ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂವಿಧಾನ ದಿನಾಚರಣೆ

ಸಂವಿಧಾನದ ಆಶಯಗಳನ್ನು ಗೌರವಿಸಿರಿ: ಕೃಷ್ಣ ಪ್ರಸಾದ ಆಳ್ವ ಸಂವಿಧಾನದ ಜಾಗೃತಿ ಮೂಡಿಸುವ, ಬ್ಲಾಕ್ ಕಾಂಗ್ರೆಸ್ಸಿನ ಕಾರ್ಯ ಶ್ಲಾಘನೀಯ:ನೂರುದ್ದೀನ್ ಸಾಲ್ಮರಪುತ್ತೂರು : ಪುತ್ತೂರು ಬ್ಲಾಕ್ ಕಾಂಗ್ರೆಸ್ಸಿನ ವತಿಯಿಂದ, ಕಾಂಗ್ರೆಸ್ ಕಚೇರಿಯಲ್ಲಿ ಇಂದು, ಸಂವಿಧಾನ ದಿನಾಚರಣೆಯನ್ನು ಆಚರಿಸಿ, ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ಬರೆದ “ಸಂವಿಧಾನ ಓದು” ಎಂಬ ಪುಸ್ತಕವನ್ನು, ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಎಲ್ಲಾ ವಲಯಗಳಿಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.ಸಮಾರಂಭದ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೃಷ್ಣಪ್ರಸಾದ್ ಆಳ್ವರವರು, ಸಂವಿಧಾನವನ್ನು ಪ್ರತಿಯೊಬ್ಬರು ಅರಿತು ಬಾಳಿದರೆ ಸಮಾಜದಲ್ಲಿ ಯಾವುದೇ ಸಂಘರ್ಷಕ್ಕೆ ಅವಕಾಶವಿರುವುದಿಲ್ಲ. ಒಬ್ಬರು ಇನ್ನೊಬ್ಬರ ಹಕ್ಕುಗಳ ಮೇಲೆ, ದಬ್ಬಾಳಿಕೆ ನಡೆಸಿದಾಗ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಇದನ್ನು ತಡೆಯಲು ಪ್ರತಿಯೊಬ್ಬ ನಾಗರಿಕನು ಭಾರತದ ಸಂವಿಧಾನವನ್ನು ಅರಿತು ಬಾಳುವ ಉದ್ದೇಶದಿಂದ, ಸರಕಾರವು ಸಂವಿಧಾನ ದಿನಾಚರಣೆಯನ್ನು ಹಮ್ಮಿಕೊಂಡಿದೆ. ಈ ದಿನಗಳ ಮೂಲಕ ಮತ್ತೊಮ್ಮೆ ಸಂವಿಧಾನವನ್ನು ಅರಿಯುವ ಕೆಲಸವಾಗಬೇಕು ಎಂದರುಸಂವಿಧಾನದ ವಿಚಾರವಾಗಿ ಮಾತನಾಡಿದ,ಕೆಪಿಸಿಸಿ ಸಂಯೋಜಕರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ ರವರು, ಭಾರತದ ಸಂವಿಧಾನವು ಅಂಗೀಕಾರಗೊಂಡು ಇಂದಿಗೆ ಸರಿಸುಮಾರು 76 ವರ್ಷ ಕಳೆದರೂ, ಇನ್ನೂ ಕೂಡ ಸಂವಿಧಾನದ ವಿಚಾರಗಳನ್ನು ಅರಿಯದೆ, ಕೆಲವು ಜನರು ಸಂವಿಧಾನ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ‘ಸಂವಿಧಾನ ಓದು’ ಪುಸ್ತಕವನ್ನು ವಿತರಿಸುವ ಮೂಲಕ, ಜನರಿಗೆ ಸಂವಿಧಾನದ ಅರಿವು ನೀಡುವ ಕಾರ್ಯ ಶ್ಲಾಘನೀಯ ಎಂದರು.ಕಾರ್ಯಕ್ರಮದಲ್ಲಿ, ಆರ್ಯಾಪು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಗಿರೀಶ್ ರೈ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶರೂನ್ ಸಿಕ್ವೆರಾ ಸಾಮೆತಡ್ಕ, ಕಾರ್ಯದರ್ಶಿಗಳಾದ ಇಬ್ರಾಹಿಂ ಬಾತಿಶ ಸಾಲ್ಮರ, ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷರಾದ ಬಾಬು ಮರಿಕೆ, ಕಚೇರಿ ಕಾರ್ಯದರ್ಶಿ ಜೋನ್ ಸಿರಿನ್, ಸಂಘಟನಾ ಕಾರ್ಯದರ್ಶಿ ಸಲಾಂ ಸಂಪ್ಯ, ಕಾರ್ಮಿಕ ಘಟಕದ ಸಂಚಾಲಕರಾದ ಜಯಪ್ರಕಾಶ್, ಅಸಂಘಟಿತ ಕಾರ್ಮಿಕ ಸಂಘದ ಕಾರ್ಯದರ್ಶಿ ಸಿದ್ದೀಕ್ ಮೊಟ್ಟೆತಡ್ಕ, ಕಚೇರಿ ಸಹಾಯಕ ನವಾಜ್ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.