ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ಸಾಹಿತ್ಯ ಸಂಭ್ರಮ -2025 ಇದರ ಸಮಾರೋಪ ಸಮಾರಂಭ- ಸನ್ಮಾನ , ಗಾನ ವೈಭವ ಕಾರ್ಯಕ್ರಮ ದುಗ್ಗಲಡ್ಕದ ಮಿತ್ರ ಯುವಕ ಮಂಡಲ ಕೊಯಿಕುಳಿ ಹಾಗೂ ಕುರಲ್ ತುಳುಕೂಟ ದುಗ್ಗಲಡ್ಕ ಇದರ ಸಹಯೋಗದೊಂದಿಗೆ ದುಗ್ಗಲಡ್ಕದ ಅಯ್ಯಪ್ಪ ಭಜನಾ ಭಜನಾ ಮಂದಿರದ ಸಭಾಭವನದಲ್ಲಿ ನ.7 ರಂದು ಸಂಜೆ ನಡೆಯಿತು. ಸಮಾರೋಪ ಸಮಾರಂಭದ
ಆಲೂರು:ಪಟ್ಟಣದ ಮುಖ್ಯರಸ್ತೆಯಲ್ಲಿ ಕನಕದಾಸರ ಭಾವಚಿತ್ರ ಮೆರವಣಿಗೆ ಮಾಡಿ ನಂತರ ವೇದಿಕೆ ಕಾರ್ಯಕ್ರಮವನ್ನು ತಾಲ್ಲೂಕುವಕಚೇರಿ ಆವರಣದಲ್ಲಿ ಆಯೋಜಿಸಿದ್ದು,ಕಾರ್ಯಕ್ರಮವನ್ನು ಆಲೂರು ಸಕಲೇಶಪುರ ಕಟ್ಟಾಯ ವಿಧಾನಸಭಾ ಶಾಸಕರಾದ ಸಿಮೆಂಟ್ ಮಂಜು ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕನಕದಾಸರ ಜನ್ಮ ದಿನವನ್ನು ‘ಕನಕದಾಸ ಜಯಂತಿ’ಎಂದು ಆಚರಿಸಲಾಗುತ್ತದೆ. ಕತ್ತಿ ಗುರಾಣಿ ಹಿಡಿದು ರಣರಂಗದಲ್ಲಿ
ಸಕಲೇಶಪುರ- ನಗರ ಪೊಲೀಸ್ ಠಾಣೆ ವ್ಯಾಪ್ತಿಯ APMC ಬಳಿ ಅಸ್ಸಾಂ ಮೂಲದ ಕಾರ್ಮಿಕರಾದ ಅಮ್ಜದ್ ಅಲಿ ಮತ್ತು ಇದ್ರೀಸ್ ಅಲಿ ಎಂಬ ಇಬ್ಬರನ್ನು ಪೊಲೀಸರು ದಸ್ತಗಿರಿಮಾಡಿದ್ದಾರೆ. ಇವರು ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿಯ ಬೆಟ್ಟದಮನೆಯ ಎಸ್ಟೇಟ್ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು, ಸುಮಾರು 500 ಗ್ರಾಂ (ಅರ್ಧ ಕಿಲೋ) ಗಾಂಜಾ ಸೊಪ್ಪನ್ನು ಮಾರಾಟಮಾಡುತ್ತಿದ್ದ ವೇಳೆ ಹಿಡಿಯಲ್ಪಟ್ಟಿದ್ದಾರೆ. ಬಂಧಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ನಂತರ ಅವರನ್ನು
ಮೂಡುಬಿದಿರೆ: ಮಕ್ಕಳಲ್ಲಿ ಯಕ್ಷಗಾನದ ಒಲವನ್ನು ತುಂಬಿದಾಗ ತುಳುನಾಡಿನಲ್ಲಿ ಯಕ್ಷಗಾನ ಕಲೆ ಇನ್ನಷ್ಟು ಶ್ರೀಮಂತ ಕಲೆಯಾಗಿ ಬೆಳೆಯಲು ಸಾಧ್ಯ ಎಂದು ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದರು. ಅವರು ಇಲ್ಲಿನ ಶ್ರೀ ಯಕ್ಷನಿಧಿ ಮೂಡುಬಿದಿರೆ ಇದರ ದಶಮಾನೋತ್ಸವದ ಅಂಗವಾಗಿ ಸಮಾಜ ಮಂದಿರದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಸಭಾ ಕಾಯ೯ಕ್ರಮದಲ್ಲಿ ಆಶೀರ್ವಚನ ನೀಡಿದರು. ಜೈನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಭಾತ್ ಕುಮಾರ್ ಬಲ್ನಾಡ್ ಮುಖ್ಯ ಅತಿಥಿಯಾಗಿ
ಉಡುಪಿ: ಅಪ್ರಾಪ್ತ ಬಾಲಕಿಯ ಜೊತೆ ಯುವಕನೋರ್ವ ಲಾಡ್ಜ್ನಲ್ಲಿ ಸಿಕ್ಕಿಬಿದ್ದ ಘಟನೆ ಮಣಿಪಾಲದಲ್ಲಿ ನಡೆದಿದೆ. ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ಕಟಪಾಡಿಯ ಬಿಜೆಪಿ ಮುಖಂಡನ ಪುತ್ರ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಆರೋಪಿ. ಕಟಪಾಡಿ ಮಣಿಪುರದ ನಿವಾಸಿ ಶ್ರೀಶಾಂತ್ ಪೂಜಾರಿ (೨೦) ಎಂಬಾತ ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ನಂಬಿಸಿ ಮಣಿಪಾಲದ ಲಾಡ್ಜ್ಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಇದರ
ಮಂಗಳೂರು: ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ ಅವರು ತನ್ನ ಜಾನಪದೀಯ ಸಂಶೋಧನೆಯ ಕ್ಷೇತ್ರ ಕಾರ್ಯದ ಅನುಭವಗಳನ್ನು ದಾಖಲಿಸಿರುವ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ಬರುವವರಿಗೆ ಬಹುದೊಡ್ಡ ಮಾರ್ಗದರ್ಶಿ ಕೊಡುಗೆಯನ್ನು ನೀಡಿದ್ದಾರೆ, ತುಳುವಿನಲ್ಲಿ ಇದೊಂದು ಮಹತ್ವದ ಕೃತಿಯಾಗಲಿದೆ ಎಂದು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಆಶಾಲತಾ ಸುವರ್ಣ ಅವರು ಹೇಳಿದರು. ಅವರು ತುಳು ಭವನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಡಾ.ಇಂದಿರಾ ಹೆಗ್ಗಡೆ ಅವರ ‘ಬಾರಗೆರೆ
ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಶಾಲಾ ಕಾಲೇಜುಗಳಲ್ಲಾಗಬೇಕು ಲೀಲಾ ದಾಮೋದರ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಗಾಗೂ ಕಾಲೇಜಿನ ಕನ್ನಡ ಸಂಘ ಹಾಗೂ ಕನ್ನಡ ವಿಭಾಗದ ವತಿಯಿಂದ ಕನ್ನಡ ನುಡಿ ಸಂಭ್ರಮ ಕಾರ್ಯಕ್ರಮ ನವೆಂಬರ್ 4 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಸುಳ್ಯದ ಸಾಹಿತಿ ಲೀಲಾ ದಾಮೋದರ್ ಮಾತನಾಡಿ, ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಶಾಲಾ – ಕಾಲೇಜುಗಳಲ್ಲಾಗಬೇಕು. ಆ
ಪುತ್ತೂರು ಕೊಂಬೆಟ್ಟು ಸ.ಪ.ಪೂ ಕಾಲೇಜಿನ ನಿವೃತ್ತ ಪ್ರಭಾರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದ ಮರೀಲು ಸಂಜಯನಗರ ನಿವಾಸಿ ದೇವದಾಸ್ ಗೌಡ ನಿಧನ. ಪುತ್ತೂರು: ಕೊಂಬೆಟ್ಟು ಸ.ಪ.ಪೂ ಕಾಲೇಜಿನ ನಿವೃತ್ತ ಪ್ರಭಾರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದ ಮರೀಲು ಸಂಜಯನಗರ ನಿವಾಸಿ ದೇವದಾಸ್ ಗೌಡ(74ವ) ನ.4ರಂದು ನಿಧನರಾದರು. ದೇವದಾಸ್ ಗೌಡ ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನ.4ರಂದು ಅವರು ನಿಧನರಾದರು. ಮೃತರು
ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ಪ್ರಾಯೋಜಕತ್ವದ ೨೦೨೫ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಮೈಸೂರಿನ ಡಾ.ಡಿ.ಎ.ಶಂಕರ್ ಅವರ ‘ಇರುವೆಯಂತೆ ನನ್ನೊಡನೆ’ ಎಂಬ ಹಸ್ತಪ್ರತಿಯು ಗೆದ್ದುಕೊಂಡಿದೆೆ ಎಂದು ಸಂಘದ ಅಧ್ಯಕ್ಷರಾದ ಡಾ.ನಾ.ಮೊಗಸಾಲೆ ಅವರು ಘೋಷಿಸಿದ್ದಾರೆ. ಈ ಸಾಲಿನ ಸ್ಪರ್ಧೆಗೆ ಒಟ್ಟು ೨೮ ಹಸ್ತಪ್ರತಿಗಳು ಬಂದಿದ್ದು ಪ್ರಸಿದ್ಧ ವಿಮರ್ಶಕರಾದ ಬೆಳಗೋಡು ರಮೇಶ ಭಟ್ (ವಿಭಾವರಿ ಭಟ್) ಮತ್ತು ಹೊಸ
ಮೂಡುಬಿದಿರೆ : ಪಡುಮಾನಾ೯ಡಿನಲ್ಲಿ ಯುವಕನೋವ೯ ಆವರಣಗೋಡೆ ಇಲ್ಲದ ಬಾವಿಗೆ ಅಕಸ್ಮಿಕವಾಗಿ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.ಪಡುಮಾರ್ನಾಡು ಮುನ್ನೇರು ನಿವಾಸಿ ಬಾಲಕೃಷ್ಣ ಶೆಟ್ಟಿ ( 38) ಮೃತಪಟ್ಟ ಯುವಕ.ಪಡುಮಾರ್ನಾಡಿನ ಮೊಡಂದೇಲ್ ಎಂಬಲ್ಲಿ ಈ ಘಟನೆ ನಡೆದಿದೆ.ಎರಡು ದಿನದ ಹಿಂದೆ ಈ ಪರಿಸರದಲ್ಲಿ ಕಾರ್ಯಕ್ರಮವೊಂದು ನಡೆದಿದ್ದು ಆ ಕಾರ್ಯಕ್ರಮದಲ್ಲಿ ಈ ಯುವಕ ಭಾಗವಹಿಸಿದ್ದು ಬಾವಿಗೆ ಆವರಣಗೋಡೆ ಇಲ್ಲದಿರುವುದು ಗಮನಕ್ಕೆ ಬಾರದೆ ಆಯತಪ್ಪಿ ಬಾವಿಗೆ




























