ಮಂಗಳೂರು : ಡಿ.17ರಂದು ಪ್ರಸಾದ್ ನೇತ್ರಾಲಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

ಮಂಗಳೂರಿನ ಉಜ್ಜೋಡಿಯಲ್ಲಿರುವ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಲಾಸಿಕ್- ಸ್ಮೈಲ್ ಮತ್ತು ಪಿಆರ್‌ಕೆ ಲೇಸರ್ ಕಣ್ಣಿನ ಉಚಿತ ತಪಾಸಣಾ ಶಿಬಿರವು ಡಿ.17 ರಂದು ನಡೆಯಲಿದೆ.

ಈ ಉಚಿತ ಕಣ್ಣಿನ ತಪಾಸಣಾ ಶಿಬಿರವು ಡಿ.17 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ನಡೆಯಲಿದೆ.  18 ವರ್ಷ ಪ್ರಾಯದಿಂದ ಸುಮಾರು 50 ವರ್ಷ ಪ್ರಾಯದವರೆಗಿನವರಿಗೆ ಮಾಡಬಹುದಾದ ಅತ್ಯಾಧುನಿಕ ಲೇಸರ್ ಚಿಕಿತ್ಸೆಯ ಮೂಲಕ ಕನ್ನಡಕ ಮತ್ತು ಕಾಂಟಾಕ್ಟ್ ಲೆನ್ಸ್‌ನಿಂದ ಮುಕ್ತಿ ಹೊಂದಬಹುದಲ್ಲದೇ ಈ ಚಿಕಿತ್ಸೆಯಿಂದ 5 ನಿಮಿಷಗಳಲ್ಲಿ ಪರಿಶುದ್ಧವಾದ ದೃಷ್ಟಿಯನ್ನು ಪಡೆಯಬಹುದು. ಚಿಕಿತ್ಸೆಯ ನಂತರ ಕೂಡಲೇ ರೋಗಿಯು ತನ್ನೆಲ್ಲಾ ದೈನಂದಿನ ಚಟುವಟಿಕೆಗಳನ್ನು ಮಾಡಬಹುದು. ಯಾವುದೇ ನೋವು ಈ ಚಿಕಿತ್ಸೆಯಿಂದ ಉಂಟಾಗುವುದಿಲ್ಲ.

ಶಿಬಿರದಲ್ಲಿ ಚಿಕಿತ್ಸೆಗೆ ಅರ್ಹವಾದ ರೋಗಿಗಳಿಗೆ ಲೇಸರ್ ಚಿಕಿತ್ಸೆಯನ್ನು ವಿಶೇಷ ರಿಯಾಯಿತಿ ದರದಲ್ಲಿ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಅತೀ ಹೆಚ್ಚಿನ ರಿಯಾಯಿತಿ ದರದಲ್ಲಿ ನಡೆಸಲಾಗುವುದು. ದೃಷ್ಟಿ ಪರೀಕ್ಷೆ, ಕಣ್ಣಿನ ನರ ಪರೀಕ್ಷೆ, ಟೋಪೋಗ್ರಫಿ ಸ್ಕ್ಯಾನ್ (ಶಸ್ತ್ರ ಚಿಕಿತ್ಸೆಗೆ ಮೊದಲು ಮಾಡುವ ಪರೀಕ್ಷೆ) ಮೊದಲಾದ ಸೌಲಭ್ಯಗಳನ್ನು ಶಿಬಿರದಲ್ಲಿ ಉಚಿತವಾಗಿ ಒದಗಿಸಲಾಗುವುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

Related Posts

Leave a Reply

Your email address will not be published.