ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಇಂದು ಬೆಳಗ್ಗೆ 99 ವರ್ಷದ ವೃದ್ಧರೊಬ್ಬರು ಲಸಿಕೆಯನ್ನು ಪಡೆದಿದ್ದಾರೆ. ಉಳ್ಳಾಲದ ಸಂಕೋಳಿಗೆ ನಿವಾಸಿಯಾಗಿರುವ ಯು. ವಸಂತಿ ಅವರು ಲಸಿಕೆಯನ್ನು ಪಡೆದುಕೊಂಡವರು. ಲಸಿಕೆ ಪಡೆಯಲು ಭಯ ಪಡುತ್ತಿರುವ ಯುವಕ-ಯುವತಿಯರಿಗೆ ಈ ವೃದ್ಧೆಯೊಬ್ಬರು ಮಾದರಿಯಾಗಿದ್ದಾರೆ.
ವಿಟ್ಲ: ಚಾಲಕನ ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಬದಿಯಲ್ಲಿರುವ ಹೊಂಡಕ್ಕೆ ಉರುಳಿದ ಘಟನೆ ವಿಟ್ಲ ಸಮೀಪದ ಅಜ್ಜಿನಡ್ಕ ಎಂಬಲ್ಲಿ ಸಂಭವಿಸಿದೆ. ಬೈರಿಕಟ್ಟೆಯಿಂದ ಉಕ್ಕುಡ ಮೂಲಕ ಪುಣಚ ಕಡೆಗೆ ತೆರಳುತ್ತಿದ್ದ ವೇಳೆ ಅಜ್ಜಿನಡ್ಕ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದು ಮನೆಯೊಂದರ ಅಂಗಳದಲ್ಲಿರುವ ಹೊಂಡಕ್ಕೆ ಉರುಳಿ ಬಿದ್ದಿದೆ. ಚಾಲಕ ಮತ್ತು ಪ್ರಯಾಣಿಕ ಗಾಯಗೊಂಡಿದ್ದು, ಪುತ್ತೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


















