ದೇರಳಕಟ್ಟೆಯ ಕಣಚೂರು ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ : ನಿಸ್ವಾರ್ಥ ಸಾಧಕ ವೈದ್ಯರಿಗೆ ಸನ್ಮಾನ ಕಾರ್ಯಕ್ರಮ

ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವೈದ್ಯರ ದಿನಾಚರಣೆ ಅಚ ವೈದ್ಯರ ದಿನಾಚರಣೆ ಪ್ರಯುಕ್ತ ನಿಸ್ವಾರ್ಥ ಸಾಧಕ ವೈದ್ಯ ಡಾ. ಗೋಪಾಲ್ ಅವರಿಗೆ ಸನ್ಮಾನಿಸಲಾಯಿತು. ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಚೇರ್ ಮೆನ್ ಯು.ಕೆ. ಮೋನು ಸನ್ಮಾನಿಸಿ ಮಾತನಾಡಿ, ಸನಾತನ ಧರ್ಮದಲ್ಲಿ ಅನೇಕ ಮಹಾತ್ಮರನ್ನು ಇನ್ನಿತರ ಧರ್ಮದಲ್ಲೂ ಅವರ ಜನ್ಮ ದಿನದ ಮೂಲಕ ಭಾರತೀಯರಾದ ನಾವು ಕೊಂಡಾಡುತ್ತಿದ್ದು ಸೇವಾ ವೃತ್ತಿ ಹಾಗೂ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ವೈದ್ಯರನ್ನು ಸಾಮೂಹಿಕವಾಗಿ ಜನರು ಕೊಂಡಾಡುತ್ತಿರುವುದು ವೈದ್ಯರ ನಿಸ್ವಾರ್ಥ ಸೇವೆ ಗೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಖ್ಯಾತ ವೈದ್ಯರಾದ ಡಾ. ಗೋಪಾಲ್ ಆಚಾರ್ ಮಂಚಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮ ನಾಡಿನ ಸಂಸ್ಕೃತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಡಾ. ಆಚಾರ್ ಅವರಂತಹ ವ್ಯಕ್ತಿತ್ವವನ್ನು ಗುರುತಿಸಬೇಕಾಗಿರುವುದು ನಮ್ಮ ಜವಬ್ದಾರಿ. ಯುವ ವೈದ್ಯರು ಸೇವಾ ವೃತ್ತಿಯಲ್ಲಿ ರೋಗಿ ಯಾವ ಹಂತದಲ್ಲಿದ್ದರೂ ಸದಾ ಆದರ್ಶವನ್ನು ಮೆರೆಯಬೇಕುಎಂದರು. ವೈಸ್ ಡೀನ್ ಕರ್ನಲ್ ಡಾ. ಎ.ಜಿ. ಕಿರಣ್ ,ಡೀನ್ ಡಾ. ವಿರೂಪಾಕ್ಷ,ಮೆಡಿಕಲ್ ಸುಪರಿಂಡೆಂಟ್ ಡಾ. ಹರೀಶ್ ಶೆಟ್ಟಿ,ಚೀಫ್ ಮೆಡಿಕಲ್ ಆಫೀಸರ್ ಡಾ. ರೋಹನ್ ಮೋನಿಸ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.