Home Archive by category karavali (Page 2)

ಉಪ್ಪಿನಂಗಡಿ ಪಾದಚಾರಿಯೋರ್ವರಿಗೆ ಟೆಂಪೋ ಡಿಕ್ಕಿ

ಉಪ್ಪಿನಂಗಡಿ ಪಾದಚಾರಿಯೋರ್ವರಿಗೆ ಟೆಂಪೋ ಡಿಕ್ಕಿಯಾಗಿ ಮೃತಪಟ್ಟ ಘಟನೆ ಕೊಯಿಲದ ಅತೂರ್ ನಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಮೃತಪಟ್ಟವರನ್ನು ಕಡಬದ ಸುಂಕದಕಟ್ಟೆ ನಿವಾಸಿ ಅಬ್ದುಲ್ ಖಾದರ್ ಸಖಾಫಿ ಎಂದು ಗುರುತಿಸಲಾಗಿದೆ. ಇವರು ಕಾಸರಗೋಡಿನ ಮೈಮಾತ್ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಬಂಧಿಕರ ಮದರಂಗಿ ಕಾರ್ಯಕ್ರಮಕ್ಕೆ ಮನೆಯವರ ಜೊತೆ

ರಿಕ್ಷಾ ಕಳ್ಳತನ, ಆರೋಪಿ ಬಂಧನ

ಉಳ್ಳಾಲ: ತಾಲೂಕಿನ ಚೋಟಾ ಮಂಗಳೂರು ಭಗವತಿ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಆಟೋ ರಿಕ್ಷಾ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಅಕ್ಕರೆ ಕೆರೆ ನಿವಾಸಿ ಮೊಹಮ್ಮದ್ ಶಾಝಿಲ್ (29) ಎಂದು ಗುರುತಿಸಲಾಗಿದೆ.ಈತನನ್ನು ಬಂಧಿಸಿರುವ ಪೊಲೀಸರು ಕಳವುಗೈದ ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.ಘಟನೆ ವಿವರ: ಚೋಟ ಮಂಗಳೂರು ನಿವಾಸಿ ನರೇಂದ್ರ ಕುಮಾರ್ ಅವರು ತನ್ನ ಆಟೋ ರಿಕ್ಷಾ ವನ್ನು ತನ್ನ ಮನೆಯ

​ಟಿ. ಎನ್. ಸೀತಾರಾಂ ಅವರಿಗೆ “ಪಂಚಮಿ ಪುರಸ್ಕಾರ_2026”

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿಯಿಂದ ಕೊಡಮಾಡುವ ಪಂಚಮಿ ಟ್ರಸ್ಟ್ ಉಡುಪಿ ಪ್ರಾಯೋಜಿತ ‘ಪಂಚಮಿ ಪುರಸ್ಕಾರ 2026’ ಕ್ಕೆ ಕನ್ನಡದ ಹಿರಿಯ ಚಲನಚಿತ್ರ ಹಾಗೂ ಕಿರುತೆರೆ ನಿರ್ದೇಶಕ, ನಟ, ನಾಟಕಕಾರ, ಸಾಹಿತಿ ಟಿ. ಎನ್. ಸೀತಾರಾಂ ಆಯ್ಕೆಯಾಗಿದ್ದಾರೆ .​ ಜನವರಿ ತಿಂಗಳಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯುವ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ ಗೌರವದನ ಒಂದು ಲಕ್ಷದೊಂದಿಗೆ ಪ್ರಶಸ್ತಿ ಪ್ರಧಾನ

ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಬೆಲ್ಟ್ ಕುಸ್ತಿ ಪಂದ್ಯಾಟ 2025-26 ಉದ್ಘಾಟನಾ ಸಮಾರಂಭ – ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭಾಗಿ

ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ, ಬೆಂಗಳೂರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಉಡುಪಿ ಜಿಲ್ಲೆ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಹಾಗೂ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜು, ಕಟಪಾಡಿ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ದಿನಾಂಕ 22-12-2025 ರಂದು ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ “ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಬೆಲ್ಟ್ ಕುಸ್ತಿ ಪಂದ್ಯಾಟ 2025-26″ರ

ಬೈಂದೂರು : ಹಳ್ಳಿಹೊಳೆ ಗ್ರಾ.ಪಂ. ಸಂಯುಕ್ತ ಆಶ್ರಯದಲ್ಲಿ ನೂತನ ಕಟ್ಟಡ, ಸಭಾಭವನ ಉದ್ಘಾಟನಾ

ಕುಂದಾಪುರ :ಉಡುಪಿ ಜಿ.ಪಂ., ಬೈಂದೂರು ತಾ.ಪಂ. ಹಾಗೂ ಹಳ್ಳಿಹೊಳೆ ಗ್ರಾ.ಪಂ. ಸಂಯುಕ್ತ ಆಶ್ರಯದಲ್ಲಿ ಹಳ್ಳಿಹೊಳೆ ಗ್ರಾ.ಪಂ.ನ ನೂತನ ಕಟ್ಟಡ, ಸಭಾಭವನ, ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿ, ಅರಿವು ಕೇಂದ್ರದ ಕಚೇರಿ ಉದ್ಘಾಟನಾ ಸಮಾರಂಭ ಸೋಮವಾರ ಸಂಭ್ರಮದಲ್ಲಿ ನಡೆಯಿತು. ಕಮಲಶಿಲೆ ದೇವಸ್ಥಾನದ ಆಡಳಿತ ಧರ್ಮದರ್ಶಿ ಸಚ್ಚಿದಾನಂದ ಚಾತ್ರ ಮಾತನಾಡಿ, ಇದು ಊರಿನ ಒಳ್ಳೆಯ ಕಾರ್ಯ. ಹಳ್ಳಿಹೊಳೆ ಒಳ್ಳೆಯ ಪಂಚಾಯತ್ ಆಗಿ ಮೂಡಿ ಬರುತ್ತಿದ್ದು, ಎಲ್ಲರ ಸಂಘನಾತ್ಮಕ ಕೆಲಸದಿಂದ ಇದು

ರಿಶಲ್ ಫೆರ್ನಾಂಡಿಸ್‌ಗೆ `ದೇಶ್ ರತ್ನಾ ಪ್ರಶಸ್ತಿ

ಮೂಡುಬಿದಿರೆ: ಯುವ ಲೇಖಕಿ, ವಾಗ್ಮಿ ಹಾಗೂ ಎಬಿವಿಪಿ ಕಾರ್ಯಕರ್ತೆ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಅವರು 2025ನೇ ಸಾಲಿನದೇಶ್ ರತ್ನಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ದೆಹಲಿಯಭಾರತ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ವಿವಿಧ ಕೇಂದ್ರ ಹಾಗೂ ರಾಜ್ಯ ಸಚಿವರ ಉಪಸ್ಥಿತಿಯಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ರಿಶಲ್ ಬ್ರಿಟ್ನಿ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಸಾಧನೆಗಳನ್ನು ಗುರುತಿಸಿ ಭಾರತೀಯ ಯುವ

ಕೆಯ್ಯೂರು: ಪ್ರಗತಿ ಬಂಧು ಒಕ್ಕೂಟಗಳ ಆಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ

ಕೆಯ್ಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ), ಮತ್ತೂರು ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕೆಯ್ಯೂರು ಇವರ ಆಶ್ರಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ ಹಾಗೂ ಸ್ವ-ಸಹಾಯ ಸಂಘಗಳಿಗೆ 1001 ಹೊಸ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಕೆಯ್ಯೂರು ಜಯಕರ್ನಾಟಕ ಸಭಾಭವನದಲ್ಲಿ ನಡೆಯಿತು. ಬೆಳಗ್ಗೆ ಭಜನಾ ಸೇವೆ ನಡೆದು ಬಳಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಪ್ರಾರಂಭಗೊಂಡಿತು. ಬಳಿಕ ಕೇಂದ್ರ ಒಕ್ಕೂಟದ

ಅಟಲ್ ಜನ್ಮಶತಾಬ್ದಿ ಪ್ರಯುಕ್ತ ಕಾಪು ಕಡಲ ಪರ್ಬ ಪೂರ್ವಭಾವಿಯಾಗಿ ವಿವಿಧ ಸಮಿತಿ ಪ್ರಮುಖರ ಜೊತೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸಭೆ

ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಕಾಪು ಮಂಡಲ ಬಿಜೆಪಿ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಪ್ರಯುಕ್ತ ಡಿಸೆಂಬರ್ 26,27,28 ರಂದು “ಕಾಪು ಕಡಲ ಪರ್ಬ” ನಡೆಯಲಿದ್ದು ಇದರ ಪೂರ್ವಭಾವಿಯಾಗಿ ವಿವಿಧ ಸಮಿತಿಗಳನ್ನು ರಚಿಸಲಿಗಿದ್ದು ಸಮಿತಿಯ ಪ್ರಮುಖರೊಂದಿಗೆ ಇಂದು ದಿನಾಂಕ 21-12-2025 ರಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸಭೆ ನಡೆಸಿ ಚರ್ಚಿಸಿದರು. 3 ದಿನಗಳ ಕಾಲ ನಡೆಯುವ ಈ ಕಡಲ ಪರ್ಬ

ಹಿರಿಯ ಪತ್ರಕರ್ತ ದೊಡ್ಡಬೊಮಯ್ಯ ಇನ್ನಿಲ್ಲ

ಬೆಂಗಳೂರು, ಡಿ.20- ಹಿರಿಯ ಪತ್ರಕರ್ತ ಹಾಗೂ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷ ದೊಡ್ಡ ಬೊಮಯ್ಯ ಅವರು ಇಂದು ನಿಧನರಾಗಿದ್ದಾರೆ.ಮೂಲತಃ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ರೊಪ್ಪ ಗ್ರಾಮದ ದೊಡ್ಡಯ್ಯ ಮತ್ತು ಚಿಕ್ಕಮ ದಂಪತಿಯ ಪುತ್ರರಾದ ದೊಡ್ಡಬೊಮಯ್ಯ ಅವರು ಈ ಮೊದಲು ಸಂಜೆವಾಣಿ ಮತ್ತು ಪ್ರಸ್ತುತ ಇಂದು ಸಂಜೆ ಪತ್ರಿಕೆಯಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಅರೆಕಾಲಿಕ ಸಹಾಯಕ ಸುದ್ದಿ ಸಂಪಾದಕರಾಗಿ

ಸರಸ್ವತೀ ವಿದ್ಯಾಲಯ ಸಮೂಹ ಸಂಸ್ಥೆಗಳು ಕಡಬ

ಸರಸ್ವತೀ ವಿದ್ಯಾಲಯ ಸಮೂಹ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟವು ಡಿಸೆಂಬರ್ ೧೬ರಂದು ಹನುಮಾನ್ ನಗರದ ಮೈದಾನದಲ್ಲಿ ನಡೆಯಿತು.ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಸಂಸ್ಥೆಯ ನಿಕಟಪೂರ್ವ ಸಂಚಾಲಕರು, ಪ್ರಸ್ತುತ ವಿವೇಕಾನಂದ ವಿದ್ಯಾವರ್ಧಕ ಸಂಘದ ಪುತ್ತೂರು (ರಿ.) ಇದರ ಸಹಕಾರ್ಯನಿರ್ವಹಣಾಧಿಕಾರಿಯಾಗಿರುವ ಶ್ರೀ ವೆಂಕಟ್ರಮಣರಾವ್ ಮಂಕುಡೆ ವಹಿಸಿ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿ ಅಧ್ಯಕ್ಷೀಯ ನುಡಿಗಳನ್ನಾಡಿದರು.ಕ್ರೀಡಾಕೂಟಕ್ಕೆ ಚಾಲನೆಯನ್ನು ನೀಡಿದ