ಬಂಟ್ವಾಳದ ದಡ್ಡಲಕಾಡು ಶಾಲೆಯಲ್ಲಿ ಕೋಟಿಕಂಠ ಗಾಯನ

ಬಂಟ್ವಾಳ: ಸರಕಾರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ದಡ್ಡಲಕಾಡು ಇಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಅಂಚನ್, ಪ್ರೌಢ ವಿಭಾಗದ ಅಧ್ಯಕ್ಷ ಪುರುಷೋತ್ತಮ್ ಅಂಚನ್ ಪ್ರಾಥಮಿಕ ವಿಭಾಗದ ಎಸ್ ಡಿ ಎಂ ಸಿ ಉಪಾಧ್ಯಕ್ಷ ಬಾಲಕೃಷ್ಣ, ಎಸ್ ಡಿ ಎಂ ಸಿ ಸದಸ್ಯರಾದ ರಾಮಚಂದ್ರ, ರಾಜೇಶ್ ನೆಕ್ಕರೆ,ಮನ್ಮಥರಾಜ್ ಜೈನ್, ಪ್ರವೀಣ್ ಗೌಡ,ಸರಸ್ವತಿ, ಹರ್ಷಿತ, ಹರಿಣಾಕ್ಷಿ, ಮೌರಿಸ್ ಡಿಸೋಜ, ಮುಖ್ಯ ಶಿಕ್ಷಕರಾದ ರಮಾನಂದ ಹಾಗೂ ಶಾಲಾ ಎಸ್ ಡಿ ಎಂ ಸಿ ಸದಸ್ಯರು, ಪೋಷಕರು ಮತ್ತು ಪಂಜಿಕಲ್ಲು ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
