Home Archive by category Fresh News (Page 933)

ಸವಣೂರಿನಲ್ಲಿ ಕೋವಿಡ್ ಕಾರ್ಯಪಡೆಯ ಸಭೆ

ಸವಣೂರು: ಕೋವಿಡ್ ಪಾಸಿಟಿವ್ ಬಂದವರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಬೇಕು.ಹೋಂ ಐಸೋಲೇಶನ್ ನಿಂದ ಇತರರಿಗೆ ಹರಡುವ ಸಾಧ್ಯತೆ ಜಾಸ್ತಿ.ಆದ್ದರಿಂದ ಕಡ್ಡಾಯವಾಗಿ ಪಾಸಿಟಿವ್ ಬಂದವರನ್ನೂ ಕೇರ್ ಸೆಂಟರ್ ಗೆ ಸೇರಿಸಬೇಕು. ಕುರಿತು ಎಲ್ಲರೂ ಗಮನಹರಿಸಬೇಕೆಂದು ಸಚಿವ ಎಸ್.ಅಂಗಾರ ಸೂಚನೆ ನೀಡಿದರು. ಅವರು ಸವಣೂರು ಗ್ರಾ.ಪಂ.ನಲ್ಲಿ ಕೋವಿಡ್ ಕಾರ್ಯಪಡೆಯ ವರದಿ

ಸಕಲೇಶಪುರ: ನೊಂದ ಮಹಿಳೆ ಮಗುವನ್ನು ಕೊಂದು ತಾನು ಆತ್ಮಹತ್ಯೆ

ಸಕಲೇಶಪುರ: ತಾಲೂಕಿನ ಆನೇಮಹಲ್ ಗ್ರಾಮದಲ್ಲಿ ಮರುಮದುವೆಯಿಂದ ನೊಂದ ಮಹಿಳೆಯೊಬ್ಬರು ಮಗುವನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಗ್ರಾಮದ ಮೋಹನ್ ಎಂಬುವವರ ಪತ್ನಿ ಪ್ರಜ್ವಲ(26) ಹಾಗೂ ಎರಡುವರೆ ವರ್ಷದ ಪುತ್ರಿ ಸಾಧ್ವಿ ಆತ್ಮಹತ್ಯೆಗೀಡಾದವರು. ಮಹಿಳೆಯ ಪತಿ ಮೋಹನ್ ಮನೆಯಿಂದ ಹೊರಹೋದ ನಂತರ ಮನೆಯ ಪ್ಯಾನಿಗೆ ಮಗುವನ್ನು ಸೀರೆಯಿಂದ ನೇಣು ಹಾಕಿ ಮತ್ತೊಂದು ಸೀರೆಯಿಂದ ತಾನು ಅದೇ ಪ್ಯಾನ್‌ಗೆ ನೇಣು ಬೀಗಿದುಕೊಂಡು ಆತ್ಮಹತ್ಯೆಮಾಡಿಕೊಂಡಿದ್ದಾರೆ. ಪತಿ ಮೋಹನ್

ಪುತ್ತೂರಿನಲ್ಲಿ ಹಡಿಲು ಗದ್ದೆಯ ಬೇಸಾಯ: ಶಾಸಕ ಸಂಜೀವ ಮಠಂದೂರು ಚಾಲನೆ

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ವಿನೂತನ ಯೋಜನೆಯ ಅಂಗವಾಗಿ ಕುರಿಯ ಗ್ರಾಮದ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ – ಕುರಿಯ ನೇತೃತ್ವದಲ್ಲಿ ಹಡಿಲು ಗದ್ದೆಯನ್ನು ಬೇಸಾಯ ಮಾಡಬೇಕು ಎನ್ನುವ ಕೋರಿಕೆಯ ಮೇರೆಗೆ ಕುರಿಯ ಗ್ರಾಮದ ಮುಳಿಯ ಶ್ಯಾಮ ಭಟ್ ಅವರ ಕುಟುಂಬದ ಗದ್ದೆಯಲ್ಲಿ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು ಕೃಷಿ ಆಂದೋಲನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ

ಭೂಗತವಾಗುತ್ತಿರುವ ಪಡುಬಿದ್ರಿ ಸ್ಮಶಾನ ಮುಕ್ತಿಗಾಗಿ ಬೇಡಿಕೆ..

ತನ್ನ ಅಸ್ಥಿತ್ವವನ್ನೇ ಕಳೆದುಕೊಂಡು ಭೂಗತದ ಅಂಚಿನಲ್ಲಿರುವ ಪಡುಬಿದ್ರಿ ಸ್ಮಶಾನ ಉಳಿಸುವಂತೆ ಅಂಬೇಡ್ಕರ್ ಯುವಸೇನೆಯ ತಾಲೂಕು ಅಧ್ಯಕ್ಷ ಲೋಕೇಶ್ ಕಂಚಿನಡ್ಕ ಹೆಸರಲ್ಲಿ ಸಾಮಾಜಿಕ ಜಲತಾಣ ದಲ್ಲಿ ಫೋಸ್ಟೊಂದು ಹರಿದಾಡುತ್ತಿದಂತೆ ಚುರುಕಾದ ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷ ರವಿ ಶೆಟ್ಟಿ ಭೇಟಿ ನೀಡಿ ಸಮಸ್ಯೆ ತಕ್ಷಣವೇ ಪರಿಹಾರ ಮಾಡುವ ಭರವಸೆ ವ್ಯಕ್ತ ಪಡಿಸಿದ್ದಾರೆ. ಪಡುಬಿದ್ರಿಯ ಕಂಚಿನಡ್ಕ ಭಾಗದಲ್ಲಿ ಇರುವ ಏಕೈಕ ಸಾರ್ವಜನಿಕ ರುದ್ರಭೂಮಿ ಇದಾಗಿದೆ, ಇಲ್ಲಿ ಎಲ್ಲಾ

ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ನಿಂದ ಕೂಳೂರು-ಕುಳಾಯಿ ಪ್ರದೇಶದ ನಿರ್ಗತಿಕರಿಗೆ ಉಪಹಾರ

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಹುಟ್ಟು ಹಬ್ಬದ ಪ್ರಯುಕ್ತ ಕುಳೂರು-ಕುಳಾಯಿ ಪ್ರದೇಶದ ನಿರ್ಗತಿಕರಿಗೆ ಊಟವನ್ನು ನೀಡುವುದರೊಂದಿಗೆಸುರತ್ಕಲ್ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆರ್ಥಪೂರ್ಣವಾಗಿ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರು ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಅನೇಕರ ಹಸಿವು ನೀಗಿಸುವ ಕಾರ್ಯಕ್ರಮವನ್ನು ಮಾಡುತ್ತಾ ಬಂದಿದ್ದೇವೆ. ಇಂದು ರಾಹುಲ್ ಗಾಂಧಿಯವರ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷವಾಗಿ ಬಡ ಬಗ್ಗರ

ಕುಸಿದು ಬಿದ್ದ ಮಠದಬೆಟ್ಟು ಕಾಲು ಸೇತುವೆ: ಸಂಪರ್ಕ ಕಡಿತ

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಇಂದ್ರಾಣಿ‌ ಹೊಳೆ ತುಂಬಿ ಹರಿಯುತ್ತಿದ್ದು‌,ಇದರಿಂದಾಗಿ ಶಿಥಿಲಗೊಂಡಿದ್ದ ಕಾಲು ಸೇತುವೆ ಒಂದು ಭಾಗ ಕುಸಿದು ಬಿದ್ದು ಸಂಪರ್ಕ ಕಡಿತಗೊಂಡಿದೆ. ಮಠದ ಬೆಟ್ಟು ,ಕೊಪ್ಪರ ತೋಟಕ್ಕೆ ಸಂಪರ್ಕಿಸುವ ಕಾಲು ಸಂಕವಾಗಿದ್ದು,ಹಲವು ಸಮಯಗಳಿಂದ‌ ಶಿಥಿಲವಸ್ಥೆಗೊಂಡಿತ್ತು.ಶನಿವಾರ ಮಧ್ಯಾಹ್ನ ಕಾಲು ಸೇತುವೆ ಯ ಒಂದು ಭಾಗ ಕುಸಿದು ಬಿದ್ದಿದ್ದು,ಸ್ಥಳೀಯ ಯುವಕರು ತಾತ್ಕಲಿಕವಾಗಿ ಮರದ ದಿಮ್ಮಿಗಳನ್ನು ಹಾಕಿ ಸರಿಪಡಿಸಲು ಹರಸಹಾಸ

ಯೆನೆಪೋಯ ಹಾಗೂ ಆವಿಷ್ಕಾರ ಯೋಗ ಸಹಯೋಗ :ವರ್ಚುವಲ್ ಯೋಗಾಭ್ಯಾಸ ಮತ್ತು ಅತಿಥಿ ಉಪನ್ಯಾಸ

ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಯೆನೆಪೋಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ) ಹಾಗೂ ಆವಿಷ್ಕಾರ ಯೋಗ ಸಹಯೋಗದಲ್ಲಿ ಜೂನ್ 21, ಸೋಮವಾರ ಬೆಳಿಗ್ಗೆ 6.30ರಿಂದ 7.30ರ ವರೆಗೆ ಯೋಗದಿನದ ಶಿಷ್ಟಾಚಾರದ ಯೋಗಭ್ಯಾಸವು ಅಂತರ್‌ಜಾಲ ಯೂಟ್ಯೂಬ್ ಲಿಂಕ್  https://youtu.be/-oW5zomdYCA ಹಾಗೂ ವಿ4 ನ್ಯೂಸ್‌ನ ಮೂಲಕ ನೇರಪ್ರಸಾರದೊಂದಿಗೆ ವರ್ಚುವಲ್ ಯೋಗಾಭ್ಯಾಸ ನಡೆಯಲಿದೆ. ಯೋಗ ಗುರು ಕುಶಾಲಪ್ಪ ಗೌಡ ಇವರು ಯೋಗಾಭ್ಯಾಸದ ತರಬೇತಿ ನಡೆಸಿಕೊಡಲಿದ್ದಾರೆ. ಯೋಗ ಅತಿಥಿ

ವಿಟ್ಲ: ರಸ್ತೆ ಬದಿ ಹೊಂಡಕ್ಕೆ ಉರುಳಿದ ಯಂತ್ರ ಸಾಗಾಟದ ಲಾರಿ

ವಿಟ್ಲ: ಚಾಲಕನ ನಿಯಂತ್ರಣ ಕಳೆದುಕೊಂಡು ಯಂತ್ರ ಸಾಗಾಟ ಮಾಡುತ್ತಿದ್ದ ಲಾರಿಯೊಂದು ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ನಡೆದಿದೆ. ಉಪ್ಪಿನಂಗಡಿ ಕಡೆಯಿಂದ ಮಂಗಳೂರಿನ ಬೈಕಂಪಾಡಿಗೆ ಸಿಮೆಂಟ್ ಮಿಕ್ಸರ್ ಯಂತ್ರವನ್ನು ಸಾಗಾಟ ಮಾಡುತ್ತಿದ್ದ ಲಾರಿ ಮಾಣಿ ಸಮೀಪ ಚಾಲಕನ ನಿಯಂತ್ರಣ ಕಳೆದು ರಸ್ತೆ ಬದಿಯ ಹೊಂಡಕ್ಕೆ ಉರುಳಿ ಬಿದ್ದಿದೆ. ಮುಂಭಾಗದಿಂದ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದನ್ನು

ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ಪುತ್ತೂರು ಠಾಣೆಯಲ್ಲಿ ದೂರು ದಾಖಲು

ಪುತ್ತೂರು: ಖಾಸಗಿ ನರ್ಸಿಂಗ್ ಹೋಮ್‌ಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ ಎಚ್.ಡಿ ರೇವಣ್ಣ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಐ.ಎಂ.ಎ ಡಾ.ಗಣೇಶ್ ಪ್ರಸಾದ್ ದೂರು ನೀಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಂದ ದಂದೆ ನಡೆಯುತ್ತಿದೆ. ಸುಲಿಗೆ ನಿಲ್ಲಿಸದಿದ್ದರೆ ಜನರಿಗೆ ಹೇಳಿ ಹೊಡೆಸುತ್ತೇನೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಈ ಮುನ್ನ ಹೇಳಿಕೆ ನೀಡಿದ್ದರು. ಅವರ ಹೇಳಿಕೆಯ ಆಧಾರದ ಮೇಲೆ ನರ್ಸಿಂಗ್ ಹೋಮ್ ಗಳ ಬಗ್ಗೆ

ಎರ್ಮಾಳ್: ಸ್ಕೂಟರ್‌ಗೆ ಕಾರು ಡಿಕ್ಕಿ: ಸ್ಕೂಟರ್ ಸವಾರನಿಗೆ ಗಂಭೀರ ಗಾಯ

ಎರ್ಮಾಳು ಬುದ್ದಗಿ ಪೆಟ್ರೋಲ್ ಬಂಕ್ ಬಳಿಯ ರಸ್ತೆ ಡೈವರ್ಷನ್ ಬಳಿ ಅತೀ ವೇಗವಾಗಿ ಮುನ್ನುಗ್ಗಿ ಬಂದ ಕಾರೊಂದು ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರನ ತಲೆಗೆ ಗಂಭೀರ ಗಾಯಗಳಾಗಿದ್ದು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡವರನ್ನು ಅದಮಾರಿನ ಕೆಮುಂಡೇಲು ನಿವಾಸಿ ಡ್ಯಾನಿಶ್ ಡಿಸೋಜ (50) ಎಂದು ಗುರುತಿಸಲಾಗಿದೆ. ಇವರು ಅದಮಾರು ಶಿಕ್ಷಣ ಸಂಸ್ಥೆಯ ವಾಹನದ ಚಾಲಕನಾಗಿದ್ದು, ಬೆಳಿಗ್ಗೆ ಪಡುಬಿದ್ರಿಗೆ ದಿನಬಳಕೆ ಸಾಮಗ್ರಿ