ಕಾಸರಗೋಡು : ಕಾಸರಗೋಡು ಲೋಕ ಸಭಾ ಕ್ಷೇತ್ರದಲ್ಲಿ ಒಂದು ತಿಂಗಳ ಹಿಂದೆಯೇ ಪ್ರಚರಣಾ ರಂಗಕ್ಕಿಳಿದ ಸಿಪಿಎಂ ಅಭ್ಯರ್ಥಿ ಯ ಬೆನ್ನಲ್ಲೇ ಇದೀಗ ಬಿಜೆಪಿ ಯ ಮಹಿಳಾ ಅಭ್ಯರ್ಥಿ ಎಂ ಎಲ್ ಅಶ್ವಿನಿಯ ಅನಿರೀಕ್ಷಿತ ಎಂಟ್ರಿ.ಅಭ್ಯರ್ಥಿ ಯಾರೆಂದು ಈ ತನಕ ಘೋಷಣೆ ಆಗದಿದ್ದರೂ ಯು ಡಿ ಎಫ್ ಅಭ್ಯರ್ಥಿ ನಾನೇ ಎಂಬ ಸ್ವಯಂ ಘೋಷಣೆಯೊಂದಿಗೆ ಸದ್ರಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕೂಡಾ
ಸರ್ವಾಧಿಕಾರ ನಿಲ್ಲಿಸಿ, ಅತ್ಯಾಚಾರ ತಡೆಯಿರಿ ಎಂದು ಸಂಸತ್ತಿನ ಹೊರಗಡೆ ಇಬ್ಬರು ಪ್ರತಿಭಟನೆ ನಡೆಸಿದರು. ನೀಲಂ ಎನ್ನುವ ಪ್ರತಿಭಟನೆ ನಡೆಸಿದ ಮಹಿಳೆಯನ್ನು ಪೋಲೀಸರು ಬಂಧಿಸಿದರು. ಅಲ್ಲದೆ ಪ್ರತಿಭಟನೆ ನಡೆಸುತ್ತಿದ್ದ ನೀಲಂ ಅವರ ಸಂಗಾತಿಗಳು ಎನ್ನಲಾದ ಮತ್ತೂ ಮೂವರನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.ಜೈಭೀಮ್, ಜೈ ಭಾರತ್, ವಂದೇ ಮಾತರಂ ಘೋಷಣೆ ಕೂಗುತ್ತಿದ್ದ ಮಹಿಳೆ ನೀಲಂ ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿದರು ಮತ್ತು ಸರಕಾರವು ಮಹಿಳೆಯರ
ಬುಧವಾರ ಡಿಸೆಂಬರ್ 13ರಂದು ಲೋಕಸಭೆಯೊಳಕ್ಕೆ ಇಬ್ಬರು ಅಪರಿಚಿತರು ಪ್ರವೇಶ ಪಡೆದಿದ್ದುದು ಸ್ವಲ್ಪ ಕಾಲ ಸಂಸದರು ಕಕ್ಕಾಬಿಕ್ಕಿಯಾಗಿ ಎದ್ದೋಡುವಂತೆ ಮಾಡಿತು. ಆದರೆ ಅವರನ್ನು ಅಲ್ಲೇ ಸೆರೆ ಹಿಡಿಯಲಾಯಿತು. ಅವರು ಗ್ಯಾಲರಿಗೆ ಪಾಸ್ ಪಡೆದು ಅಲ್ಲಿಂದ ಲೋಕಸಭೆಯೊಳಕ್ಕೆ ಇಳಿದಿರುವುದಾಗಿ ತಿಳಿದು ಬಂದಿದೆ. ಲೋಕ ಸಭೆಯ ಕಲಾಪ ನಡೆಯುತ್ತಿದ್ದಾಗಲೇ ಈ ಇಬ್ಬರು ಅಪರಿಚಿತರು ನುಗ್ಗಿ ಕೂಗಾಡಿದ್ದು ಇಡೀ ಸಂಸತ್ತು ಎದ್ದು ಭಯಭೀತವಾಯಿತು. ಸ್ಪೀಕರ್ ಓಂ ಬಿರ್ಲಾ ಕೂಡಲೆ ಸ್ಥಾನದಿಂದ