀಕ್ಷಕರಾದ ಸುರೇಶ್ ಸಿಟಿಯವರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತ ಆರೋಪಿಯನ್ನು ಶರತ್ (34) ಮರವೂರು, ಮಂಗಳೂರು ನಿವಾಸಿ ಎಂದು ಗುರುತಿಸಲಾಗಿದೆ. ಕಡಬ ಠಾಣೆಯ ಸಿಬ್ಬಂದಿಗಳು ಈ ಮಾರ್ಗವಾಗಿ ಗಸ್ತು ತಿರುಗುತ್ತಿದ್ದ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ಈ ಹಿಂದೆ ದ.ಕ. ಜಿಲ್ಲಾ ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿರುವ ಬೆಳ್ತಂಗಡಿ ತಾಲೂಕಿನ ಕುತ್ಲೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣಾ ಕಾರ್ಯಕ್ರಮ ಶನಿವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ನೋಟ್ ಬುಕ್ ವಿತರಿಸಿ ಮಾತನಾಡಿದ ಭಾರತೀಯ ರೆಡ್
ಜು.21ರಂದು ಆಚರಿಸುವ ಬಕ್ರೀದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮತ್ತು ಮುಂಜಾಗರೂಕತಾ ಕ್ರಮವಾಗಿ ಪೊಲೀಸ್ ಕಮೀಷನರ್ ವ್ಯಾಪ್ತಿಯಲ್ಲಿ 25ಕ್ಕೂ ಅಧಿಕ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ. ಕಮಿಷನರೇಟ್ ವ್ಯಾಪ್ತಿಯ ಪ್ರತಿಯೊಂದು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲದೆ ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಗಡಿ ಭಾಗಗಳಲ್ಲಿ ಕೂಡಾ ಚೆಕ್ ಪೋಸ್ಟ್ ತೆರೆದು ಶಾಂತಿಯುತವಾಗಿ


















