ವಿಟ್ಲ: ವಿಟ್ಲ ಅಕ್ಷಯ ಸಭಾಭವನದಲ್ಲಿ ಮೂರ್ಜೆ (ಮೂರ್ಕಜೆ) ನಂದರವoಶ ಒಕ್ಕಲಿಗ ಗೌಡ ತರವಾಡು ಟ್ರಸ್ಟಿನ ವತಿಯಿಂದ ನಡೆದ ಗುರುವಂದನಾ – ಕುಟುಂಬ ಸಮ್ಮಿಲನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಇದೊಂದು ಔಚಿತ್ಯಪೂರ್ಣ ಕಾರ್ಯಕ್ರಮವಾಗಿದೆ.
ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದರ್ಶನ ಪಡೆಯಲೆಂದು ಆನಂದ ಗುರೂಜಿ ಅವರು ಹಾಸನಕ್ಕೆ ಭೇಟಿ ನೀಡಿದ್ದರು. ಹಾಸನಾಂಬ ದೇವಾಲಯಕ್ಕೆ ಭೇಟಿ ನೀಡಿದ ಗುರೂಜಿ, ತಾಯಿಯ ದರ್ಶನ ಪಡೆದು ಪುನೀತರಾದರು ನಂತರ ತಾಯಿಯ ಹಿನ್ನೆಲೆಯನ್ನು ಹೇಳುತ್ತಾ ಮತ್ತು ನೆರೆದಿದ್ದ ಭಕ್ತಾದಿಗಳಿಗೆ ಹಿತವಚನವನ್ನು ಹೇಳಿದರು.
ಮದುವೆಯಾಗಿ ಹಲವು ವರ್ಷ ಕಳೆದರೂ ಮಕ್ಕಳಾಗದ ಚಿಂತೆಯಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕೊಯಿಲಾ ಗ್ರಾಮದ ಗುಲ್ಗೋಡಿ ನಿವಾಸಿ ತಿಮ್ಮಪ್ಪ ಗೌಡ (೭೦) ಎಂದು ಗುರಿತಿಸಲಾಗಿದೆ. ಇವರು ರಬ್ಬರ್ ಟ್ಯಾಪರ್ ಆಗಿದ್ದು, ಇತ್ತೀಚೆಗೆ ಕೊಲ್ಯದ ರೊಟ್ಟಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಮಕ್ಕಳಿಲ್ಲದ ಪರಿಣಾಮ ಅದೇ ಕೊರಗಿನಲ್ಲಿ
ಮೂಡುಬಿದಿರೆ: ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಅವರ ತಂದೆ ರಮೇಶ್ ಶಾಂತಿ ಅವರು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಮನೆಯಲ್ಲಿ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಮೂಡುಬಿದಿರೆಯ ಬ್ರಹ್ಮಶ್ರೀ ನಾರಾಯಣ ಗುರು ಪೂಜೆಯ ಅರ್ಚಕರಾಗಿಯೂ, ಮೂಡುಬಿದಿರೆ ಅಯ್ಯಪ್ಪ ದೇವಸ್ಥಾನ ಸ್ಥಾಪಕರಾಗಿಯೂ ಸೇವೆ ಸಲ್ಲಿಸಿದವರು. ಅಯ್ಯಪ್ಪ ಗುರುಸ್ವಾಮಿಯಾಗಿ
ಮೂಡುಬಿದಿರೆ: ಅನ್ನ, ಬಟ್ಟೆ, ಉಳಿಯಲೊಂದು ಸೂರು ಇದು ಪ್ರತಿಯೊಬ್ಬರ ಅಪೇಕ್ಷೆ ಈ ಕನಿಷ್ಠ ವ್ಯವಸ್ಥೆ ಈಡೇರಿಸುವ ಬದ್ಧತೆಯಿಂದ ಇಂದು ರಾಜ್ಯ ಹಾಗೂ ಕೇಂದ್ರ ಸರಕಾರ ದಿಟ್ಟ ಹೆಜ್ಜೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮುಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು.ಅವರು ಮೂಡುಬಿದಿರೆ ಕನ್ನಡ ಭವನದಲ್ಲಿ ಸ್ವ ನಿಧಿ ಪರಿಚಯ ಬೋರ್ಡ್ ಹಾಗೂ ಪ್ರಧಾನ ಮಂತ್ರಿಯವರ ಶುಭಾಷಯ ಪತ್ರವನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು. ಕೇಂದ್ರ ವಸತಿ ಮತ್ತು
ಮೂಡುಬಿದಿರೆ: ಪಡುಮಾರ್ನಾಡ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಡ್ಕ ಪಾಡ್ಯಾರ್ ನಿವಾಸಿ ಸುಜಾತ ಎಂಬವರ ಮನೆಗೆ ನಿನ್ನ ರಾತ್ರಿ ಸಿಡಿಲು ಬಡಿದು ಮನೆಯ ಕರೆಂಟ್ ಸ್ವಿಚ್ ಬೋರ್ಡ್, ‘ವಿದ್ಯುತ್ ವಯರ್‌ಗಳು ಸುಟ್ಟು ಸುಮಾರು 50 ಸಾವಿರ ಮೌಲ್ಯದ ವಿದ್ಯುತ್ ಇತರ ಸಲಕರಣೆಗಳು ಹಾನಿಗೀಡಾಗಿವೆ. ಸ್ಥಳಕ್ಕೆ ಮೂಡುಮಾರ್ನಾಡ್ ಪಂಚಾಯತ್ ಪಿಡಿಓ ಅನಿಲ್, ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಸುಜಾತ ಹಾಗು ಅವರ ತಾಯಿ ಮನೆಯೊಳಗಿದ್ದು ಪ್ರಾಣಾಪಾಯದಿಂದ
ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಫಿಸಿಯೋಥೆರಫಿ ವಿಭಾಗ ಮತ್ತು ಥೀಮ್ ಫಿಸಿಯೋಥೆರಫಿ ಯುನಿವರ್ಸಿಟಿ ನೆದರ್‌ಲ್ಯಾಂಡ್ಸ್ ಮತ್ತು ಸ್ವಿಟ್ಜರ್‌ಲ್ಯಾಂಡ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. ಎರಡೂ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಮತ್ತು ಸಂಶೋಧನಾ ವಿನಿಮಯ ಕಾರ್ಯಕ್ರಮಗಳಲ್ಲಿ ಸಹಕರಿಸಲು ಒಪ್ಪಿಕೊಂಡಿವೆ. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ರೆವರೆಂಡ್ ಫಾದರ್ ರಿಚರ್ಡ್ ಅಲೊಶಿಯಸ್ ಕೊಯಿಲೊ ಅವರು, ಥೀಮ್ ವಿವಿಯ ನಿರ್ದೇಶಕರಾದ ಥೀಮ್‌ವಂಡರ್
ನಾಟೆಕಲ್‌ನ ಕಣಚೂರು ಇಸ್ಲಾಮಿಕ್ ಎಜ್ಯುಕೇಶನ್ ಟ್ರಸ್ಟ್ನ ಫಿಸಿಯೋಥೆರಫಿ, ನರ್ಸಿಂಗ್ ಅಲೈಡ್ ಹೆಲ್ತ್ ಸೈನ್ಸ್ನ 2022-23ನೇ ಬ್ಯಾಚ್‌ನ ಓರಿಯಂಟೇಶನ್ ಕಾರ್ಯಕ್ರಮ ಮತ್ತು ಕಣಚೂರು ಕಾಲೇಜು ಆಫ್ ನರ್ಸಿಂಗ್ ಸೈನ್ಸ್ನ 2022-23 ಬ್ಯಾಚ್‌ನ ಕೋರ್ಸ್ ಉದ್ಘಾಟನಾ ಕಾರ್ಯಕ್ರಮ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಡಿಟೋರಿಯಂನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಳ್ಳಾಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವಕುಮಾರ್ ಅವರು, ಈ
ಆಡಳಿತ ಯಂತ್ರ ಚುರುಕುಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು,ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರನ್ನು ಸಾಂಸ್ಕೃತಿಕ ನಗರಿ ಮೈಸೂರಿಗೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ ಕಳೆದ ಎರಡು ವರ್ಷಗಳಿಂದ ಹಾಗೂ ಕೊರೊನಾದಂತಹ ಮಾರಕ ರೋಗದ ಸಂದರ್ಭದಲ್ಲಿ ಉತ್ತಮ ನಿರ್ವಹಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರನ್ನು
ತುಳುನಾಡಿನ ಕೊರಗಜ್ಜ ಸ್ವಾಮಿ ಮತ್ತೊಮ್ಮೆ ತನ್ನ ಕಾರ್ಣಿಕವನ್ನು ತೋರಿಸಿಕೊಟ್ಟಿದೆ. ನಂಬಿದವರನ್ನು ಹರಸಿ,ಇಷ್ಟಾರ್ಥಗಳನ್ನು ಈಡೇರಿಸುವ ಕೊರಗಜ್ಜ ಆರಿ ಹೋಗುತ್ತಿದ್ದ ಕುಟುಂಬವೊಂದರ ನಂದದೀಪವನ್ನು ಬೆಳಗಿಸಿಕೊಟ್ಟಿರುವ ಅಪರೂಪದ ಘಟನೆಗೆ ತುಳುನಾಡು ಸಾಕ್ಷಿಯಾಗಿದೆ. ನಾಲ್ಕು ತಿಂಗಳ ಹಸುಕೂಸೊಂದು ಕೊರಗಜ್ಜನ ಕೃಪೆಯಿಂದ ಸಾವನ್ನೇ ಗೆದ್ದು ಬಂದಿದೆ.ಹೌದು ಸಾಗರ ಮೂಲದ ಪುಟ್ಟ ಹೆಣ್ಣು ಮಗುವಿಗೆ ವಿಪರೀತ ಜ್ವರ ಕಂಡು ಬಂದಿತ್ತು.ಎರಡು ದಿನ ಕಳೆದರೂ ಜ್ವರ ಕಡಿಮೆಯಾಗದೇ ಮಗು




























