ರಾಜೀವ್ ಗಾಂಧಿ ಆರೋಗ್ಯ ವಿವಿ ಪ್ರಸಾರಾಂಗ ಸಲಹಾ ಸಮಿತಿ ಸದಸ್ಯರಾಗಿ ಡಾ. ಮುರಲೀ ಮೋಹನ್ ಚೂಂತಾರು ನೇಮಕ

ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ಪ್ರಸಾರಾಂಗ ಸಲಹಾ ಸಮಿತಿ ಇದರ ಸದಸ್ಯರಾಗಿ ವೈದ್ಯ ಸಾಹಿತಿ,ಬರಹಗಾರ ಮತ್ತು ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕ ರಾದ ಪ್ರೋಫೆಸರ್ ಡಾ ಮುರಲೀ ಮೋಹನ್ ಚೂಂತಾರು ಅವರನ್ನು ನೇಮಕ ಮಾಡಲಾಗಿದೆ ಎಂದು ರಾಜೀವ್ ಗಾಂಧಿ ವಿಶ್ವ ವಿದ್ಯಾಲಯದ ಕುಲ ಸಚಿವರ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಗೌರವಾನ್ವಿತ ಕುಲಪತಿಗಳು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.
ಒಟ್ಟು ಹತ್ತು ಮಂದಿ ಈ ಸಮಿತಿಯಲ್ಲಿರುತ್ತಾರೆ. ವಿಶ್ವವಿದ್ಯಾಲಯದ ನಿಯತಕಾಲಿಕ ಮತ್ತು ವೈದ್ಯಕೀಯ ಬರಹಗಳ ಗುಣಮಟ್ಟ ಸುಧಾರಣೆ ಹಾಗೂ ಜ್ಞಾನ ಹೆಚ್ಚಳದ ಬಗ್ಗೆ ಈ ಸಮಿತಿ ಹೆಚ್ಚಿನ ಗಮನ ಹರಿಸಲಿದೆ.