ಇಂದು ಸಂಜೆ ಹೆಚ್‌ಡಿಕೆ ನೇತೃತ್ವದಲ್ಲಿ ಕೃಷ್ಣಾಪುರದಲ್ಲಿ ಜೆಡಿಎಸ್ ಸಾರ್ವಜನಿಕ ಸಭೆ

ಮೂಡುಬಿದಿರೆ : ಮೂಡುಬಿದಿರೆ ಮತ್ತು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪರವಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಇಂದು ಸಂಜೆ 6 ಗಂಟೆಗೆ ಕೃಷ್ಣಾಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಡಾ. ಅಮರಶ್ರೀ ಶೆಟ್ಟಿ ಹೇಳಿದರು.

ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸುತ್ತಿದ್ದು ಈಗಾಗಲೇ ೩೫ ಸಾವಿರ ಮನೆಗಳನ್ನು ಭೇಟಿಯಾಗಿದ್ದೇನೆ. ಯಾವುದೇ ರಾಜಕೀಯ ಪಕ್ಷದ ಹವಾ ಇಲ್ಲ. ಜೆಡಿಎಸ್ ಪರವಾಗಿ ಜನರು ಒಲವು ತೋರುತ್ತಿದ್ದಾರೆ. ನಾನು ಮತದಾರರನ್ನು ಭೇಟಿಯಾದಲ್ಲೆಲ್ಲ ನನ್ನ ತಂದೆ ಅಮರನಾಥ ಶೆಟ್ಟಿಯವರು ಮಾಡಿದ ಕೆಲಸಗಳನ್ನು ಜನರು ಸ್ಮರಿಸುತ್ತಿದ್ದಾರೆ. ಮೂಡುಬಿದಿರೆ ತಾಲೂಕು ರಚನೆಗೆ ಮೂಲ ಕಾರಣರಾದವರು ಅಮರನಾಥ ಶೆಟ್ಟಿ. ತಂದೆಯವರು ನಿರಾಶ್ರಿತರಿಗಾಗಿ ನಿರ್ಮಿಸಿದ  ಲಿಂಗಪ್ಪಯ್ಯಕಾಡುವಿನಲ್ಲಿ ಇನ್ನೂ ಮೂಲಭೂತ ಸೌಕರ್ಯಗಳನ್ನು  ಒದಗಿಸಿಲ್ಲ ಎಂದರು. ಮೊದಿನ್ ಬಾವಾ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದುದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ.ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಜಿಲ್ಲೆಯಲ್ಲಿ ಬಲಿಷ್ಠ ಪಕ್ಷವಾಗಿ ಸಂಘಟಿಸಲಾಗುವುದು ಎಂದರು. ಪತ್ರಿಕಾ ಗೋಷ್ಠಿಯಲ್ಲಿ ಹರಿಪ್ರಸಾದ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.