ಅಳ್ನಾವರ ದಾಂಡೇಲಿ ರೈಲು ಓಡುವುದು ಯಾವಾಗ?

ದಟ್ಟ ಕಾಡಿನ ನಡುವಿನ ಬ್ರಿಟಿಷರ ಕಾಲದ ಉತ್ತರ ಕನ್ನಡ ಜಿಲ್ಲೆಯ ಅಂಬೇವಾಡಿ ರೈಲು ನಿಲ್ದಾಣದ ಹೆಸರನ್ನು ಅಧಿಕೃತವಾಗಿ ದಾಂಡೇಲಿ ಎಂದು ಬದಲಿಸಲಾಗಿದೆ.

ಬ್ರಿಟಿಷರು ಮರದ ದಿಮ್ಮಿಗಳನ್ನು ಸಾಗಿಸಲು ಈ ರೈಲು ಹಾದಿ ನಿರ್ಮಿಸಿದ್ದರು. ಮೀಟರ್ ಗೇಜ್, ಬ್ರಾಡ್ ಗೇಜ್ ಕಂಡರೂ ಇದರಲ್ಲಿ ಜನ ರೈಲು ಓಡಾಟ ಇಲ್ಲ. ಕೆಲ ಕಾಲ ಮಾತ್ರ ಅಳ್ನಾವರ ಅಂಬೇವಾಡಿ ನಡುವೆ ಒಂದು ಪ್ಯಾಸೆಂಜರ್ ರೈಲು ಓಡಿದ್ದಿದೆ.

ಮಾಜೀ ಮಂತ್ರಿ ಆರ್. ವಿ. ದೇಶಪಾಂಡೆಯವರು ಈ ನಿಲ್ದಾಣದ ಹೆಸರನ್ನು ಅಂಬೇವಾಡಿಯಿಂದ ದಾಂಡೇಲಿ ಆಗಿ ಬದಲಿಸಲು ಹಲವು ಬಾರಿ ಮನವಿ ಮಾಡಿದ್ದರು. ಅಳ್ನಾವರ ದಾಂಡೇಲಿ ರೈಲು ಮತ್ತೆ ಒಡಲಿ ಎಂಬುದು ಹಲವರ ಆಶಯ. ಇದು ಹುಬ್ಬಳ್ಳಿ ರೈಲು ವಲಯದಲ್ಲಿ ಬರುತ್ತದೆ.

Related Posts

Leave a Reply

Your email address will not be published.