ಕುಂದಾಪುರ: ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್ ಕೊಡ್ಗಿ ಬಾರಕೂರಿನಲ್ಲಿ ಮತಯಾಚನೆ

ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಿರಣ ಕುಮಾರ್ ಕೊಡ್ಗಿ  ಕ್ಷೇತ್ರದ ದಕ್ಷಿಣ ಭಾಗದ ತುತ್ತ ತುದಿ ಬಾರಕೂರು ಭಾಗದಲ್ಲಿ ಮತಯಾಚನೆ ಮಾಡಿದರು.

  ಪ್ರಥಮವಾಗಿ ರಂಗನಕೆರೆ ಶೆಟ್ಟಿಗಾರ್ ಇಂಡಸ್ಟ್ರೀಸ್‌ನ ಮಾಲಕ ಶ್ರೀನಿವಾಸ ಶೆಟ್ಟಿಗಾರರವರನ್ನು  ಬೇಟಿ ನೀಡಿ ಇಲ್ಲಿನ ನೂರಾರು ಕಾರ್ಮಿಕರಲ್ಲಿ ಬೆಂಬಲಿಸುವಂತೆ ಮತಯಾಚನೆ ಮಾಡಿದರು.ಬಳಿಕ ನಾಯರಿಬೆಟ್ಟು,  ಬಾರಕೂರು ರಥ ಬೀದಿ ಮತ್ತು  ನಗರದ ಅಂಗಡಿ, ಮನೆಗಳಿಗೆ  ಬೇಟಿ ನೀಡಿ  ಮತಯಾಚನೆ ಮಾಡಿದರು. ಬಾರಕೂರು ಗ್ರಾಮಪಂಚಾಯತಿ ಅಧ್ಯಕ್ಷ ಶಾಂತಾರಾಮ ಶೆಟ್ಟಿ . ಹನೆಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ , ಪ್ರಮುಖರಾದ  ಪ್ರಥ್ವಿರಾಜ್ ಶೆಟ್ಟಿ  ಬಿಲ್ಲಾಡಿ ,ದೇವದಾಸ್ ಹೆಮ್ಮಾಡಿ ,ರತ್ನಾಕರ ಶೆಟ್ಟಿ , ಸದಾಶಿವ ಪೂಜಾರಿ .ಆತ್ಮಜ್ ಬಿ ಶೆಟ್ಟಿ.ಅನೂಪ್ ಹೆಗ್ಡೆ. ಸಂಪತ್ ಪೂಜಾರಿ. ರಜತ್ ಪೂಜಾರಿ. ರಾಮಚಂದ್ರ ಕಾಮತ್ ಇನ್ನಿತರು ನೇತೃತ್ವ ವಹಿಸಿದ್ದರು.

ಹನೆಹಳ್ಳಿ  ಮತ್ತು  ಬಾರಕೂರು ಗ್ರಾಮಪಂಚಾಯತಿ  ಸದಸ್ಯರು  ನೂರಾರು ಬೆಂಬಲಿಗರು  ಮತಯಾಚನೆಯಲ್ಲಿದ್ದರು.ಹಿಂದೆ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಶಾಸಕತ್ವದ ಅವಧಿಯಲ್ಲಿ  ನಡೆದ ಪ್ರತೀ ಚುನಾವಣೆಯಲ್ಲಿ ಬಾರಕೂರು ಮತ್ತು ಹನೆಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿ ಬಿಜೆಪಿಗೆ  ಅತಿಹೆಚ್ಚು ಮುನ್ನಡೆ ನೀಡಿತ್ತು.

Related Posts

Leave a Reply

Your email address will not be published.