Home Archive by category kundapura (Page 7)

ಬೈಂದೂರಿನ ಗುಡ್ಡೆ ಹೋಟೆಲ್ ಫ್ರೆಂಡ್ಸ್ ಸರ್ಕಲ್‌ನಿಂದ ಸ್ವಾತಂತ್ರ್ಯೋತ್ಸವ ಆಚರಣೆ

ಬೈಂದೂರು ತಾಲೂಕಿನ ಗುಡ್ಡೆ ಹೋಟೆಲ್ ಫ್ರೆಂಡ್ಸ್ ಸರ್ಕಲ್ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೋವಿಡ್ ನಿಯಮಾವಳಿ ಪ್ರಕಾರ ಸ್ವಾತಂತ್ರ್ಯ ದಿನಾಚರಣೆ ಸರಳ ರೀತಿಯಲ್ಲಿ ನೆರವೇರಿತು.ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಯುವ ಉದ್ಯಮಿ ಕಿರಣ್ ಲೋಬೊ ಮಾತನಾಡುತ್ತಾ ನಮಗೆ ಸ್ವಾತಂತ್ರ್ಯ ಸಿಗಲು ಅದೆಷ್ಟೋ ಜನರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಸ್ವಾತಂತ್ರ್ಯ

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕುವಂತೆ ಕೆಲಸ ಮಾಡುತ್ತೇನೆ:ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕುಂದಾಪುರ: ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕುವಂತೆ ಕೆಲಸ ಮಾಡುತ್ತೇನೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಈ ದೇಶಕ್ಕೆ ಅಂಟಿರುವ ಕೊರೋನಾ ಮಹಾಮಾರಿ ದುರ್ದಿನಗಳನ್ನು ದೂರವಾಗಿಸುವಂತೆ ಆನೆಗುಡ್ಡೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದ್ದೇನೆ ಎಂದ‌ ಅವರು, ಈಗಾಗಲೇ ಪರಿಶಿಷ್ಟ ಜಾತಿಯವರಿಗೆ ಮನೆ

ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣ: ಆರೋಪಿಗೆ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿ

ಕುಂದಾಪುರ: ಫೈನಾನ್ಸ್ ಪಾಲುದಾರ ಕೂಡಾಲ್ ನಿವಾಸಿ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅನೂಪ್ ಶೆಟ್ಟಿಯನ್ನು ಪೊಲೀಸರು ಸೋಮವಾರ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.   ಕೊಲೆ ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಇನ್ನು ಏಳು ದಿನಗಳ ಕಾಲ ಅಂದರೆ ಅಗಸ್ಟ್ 9ರ ತನಕ ಪೊಲೀಸ್ ಕಸ್ಟಡಿಗೆ ನೀಡಿ 1ನೇ ಜೆಎಮ್‌ಎಫ್‌ಸಿ ನ್ಯಾಯಧೀಶೆ ನಾಗರತ್ನಮ್ಮ ಆದೇಶ ಹೊರಡಿಸಿದ್ದಾರೆ.ಸೋಮವಾರ ಎಸ್ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಮುಗಿದ

ಅಜೇಂದ್ರ ಶೆಟ್ಟಿ‌ ಮರ್ಡರ್ ಕೇಸ್: ಹೊಸ ಕಾರು ಕೊಟ್ಟಿತು ಆರೋಪಿಯ ಸುಳಿವು!?

ಕುಂದಾಪುರ: ಫೈನಾನ್ಸ್ ಸಂಸ್ಥೆಯ ಮಾಲೀಕ ಅಜೇಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಫೈನಾನ್ಸ್ ಸಂಸ್ಥೆಯ ಪಾಲುದಾರ ಅನೂಪ್‌ ಶೆಟ್ಟಿ ಗೋವಾದ ಹೊಟೇಲ್ ಒಂದರಲ್ಲಿ ಮೂರು ದಿನಗಳ‌ ಹಿಂದೆಯೇ ರೂಮ್‌ ಕಾಯ್ದಿರಿಸಿದ್ದ ಎನ್ನುವ ಬಲವಾದ ಮಾಹಿತಿ ಬಯಲಾಗಿದೆ. ಅನೂಪ್ ಶೆಟ್ಟಿಯನ್ನು ಗೋವಾದಿಂದ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಕೆಲವು ಮಹತ್ತರವಾದ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ. ಆರೋಪಿ ಅನೂಪ್ ಕೊಲೆ ಮಾಡಿ ಗೋವಾಕ್ಕೆ

ಕತ್ತು ಕೊಯ್ದು ಫೈನಾನ್ಶಿಯರ್ ಕಗ್ಗೊಲೆ: ಆರೋಪಿ ಗೋವಾದಲ್ಲಿ ಸೆರೆ

ಕುಂದಾಪುರ: ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ (33) ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಜೇಂದ್ರ ಶೆಟ್ಟಿಯವರ ಫೈನಾನ್ಸ್ ಸಂಸ್ಥೆಯ ಪಾಲುದಾರ ಅನೂಪ್ ಶೆಟ್ಟಿ ಹಾಗೂ ಆತ ಪರಾರಿಯಾಗಲು ಬಳಸಿದ್ದ‌ ಕಾರನ್ನು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಗೋವಾದಲ್ಲಿ ವಶಕ್ಕೆ‌ ಪಡೆದಿದ್ದಾರೆ. ಇದೀಗ ಆರೋಪಿಯನ್ನು ವಾಪಾಸ್ ಕರೆತರುವ ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು

ಕುಂದಾಪುರದ ನೆರೆಪೀಡಿತ ಪ್ರದೇಶಗಳಿಗೆ ದೋಣಿ ವ್ಯವಸ್ಥೆ..!

ಕುಂದಾಪುರದ ಬೈಂದೂರು ತಾಲೂಕು ನೆರೆ ಪೀಡಿತ ಪ್ರದೇಶಗಳಾದ ನಾಡ, ಮರವಂತೆ, ಬಡಾಕೆರೆ ಮತ್ತು ಹೇರೂರು ಗ್ರಾಮ ಪಂಚಾಯಿತಿಗಳಿಗೆ ದೋಣಿಯನ್ನು ಜಿಲ್ಲಾಡಳಿತದಿಂದ ಹಸ್ತಾಂತರಿಸಿದ್ರು. ಕುಂದಾಪುರದ ಬೈಂದೂರು ತಾಲೂಕಿನ ಪ್ರದೇಶದಲ್ಲಿ  5 ಕಡೆಗಳಲ್ಲಿ ಪ್ರಾಕೃತಿವಿಕೋಪದಿಂದ ಸಾಕಷ್ಟು ತೊಂದರೆ ಆಗಿದ್ದು, ಅಲ್ಲಿನ ಸಮಸ್ಯೆಗಳ ಕುರಿತು ವಿ೪ನ್ಯೂಸ್ ವಿಸ್ಕೃತವಾಗಿ ವರದಿ ಮಾಡಿತ್ತು. ಈ ವರದಿಗೆ ಎಚ್ಚೆತ್ತುಕೊಂಡು, ನೆರೆ ಪೀಡಿತ ಪ್ರದೇಶಗಳಾದ ನಾಡ, ಮರವಂತೆ, ಬಡಾಕೆರೆ ಮತ್ತು

ಕಟ್ಟಡ ಕಾರ್ಮಿಕರ ಆಹಾರ ಕಿಟ್ ವಿತರಣೆಯಲ್ಲಿ ತಾರತಮ್ಯ: ಕುಂದಾಪುರದಲ್ಲಿ ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ

ಕುಂದಾಪುರ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ 20 ಲಕ್ಷ ಆಹಾರ ಕಿಟ್ ಗಳನ್ನು ಖರೀದಿಸಿ ಎಲ್ಲರಿಗೂ ನೀಡದೇ ಬಹುತೇಕ ಅನರ್ಹ ಕಟ್ಟಡ ಕಾರ್ಮಿಕರಿಗೆ ಬೈಂದೂರು ಶಾಸಕರು ವಿತರಿಸುತ್ತಿರುವುದನ್ನು ಖಂಡಿಸಿ ಇಂದು ಕುಂದಾಪುರದಲ್ಲಿ ಕಟ್ಟಡ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಶಾಸಕರು ಹಂಚುತ್ತಿರುವ ಆಹಾರ ಕಿಟ್ ಗಳನ್ನು ಗ್ರಾಮಪಂಚಾಯತ್ ನ ವ್ಯಾಪ್ತಿಯಲ್ಲಿರುವ ಎಲ್ಲಾ ನೋಂದಾಯಿತ ಕಾರ್ಮಿಕರಿಗೂ ನೀಡದೇ ತಾರತಮ್ಯ ಮಾಡಲಾಗುತ್ತಿದೆ.

ಮುರ್ಡೇಶ್ವರದ ಯಮುನಾ ನಾಯ್ಕ್ ಅತ್ಯಾಚಾರ ಕೊಲೆ ಪ್ರಕರಣ: ಮರು ತನಿಖೆಗೆ ಉಚ್ಚ ನ್ಯಾಯಾಲಯದ ಪೀಠ ಮಹತ್ವದ ತೀರ್ಪು

ಕುಂದಾಪುರ: ಉತ್ತರಕನ್ನಡ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಮುರ್ಡೇಶ್ವರದ 21 ವರ್ಷದ ಯುವತಿ ಯಮುನಾ ನಾಯ್ಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಧಾರವಾಡದ ಉಚ್ಚ ನ್ಯಾಯಾಲಯದ ಪೀಠ ಮಹತ್ವದ ತೀರ್ಪು ನೀಡಿದೆ. ಅತ್ಯಾಚಾರ, ಕೊಲೆ ಪ್ರಕರಣ ನಡೆದು ಸುಮಾರು 11 ವರ್ಷಗಳ ಬಳಿಕ ಮರು ತನಿಖೆ ನಡೆಸುವಂತೆ ನ್ಯಾಯಾಲಯ ತೀರ್ಪು ನೀಡಿದ್ದು ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ವೆಂಕಟೇಶ್ ಹರಿಕಾಂತ್ ಎನ್ನುವ ವ್ಯಕ್ತಿ

ಕಾಪುವಿನಲ್ಲಿ ಹಿರಿಯ ನಾಯಕ ಆಸ್ಕರ್ ಚೇತರಿಕೆಗಾಗಿ ವಿಶೇಷ ಪ್ರಾರ್ಥನೆ

  ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ಚೇತರಿಕೆಗಾಗಿ ಹಾರೈಸಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ಕಾಪು ತಾಲೂಕಿನ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ, ಪೊಲಿಪು ಜಾಮಿಯಾ ಮಸೀದಿ, ಉದ್ಯಾವರ ಚರ್ಚ್, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ, ಉದ್ಯಾವರ ಮಹಾಗಣಪತಿ ದೇವಸ್ಥಾನ ಸಹಿತವಾಗಿ ವಿವಿಧ

ಕಾಪು : ಗಾಯಗೊಂಡ ರಾಷ್ಟ್ರ ಪಕ್ಷಿಯನ್ನು ರಕ್ಷಿಸಿದ ಯುವಕರು

ಕಾಲಿಗೆ ಗಾಯಗೊಂಡು ತೀವ್ರ ಅಸ್ವಸ್ಥಗೊಂಡ ಗಂಡು ನವಿಲೊಂದನ್ನು ಕಾಪುವಿನ ಯುವಕರು ರಕ್ಷಿಸಿ, ಪ್ರಾಥಮಿಕ ಚಿಕಿತ್ಸೆ ನೀಡಿ ಅರಣ್ಯಾಧಿಕಾರಿಯವರಿಗೆ ಒಪ್ಪಿಸಿದ ಘಟನೆ ನಡೆದಿದೆ. ಮೂಳೂರು ಬಳಿ ಕಾಲಿಗೆ ತೀವ್ರ ಗಾಯಗೊಂಡ ಸ್ಥಿತಿಯಲ್ಲಿದ್ದ ಗಂಡು ನವಿಲನ್ನು ಕಾಪುವಿನ ಪ್ರಶಾಂತ್ ಪೂಜಾರಿ ಹಾಗೂ ಶಿವಾನಂದ ಪೂಜಾರಿ ಅವರು ಗುರುವಾರ ರಾತ್ರಿ ತಮ್ಮ ಮನೆಗೆ ತಂದು ಆರೈಕೆ ಮಾಡಿದ್ದರು. ಆರೈಕೆಯೊಂದಿಗೆ ಚೇತರಿಕೆಗೊಂಡ ನವಿಲನ್ನು ಅರಣ್ಯ ಅಧಿಕಾರಿ ಮಂಜುನಾಥ್ ಅವರಿಗೆ