ನವದೆಹಲಿ: ಸಂಸತ್ ಎದುರು ಪ್ರತಿಭಟನೆ: ಪೊಲೀಸರಿಂದ ನೀಲಂ ಬಂಧನ
ಸರ್ವಾಧಿಕಾರ ನಿಲ್ಲಿಸಿ, ಅತ್ಯಾಚಾರ ತಡೆಯಿರಿ ಎಂದು ಸಂಸತ್ತಿನ ಹೊರಗಡೆ ಇಬ್ಬರು ಪ್ರತಿಭಟನೆ ನಡೆಸಿದರು. ನೀಲಂ ಎನ್ನುವ ಪ್ರತಿಭಟನೆ ನಡೆಸಿದ ಮಹಿಳೆಯನ್ನು ಪೋಲೀಸರು ಬಂಧಿಸಿದರು. ಅಲ್ಲದೆ ಪ್ರತಿಭಟನೆ ನಡೆಸುತ್ತಿದ್ದ ನೀಲಂ ಅವರ ಸಂಗಾತಿಗಳು ಎನ್ನಲಾದ ಮತ್ತೂ ಮೂವರನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.
ಜೈಭೀಮ್, ಜೈ ಭಾರತ್, ವಂದೇ ಮಾತರಂ ಘೋಷಣೆ ಕೂಗುತ್ತಿದ್ದ ಮಹಿಳೆ ನೀಲಂ ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿದರು ಮತ್ತು ಸರಕಾರವು ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ತಡೆಯುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು.